ಕೊರೊನಾ ಭಯಕ್ಕೆ ನಮಸ್ಕಾರ ಮದ್ದು
Team Udayavani, Mar 8, 2020, 6:30 AM IST
ಬೆಂಗಳೂರು: ಕೊರೊನಾದಿಂದ ತಪ್ಪಿಸಿಕೊಳ್ಳಲು ಜಗತ್ತು ಇಂದು ನಾನಾ ದಾರಿ ಗಳನ್ನು ಹುಡುಕುತ್ತಿದೆ. ಕೈಕುಲುಕಲು ಕೂಡ ಭೀತಿಪಡುವ ಈ ಸಮಯದಲ್ಲಿ ಭಾರತದ
“ನಮಸ್ಕಾರ’ ವಿಶ್ವಕ್ಕೆ ಭರವಸೆ ತುಂಬುತ್ತಿದೆ.
ಈ ಬಗ್ಗೆ ಧ್ವನಿಯೆತ್ತಿರುವ ಪ್ರಧಾನಿ ಮೋದಿ, ಕೊರೊನಾ ಭಯದಿಂದ ಜಗತ್ತು ನಮಸ್ತೆ ಹೇಳುತ್ತಿದೆ. ನಾವು ನಮಸ್ಕಾರವನ್ನು ಕೈಬಿಟ್ಟಿದ್ದರೆ ಮತ್ತೆ ಚಾಲ್ತಿಗೆ ತರೋಣ.
ಹ್ಯಾಂಡ್‌ಶೇಕ್ ಬದಲು
ನಮಸ್ಕಾರ ರೂಢಿಸಿಕೊಳ್ಳಲು ಇದು ಒಳ್ಳೆಯ ಸಮಯ ಎಂದು ನಾಗರಿಕರಿಗೆ ಕರೆಕೊಟ್ಟಿದ್ದಾರೆ.ಎರಡು ದಿನಗಳ ಹಿಂದಷ್ಟೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಕೊರೊನಾ ನೆನೆದು ಭಯದಲ್ಲೇ ಕೈ ಕುಲುಕುವುದಕ್ಕಿಂತ ಭಾರತೀಯರಂತೆ ನಮಸ್ಕರಿಸುವುದು ಉತ್ತಮ ಎಂದಿದ್ದರು. ನಟ ಸಲ್ಮಾನ್ ಖಾನ್, “ನಮಸ್ಕರಿಸಿ ಕೊರೊನಾದಿಂದ ದೂರ ಇರೋಣ’ ಎಂದಿದ್ದರು.
ನಮಸ್ಕಾರದ ಲಾಭ
ಎರಡೂ ಅಂಗೈ ಜೋಡಿಸಿ, ಹತ್ತು ಬೆರಳು ಗಳು ಕೂಡುವ ಕ್ರಿಯೆಯೇ ನಮಸ್ಕಾರ. ಈ ಗೌರವ ಸೂಚಕ ಕ್ರಿಯೆಯ ಹಿಂದೆ ವಿಜ್ಞಾನವಿದೆ. 10 ಬೆರಳುಗಳು ಸಂಧಿಸಿದಾಗ ಕಣ್ಣು, ಕಿವಿ ಮತ್ತು ಮನಸ್ಸಿನ ಒತ್ತಡ ಕೇಂದ್ರಗಳು ಒಂದನ್ನೊಂದು ಸ್ಪರ್ಶಿಸುತ್ತವೆ. ಇದರಿಂದ ಪರಿಚಯಗೊಳ್ಳುವ ವ್ಯಕ್ತಿಯ ಹೆಸರನ್ನು ದೀರ್ಘಕಾಲ ನೆನಪಿರಿಸಿ ಕೊಳ್ಳಲು ಸಾಧ್ಯವಾಗುತ್ತದೆ.
ನಮಸ್ಕರಿಸಲು ಕೈಜೋಡಿಸಿದಾಗ ಮೆದುಳಿನ ಒತ್ತಡ ಭುಜದಿಂದ ಇಳಿಯುತ್ತದೆ. ತೋಳುಗಳಿಗೆ ಸಹಜವಾಗಿ ವ್ಯಾಯಾಮ ಸಿಗುತ್ತದೆ. ಕೈ ಮತ್ತು ಹೃದಯ ಶಕ್ತಿಯುತವಾದ ವೃತ್ತದಲ್ಲಿ ಸೇರುವುದರಿಂದ ಈ ವೇಳೆ ಉತ್ಪಾದನೆಯಾಗುವ ಹಾರ್ಮೋನು ಗಳು ಮನಸ್ಸಿನ ಒತ್ತಡವನ್ನು ದೂರ ಮಾಡುತ್ತವೆ ಎನ್ನುತ್ತಾರೆ ಯೋಗಗುರು ಆರ್.ಎಂ. ಪ್ರಹ್ಲಾದ್.
