ಮನುಷ್ಯ ಸಾಗಿ ಬಂದ ಹಾದಿ ಮರೆಯಬಾರದು


Team Udayavani, Mar 9, 2020, 3:07 AM IST

manushya

ಬೆಂಗಳೂರು: ಮನುಷ್ಯ ಎಷ್ಟೇ ಪ್ರಗತಿ ಸಾಧಿಸಿದರೂ ತಾನು ನಡೆದು ಬಂದ ಹಾದಿಯನ್ನು ಮರೆಯಬಾರದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ.ಮೋಹನ್‌ ಭಾಗವತ್‌ ಸಲಹೆ ನೀಡಿದ್ದಾರೆ.

ಬೆಂಗಳೂರು ಹೊರವಲಯದ ಜನಸೇವಾ ವಿದ್ಯಾಕೇಂದ್ರದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘವು ಇಷ್ಟೆಲ್ಲ ಬೆಳೆದು, ಕೆಲವೊಂದು ಬದಲಾವಣೆಗಳಾಗಿದ್ದರೂ, ಸ್ವಯಂಸೇವಕರ ಕೆಲಸ ಕೊಂಚವೂ ಬದಲಾಗಿಲ್ಲ. ಸ್ವಯಂಸೇವಕರು ಇಂದಿಗೂ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆಯಿಂದಲೇ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಪ್ರಾಣಿ, ಪಕ್ಷಿಗಳು ನೈಸರ್ಗಿಕವಾಗಿ ಲಭ್ಯವಿರುವುದರಲ್ಲೇ ಜೀವನ ಸಾಗಿಸುತ್ತವೆ. ಆದರೆ, ಮನುಷ್ಯ ಹಾಗಲ್ಲ, ನೈಸರ್ಗಿಕವಾಗಿ ಸಿಗುವ ವಸ್ತುಗಳ ಜತೆಗೆ ಇನ್ನೂ ಹೆಚ್ಚೆಚ್ಚು ಬೇಕು ಎನ್ನುವ ಪ್ರವೃತ್ತಿ ಹೊಂದಿರುತ್ತಾನೆಂದು ವಿಷಾದಿಸಿದರು.

ಜಗತ್ತಿನಲ್ಲಿ ನಾವು ಮುಂದೆ ಸಾಗಬೇಕಾದರೆ ಸಾಧನೆ ಇರಬೇಕು. ಲೋಕಕಲ್ಯಾಣಕ್ಕಾಗಿ ನಮ್ಮಲ್ಲಿ ಸುವಿಧ ಬೇಕು. ಸಾಧನೆ ಮತ್ತು ಸುವಿಧ ಇದ್ದರೆ ಜಗತ್ತು ಚೆನ್ನಾಗಿರುತ್ತದೆ. ಹೀಗಾಗಿ, ಶಿಕ್ಷಣವು ಸಂಸ್ಕಾರದ ಭಾಗವಾಗಿರಬೇಕು ಮತ್ತು ನಮ್ಮ ಕಾರ್ಯಪರತೆಯು ಉತ್ಕೃಷ್ಟವಾಗಿದ್ದಾಗ ಫ‌ಲ ಲಭಿಸುತ್ತದೆ. ಅದರಿಂದ ಸದಾ ಸಂತೋಷವೂ ಸಿಗುತ್ತದೆ ಎಂದು ಹೇಳಿದರು.

ಶಾಲೆಗಳ ಅವಶ್ಯಕತೆ ಹೆಚ್ಚು: ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದ ಮಧುಸೂಧನ್‌ ಸಾಯಿ ಜೀ ಮಾತನಾಡಿ, ಸಮಾಜದಲ್ಲಿ ದೇವಾಲಯಕ್ಕಿಂತಲೂ ಶಾಲೆಗಳ ಅವಶ್ಯಕತೆ ಹೆಚ್ಚಿದೆ. ಶಾಲೆಯಲ್ಲಿ ಮನುಷ್ಯರನ್ನು ದೇವರನ್ನಾಗಿ ಪರಿವರ್ತಿಸುವ ಶಕ್ತಿ ಇದೆ. ನಮ್ಮ ದೇಶದಲ್ಲಿ ಆಧ್ಯಾತ್ಮಿಕ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ. ಸೇವೆ ಭಾರತೀಯ ಸಂಸ್ಕೃತಿಯ ಸಾರ ಮತ್ತು ಆಧಾರ. ಇದನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಸಮರ್ಪಕವಾಗಿ ಜೋಡಿಸ ಬೇಕು ಎಂದು ಹೇಳಿದರು.

