ಮಹಿಳಾ ಸ್ವೋದ್ಯೋಗಕ್ಕೆ ವ್ಯಾಪಕ ಸ್ಪಂದನೆ
ಫಲಾನುಭವಿಗಳ ಸಂಖ್ಯೆಯಲ್ಲಿ ಹೆಚ್ಚಳ
Team Udayavani, Mar 9, 2020, 5:24 AM IST
ವಿಶೇಷ ವರದಿ-ಉಡುಪಿ: ಜಿಲ್ಲೆಯಲ್ಲಿ ಮಹಿಳಾ ಸಶಕ್ತೀಕರಣ ಯೋಜನೆಗಳಿಗೆ ಉತ್ತಮ ಸ್ಪಂದನೆ ಲಭಿಸುತ್ತಿದೆ. ಉದ್ಯೋಗಿನಿ ಯೋಜನೆಗೆ ಆಯ್ಕೆಯಾದ ಫಲಾ ನುಭವಿಗಳಿಗೆ ಅನುದಾನ ಬಿಡುಗಡೆಗೊಳಿಸಲಾಗಿದ್ದು, ಈ ವರ್ಷ 100ಕ್ಕೂ ಅಧಿಕ ಮಹಿಳೆಯರಿಗೆ ವಿವಿಧ ಯೋಜನೆಗಳಲ್ಲಿ ಸೌಲಭ್ಯಗಳನ್ನು ನೀಡಲಾಗಿದೆ.
2017-18ರಲ್ಲಿ 48 ಫಲಾನುಭವಿಗಳು ಪ್ರಯೋಜನ ಪಡೆದರೆ, 2019-20ನೇ ಸಾಲಿನಲ್ಲಿ 70 ಮಹಿಳೆಯರಿಗೆ ಸರಕಾರದ ಸಹಾಯಧನ ಲಭಿಸಿದೆ.
ಉದ್ಯೋಗಿನಿ ಯೋಜನೆಯಲ್ಲಿ 18ರಿಂದ 55 ವರ್ಷ ವಯಸ್ಸಿನ ಪರಿಶಿಷ್ಟ ಜಾತಿ ಮತ್ತು ಪಂಗಡದ 2 ಲಕ್ಷ ರೂ. ಆದಾಯ ಮಿತಿ ಹೊಂದಿರುವ ಮಹಿಳೆಯರಿಗೆ ರಾಷ್ಟ್ರೀಕೃತ ಬ್ಯಾಂಕ್‌ನಿಂದ ಗರಿಷ್ಠ 3 ಲಕ್ಷ ಸಾಲಕ್ಕೆ ಶೇ. 50 ಸಹಾಯಧನ ಹಾಗೂ ಇತರ ಸಮುದಾಯದ 1.50 ಲಕ್ಷದವರೆಗೆ ಆದಾಯ ಮಿತಿ ಹೊಂದಿರುವ ಮಹಿಳೆಯರಿಗೆ ಶೇ.30 ಸಹಾಯಧನ ನೀಡಲಾಗುತ್ತದೆ. ಆಯ್ಕೆಯಾದ ಫಲಾನುಭವಿಗಳಿಗೆ 6 ದಿನಗಳ ತರಬೇತಿಯೂ ಇದೆ.
ಟೈಲರಿಂಗ್, ಬ್ಯೂಟೀಷಿಯನ್, ಪರಂಪರಾಗತ ಗುಡಿ ಕೈಗಾರಿಕೆಗಳಲ್ಲಿ ತೊಡಗಿರುವ ಮಹಿಳೆಯರು ಇದರಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಿದ್ದಾರೆ. ಈ ಯೋಜನೆಯಲ್ಲಿ 2017-18ನೇ ಸಾಲಿನಲ್ಲಿ 48 ಮಹಿಳೆಯರಿಗೆ 16.5 ಲಕ್ಷರೂ. ಹಾಗೂ 2018-19ನೇ ಸಾಲಿನಲ್ಲಿ 30 ಮಹಿಳೆಯರಿಗೆ 31.3 ಲಕ್ಷ ರೂ. ಸಹಾಯಧನ ವಿತರಿಸಲಾಗಿದೆ. 2019- 2020ನೇ ಸಾಲಿನಲ್ಲಿ 77 ಮಹಿಳೆಯರನ್ನು ಆಯ್ಕೆ ಮಾಡಲಾಗಿದ್ದು, 70 ಮಂದಿ ತರಬೇತಿಗೆ ಹಾಜರಾಗಿದ್ದಾರೆ.
