ಕ್ಯಾನ್ಸರ್ನಿಂದ ಬಳಲುತ್ತಿರುವ ಬಾಲಕನ ಆಸೆ ಈಡೇರಿಸಿದ ದುಬೈ ರಾಜಕುಮಾರ
ವಿಡಿಯೋ ಮೂಲಕ ರಾಜಕುಮಾರನ ಭೇಟಿ ಇಂಗಿತ ವ್ಯಕ್ತಪಡಿಸಿದ್ದ ಬಾಲಕ
Team Udayavani, Mar 8, 2020, 7:52 PM IST
ದುಬೈ: ಕ್ಯಾನ್ಸರ್ನಿಂದ ಬಳಲುತ್ತಿರುವ ಭಾರತ ಮೂಲದ 7 ವರ್ಷದ ಬಾಲಕನ ಆಸೆಯಂತೆ, ಆತನನ್ನು ಭೇಟಿಯಾಗಿ, ಅವನೊಂದಿಗೆ ಕೊಂಚ ಸಮಯ ಕಳೆಯುವ ಜತೆಗೆ ಫೋಟೋ ಕ್ಲಿಕ್ಕಿಸಿಕೊಂಡ ದುಬೈ ರಾಜಕುಮಾರ ಶೇಖ್ ಹಮಾªನ್, ಆ ಬಾಲಕನೊಂದಿಗೆ ತೆಗೆಸಿಕೊಂಡ ಭಾವಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ದುಬೈ ರಾಜಕುಮಾರ ಇಷ್ಟೊಂದು ಹೃದಯಸ್ಪರ್ಶಿ ಆತಿಥ್ಯ ನೀಡಲು ಕಾರಣ ಆ ಬಾಲಕ ವಿಡಿಯೋ ಮೂಲಕ ಮಾಡಿಕೊಂಡ ಒಂದೇ ಒಂದು ಮನವಿ. ಹೈದರಾಬಾದ್ ಮೂಲದ, ಪ್ರಸ್ತುತ ದುಬೈನಲ್ಲಿ ವಾಸವಿರುವ 7 ವರ್ಷ ಹರೆಯದ ಅಬ್ದುಲ್ಲಾ ಹುಸೈನ್, ಮೂರನೇ ಹಂತದ ಕ್ಯಾನ್ಸರ್ನಿಂದ ಬಳಲುತ್ತಿದ್ದಾನೆ. ಈತ ರಾಜಕುಮಾರ ಶೇಖ್ ಹಮಾªನ್ರ ದೊಡ್ಡ ಅಭಿಮಾನಿ. ಹಾಗೇ ಒಮ್ಮೆ ತನ್ನ ನೆಚ್ಚಿನ ರಾಜಕುಮಾರನನ್ನು ಭೇಟಿ ಮಾಡಿ, ಅವರೊಂದಿಗೆ ಆಪ್ತವಾಗಿ ಸಮಯ ಕಳೆಯಬೇಕೆಂಬುದು ಆತನ ಕನಸಾಗಿತ್ತು.
ಅದರಂತೆ, “ಶೇಖ್ ಹಮಾªನ್, ನಾನು ನಿಮ್ಮ ಫ್ಯಾನ್. ನಾನು ನಿಮ್ಮನ್ನು ಭೇಟಿಯಾಗಬೇಕು’ ಎಂದು ಬರೆದ ಬ್ಯಾನರ್ ಹಿಡಿದುಕೊಂಡು ವಿಡಿಯೋ ಮಾಡಿದ ಅಬ್ದುಲ್ಲಾ, “ಶೇಖ್ ಹಮಾªನ್ ತುಂಬಾ ಕೂಲ್, ಸಾಹಸಿ ಮತ್ತು ದಯಾಳು. ನಾನು ಅವರನ್ನು, ಅವರ ಸಾಕು ಪ್ರಾಣಿಗಳನ್ನು ಭೇಟಿ ಮಾಡಬೇಕು. ಅವರು ಧರಿಸುವ ಉಡುಪುಗಳನ್ನು ಒಮ್ಮೆ ನೋಡಬೇಕು’ ಎಂದು ಹೇಳಿಕೊಂಡಿದ್ದ.
ಅಬ್ದುಲ್ಲಾ ಮತ್ತು ಶೇಖ್ ಹಮಾªನ್ ಒಟ್ಟಿಗಿರುವ ಚಿತ್ರ ಇನ್ಸ್ಟಾದಲ್ಲಿ ವೈರಲ್ ಆಗಿದೆ. ಭೇಟಿ ವೇಳೆ ರಾಜಕುಮಾರನ ಜತೆ 15 ನಿಮಿಷ ಮಾತುಕತೆ ನಡೆಸಿದ ಬಾಲಕ ಮತ್ತು ಕುಟುಂಬ ಸದಸ್ಯರು, ಬಳಿಕ ರಾಜಕುಮಾರನ ಸಾಕುಪ್ರಾಣಿಗಳ ಜತೆ ಒಂದು ತಾಸು ಕಾಲ ಕಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.