ನನ್ನ ಮಗ ನನಗಿಂತ ಚೆನ್ನಾಗಿ ಸಿಗರೇಟ್ ಸೇದ್ತಾನೆ, ಕಿಸ್ ಮಾಡ್ತಾನೆ..
ಹಾಡು ನೋಡಿ ಕ್ರೇಜಿಸ್ಟಾರ್ ಕಾಮೆಂಟ್
Team Udayavani, Mar 9, 2020, 7:03 AM IST
“ನನ್ನ ಮಗ ನನಗಿಂತ ಚೆನ್ನಾಗಿ ಸಿಗರೇಟ್ ಸೇದ್ತಾನೆ, ಕಿಸ್ ಮಾಡ್ತಾನೆ ಅನ್ನಿಸ್ತು …’ ಕ್ರೇಜಿಸ್ಟಾರ್ ರವಿಚಂದ್ರನ್ ಹೀಗೆ ಹೇಳಿ ಪಕ್ಕದಲ್ಲಿದ್ದ ಮಗ ಮನೋರಂಜನ್ ಮುಖ ನೋಡಿದರು. ಅವರು ಹೀಗೆ ಹೇಳಲು ಕಾರಣ “ಪ್ರಾರಂಭ’ ಚಿತ್ರ. ಮನೋರಂಜನ್ ನಾಯಕರಾಗಿರುವ “ಪ್ರಾರಂಭ’ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆದಿದೆ. ತೆರೆಮೇಲೆ ಹಾಡು ಹಾಗೂ ದೃಶ್ಯಗಳನ್ನು ನೋಡಿದ ರವಿಚಂದ್ರನ್ ಈ ರೀತಿ ಹೇಳಿಕೊಂಡರು.
” ಚಿತ್ರದ ಹಾಡು ನೋಡಿದಾಗ ನನ್ನ ಮಗ ನನಗಿಂತ ಚೆನ್ನಾಗಿ ಸಿಗರೇಟ್ ಸೇದುತ್ತಾನೆ. ನನಗಿಂತಲೂ ಚೆನ್ನಾಗಿ ಕಿಸ್ ಮಾಡ್ತಾನೆ ಅನ್ನಿಸ್ತು. ನನಗಿಂತ ಅವನು ಏನೂ ಕಡಿಮೆ ಇಲ್ಲ ಅನ್ನೋದು ಸ್ಕ್ರೀನ್ನಲ್ಲಿ ಕಾಣಿಸುತ್ತಿದೆ. ನಾನೂ ಸಹ ಆರಂಭದ ದಿನಗಳಲ್ಲಿ ಅಷ್ಟೂ ಧೈರ್ಯವಾಗಿ ಕಿಸ್ ಮಾಡಿರಲಿಲ್ಲ. ಏಕೆಂದರೆ ನಾನು ಮನೆಗೋದ್ರೆ ಸೀನ್ ಆಗುತ್ತೆ, ಕ್ಲಾಸ್ ಇರುತ್ತೆ ಎಂದು’ ಎಂದು ನಕ್ಕರು. ಇನ್ನು, ಒಬ್ಬ ಕಲಾವಿದನಾಗಿ ತೆರೆಮೇಲೇ ಸಿಗರೇಟ್ ಸೇದೋದು, ಮಧ್ಯಪಾನ ಮಾಡೋದು ತಪ್ಪಲ್ಲ ಅನ್ನೋದು ರವಿಚಂದ್ರನ್ ಮಾತು.
“ಸಿನಿಮಾ ಕೇಳಿದಾಗ ಅದನ್ನೆಲ್ಲಾ ಒಬ್ಬ ಕಲಾವಿದನಾಗಿ ಮಾಡಬೇಕು. ಆರಾಮವಾಗಿ ಮಾಡಲಿ, ನಾನು ಅದು ಮಾಡಲ್ಲ, ಇದು ಮಾಡಲ್ಲ ಎಂದು ತಮಗೆ ತಾವೇ ಒಂದು ಬೌಂಡರಿ ಹಾಕಿಕೊಂಡು ಕೂರಲು ಹೋಗಬಾರದು’ ಎನ್ನುವ ರವಿಚಂದ್ರನ್, “ಮಗ ಬಂದ ಅಂತ ನಾನು ಕಿಸ್ ಮಾಡದೇ ಇರಲ್ಲ. ಹೀರೋಯಿನ್ ಬಂದರೆ, ಸ್ಕ್ರೀನ್ನಲ್ಲಿ ಕಿಸ್ ಮಾಡ್ತೀನಿ. ಅವನೂ ಮಾಡ್ಕೊಂಡು ಹೋಗಲಿ..’ ಎನ್ನುತ್ತಾ ಮಗನಿಗೆ ಶುಭಕೋರಿದರು.
ಕಿತ್ತಾಡದೇ ಫಿಲಂ ಸಿಟಿ ಮಾಡಲಿ: ಸರ್ಕಾರ ಫಿಲಂ ಸಿಟಿಗೆ 500 ಕೋಟಿ ರೂಪಾಯಿ ಮೀಸಲಿಟ್ಟ ಬಗ್ಗೆ ಮಾತನಾಡುವ ರವಿಚಂದ್ರನ್, “ಸರ್ಕಾರ ಅವತ್ತಿನಿಂದಲೂ ಫಿಲಂ ಸಿಟಿಗೆ ಬೆಂಬಲವಾಗಿದೆ. ಈಗ 500 ಕೋಟಿ ಮೀಸಲಿಟ್ಟಿದೆ. ಆದರೆ ನಮ್ಮ ನಮ್ಮಲ್ಲೇ ಕಿತ್ತಾಡದೇ ಯಾರಾದರೂ ಒಬ್ಬರು ಮುಂದಾಳತ್ವ ತಗೊಂಡು ಮಾಡಬೇಕು. ಬರೀ ಕಿತ್ತಾಟ ಮಾಡಿಕೊಂಡಿದ್ದರೆ ಸ್ಟುಡಿಯೋ ಆಗಲ್ಲ. ಯಾರನ್ನಾದರೂ ಒಬ್ಬರನ್ನು ನಂಬಿ ಅವರ ಕೈಗೆ ಒಪ್ಪಿಸಬೇಕು. ಸ್ಟುಡಿಯೋ ಮಾಡೋದು ಸುಲಭದ ಕೆಲಸವಲ್ಲ. ಇವತ್ತು ಹೆಜ್ಜೆ ಇಟ್ಟರೆ ಕಡಿಮೆ ಎಂದರೂ 5 ವರ್ಷ ಬೇಕು’ ಅನ್ನೋದು ರವಿಚಂದ್ರನ್ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.