ಇಟಲಿಯಿಂದ ಆಗಮಿಸಿದ್ದ ಕೇರಳದ 3 ವರ್ಷದ ಮಗುವಿಗೆ ಕೊರೊನಾ: ಭಾರತದಲ್ಲಿ ಒಟ್ಟು 40 ಪ್ರಕರಣ
Team Udayavani, Mar 9, 2020, 10:00 AM IST
ಕೊಚ್ಚಿನ್ (ಕೇರಳ): ರವಿವಾರವಷ್ಟೇ ಕೇರಳದಲ್ಲಿ ಐವರಿಗೆ ತಗುಲಿದ್ದ ಕೊರೊನಾ ಸೋಂಕು ಇಂದು ಮತ್ತೊಂದು ಮಗುವಿಗೆ ತಾಗಿದೆ. ಇಟಲಿಗೆ ಹೋಗಿ ಬಂದಿದ್ದ ಕೇರಳದ ಮೂರು ವರ್ಷದ ಮಗುವಿಗೆ ಸೋಂಕು ಇರುವುದು ದೃಢಪಟ್ಟಿದೆ.
ಸೋಮವಾರ ಈ ಹೊಸ ದೃಢಪಡುವ ಮೂಲಕ ಭಾರತದಲ್ಲಿ ಈ ಮಾರಣಾಂತಿಕ ಸೋಂಕಿತರ ಪ್ರಕರಣ 40ಕ್ಕೇರಿದೆ.
ಶನಿವಾರ ತನ್ನ ಕುಟುಂಬಿಕರ ಜೊತೆಗೆ ಇಟಲಿಯಿಂದ ಕೊಚ್ಚಿನ್ ವಿಮಾನ ನಿಲ್ದಾಣಕ್ಕೆ ಈ ಮಗು ಮರಳಿತ್ತು. ಸದ್ಯ ಮಗುವನ್ನು ಐಸಲೋಶನ್ ವಾರ್ಡ್ ನಲ್ಲಿ ಇಡಲಾಗಿದೆ.
ಮಗುವಿಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆ ಅವರ ಕುಟುಂಬಿಕರನ್ನೂ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.
ರವಿವಾರ ಏಕಾಏಕಿ ಇಲ್ಲಿನ ಐವರಿಗೆ ಕೊರೊನಾ ಸೋಂಕು ಪತ್ತೆಯಾಗಿತ್ತು. ಇವರಿಗೆ ಪಟ್ಟಣಂತಿಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.