ಶ್ರಮದ ಫ‌ಲ ಎಂದಿಗೂ ಸಿಹಿಯೇ!

Team Udayavani, Mar 9, 2020, 5:59 AM IST

ಶ್ರಮದ ಫ‌ಲ ಎಂದಿಗೂ ಸಿಹಿಯೇ!

ತಾಳ್ಮೆ,ಪರಿಶ್ರಮ ಇವು ಜೀವನದ ಯಶಸ್ಸಿನ ಕೀಲಿ ಕೈಗಳು. ನಮ್ಮಲ್ಲಿನ ಆತ್ಮಪ್ರಜ್ಞೆಯಿಂದಾಗಿ ನಮ್ಮೊಲ್ಲೊಂದು ಹೊಸ ಚಿಂತನೆ ಮೂಡುತ್ತದೆ. ಹೀಗಾಗಿ ಜೀವನವೂ ನವೋಲ್ಲಾಸದಿಂದ ಇರಲು ಸಾಧ್ಯ. ಜೀವನದ ಯಶಸ್ಸಿನ ಕೆಲವು ಸೂತ್ರಗಳನ್ನು ಲೇಖನದಲ್ಲಿ ತಿಳಿಸಲಾಗಿದೆ 

ತಾವು ತುಂಬ ದೊಡ್ಡವರು, ಮಹತ್ಸಾಧನೆ ಮಾಡಿದವರೆಂದು ಭಾವಿಸುವವರು ಸಮುದ್ರದ ಕಿನಾರೆಯಲ್ಲಿ ಹೋಗಿ ಸ್ವಲ್ಪ ಕಾಲ ಕಳೆಯಿರಿ. ಅಲೆಗಳ ಹೊಡೆತಕ್ಕೆ ನಮ್ಮ ಅಹಂಕಾರವೆಲ್ಲ ಕೊಚ್ಚಿ ಹೋಗದಿದ್ದರೆ ಕೇಳಿ. ಎಲ್ಲವನ್ನೂ ತನ್ನೊಡಲೊಳಗೆ ತುಂಬಿಕೊಳ್ಳುವ ಸಮುದ್ರದ ವಿಸ್ತಾರ, ಗಾಂಭೀರ್ಯ, ಭೋರ್ಗರೆತ ಹಾಗೂ ಅದೇ ಮಟ್ಟಿನ ಶಾಂತ ಸ್ಥಿತಿ ನಮ್ಮನ್ನು ಮೂಕ ವಿಸ್ಮಿತರನ್ನಾಗಿಸುತ್ತದೆ. ಈ ಸೃಷ್ಟಿಯ ಮುಂದೆ ನಾವೆಷ್ಟು ಚಿಕ್ಕವರು ಎಂದು ಮನವರಿಕೆ ಆಗುತ್ತದೆ.

