ಮನೋಜ್ಞವಾಗಿ ಮೂಡಿಬಂದ ಬದುಕಿ-ಬದುಕಿಸಿ ನಾಟಕ
Team Udayavani, Mar 10, 2020, 3:00 AM IST
ಚಾಮರಾಜನಗರ: ರಾಜ್ಯ ರಸ್ತೆ ಸಾರಿಗೆ ನಿಗಮವು ವಾಹನಗಳಿಂದ ಸಂಭವಿಸುವ ಅಪಘಾತದಿಂದ ಉಂಟಾಗುವ ಭೀಕರ ಪರಿಣಾಮಗಳು ಮತ್ತು ಅಪಘಾತಕ್ಕೆ ಒಳಗಾದವರಿಗೆ ಲಭಿಸುವ ಪರಿಹಾರ, ಸೌಲಭ್ಯಗಳು, ರಸ್ತೆ ಸುರಕ್ಷತೆ ಕುರಿತು ಜಾಗೃತಿಗಾಗಿ ನಗರದಲ್ಲಿ ಪ್ರದರ್ಶಿಸಿದ ನಾಟಕ ಪ್ರದರ್ಶನ ಮನೋಜ್ಞವಾಗಿ ಮೂಡಿಬಂದಿತು.
ಸಾರಿಗೆ ನಿಗಮದ ಕೇಂದ್ರ ಕಚೇರಿಯ ಸೂಚನೆಯಂತೆ ನಿಗಮದ ಸಾಂಸ್ಕೃತಿಕ ಕೆ.ಎಸ್.ಆರ್.ಟಿ.ಸಿ ಕಲಾವಿದರು ನಗರದ ಬಸ್ ಡಿಪೋ ಹಾಗೂ ಬಸ್ ನಿಲ್ದಾಣದಲ್ಲಿ ನಡೆಸಿಕೊಟ್ಟ ಬದುಕಿ-ಬದುಕಿಸಿ ನಾಟಕವು ಕೆ.ಎಸ್.ಆರ್.ಟಿ.ಸಿ.ಯ ಪ್ರಯಾಣಿಕ ಸುರಕ್ಷತೆ, ಸಂಚಾರ ನಿಯಮಗಳ ಪಾಲಿಸುವಿಕೆ, ವಿದ್ಯಾರ್ಥಿ ಮತ್ತು ದಿವ್ಯಾಂಗರ ಬಸ್ ಪಾಸ್, ಅಪಘಾತ ಸಂದರ್ಭದಲ್ಲಿ ದೊರೆಯುವ ಪರಿಹಾರ ಹೀಗೆ ನಿಗಮದಿಂದಾಗುವ ಅನುಕೂಲಗಳ ಬಗ್ಗೆ ಹಾಗೂ ಸಂಸ್ಥೆಯು ಸಾರ್ವಜನಿಕರಿಗೆ ನೀಡುತ್ತಿರುವ ಸೇವೆಯ ಬಗ್ಗೆ ಮಾಹಿತಿ ನೀಡುವುದರ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿ ಜನಮನ ಗೆದ್ದರು.
ನಾಟಕ ಯಶಸ್ವಿ: ನೂರಾರು ಮಂದಿ ಪ್ರಯಾಣಿಕರು, ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಮನಮುಟ್ಟುವಲ್ಲಿ ನಾಟಕ ಯಶಸ್ವಿಯಾಯಿತು.
ಸಹಾಯ ಮಾಡಿ: ನಾಟಕ ಉದ್ಘಾಟಿಸಿದ ಪೊಲೀಸ್ ಡಿವೈಎಸ್‌ಪಿ ಜೆ. ಮೋಹನ್ ಮಾತನಾಡಿ, ವೃತ್ತಿ ಜೀವನದಲ್ಲಿ ಉತ್ತಮ ಸಹಾಯ ಗುಣಗಳನ್ನು ಅಳವಡಿಸಿಕೊಳ್ಳಿ ಎಂದು ಸಲಹೆ ಮಾಡಿದರು.
ಸಾರ್ವಜನಿಕರು ಕೈ ಜೋಡಿಸಿ: ಇಲಾಖೆಯು ಉತ್ತಮವಾದ ಕೆಲಸವನ್ನು ಮಾಡುತ್ತಿದ್ದು ಸಾರ್ವಜನಿಕರು ಕೈ ಜೋಡಿಸಿ ಸಹಕರಿಸಬೇಕಾಗಿದೆ. ಚಾಲಕರು ಮತ್ತು ಸಾರ್ವಜನಿಕರ ನಿರ್ಲಕ್ಷ್ಯದ ಬಗ್ಗೆ ನಾಟಕದಲ್ಲಿ ತಿಳಿಸಲಾಗಿದ್ದು ಪ್ರತಿಯೊಬ್ಬರು ತಮ್ಮ ಕರ್ತವ್ಯವನ್ನು ಬಹಳ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದರು.
