ಕುವೈಟ್- ಮಂಗಳೂರು ವಿಮಾನ ಯಾನ ತಾತ್ಕಾಲಿಕ ರದ್ದು
Team Udayavani, Mar 8, 2020, 6:38 AM IST
ಮಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕುವೈಟ್ ಸರಕಾರವು ಭಾರತ ಸಹಿತ 7 ದೇಶಗಳಿಗೆ ವಿಮಾನ ಯಾನವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದು, ಕುವೈಟ್ ಮತ್ತು ಮಂಗಳೂರು ನಡುವಣ ವಿಮಾನ ಯಾನವೂ ಸ್ಥಗಿತಗೊಂಡಿದೆ.
ಅದರಂತೆ ಮಾರ್ಚ್ 6ರಿಂದ ಒಂದು ವಾರ ಕಾಲ ಕುವೈಟ್‌ನಿಂದ ಮಂಗಳೂರಿಗೆ ಹಾಗೂ ಮಂಗಳೂರಿನಿಂದ ಕುವೈಟ್‌ಗೆ ವಿಮಾನ ಸಂಚಾರ ಇರುವುದಿಲ್ಲ.
ಮಂಗಳೂರಿನಿಂದ ದುಬಾೖ, ಅಬುಧಾಬಿ, ದೋಹಾ ಮತ್ತು ದಮಾಮ್‌ಗಳಿಗೆ ಎಂದಿನಂತೆ ಸಂಚರಿಸುತ್ತಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು ಮತ್ತು ದಿಲ್ಲಿ ನಡುವಿನ ವಿಮಾನ ಯಾನ ಕೆಲವು ದಿನಗಳ ಹಿಂದೆಯೇ ಪ್ರಯಾಣಿಕರ ಕೊರತೆಯಿಂದಾಗಿ ರದ್ದುಗೊಂಡಿದೆ.
ವಿದೇಶಿ ಯಾತ್ರಿಕರ ಆಗಮನಕ್ಕೆ ತಡೆ
ಮೂಡುಬಿದಿರೆ: ಸಾವಿರಕಂಬದ ಬಸದಿಗೆ ಬೇಸಗೆಯ ಅವಧಿಯಲ್ಲಿ ಅತೀ ಹೆಚ್ಚು ವಿದೇಶೀ ಯಾತ್ರಿಕರು ಆಗಮಿಸುತ್ತಿದ್ದು ಈ ಬಾರಿ ಕೊರೊನಾ ವೈರಸ್ ಭೀತಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ವಿದೇಶೀ ಯಾತ್ರಿಕರ ಆಗಮನಕ್ಕೆ ಕೊಂಚ ತಡೆಯೊಡ್ಡಬೇಕಾದ ಅನಿವಾರ್ಯ ಎದುರಾಗಿದೆ ಎಂದು ಮೂಡುಬಿದಿರೆ ಶ್ರೀ ಜೈನ ಮಠಾಧೀಶ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದ್ದಾರೆ.
ಕೊರೊನಾ ವೈರಸ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕರ್ನಾಟಕ ಸರಕಾರ ಹೊರಡಿಸಿರುವ ತಿಳಿವಳಿಕೆ ಪತ್ರವನ್ನು ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ಬಸದಿ ಆವರಣದಲ್ಲಿ ಪ್ರದರ್ಶಿಸಲಾಗುತ್ತಿದೆ. ಸಿಬಂದಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳನ್ನು ಮನವರಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುಖ್ಯವಾಗಿ ನವಮಂಗಳೂರು ಬಂದರಿಗೆ ಪ್ರವಾಸಿ ಹಡಗುಗಳು ಬಂದಾಗ ಅದರಲ್ಲಿ ಬರುವ ಪ್ರಯಾಣಿಕರು ಮೂಡುಬಿದಿರೆ ಬಸದಿ ಸಹಿತ ಕರಾವಳಿಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ.
ಮಂಗಳೂರು ಬಂದರಿನಲ್ಲಿ ಪ್ರವಾಸಿ ಹಡಗಿಗೆ ತಡೆ
ಪಣಂಬೂರು: ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ನವಮಂಗಳೂರು ಬಂದರಿಗೆ ಬರುವ ಪ್ರವಾಸಿ ಹಡಗು ಗಳಿಗೆ ತಡೆ ನೀಡಲಾಗಿದ್ದು ಮಾ.31ರ ವರೆಗೆ ಬಂದರು ಪ್ರವೇಶಿಸದಂತೆ ಆದೇಶ ನೀಡಲಾಗಿದೆ. ಪ್ರಸ್ತುತ ದೇಶದ ವಿವಿಧ ಬಂದರುಗಳಿಗೆ ಪ್ರವಾಸಿ ಹಡಗುಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಶನಿವಾರ ಬರಲಿದ್ದ ಎಂಎಸ್‌ಸಿ ಲಿರಿಕಾ ಪ್ರವಾಸಿ ಹಡಗಿಗೆ ಎನ್‌ಎಂಪಿಟಿ ಪ್ರವೇಶ ನಿರಾಕರಿಸಲಾಗಿದೆ ಎಂದು ಬಂದರು ಅ ಧಿಕೃತವಾಗಿ ಸಂಬಂಧ ಪಟ್ಟ ಏಜಂಟ್ ಸಂಸ್ಥೆಗಳಿಗೆ ತಿಳಿಸಿದೆ. ಕೇಂದ್ರ ಸರಕಾರ ವಿದೇಶದಿಂದ ಬರುವ ವ್ಯಕ್ತಿಗಳ ಮೇಲೆ ನಿಗಾ ಇರಿಸಿದ್ದು ಈಗ ಪ್ರವಾಸಿ ಹಡಗುಗಳಿಗೂ ಭಾರತ ಪ್ರವೇಶಕ್ಕೆ ತಡೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಹೊಸಪೇಟೆ: ಸ್ಕ್ಯಾನ್ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ
Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ
Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ
Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.