ಒಂದು ದೊಡ್ಡ ಮರ, ತಲೆ ಎತ್ತಿ ನಿಂತಿರುವ ಹಿಮಪರ್ವತ – ಎಲ್ಲವೂ ನಮಗೆ ನಿತ್ಯ ಪಾಠಗಳೇ. ನೋಡುವ ಕಣ್ಣು, ಕೇಳುವ ಕಿವಿ, ಅರಿಯುವ ಮನಸ್ಸಿದ್ದರೆ ಸಾಕು. ಕಳೆದ ವರ್ಷ ಮಹಾ ಮಳೆಯಿಂದಾಗಿ ಕರ್ನಾಟಕ ಎರಡೆರಡು ಬಾರಿ ಜಲಪ್ರಳಯವನ್ನು ಕಂಡಿತು! ಹಲವು ರಸ್ತೆ, ಸೇತುವೆಗಳು ಮುಳುಗಿ ಹತ್ತಾರು ಊರುಗಳು ದ್ವೀಪದಂತಾದವು. ಧಾರವಾಡದಿಂದ ಸವದತ್ತಿಗೆ ಹೋಗುವ ಹೆದ್ದಾರಿಯಲ್ಲಿ ಹೊಸ ಸೇತುವೆಯೇ ಕೊಚ್ಚಿ ಹೋಗಿದೆ. ಪ್ರವಾಹ ತನ್ನ ರುದ್ರ ರೂಪವನ್ನು ತೋರಿ, ನಮ್ಮ ಅಭಿವೃದ್ಧಿ ಕಾಮಗಾರಿಗಳ ಲೋಪಗಳನ್ನೆಲ್ಲ ಎತ್ತಿ ತೋರಿಸಿದೆ. ಕರಾವಳಿಯಂತೂ ಘಟ್ಟದ ಮೇಲಿನ ಎಲ್ಲ ಪ್ರದೇಶಗಳ ಸಂಪರ್ಕ ಕಡಿದುಕೊಂಡಿತ್ತು. ಚಾರ್ಮಾಡಿ ಘಾಟಿಯಲ್ಲಿ ಕೊಟ್ಟಿಗೆಹಾರದ ತನಕವೂ ಹಲವು ಕಡೆಗಳಲ್ಲಿ ರಸ್ತೆಯ ಕುರುಹೂ ಇಲ್ಲದಂತಾಗಿ ಇಂದಿಗೂ ದೊಡ್ಡ ವಾಹನಗಳ ಸಂಚಾರ ಅಸಾಧ್ಯವೇ ಆಗಿದೆ. ಲಘು ವಾಹನಗಳ ಸಂಚಾರಕ್ಕಾದರೂ ವ್ಯವಸ್ಥೆ ಮಾಡಿಕೊಳ್ಳಲು ನಾಲ್ಕೈದು ತಿಂಗಳುಗಳೇ ಬೇಕಾದವು. ಕೊಟ್ಟಿಗೆಹಾರದಿಂದ ಹೊರನಾಡಿಗೆ ಹೋಗುವ ದಾರಿ, ಕಳಸದಿಂದ ಕುದುರೆಮುಖ ರಸ್ತೆಯ ಹಲವು ಕಡೆಗಳಲ್ಲಿ ಗುಡ್ಡಗಳೇ ಕುಸಿದು ತಿಂಗಳ ಕಾಲ ಜನಜೀವನವೇ ಅಸ್ತವ್ಯಸ್ತವಾಗಿತ್ತು. ಶಿರಾಡಿ ಘಾಟಿಯಲ್ಲಿ ಕಳೆದ ಮಳೆಗಾಲದಷ್ಟು ತೊಂದರೆ ಈ ಬಾರಿ ಆಗಲಿಲ್ಲ ಎನ್ನುವುದೊಂದೇ ಸಮಾಧಾನ.

ಪ್ರಕೃತಿಗೆ ಪೂರಕವಾಗಿರಲಿ
ಅಭಿವೃದ್ಧಿಯ ಹೆಸರಿನಲ್ಲಿ ನಾವು ಎಷ್ಟು ದೊಡ್ಡ ರಸ್ತೆ, ಕಟ್ಟಡ, ಅಣೆಕಟ್ಟು, ಕಾರ್ಖಾನೆ ಇತ್ಯಾದಿಗಳನ್ನು ಕಟ್ಟುತ್ತೇವೋ ಅಷ್ಟು ದೊಡ್ಡ ಆಪತ್ತನ್ನೂ ತಂದುಕೊಳ್ಳುತ್ತೇವೆ ಎನ್ನುವುದು ಸತ್ಯ. ಅಭಿವೃದ್ಧಿ ಎನ್ನುವುದು ಪ್ರಕೃತಿಗೆ ಪೂರಕವಾಗಿರಬೇಕು. ಪ್ರಕೃತಿಗೆ ವಿರುದ್ಧವಾದ ಯಾವ ಅಭಿವೃದ್ಧಿಯೂ ಗಂಡಾಂತರಕಾರಿಯೇ ಆಗುತ್ತದೆ ಎನ್ನುವುದು ಆಗಾಗ ಸಾಬೀತು ಆಗುತ್ತಲೇ ಇರುತ್ತದೆ.