ದೇವಸ್ಥಾನ, ಪ್ರಾರ್ಥನಾ ಮಂದರಿಗಳು ಇಲ್ಲದಿದ್ದರೂ ಸಮಾಜ ನಡೆಯುತ್ತದೆ. ಆದರೆ, ಶಿಕ್ಷಣ ಹಾಗೂ ಆರೋಗ್ಯ ಕೇಂದ್ರ ಇರಬೇಕು. ಪ್ರತಿ ಗ್ರಾಮದಲ್ಲೂ ಆಧ್ಯಾತ್ಮಿಕ ಶಿಕ್ಷಣ ನೀಡುವ ಸಂಸ್ಥೆ ಬೆಳೆಯಬೇಕು ಎಂದರು. ಜನಸೇವಾ ವಿದ್ಯಾಕೇಂದ್ರದ ಅಧ್ಯಕ್ಷ ಕೆ.ಜಿ.ಸುಬ್ಬರಾಮ ಶೆಟ್ಟಿ, ಉಪಾಧ್ಯಕ್ಷ ಬಿ.ಎ. ಶ್ರೀನಿವಾಸ ಗುಪ್ತ, ಜನಸೇವಾ ವಿಶ್ವಸ್ಥ ಮಂಡಳಿ ನಿರ್ವಾಹಕ ವಿಶ್ವಸ್ಥ ವೈ.ಕೆ.ರಾಘವೇಂದ್ರ ರಾವ್‌ ವೇದಿಕೆಯ ಮೇಲಿದ್ದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಚಿವರಾದ ಆರ್‌.ಅಶೋಕ್‌, ವಿ.ಸೋಮಣ್ಣ, ಬೈರತಿ ಬಸವರಾಜ, ಎಸ್‌.ಟಿ.ಸೋಮಶೇಖರ್‌, ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ, ಆರೆಸ್ಸೆಸ್‌ ಪ್ರಮುಖ ರಾದ ಕಲಡ್ಕ ಪ್ರಭಾಕರ್‌ ಭಟ್‌ ಮತ್ತು ಮುಕುಂದ್‌ ಮೊದಲಾದವವರು ಕಾರ್ಯಕ್ರಮದಲ್ಲಿದ್ದರು.

ಕಥೆಯೊಂದಿಗೆ ವಿವರಣೆ: ರಾಜ್ಯವೊಂದರಲ್ಲಿ ರಾಜನಿಗೆ ಪ್ರಿಯವಾದ ಮಂತ್ರಿ ಇದ್ದ. ಆ ಮಂತ್ರಿ ಪ್ರತಿದಿನ ರಾತ್ರಿ ಅರಣ್ಯಕ್ಕೆ ನಿಗೂಢವಾಗಿ ಹೋಗುತ್ತಾನೆಂದು ಇತರರು ರಾಜನ ಬಳಿ ದೂರು ಹೇಳಿದರು. ರಾಜ ಪರೀಕ್ಷಿಸಿದಾಗ ಮಂತ್ರಿಯು ಅರಣ್ಯದಲ್ಲಿಟ್ಟಿದ್ದ ಖಜಾನೆಯೊಂದನ್ನು ನೋಡಲು ಹೋಗುತ್ತಿರುವುದು ತಿಳಿದು ಬಂತು. ಖಜಾನೆ ತೆರೆದು ನೋಡಿದಾಗ ಅದರಲ್ಲಿ ಹರಿದ ಹಳೆಯ ಬಟ್ಟೆ ಇತ್ತು.

