ಅಸಂಘಟಿತ ಕಾರ್ಮಿಕರಿಗೆ ಶ್ರಮ ಸನ್ಮಾನ ಪ್ರಶಸ್ತಿ
Team Udayavani, Mar 9, 2020, 3:00 AM IST
ಮೈಸೂರು: ರಾಜ್ಯದಲ್ಲಿ ಸಂಘಟಿತ ಕಾರ್ಮಿಕರು ಶೇ.20 ರಷ್ಟು ಇದ್ದರೆ, ಅಸಂಘಟಿತರು ಶೇ.80ರಷ್ಟಿದ್ದಾರೆ. ಇವರಿಗಾಗಿ ನಾವು ಯಾವುದೇ ಕಾನೂನು, ಕಾಯಿದೆಗಳನ್ನು ರೂಪಿಸಿಲ್ಲ ಎಂದು ಬೆಂಗಳೂರಿನ ಕಾರ್ಮಿಕ ಇಲಾಖೆ ಉಪ ಆಯುಕ್ತ ರವಿಕುಮಾರ್ ಹತಾಶೆ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಹಾಗೂ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಸಹಯೋಗದಲ್ಲಿ ಭಾನುವಾರ ನಗರದ ಶಾರದ ವಿಲಾಸ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಕಾರ್ಮಿಕ ಸನ್ಮಾನ ದಿನ ಆಚರಣೆಯಲ್ಲಿ ಮಾತನಾಡಿದರು.
ಎರಡು ಯೋಜನೆ ಜಾರಿಗೆ: ದೇಶದಲ್ಲಿ ಸಂಘಟಿತ ಕಾರ್ಮಿಕರು ಶೇ.20ರಷ್ಟಿದ್ದರೆ, ಅಸಂಘಟಿತರು ಶೇ.80 ರಷ್ಟಿದ್ದಾರೆ. ಸರ್ಕಾರದ ಯೋಜನೆಗಳು ಶೇ.20 ರಷ್ಟು ಸಂಘಟಿತ ಕಾರ್ಮಿಕರಿಗೆ ದೊರೆಯುತ್ತಿದೆ. ಹೆಚ್ಚಿನ ಕೆಲಸ ಮಾಡುವ ಅಸಂಘಟಿತ ವಲಯದ ಶೇ.80 ರಷ್ಟು ಮಂದಿಗೆ ಯಾವುದೇ ಯೋಜನೆ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡು ಯೋಜನೆ ಜಾರಿಗೆ ತಂದಿದೆ ಎಂದು ತಿಳಿಸಿದರು.
ಕಾರ್ಮಿಕ ಸನ್ಮಾನ ದಿನಾಚರಣೆ: ಸಂಘಟಿತ ವಲಯದ ಕಾರ್ಮಿಕರು ಮೇ 1 ರಂದು ಕಾರ್ಮಿಕ ದಿನಾಚರಣೆ ಆಚರಿಸಲಾಗುತ್ತದೆ. ಅದೇ ರೀತಿ ಅಂಘಟಿಯ ವಲಯದ ಕಾರ್ಮಿಕರಿಗೂ ದಿನಾಚರಣೆ ಮಾಡಬೇಕೆಂದು ಸರ್ಕಾರ ಕಾರ್ಮಿಕ ಸನ್ಮಾನ ದಿನಾಚರಣೆ ಆಯೋಜಿಸಿದೆ ಎಂದರು.