ಪೋಷಕರು ಸಹಕರಿಸಿ: ವಿಶೇಷವಾಗಿ ಪರೀಕ್ಷೆ ಸಂದರ್ಭಗಳಲ್ಲಿ ಮಕ್ಕಳು ನಿಲುಗಡೆ ಕೋರಿದ ಸ್ಥಳಗಳಲ್ಲಿ ಚಾಲಕರು ವಾಹನವನ್ನು ನಿಲ್ಲಿಸಿ, ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆದು ಜೀವನ ನಡೆಸಲು ಸಹಕರಿಸಬೇಕು ಎಂದರು.
ಜವಾಬ್ದಾರಿಯುತ ಸಂದೇಶ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ ರವಿ ಮಾತನಾಡಿ, ಬಸ್‌ನಲ್ಲಿ ಸಂಚಾರಿಸುವಾಗ ಸಾಮಾನ್ಯ ವಾಗಿ ನಡೆಯುವಂಥ ಘಟನೆಗಳನ್ನು ಗಮನಿಸಿ ಅಭಿನಯಿಸಿರುವುದನ್ನು ಕಾಣಬಹುದಾಗಿದ್ದು ಇಲಾಖೆ ತನ್ನ ಸಿಬ್ಬಂದಿಗೆ ಮತ್ತು ಸಾರ್ವಜನಿಕರಿಗೆ ನಾಟಕದ ಮೂಲಕ ಅನೇಕ ಜವಾಬ್ದಾರಿಯುತ ಸಂದೇಶಗಳನ್ನು ನೀಡಿದೆ ಎಂದರು.
ಪ್ರತಿ ಸರ್ಕಾರಿ ಬಸ್ಸಿನಲ್ಲಿರುವ ಪ್ರಥಮ ಚಿಕ್ಸಿತೆಯ ಪೆಟ್ಟಿಗೆಯನ್ನು ಅಪಘಾತದ ಸಂದರ್ಭದಲ್ಲಿ ಉಪಯೋಗಿಸಿಕೊಳ್ಳಿ ಎಂದು ಚಾಲಕ ಮತ್ತು ನಿರ್ವಾಹಕರಿಗೆ ತಿಳಿಸಿದರು. ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಮಾತನಾಡಿ, ಇಲಾಖೆಯು ನೌಕರರಿಗೆ ಯಾವ ರೀತಿ ತಮ್ಮ ಕಾರ್ಯವನ್ನು ನಿರ್ವಹಿಸಬೇಕು ಎಂಬುದರ ಬಗ್ಗೆ ತಿಳಿಸಲಾಗಿದ್ದು, ನೌಕರರಿಗೆ ಮನಮುಟ್ಟುವ ಹಾಗೇ ನಾಟಕದ ಮೂಲಕ ಪಾಲಿಸಬೇಕಿರುವ ನಿಯಮ, ಇನ್ನಿತರ ವಿಷಯಗಳನ್ನು ತಿಳಿಸಲಾಗಿದೆ ಎಂದರು.
ಪಟ್ಟಣ ಠಾಣೆ ಇನ್ಸ್‌ಪೆಕ್ಟರ್ ನಾಗೇಗೌಡ, ಗ್ರಾಮಾಂತರ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಲೋಹಿತ್, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ಸಂಚಾಲನ ಅಧಿಕಾರಿ ಪರಮೇಶ್ವರಪ್ಪ, ವಿಭಾಗೀಯ ತಾಂತ್ರಿಕ ಶಿಲ್ಪಿ ಸೂರ್ಯಕಾತ್, ಚಾಮರಾಜನಗರ ಘಟಕದ ವ್ಯವಸ್ಥಾಪಕ ಕುಮಾರ್ ನಾಯಕ್ ಮತ್ತು ಕೆ.ಎಸ್.ಆರ್.ಟಿ.ಸಿ ಸಾಂಸ್ಕೃತಿಕ ಕಲಾ ತಂಡದ ನಿರ್ದೇಶಕ ಬಾಲಕೃಷ್ಣ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.