ಕರಾಂಜಲಿ ಮುದ್ರೆ
ನಮಸ್ಕಾರದ ಭಂಗಿಗೆ “ಕರಾಂಜಲಿ ಮುದ್ರೆ’ ಎಂದೇ ಹೆಸರು. ಪಂಚಭೂತ ಗಳು ನಮ್ಮ ಬೆರಳುಗಳಲ್ಲಿದ್ದು, ಇವು ಪರಸ್ಪರ ಸಂಧಿಸಿದಾಗ ಧನಾತ್ಮಕ ಅಲೆ ಸೃಷ್ಟಿಯಾಗುತ್ತದೆ ಎನ್ನುವ ನಂಬಿಕೆ ಭಾರತೀಯ ಯೋಗ ಪರಂಪರೆಯಲ್ಲಿದೆ.
ವಿವಿಧೆಡೆ ನಮಸ್ಕಾರ
ನಮಸ್ಕಾರವು ಈಗಾಗಲೇ ಯೋಗದ ಬೆನ್ನೇರಿ ವಿಶ್ವದ ಮೂಲೆ ಮೂಲೆಗಳನ್ನು ತಲುಪಿದೆ. ಸೂರ್ಯ ನಮಸ್ಕಾರದ ಮೊದಲ ಆಸನವೇ “ಪ್ರಣಾಮಾಸನ’. ಏರ್ ಇಂಡಿಯಾ ಸೇರಿದಂತೆ ಏಷ್ಯಾದ ಭಾಗದ ಹಲವು ವಿಮಾನಗಳಲ್ಲಿ ಚಾಲ್ತಿಯಲ್ಲಿರುವುದು ಇದೇ “ನಮಸ್ಕಾರ’ ಸೇವೆ. ಥಾçಲಂಡ್‌ನಲ್ಲಿ ಜನರು ಎರಡೂ ಕೈಗಳಿಂದ ನಮಸ್ಕರಿಸುತ್ತಾರೆ. ಬಾಲಿ ದ್ವೀಪದಲ್ಲಿ ನಮಸ್ಕಾರಕ್ಕೆ “ಓಂ ಸ್ವಸಾöಸ್ತು’ ಎನ್ನುತ್ತಾರೆ. ಮಲೇಷ್ಯಾ ಸೇರಿದಂತೆ ಹಲವು ಇಸ್ಲಾಂ ರಾಷ್ಟ್ರಗಳಲ್ಲಿ ಒಂದೇ ಕೈಯಿಂದ ನಮಸ್ಕರಿಸುವ ಪದ್ಧತಿ ಇದೆ ಎನ್ನುತ್ತಾರೆ ಪ್ರವಾಸಪ್ರಿಯ, ಮಣಿಪಾಲದ ಡಾ| ಕಿರಣ್ ಆಚಾರ್ಯ.
ಹೀಗೆ ಜಗದ ಹಲವು ಭಾಗಗಳಲ್ಲಿ ರುವ ನಮಸ್ಕಾರ ಈಗ ಕೊರೊನಾ ಭೀತಿಗೂ ಮದ್ದಾಗುತ್ತಿದೆ. ಎದುರಿನ ವ್ಯಕ್ತಿ ಕೈ ಕುಲುಕಲು ಮುಂದಾದರೆ ಮುಜುಗರಪಡುವ ಅಗತ್ಯವಿಲ್ಲ. ಬದಲಾಗಿ ನಮಸ್ಕರಿಸಿ ಗೌರವ ಸೂಚಿಸಬಹುದು. ಎದುರಿನ ವ್ಯಕ್ತಿಯನ್ನು ದೈಹಿಕವಾಗಿ ಸಂಪರ್ಕಿಸದೆ ವೈರಾಣುಗಳಿಂದ ತಪ್ಪಿಸಿಕೊಳ್ಳಲು ಇದು ಅತ್ಯಂತ ಸುಲಭದ ಮಾರ್ಗ. ಅಲ್ಲದೆ ಈ ಮೂಲಕ ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯಬಹುದು ಎನ್ನುವುದು “ಉದಯವಾಣಿ’ಯ ಕಳಕಳಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.