ಸಮೃದ್ಧಿ ಯೋಜನೆಗೆ 89 ಫಲಾನುಭವಿಗಳು
ಸಮೃದ್ಧಿ ಯೋಜನೆಯಲ್ಲಿ 18 ರಿಂದ 60 ವಯೋಮಿತಿಯ ನಗರ ಹಾಗೂ ಗ್ರಾಮೀಣ ಪ್ರದೇಶದ ಬಿಪಿಎಲ್ ಕಾರ್ಡ್ ಹೊಂದಿರುವ ಬೀದಿ ಬದಿ ಮಹಿಳಾ ವ್ಯಾಪಾರಿಗಳಿಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಈ ವರ್ಷ 89 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. 2017-18ರಲ್ಲಿ 48 ಮಹಿಳೆಯರಿಗೆ 4.80 ಲಕ್ಷ ರೂ. ಹಾಗೂ 2018-19ರಲ್ಲಿ 82 ಮಹಿಳೆಯರಿಗೆ 8.20 ಲಕ್ಷ ರೂ. ನೀಡಲಾಗಿದೆ.
ಮಹಿಳೆಯರು ಸಶಕ್ತೀಕರಣವಾದಾಗ ನೈಜ ಪ್ರಗತಿ ಸಾಧ್ಯವಾಗುತ್ತದೆ. ಮನೆ ನಿರ್ವಹಣಾ ಜವಾಬ್ದಾರಿಯೊಂದಿಗೆ ಸ್ವೋದ್ಯೋಗದಲ್ಲಿ ತೊಡಗಿಸಿಕೊಂಡಾಗ ಆರ್ಥಿಕವಾಗಿಯೂ ಮಹಿಳೆ ಸಶಕ್ತಳಾಗುವುದರಲ್ಲಿ ಸಂದೇಹವಿಲ್ಲ.
ಲಿಂಗತ್ವ ಅಲ್ಪ ಸಂಖ್ಯಾಕ
ಪುನರ್ವಸತಿ ಯೋಜನೆ
ಲಿಂಗತ್ವ ಅಲ್ಪ ಸಂಖ್ಯಾಕ ಪುನರ್ವಸತಿ ಯೋಜನೆಯಲ್ಲಿ ಸ್ವೋದ್ಯೋಗ ಕೈಗೊಳ್ಳಲು 25 ಸಾವಿರ ರೂ. ಗಳ ಬಡ್ಡಿ ರಹಿತ ನೇರ ಸಾಲ ಹಾಗೂ 25 ಸಾವಿರ ರೂ. ಗಳ ಸಹಾಯಧನವನ್ನು 12 ಫಲಾನುಭವಿಗಳು ಹಾಗೂ ಕಿರು ಸಾಲ ಯೋಜನೆಯಲ್ಲಿ ಸ್ತ್ರೀ ಶಕ್ತಿ ಗುಂಪುಗಳು ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು 2 ಲಕ್ಷ ರೂ. ಬಡ್ಡಿ ರಹಿತ ಸಾಲ ನೀಡಲಾಗುತ್ತಿದ್ದು 5 ಸ್ತ್ರೀ ಶಕ್ತಿ ಗುಂಪುಗಳು ಈ ಯೋಜನೆಯ ಪ್ರಯೋಜನ ಪಡೆದಿರುತ್ತಾರೆ.
ಬಡ್ಡಿರಹಿತ ಸಾಲ
ಕಿರು ಸಾಲ ಯೋಜನೆಯಲ್ಲಿ ಸ್ತ್ರೀ ಶಕ್ತಿ ಗುಂಪುಗಳು ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು 2 ಲಕ್ಷ ರೂ. ಬಡ್ಡಿ ರಹಿತ ಸಾಲ ನೀಡಲಾಗುತ್ತಿದ್ದು, 2019-20ನೇ ಸಾಲಿನಲ್ಲಿ 5 ಸ್ತ್ರೀ ಶಕ್ತಿ ಗುಂಪುಗಳು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ. 2017-18ನೇ ಸಾಲಿನಲ್ಲಿ 8 ಗುಂಪುಗಳಿಗೆ 16 ಲಕ್ಷ ರೂ., ಹಾಗೂ 2018-19ನೇ ಸಾಲಿನಲ್ಲಿ 5 ಗುಂಪುಗಳಿಗೆ 10 ಲಕ್ಷ ರೂ. ಸಾಲ ವಿತರಿಸಲಾಗಿತ್ತು.
