![Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’](https://www.udayavani.com/wp-content/uploads/2025/02/sha-415x304.jpg)
![Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’](https://www.udayavani.com/wp-content/uploads/2025/02/sha-415x304.jpg)
Team Udayavani, Mar 9, 2020, 8:25 PM IST
ಬೆಂಗಳೂರು: ಇತ್ತೀಚೇಗೆ ಅಮೇರಿಕಾ ತೆರಳಿ ಹಿಂದಿರುಗಿದ್ದ ಬೆಂಗಳೂರು ಮೂಲದ ಇಂಜಿನಿಯರ್ ನಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಮಾರ್ಚ್ 1 ರಂದು ಆತ ಅಮೇರಿಕಾದಿಂದ ಬೆಂಗಳೂರಿಗೆ ಹಿಂದಿರುಗಿದ್ದು, ಎರಡು ದಿನ ಆಫೀಸ್ ಗೆ ತೆರಳಿ ಕೆಲಸ ಮಾಡಿದ್ದಾರೆ. ಮಾರ್ಚ್ 5 ರಂದು ಅನಾರೋಗ್ಯ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಗೆ ತೆರಳಿ ಪರೀಕ್ಷೆಗೊಳಪಟ್ಟಿದ್ದಾರೆ. ವೈದ್ಯರು ಎರಡು ಬಾರಿ ಸೋಂಕು ಪರೀಕ್ಷೆ ಮಾಡಿ ಸೋಮವಾರ ಬೆಳಗ್ಗೆ ಕೊರೊನಾ ಸೋಂಕು ತಗುಲಿರುವುದಾಗಿ ದೃಢಪಡಿಸಿಕೊಂಡಿದ್ದಾರೆ.
ಸದ್ಯ ಸೋಂಕಿತ ವ್ಯಕ್ತಿಯು ರಾಜೀವ್ ಗಾಂಧಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಕುಟುಂಬ ಸದಸ್ಯರನ್ನು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾವಹಿಸಲಾಗಿದೆ.
ಇನ್ನು ಸೋಂಕು ದೃಢಪಟ್ಟ ವ್ಯಕ್ತಿ ಜತೆ ವಿಮಾನದಲ್ಲಿ ಸಂಚಾರ ಮಾಡಿದ ಸಹ ಪ್ರಯಾಣಿಕರು, ನಿವಾಸದ ಬಳಿ ನೆರೆ ಹೊರೆಯವರು ಹಾಗೂ ಬೆಂಗಳೂರಿನ ಆಫೀಸ್ ನಲ್ಲಿ ಆತನೊಟ್ಟಿಗೆ ಕೆಲಸ ಮಾಡಿದ ಎಲ್ಲಾ ಸಿಬ್ಬಂದಿಯನ್ನು ಸೇರಿದಂತೆ 2,000 ಕ್ಕೂ ಹೆಚ್ಚು ಮಂದಿಯನ್ನು ಆರೋಗ್ಯ ಇಲಾಖೆ ಪತ್ತೆ ಮಾಡುತ್ತಿದ್ದು, ಅವರನ್ನು ತಪಾಸಣೆ ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಪ್ರಾಥಮಿಕ ಶಾಲೆಗಳಿಗೆ ರಜೆ :”
ಬೆಂಗಳೂರಿನ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ ಬಿಬಿಎಂಪಿ ಸೇರಿದಂತೆ ಬೆಂಗಳೂರಿನ ಎರಡು ಜಿಲ್ಲೆಗಳ ಶಾಲೆಗಳಲ್ಲಿ 5 ನೇ ತರಗತಿವರೆಗೂ ರಜೆ ಘೋಷಿಸಲಾಗಿದೆ.
ಸೋಮವಾರದಿಂದ ಎಲ್ ಕೆಜಿ, ಯುಕೆಜಿ ವರೆಗು ರಜೆ ನೀಡಿಲಾಗಿತ್ತು. ಸದ್ಯ ನಗರದಲ್ಲಿ ಒಂದು ಪ್ರಕರಣ ದೃಢವಾದ ಹಿನ್ನೆಲೆ ಒಂದರಿಂದ ಐದನೇ ತರಗತಿವರೆಗೂ ರಜೆ ಘೋಷಿಸಲಾಗಿದೆ.
