ಹೋಳಿ ದಿನವಷ್ಟೇ ನಾಮಕರಣ

ತಪ್ಪಿದರೆ ಗಂಡು ಮಗು ನಾಮಕರಣಕ್ಕೆ ಮತ್ತೊಂದು ಹೋಳಿ ಹುಣ್ಣಿಮೆಯೇ ಬರಬೇಕು

Team Udayavani, Mar 9, 2020, 12:37 PM IST

9-March-6

ವಿಜಯಪುರ: ಮಹಲ್‌ ತಾಂಡಾದಲ್ಲಿ ಬಂಜಾರಾ ಸಮುದಾಯದವರು ವಿಶಿಷ್ಟವಾಗಿ ಆಚರಿಸುವ ಹೋಳಿ. (ಸಂಗ್ರಹ ಚಿತ್ರ)

ವಿಜಯಪುರ: ಹೋಳಿ ಹಬ್ಬವನ್ನು ಜಿಲ್ಲೆಯಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ನಗರಕ್ಕೆ ಅನತಿ ದೂರದಲ್ಲಿರುವ ಮಹಲ್‌ -ಐನಾಪುರ ತಾಂಡಾದಲ್ಲಿ ಹೋಳಿ ಹುಣ್ಣಿಮೆ ನಂತರ ಜನಿಸುವ ಗಂಡು ಮಕ್ಕಳ ನಾಮಕರಣ ಮಾಡಬೇಕಿದ್ದರೆ ಮತ್ತೂಂದು ಹೋಳಿ ಹುಣ್ಣಿಮೆಯೇ ಬರಬೇಕು. ಅಲ್ಲಿವರೆಗೆ ಗಂಡು ಮಕ್ಕಳಿಗೆ ನಾಮಕರಣ ಮಾಡುವಂತಿಲ್ಲ.

ಇದು ಈ ತಾಂಡಾದಲ್ಲಿ ನಡೆದುಕೊಂಡು ವಿಶಿಷ್ಟ-ವಿಭಿನ್ನ ಆಚರಣೆ. ಹೋಳಿ ಹಬ್ಬದ ದಿನ ಎಷ್ಟೇ ದೂರದಲ್ಲಿದ್ದರೂ ಈ ತಾಂಡಾದ ಗಂಡು ಮಗುವಿನ ಪಾಲಕರು ನಾಮಕರಣಕ್ಕಾಗಿ ಊರಿಗೆ ಬರಲೇಬೇಕು. ಹೋಳಿ ದಿನ ನಾಮಕರಣ ಮಾಡಲಾಗುವ ಗಂಡು ಮಗುವಿನ ತಲೆಗೆ ಕೆಂಪು ಬಟ್ಟೆ ಪೇಟಾ ಸುತ್ತುವ ಮೂಲಕ ಈ ಮನೆಯಲ್ಲಿ ನಾಮಕರಣ ಇದೆ ಎಂಬ ಮಾಹಿತಿ ದೃಢೀಕರಿಸಲಾಗುತ್ತದೆ.