ಪ್ರಕೃತಿಯ 84 ಲಕ್ಷ ಜೀವರಾಶಿಗಳಲ್ಲಿ ನಾವೂ ಒಂದು ಅಷ್ಟೇ. ಇಲ್ಲಿ ಬದುಕಲು ನಮಗಿರುವಷ್ಟೇ ಹಕ್ಕು ಇತರ ಜೀವಿಗಳಿಗೂ ಇದೆ. ಆದರೆ, ನಮ್ಮ ಆಕ್ರಮಣ ಶೀಲತೆಯಿಂದಾಗಿ ಕಾಡು ನಶಿಸುತ್ತಿದೆ, ನದಿ-ಕೆರೆಗಳು ಇಲ್ಲವಾಗುತ್ತಿವೆ. ಪ್ರಾಣಿಗಳು ನೀರು ಆಹಾರವನ್ನರಸಿ ನಾಡಿಗೆ ಬರುತ್ತಿವೆ. ಅವುಗಳ ಮನೆಯನ್ನು ನಾವು ಖಾಲಿ ಮಾಡಿದರೆ ಅವು ಮತ್ತೆಲ್ಲಿಗೆ ಹೋಗಬೇಕು? ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕುವುದನ್ನು ಕಲಿತರಷ್ಟೇ ನಮಗೆ ಉಳಿಗಾಲ.

ಪ್ರಕೃತಿಗೆ ಅದರದ್ದೇ ಆದ ರೀತಿ- ರಿವಾಜುಗಳಿವೆ. ನಮ್ಮ ಕರುಣೆಯೂ ಒಮ್ಮೊಮ್ಮೆ ವಿಪತ್ತುಕಾರಕವೇ ಆಗುತ್ತದೆ ಎನ್ನುವುದನ್ನು ಸಾರುವ ಕಥೆಯೊಂದಿಗೆ.

ಚಿಟ್ಟೆಯ ವ್ಯಥೆ
ಚಿಟ್ಟೆಯೊಂದು ತನ್ನ ಕೋಶದಿಂದ ಹೊರಬರಲು ಪ್ರಯತ್ನಿಸುತ್ತಿತ್ತು. ಚಿಕ್ಕ ರಂಧ್ರವೊಂದರಿಂದ ಹುಳು ರೂಪದ ಚಿಟ್ಟೆ ಹೊರಗೆ ಬರಲು ತಾಸುಗಟ್ಟಲೆ ತೆಗೆದುಕೊಳ್ಳುತ್ತದೆ. ಒಂದು ಹಂತದಲ್ಲಿ ಅದು ಪ್ರಯತ್ನವನ್ನೇ ನಿಲ್ಲಿಸಿತೇನೋ ಎನ್ನುವಂತೆ ಪೂರ್ತಿಯಾಗಿ ಸ್ತಬ್ಧವಾಯಿತು. ಈ ಪ್ರಕ್ರಿಯೆಯನ್ನು ಗಮನಿಸುತ್ತ ಕುಳಿತಿದ್ದ ಯುವಕನಿಗೆ ಕರುಣೆ ಉಕ್ಕಿ ಬಂತು. ಪಾಪ, ಆ ಚಿಟ್ಟೆ ತುಂಬ ಕಷ್ಟಪಡುತ್ತಿದೆ. ಸ್ವಲ್ಪ ಸಹಾಯ. ಮಾಡೋಣ ಎಂದು ಹೇಳಿ, ಚಿಟ್ಟೆಯ ಕೋಶದ ರಂಧ್ರವನ್ನು ಕತ್ತರಿಯಿಂದ ಸ್ವಲ್ಪ ಬಿಡಿಸಿದ. ಚಿಟ್ಟೆಯೇನೋ ಸುಲಭವಾಗಿ ಹೊರಗೆ ಬಂತು. ಆದರೆ, ಅದರ ರೆಕ್ಕೆಗಳು ಬಲಿಷ್ಠವಾಗಿ ಬೆಳೆದಿರಲಿಲ್ಲ. ದೊಡ್ಡ ದೇಹವನ್ನು ಹೊತ್ತುಕೊಂಡು ಹಾರಲು ಅದಕ್ಕೆ ಕೊನೆಗೂ ಸಾಧ್ಯವಾಗಲಿಲ್ಲ.