ಬಿಬಿಎಂಪಿ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಎಲ್ಲಾ ಶಾಲೆಗಳಿಗೆ ನಾಳೆಯಿಂದ ಮುಂದಿನ ಆದೇಶದವರೆಗೂ ರಜೆ ಘೋಷಣೆ ಮಾಡಲಾಗಿದೆ
ಅಂಗನವಾಡಿ ಕೇಂದ್ರಗಳಿಗೂ ರಜೆ :
10 ವರ್ಷದೊಳಗಿನ ಮಕ್ಕಳಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಸೋಂಕು ಬೇಗನೆ ಸಾಧ್ಯತೆ ಇದೆ. ಹಾಗಾಗಿ ಮುಂಜಾಗ್ರತೆ ಕ್ರಮವಾಗಿ ಬಿಬಿಎಂಪಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಾರ್ಚ್ 10 ರಿಂದ 17ರವರೆಗೆ ಅಂಗನವಾಡಿ ಕೇಂದ್ರಗಳಿಗೆ ರಜೆ ನೀಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ರಜೆ ಘೋಷಣೆ ಮಾಡಲಾಗಿದೆ.
ಕೊರೊನಾ ದೃಢಪಟ್ಟ ಟೆಕ್ಕಿ ಫೆಬ್ರವರಿ ಕೊನೆಯ ವಾರ ಅಮೆರಿಕಕ್ಕೆ ತೆರಳಿ ಮಾರ್ಚ್ 1 ರಂದು ಬೆಂಗಳೂರಿಗೆ ಬಂದಿದ್ದರು. ಸದ್ಯ ಅವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಪತ್ನಿ ಮಗು ಮತ್ತು ಕಾರು ಚಾಲಕನನ್ನು ಬೇರೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಸಲಾಗಿದೆ. ಆತನೊಟ್ಟಿಗೆ ನೇರ ಸಂಪರ್ಕ ಹೊಂದಿದವರನ್ನು ಪತ್ತೆಮಾಡಿ ತಪಾಸಣೆ ಮಾಡಲಾಗುತ್ತಿದೆ.
– ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ.
Dharawad: ಜಲ ಜೀವನ್ ಮಿಷನ್ ಕಳಪೆ ಕಾಮಗಾರಿಗೆ ಗರಂ; ಕೆಟ್ಟ ಯೋಜನೆ ಎಂದ ವಿನಯ್ ಕುಲಕರ್ಣಿ
GBS Outbreak; ಸಾಂಕ್ರಾಮಿಕ ರೋಗದ ಬಗ್ಗೆ ಬೆಳಗಾವಿಯಲ್ಲಿ ಮುನ್ನೆಚ್ಚರಿಕೆ
ಸಿಎಂ ರಾಜಕೀಯ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿ.ಆರ್.ಪಾಟೀಲ್‌ಗೆ ಹೊಸ ಹುದ್ದೆ!
ಮಾರ್ಚ್ ಬಳಿಕ ಸಂಪುಟ ಪುನರ್ ರಚನೆ; ನನಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತೆ: ವಿನಯ್ ಕುಲಕರ್ಣಿ
Siddaramaiah; ಮಾರ್ಚ್ 3 ರಿಂದ ವಿಧಾನಸಭೆ ಅಧಿವೇಶನ, ಬಜೆಟ್ ದಿನಾಂಕ ತಿಳಿಸಿದ ಸಿಎಂ
Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’
Special Train: ಉಡುಪಿ-ಪ್ರಯಾಗರಾಜ್ ವಿಶೇಷ ರೈಲಿಗೆ ಪೇಜಾವರ ಶ್ರೀ ಚಾಲನೆ
CEC Appoint: ಜ್ಞಾನೇಶ್ ಕುಮಾರ್ ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕ
Udupi: ಮತ್ಸ್ಯಗಂಧ ರೈಲಿಗೆ ನೂತನ ಎಲ್‌ಎಚ್‌ಬಿ ಬೋಗಿ ಅಳವಡಿಕೆ
ಕಾಂಞಂಗಾಡ್ -ಕಾಣಿಯೂರು ಹಳಿ ನಿರ್ಮಾಣಕ್ಕೆ ಕರ್ನಾಟಕ ಅನುಮತಿ ನಿರೀಕ್ಷೆ: ಸಂಸದ ಉಣ್ಣಿತ್ತಾನ್
You seem to have an Ad Blocker on.
To continue reading, please turn it off or whitelist Udayavani.