ತಮಿಳಿನ ಖೈದಿ ರಿಮೇಕ್ನಲ್ಲಿ ಶಿವಣ್ಣ?
Team Udayavani, Mar 8, 2020, 1:01 PM IST
ಶಿವರಾಜಕುಮಾರ್ ಅವರ “ದ್ರೋಣ’ ಚಿತ್ರ ಬಿಡುಗಡೆಯಾಗಿದೆ. ಸಿನಿಮಾ ನೋಡಿದವರು ಶಿವಣ್ಣ ನಟನೆಯನ್ನು ಇಷ್ಟಪಡುತ್ತಿದ್ದಾರೆ. ಈ ನಡುವೆಯೇ ಶಿವಣ್ಣ ಸುತ್ತ ಹೊಸ ಸಿನಿಮಾವೊಂದರ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಅದು “ಖೈದಿ’ ರಿಮೇಕ್ನಲ್ಲಿ. ಹೌದು, ತಮಿಳಿನಲ್ಲಿ ಕಾರ್ತಿ ನಟಿಸಿದ “ಖೈದಿ’ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಆ್ಯಕ್ಷನ್ ಥ್ರಿಲ್ಲರ್ ಆದ ಈ ಚಿತ್ರದಲ್ಲಿ ಭಾವನಾತ್ಮಕ ದೃಶ್ಯಗಳಿಗೂ ಹೆಚ್ಚಿನ ಮಹತ್ವವಿದ್ದು, ಪ್ರೇಕ್ಷಕರು ಈ ಚಿತ್ರಕ್ಕೆ ಫಿದಾ ಆಗಿದ್ದರು.
ಪರಿಣಾಮವಾಗಿ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈಗ ಈ ಚಿತ್ರ ಕನ್ನಡಕ್ಕೆ ರಿಮೇಕ್ ಆಗುತ್ತಿದೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ. “ಖೈದಿ’ ರಿಮೇಕ್ ನಲ್ಲಿ ಯಾರು ನಟಿಸುತ್ತಾರೆಂಬ ಕುತೂಹಲ ಸಹಜವಾಗಿಯೇ ಇರುತ್ತದೆ. ಇದಕ್ಕೆ ಸಿಕ್ಕ ಉತ್ತರ ಶಿವರಾಜಕುಮಾರ್.
ಹೌದು, “ಖೈದಿ’ ರಿಮೇಕ್ನಲ್ಲಿ ಶಿವಣ್ಣ ನಟಿಸಲಿದ್ದಾರಂತೆ. ಈ ಚಿತ್ರದ ಪಾತ್ರ ಅವರಿಗೆ ಚೆನ್ನಾಗಿ ಹೊಂದಿಕೆಯಾಗುವುದರಿಂದ ಚಿತ್ರತಂಡ ಅವರನ್ನೇ ಕೇಳಿಕೊಂಡಿದೆಯಂತೆ. ನಿಮಗೆ ಗೊತ್ತಿರುವಂತೆ ಶಿವಣ್ಣ ರೀಮೇಕ್ಗೆ 14 ವರ್ಷಗಳ ಹಿಂದೆಯೇ ಗುಡ್ ಬೈ ಹೇಳಿದ್ದರು. ಆದರೆ, ಇತ್ತೀಚೆಗೆ ಮಲಯಾಳಂನ “ಒಪ್ಪಂ’ ಸಿನಿಮಾದ ರಿಮೇಕ್ “ಕವಚ’ದಲ್ಲಿ ನಟಿಸಿದ್ದರು. ತಮಗೆ ತುಂಬಾ ಕಾಡಿದ ಹಾಗೂ ಮನಸ್ಸಿಗೆ ಹತ್ತಿರವಾಗುವ ಸಿನಿಮಾಗಳ ರಿಮೇಕ್ನಲ್ಲಿ ನಟಿಸಲು ನಾನು ಸಿದ್ಧ ಎಂದಿದ್ದರು. ಅದರಂತೆ ಈಗ ತಮಿಳಿನ “ಖೈದಿ’ಯಲ್ಲಿ ಶಿವಣ್ಣ ನಟಿಸಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಹಾಗಾದರೆ ಈ ಚಿತ್ರವನ್ನು ಯಾರು ನಿರ್ದೇಶಿಸುತ್ತಾರೆಂಬ ಪ್ರಶ್ನೆಗೆ ಉತ್ತರ ನಂದಕಿಶೋರ್. ಸದ್ಯ “ಪೊಗರು’ ಚಿತ್ರ ನಿರ್ದೇಶಿಸುತ್ತಿರುವ ನಂದಕಿಶೋರ್ “ಖೈದಿ’ ರಿಮೇಕ್ ಮಾಡಲಿದ್ದಾರೆಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡಿದೆ. ಆದರೆ, “ಖೈದಿ’ ಕನ್ನಡ ರಿಮೇಕ್ಗೆ ಸ್ಪಷ್ಟತೆ ಸಿಗಬೇಕಾದರೆ ಇನ್ನೂ ಸ್ವಲ್ಪ ದಿನ ಕಾಯಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು
Renukaswamy Case:ಬೆನ್ನು ನೋವು ಬಳಿಕ ದರ್ಶನ್ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Kannada Cinema: ಕ್ಲೈಮ್ಯಾಕ್ಸ್ ನತ್ತ ʼಕುಲದಲ್ಲಿ ಕೀಳ್ಯಾವುದೋʼ
Deepika Das: ನಟಿ ದೀಪಿಕಾ ದಾಸ್ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
SPB: ಎಸ್ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.