ಆದರೆ, ಅದೇ ಚಿಟ್ಟೆ ಸ್ವಾಭಾವಿಕವಾಗಿ ಕೋಶದಿಂದ ಹೊರಗೆ ಬಂದಿದ್ದರೆ ಅದರ ರೆಕ್ಕೆಗಳು ಶಕ್ತಿ ಪಡೆದುಕೊಳ್ಳುತ್ತಿದ್ದವು. ಕೋಶದಿಂದ ಹೊರಬರುವ ಪ್ರಕ್ರಿಯೆಯಲ್ಲೇ ಈ ರಹಸ್ಯ ಅಡಗಿದೆ. ಹಾರಲಾರದ ಸ್ಥಿತಿಯಲ್ಲಿ ಚಿಟ್ಟೆ ಜೀವನ ಕಳೆಯಬೇಕಾಯಿತು.

ಸವಾಲನ್ನು ಎದುರಿಸುವ ಶಕ್ತಿ
ಕಷ್ಟಗಳೇ ನಮ್ಮನ್ನು ಗಟ್ಟಿಗೊಳಿಸುತ್ತವೆ, ಬದುಕಿಗೆ ಸಜ್ಜಾಗಿಸುತ್ತವೆ. ಕಷ್ಟ ಪಡದೆ ಸಿಗುವ ಸುಖವೂ ಸಿಗುವುದಿಲ್ಲ, ಯಶಸ್ಸೂ ನಮ್ಮದಾಗುವುದಿಲ್ಲ. ಅಡ್ಡ ದಾರಿಯಲ್ಲಿ ಪಡೆದ ಯಶಸ್ಸು, ಗಳಿಸಿದ ಹಣ ಶಾಶ್ವತವೇ? ಅದಕ್ಕೊಂದು ಕೀರ್ತಿಯೇ?

ಸವಾಲುಗಳನ್ನು ಎದುರಿಸಿಯೇ ನಾವು ನಮ್ಮ ಶಕ್ತಿಯನ್ನು ಪ್ರದರ್ಶಿಸಬೇಕು, ಸಾಧನೆ ಮಾಡಬೇಕು. ಉಳಿ ಪೆಟ್ಟು ತಿಂದ ಶಿಲೆ ಶಿಲ್ಪವಾಗುತ್ತದೆ, ಕುಂಬಾರನಿಂದ ತುಳಿಸಿಕೊಂಡ ಮಣ್ಣು ಮಡಕೆಯಾಗುತ್ತದೆ, ಕುಲುಮೆಯಲ್ಲಿ ಕಾದ ಕಬ್ಬಿಣ ಬೇಕಾದ ರೂಪ ಪಡೆಯುತ್ತದೆ.

ಕೆಲವು ವಿದ್ಯಾರ್ಥಿಗಳಿಗೆ ಈಗ ಪರೀಕ್ಷೆಗಳು ನಡೆಯುತ್ತಿವೆ, ಇನ್ನುಳಿದವರಿಗೆ ಕೆಲವೇ ದಿನಗಳಲ್ಲಿ ಆರಂಭವಾಗಲಿವೆ. ವರ್ಷವಿಡೀ ಕಷ್ಟಪಟ್ಟು ಓದಿದರೆ, ಪರೀಕ್ಷೆಯಲ್ಲಿ ಚೆನ್ನಾಗಿ ಬರೆದರೆ ಮಾತ್ರ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಲು ಸಾಧ್ಯ. ಶ್ರಮದ ಫ‌ಲ ಯಾವಾಗಲೂ ಸಿಹಿಯಾಗಿಯೇ ಇರುತ್ತದೆ. ಅಂತಹ ಸಿಹಿಯ ಅನುಭವ ನಿಮಗಾಗಲಿ.

 -ಅನಂತ ಹುದೆಂಗಜೆ

ಟಾಪ್ ನ್ಯೂಸ್

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

4(1

Snuff: ನಶ್ಯ ತಂದಿಟ್ಟ ಸಮಸ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

5

Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

5

Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.