ತಾನು ಈ ಊರಿಗೆ ಬಂದಾಗ ಹರಿದ ಬಟ್ಟೆ ಉಟ್ಟಿದ್ದೆ. ಈಗ ಮಂತ್ರಿಯಾಗಿದ್ದರೂ ಪ್ರತಿದಿನ ಕೆಲಸ ಮುಗಿದ ನಂತರ ಆ ಬಟ್ಟೆಯನ್ನು ನೋಡಿ ನನ್ನ ಮೂಲವನ್ನು ನೆನಪಿಸಿಕೊಳ್ಳುತ್ತೇನೆ ಎಂದು ಮಂತ್ರಿ ಹೇಳಿದ. ಶಾಲೆಗಳ ಪಠ್ಯದಲ್ಲೂ ಇದನ್ನು ಹಿಂದೆ ಹೇಳಿಕೊಡುತ್ತಿದ್ದರು. ನಾವು ಸಾಗಿ ಬಂದ ಹಾದಿ ಮರೆಯಬಾರದು ಎನ್ನುವುದು ಇದರ ತಾತ್ಪರ್ಯ ಎಂದು ಡಾ.ಮೋಹನ್‌ ಭಾಗವತ್‌ ಹೇಳಿದರು.

140 ಕೊಠಡಿಗಳ ಸಮುಚ್ಚಯ: ಚನ್ನೇನಹಳ್ಳಿಯಲ್ಲಿರುವ ಜನಸೇವಾ ವಿದ್ಯಾಕೇಂದ್ರದ ನೂತನ ವಸತಿ ಕಟ್ಟಡ ಸಮುಚ್ಚಯವು ಸುಮಾರು 140 ಕೊಠಡಿಗಳನ್ನು ಹೊಂದಿದೆ. ಇಲ್ಲಿ ಎಲ್ಲ ರೀತಿಯ ಶಿಕ್ಷಣದ ವ್ಯವಸ್ಥೆಯಿದೆ. 600ರಿಂದ ಒಂದು ಸಾವಿರ ವಿದ್ಯಾರ್ಥಿಗಳಿಗೆ ವಸತಿ ಸಹಿತವಾದ ಶಿಕ್ಷಣ ಒದಗಿಸಲು ಹೊಸ ಕಟ್ಟಡಗಳು ಸಹಕಾರಿಯಾಗಲಿವೆ. ಇಲ್ಲಿ ಸಂಶೋಧನಾ ಕೇಂದ್ರವನ್ನು ತೆರೆಯಲಾಗಿದೆ. ಮುಂದೆ ಶಿಕ್ಷಕರ ತರಬೇತಿ ಕೇಂದ್ರ ತೆರೆಯುವ ಯೋಚನೆಯೂ ಇದೆ ಎಂದು ಆರೆಸ್ಸೆನ ಹಿರಿಯರಾದ ನಾ.ತಿಪ್ಪೇಸ್ವಾಮಿಯವರು ವಿವರ ನೀಡಿದರು.

ಮಾನಸಿಕವಾಗಿ ಅಲೌಕಿಕವಾಗಿರುವವನು ಲೌಕಿಕ ಜೀವನದಲ್ಲಿ ಉತ್ಸಾಹ ದಿಂದಿ ರುತ್ತಾನೆ. ಅಂತಹ ವ್ಯಕ್ತಿ ಸಂಪೂರ್ಣವಾಗಿ ಲೌಕಿಕ ವ್ಯಕ್ತಿಯಾಗಿಯೇ ಕಾಣಿಸುತ್ತಾನೆ. ಆದರೆ, ಆತ ಯಾವಾಗ ಬೇಕಾದರೂ ವಿರಾಗಿಯಾಗಿ ಎಲ್ಲವನ್ನೂ ತೊರೆಯಲು ಸಿದ್ಧನಿರುತ್ತಾನೆ. ಈ ರೀತಿ ಬದುಕಿದರೆ ಜೀವನ ಸಂತಸವಾಗಿರುತ್ತದೆ.
-ಡಾ.ಮೋಹನ್‌ ಭಾಗವತ್‌, ಆರೆಸ್ಸೆಸ್‌ ಸರಸಂಘಚಾಲಕರು

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.