ಯೋಜನೆ ಸದುಪಯೋಗಿಸಿಕೊಳ್ಳಿ: ಕಾರ್ಮಿಕ ಸಹಾಯಕ ಆಯುಕ್ತರಾದ ಎ.ಸಿ.ತಮ್ಮಣ್ಣ ಮಾತನಾಡಿ, ಕಾರ್ಮಿಕ ಸಂಘಟನೆಯಲ್ಲೇ ಅಸಂಘಟಿತ ಕಾರ್ಮಿಕರು ಬಹುಸಂಖ್ಯಾತರು. 13 ವಲಯದಿಂದ 5468 ಮಂದಿ ಅಸಂಘಟಿತರಿಂದ ಅರ್ಜಿ ಸ್ವೀಕರಿಸಿ 3367 ಮಂದಿಗೆ ಅಸಂಘಟಿತ ಕಾರ್ಡ್ ನೀಡಲಾಗಿದೆ. ರಾಜ್ಯ ಖಾಸಗಿ ವಾಣಿಜ್ಯ ವಲಯ ಅಪಘಾತ ಜೀವ ರಕ್ಷಕದಡಿಯಲ್ಲಿ ಉಚಿತವಾಗಿ 1460 ಮಂದಿಗೆ ಮೆಡಿಕಲ್ ಕಿಟ್ ನೀಡಲಾಗಿದೆ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಶ್ರಮದಾನ ಮನಧನ್ ಯೋಜನೆಗೂ ಹಲವು ಮಂದಿಯನ್ನು ಉತ್ತೇಜಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಂದಿಯನ್ನು ತಲುಪಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಶ್ರಮ ಸನ್ಮಾನ ಪ್ರಶಸ್ತಿ ಪ್ರದಾನ: ಅಸಂಘಟಿತ ವಲಯದಲ್ಲಿ ಎಲೆ ಮರೆಯ ಕಾಯಿಯಂತೆ ದುಡಿಯುವ ಕಾರ್ಮಿಕರನ್ನು ಶ್ರಮ ಸನ್ಮಾನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕುಂಬಾರರು, ಚಿಂದಿ ಆಯುವವರು, ಭಟ್ಟಿ ಕಾರ್ಮಿಕರು, ಹಮಾಲಿಗಳು, ಕಮ್ಮಾರರು, ಮನೆ ಕೆಲಸದವರು, ಅಕ್ಕಸಾಲಿಗರು, ಕ್ಷೌರಿಕರು, ಮೆಕ್ಯಾನಿಕ್‌ಗಳು, ಅಗಸರು, ಟೈಲರ್ ವೃತ್ತಿಯಲ್ಲಿ ಸೇವೆ ಸಲ್ಲಿಸುವ 136 ಮಂದಿಗೆ ವಿಶಿಷ್ಟ ಸಾಧಕರನ್ನು ಎಂದು ಗುರುತಿಸಿ ಸನ್ಮಾನಿಸಲಾಯಿತು.
ನಗದು, ಪ್ರಶಸ್ತಿ ಪ್ರದಾನ: ಮೈಸೂರು ಮಹಾ ನಗರ ಪಾಲಿಕೆ ಮೇಯರ್ ತಸ್ನಿಂ ಅಸಂಘಟಿತ ಕಾರ್ಮಿಕರಿಗೆ ಶ್ರಮ ಸಮ್ಮಾನ ಪ್ರಶಸ್ತಿ ವಿತರಣೆ ಮಾಡಿದರು. ಪ್ರಥಮ ಪ್ರಶಸ್ತಿ 15 ಸಾವಿರ ರೂ. ಮೌಲ್ಯದ ಚಿನ್ನದ ಪದಕವನ್ನು 12 ಜನ ಕಾರ್ಮಿಕರಿಗೆ ನೀಡಿದರು. ದ್ವಿತೀಯ ಪ್ರಶಸ್ತಿ 10 ಸಾವಿರ ರೂ. ಮೌಲ್ಯದ ಬೆಳ್ಳಿ ಪದಕವನ್ನು 12 ಜನ ಕಾರ್ಮಿಕರಿಗೆ ನೀಡಿದರು. ತೃತೀಯ ಪ್ರಶಸ್ತಿ 8 ಸಾವಿರ ರೂ. ಮೌಲ್ಯದ ಬೆಳ್ಳಿ ಪದಕವನ್ನು 12 ಕಾರ್ಮಿಕರಿಗೆ ಪ್ರಶಸ್ತಿಯಾಗಿ ನೀಡಲಾಯಿತು.
ಕಾರ್ಮಿಕ ಅಧಿಕಾರಿ ಎಸ್.ಎಂ.ಮಂಜುಳಾದೇವಿ, ಟ್ಯಾಕ್ಸಿ ಚಾಲಕ ಮಾಲೀಕ ಸಂಘದ ಅಧ್ಯಕ್ಷ ಆಯುಬ್ ಪಾಷಾ, ದಿನಗೂಲಿ ನೌಕರರ ಸಂಘದ ಅಧ್ಯಕ್ಷ ಪ್ರಮೋದ್ ಚಿಕ್ಕಮಗಳೂರು, ಸವಿತಾ ಸಮಾಜ ಅಧ್ಯಕ್ಷ ನಾಗೇಂದ್ರ, ದಿನಗೂಲಿ ಮತ್ತು ಗೌರವ ಧನ ನೌಕರರ ಮಹಮಂಡಳಿ ಅಧ್ಯಕ್ಷ ಚಿಕ್ಕಮನ್ನೂರು, ಅಕ್ಕ ಸಾಲಿಗ ಸಂಘದ ಪದಾಧಿಕಾರಿ ಸುರೇಶ್ ಆಚಾರಿ, ಮಂಡ್ಯ ಕಾರ್ಮಿಕ ಅಧಿಕಾರಿ ನಾಗೇಂದ್ರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ
MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.