ಧನಶ್ರೀ ಯೋಜನೆಯಡಿ
25 ಸಾವಿರ ರೂ. ಸಹಾಯಧನ
ಧನಶ್ರೀ ಯೋಜನೆಯಲ್ಲಿ 18 ರಿಂದ 60 ವಯೋಮಿತಿಯ ಎಚ್‌ಐವಿ ಸೋಂಕಿತ ಮಹಿಳೆಯರು ಸ್ವ-ಉದ್ಯೋಗ ಕೈಗೊಳ್ಳಲು 25 ಸಾವಿರ ರೂ. ಬಡ್ಡಿ ರಹಿತ ನೇರ ಸಾಲ ಹಾಗೂ 25 ಸಾವಿರ ರೂ. ಸಹಾಯಧನ ವಿತರಿಸಲಾಗುತ್ತಿದ್ದು, ಈ ವರ್ಷ 21 ಫಲಾನುಭವಿಗಳು ಆಯ್ಕೆಯಾಗಿದ್ದಾರೆ. 2017-18ರಲ್ಲಿ 38 ಮಂದಿಗೆ 19 ಲಕ್ಷ ರೂ., 18-19ರಲ್ಲಿ 21 ಮಹಿಳೆಯರಿಗೆ 9.50 ಲಕ್ಷ ರೂ. ನೀಡಲಾಗಿದೆ. ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಲ್ಲಿ ಸ್ವ-ಉದ್ಯೋಗ ಕೈಗೊಳ್ಳಲು 25 ಸಾವಿರ ರೂ. ಬಡ್ಡಿ ರಹಿತ ನೇರ ಸಾಲ ಹಾಗೂ 25 ಸಾವಿರ ರೂ. ಸಹಾಯಧನಕ್ಕೆ ಈ ವರ್ಷ 12 ಫಲಾನುಭವಿಗಳನ್ನು ಆರಿಸಲಾಗಿದೆ. 2017-18ರಲ್ಲಿ 5 ಮಂದಿಗೆ 2.5 ಲಕ್ಷ ರೂ. ಹಾಗೂ 18-19ರಲ್ಲಿ 8 ಮಂದಿಗೆ 4 ಲಕ್ಷ ರೂ. ವಿತರಿಸಲಾಗಿದೆ.
ಪೂರ್ಣಮಟ್ಟದಲ್ಲಿ ಸದುಪಯೋಗ
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಮಹಿಳೆಯರಿಗಾಗಿ ಜಾರಿಗೆ ತಂದ ಯೋಜನೆಗಳು ಜಿಲ್ಲೆಯಲ್ಲಿ ಪೂರ್ಣಮಟ್ಟದಲ್ಲಿ ಉಪಯೋಗವಾಗುತ್ತಿವೆ. ಉದ್ಯೋಗಿನಿ ಯೋಜನೆಗೆ ಆಯ್ಕೆಯಾದ ಫಲಾನುಭವಿಗಳಿಗೆ ಅನುದಾನ ಬಿಡುಗಡೆಗೊಳಿಸಲಾಗಿದೆ. ಈ ವರ್ಷ 100ಕ್ಕೂ ಅಧಿಕ ಮಹಿಳೆಯರಿಗೆ ವಿವಿಧ ಯೋಜನೆಗಳಲ್ಲಿ ಸೌಲಭ್ಯಗಳನ್ನು ನೀಡಲಾಗಿದೆ.
– ಚಂದ್ರಿಕಾ ,ಯೋಜನಾಧಿಕಾರಿ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dec. 29: ಪಡುಬಿದ್ರಿಯಲ್ಲಿ ಅಂತರ್‌ರಾಜ್ಯ ಬಂಟ ಕ್ರೀಡೋತ್ಸವ – ಎಂಆರ್‌ಜಿ ಟ್ರೋಫಿ
Udupi: ಕಲ್ಸಂಕ ಜಂಕ್ಷನ್; ಹಗಲು-ರಾತ್ರಿ ಟ್ರಾಫಿಕ್ ಕಿರಿಕಿರಿ
Padubidri: ಪಲಿಮಾರು ಉಪ್ಪು ನೀರು ತಡೆ ಅಣೆಕಟ್ಟು ನಾಲ್ಕೇ ವರ್ಷದಲ್ಲಿ ಜೀರ್ಣಾವಸ್ಥೆಗೆ!
Karkala: ಬೀದಿ ವ್ಯಾಪಾರಿಗಳಿಂದ ಸುಗಮ ಸಂಚಾರಕ್ಕೆ ಅಡ್ಡಿ
Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.