ಹೋಳಿ ಹುಣ್ಣಿಮೆ ದಿನ ಗಂಡು ಮಗುವಿಗೆ ನಾಮಕರಣ ಮಾಡಿದರೆ ಮನ್ಮಥನಂಥ ಸೌಂದರ್ಯ ಹಾಗೂ ಪ್ರಖರ ನಾಯಕತ್ವ ಗುಣ ಬೆಳೆಸಿಕೊಂಡು ಸಮಾಜದಲ್ಲಿ ಉನ್ನತ ವ್ಯಕ್ತಿತ್ವ ರೂಪಿಸಿಕೊಳ್ಳುತ್ತಾನೆಂಬ ನಂಬಿಕೆಯೇ ಈ ಸಂಪ್ರದಾಯ ಆಚರಣೆಗೆ ಕಾರಣ. ನಾಮಕರಣಕ್ಕೆ ಮುನ್ನ ತಂಡಾದ ಪ್ರಮುಖನಾದ ನಾಯಕನ ಒಪ್ಪಿಗೆ ಪಡೆದು ಮನೆ ಮುಂದೆ ಕಂಬಳಿಯಿಂದ ಚಪ್ಪರ ಹಾಕಿ, ಸಂಜೆ ಮಹಿಳೆಯರು ಸಾಮೂಹಿಕವಾಗಿ ಮನೆ ಮುಂದೆ ಸಾಂಪ್ರದಾಯಿಕ ಉಡುಗೆ ತೊಟ್ಟು ಜಾನಪದ ಹಾಡು ಹಾಡುತ್ತ ನೃತ್ಯ ಮಾಡುತ್ತಾರೆ. ನಂತರ ನಾಯಕ, ಕಾರಭಾರಿ ಬಂದು ಮನೆ ಮುಂದಿನ ಕಂಬಳಿ ಚಪ್ಪರದಲ್ಲಿ ಕೋಲಿನಿಂದ ಬಡಿಯುತ್ತ ನಾಮಕರಣದ ಗೀತೆಗಳನ್ನು ಹಾಡಿ ನಾಮಕರಣ ಶಾಸ್ತ್ರ ಮುಗಿಸುತ್ತಾರೆ. ಬಳಿಕ ನೆರೆದವರಿಗೆ ಪೂರಿ ವಿತರಿಸಲಾಗುತ್ತದೆ.

ಹೋಳಿ ಹುಣ್ಣಿಮೆ ದಿನ ಬೆಳಗ್ಗೆ ಪುರುಷರಿಂದ ಸಾಮೂಹಿಕ ಕಾಮದಹನ ನಡೆದರೆ, ಸಂಜೆ ಮಹಿಳೆಯರು ಕಾಮದಹನ ನಡೆಸುತ್ತಾರೆ. ಹೋಳಿ ಬೆಂಕಿ ಹೊತ್ತಿಸಿದ ನಂತರ ತಾಂಡಾದ ಪಂಚರಿಂದ ನೇಮಕಗೊಂಡ ಇಬ್ಬರು ಅವಿವಾಹಿತ ಯುವಕರು ತಲೆಗೆ ಗಾಂಧಿ  ಟೋಪಿ, ಹಿಂಭಾಗದಲ್ಲಿ ಕೆಂಪು ಪಟ್ಟಿ ಕಟ್ಟಿಕೊಂಡಿರುತ್ತಾರೆ. ಈ ಯುವಕರು ಕೈಯಲ್ಲಿ ಔಡಲ ಸಸಿ ಹಿಡಿದು ಧೋತರ ಉಟ್ಟು ಬಾವಿಗೆ ಹೋಗಿ ನೀರು ತಂದು ಬೆಂಕಿಗೆ ಪ್ರದಕ್ಷಿಣೆ ಹಾಕುತ್ತಾರೆ. ನಂತರ ಮಹಿಳೆಯರು ಹೊಸ ವರ್ಷದಲ್ಲಿ ಬೆಳೆದ ಜೋಳದ ಕಾಳುಗಳನ್ನು ಬೆಂಕಿಗೆ ಎರಚಿ, ಅದರ ಬೂದಿಯನ್ನು ಮನೆಗೆ ತಂದು ಪೂಜಿಸುತ್ತಾರೆ.

„ಜಿ.ಎಸ್‌. ಕಮತರ

ಟಾಪ್ ನ್ಯೂಸ್

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

Pakistan: 6 security personnel hit, shoot-at-sight order

Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

Sagara-Minister-Dinesh

KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Siddapura: ಬುಲೆಟ್‌ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ

Siddapura: ಬುಲೆಟ್‌ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

Amparu: ಬೈಕ್‌ ಸ್ಕಿಡ್‌; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು

Amparu: ಬೈಕ್‌ ಸ್ಕಿಡ್‌; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು

KAUP: ಸಂವಿಧಾನ ಉಳಿಸಿ ಬೃಹತ್‌ ಜಾಥಾ ಮತ್ತು ಸಾರ್ವಜನಿಕ ಸಭೆ

KAUP: ಧರ್ಮಗ್ರಂಥಗಳಷ್ಟೇ ಸಂವಿಧಾನವೂ ಪವಿತ್ರ: ನಿಕೇತ್‌ ರಾಜ್‌ ಮೌರ್ಯ

Pakistan: 6 security personnel hit, shoot-at-sight order

Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.