ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಯೋಗ
Team Udayavani, Mar 10, 2020, 5:26 AM IST
ಯೋಗವನ್ನು ನಿತ್ಯವೂ ಮಾಡುವುದ ರಿಂದ ಆರೋಗ್ಯಕ್ಕೆ ಲಾಭವೇ ಹೆಚ್ಚು. ಇದರಲ್ಲಿ ಆರೋಗ್ಯಕ್ಕೆ ಪೂರಕವಾದ ಹಲವು ಅಂಶಗಳಿವೆ. ದೈನಂದಿನ ಒತ್ತಡವನ್ನು ಕಡಿಮೆಗೊಳಿಸುವಲ್ಲಿ ಯೋಗದಲ್ಲಿ ಅತ್ಯುತ್ತಮ ಪರಿಹಾರಗಳಿವೆ.ದಿಂದ
ಮನಸ್ಸಿನ ಬೇಗುದಿ ಕಡಿಮೆಯಾಗುವುದಲ್ಲದೇ ನಮ್ಮಲ್ಲಿನ ನರವ್ಯವಸ್ಥೆಯೂ ಚುರುಕಾಗುತ್ತದೆ.
ಇದರಿಂದ ಅರಿವು, ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಇದು ಪರೋಕ್ಷವಾಗಿ ನರಗಳು ಮತ್ತು ಇಂದ್ರಿಯಗಳು ಚುರುಕಾಗಿ ಸ್ಪಂದಿಸುವಂತಾಗಲು ಮತ್ತು ರಕ್ತಸಂಚಾರ ಉತ್ತಮಗೊಳ್ಳಲು ನೆರವಾಗುತ್ತದೆ. ದೇಹ ವೂ ಉತ್ತಮವಾಗಿ, ಸದೃಢವಾಗಿ ರೂಪುಗೊಳ್ಳುತ್ತದೆ. ವಯಸ್ಸಾದರೂ ತುಂಬಾ ಮುಪ್ಪು ನಿಮ್ಮನ್ನು ಕಾಡಂತೆ ಕಾಪಾಡುತ್ತದೆ. ಇಲ್ಲಿ ಯೋಗದ ಪ್ರಯೋಜನಗಳನ್ನು ನೀಡಲಾಗಿದೆ.
ರೋಗನಿರೋಧಕ ಶಕ್ತಿ
ಇತ್ತೀಚಿನ ಸಂಶೋಧನೆ ಪ್ರಕಾರ ಯೋಗಾಭ್ಯಾಸವನ್ನು ನಿಯಮಿತವಾಗಿ ನಿತ್ಯವೂ ಅನು ಸರಿಸುತ್ತಿರುವವರ ದೇಹದ ಪ್ರತಿ ಜೀವಕೋಶವೂ ಉತ್ತಮ ಆರೋಗ್ಯದಿಂದ ಕೂಡಿದೆ. ರೋಗ ನಿರೋಧಕ ಶಕ್ತಿ ಅತ್ಯುತ್ತಮವಾಗಿರುವುದು ಕಂಡುಬಂದಿದೆ. ಅಭ್ಯಾಸದ ಹೊತ್ತಿನಲ್ಲಿ ಪೂರ್ಣವಾದ ಉಸಿರು ಎಳೆದುಕೊಳ್ಳುವುದು, ಸ್ನಾಯುಗಳನ್ನು ಅದರ ಮಿತಿಯವರೆಗೆ ಸೆಳೆಯುವುದು ಮೊದಲಾದವು ರಕ್ತಸಂಚಾರವನ್ನು ಉತ್ತಮಗೊಳಿಸಲು ತುಂಬಾ ನೆರವಾಗುತ್ತದೆ. ಯೋಗಾಭ್ಯಾಸದಿಂದ ಇಡೀ ದೇಹದ ಮಾನಸಿಕ, ದೈಹಿಕ ಸ್ಥಿತಿ ಉತ್ತಮಗೊಳ್ಳುತ್ತದೆ.
ತೂಕ ಇಳಿಕೆ
ತೂಕ ಹೆಚ್ಚಳಕ್ಕೆ ಮಾನಸಿಕವಾಗಿ ದುರ್ಬಲರಾಗಿರುವುದೇ ಮುಖ್ಯ ಕಾರಣ. ಯೋಗಾಭ್ಯಾಸದಿಂದ ಮನಸ್ಸಿನ ಮೇಲೆ ಹತೋಟಿ ಸಾಧಿಸಲು ಸಾಧ್ಯ ವಾದುದರಿಂದ ಆಹಾರವನ್ನು ಸೇವಿಸಲು ಹಾತೊರೆಯುವ ಮನಕ್ಕೆ ಕಡಿವಾಣ ಹಾಕಲು ಸಾಧ್ಯ. ಇದರಿಂದ ಆಹಾರದ ಪ್ರಮಾಣದ ಮೇಲೆ ಹತೋಟಿ ಸಾಧಿಸಿ ತೂಕ ಕಳೆದುಕೊಳ್ಳಲು ನೆರವಾಗುತ್ತದೆ. ಕಳೆದುಕೊಂಡ ತೂಕ ಉತ್ತಮ ಆರೋಗ್ಯಕ್ಕೆ ನಾಂದಿಯಾಗಿದೆ. ದೈಹಿಕ ಸ್ವಾಸ್ಥ್ಯಕ್ಕಾಗಿ ಯೋಗ ಮಾಡಿ ಜಿಮ್ ಬಿಡಿ.
ತಲೆನೋವು ಮಾಯ
ಮೈಗ್ರೇನ್ ಸಮಸ್ಯೆ ಸಮಾನ್ಯವಾಗಿ ಕಾಡುತ್ತಿರುತ್ತದೆ. ಇದನ್ನುತಡೆಗಟ್ಟಲು ಕೆಲವು ಯೋಗಾಸನಗಳು ನೆರವಾಗುತ್ತವೆ. ಅಧೋಮುಖ ಶ್ವಾನಾಸನ, ಪ್ರಸಾರಿತ ಪಡೋತ್ತಾನಾಸನ, ಉತ್ತನಾಸನ, ಜನುಶೀರ್ಷಾಸನ, ಪಶ್ಚಿಮೋತ್ತಾಸನ, ಮತ್ಸೇಂದ್ರಾ ಸನ, ಶ್ವಾನಾಸನ, ಸೇತುಬಂಧ, ಶವಾಸನಗಳು ತಲೆನೋವು ಕಡಿಮೆಗೊಳಿಸಲು ನೆರವಾಗುತ್ತವೆ. ಈ ಭಂಗಿಗಳಲ್ಲಿ ಮೆದುಳಿಗೆ ಹರಿಯುವ ರಕ್ತದ ಪ್ರಮಾಣ ಹೆಚ್ಚುವು ದರಿಂದ ತಲೆನೋವು ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ.
ಕ್ಯಾನ್ಸರ್, ಹೃದಯದ ಸಮಸ್ಯೆಯಿಂದ ದೂರ
ದೀರ್ಘಕಾಲಿಕ ಉರಿಯೂತ ಸಮಸ್ಯೆಯಿಂದಾಗಿ ಕೆಲವೊಂದು ಮಾರಕ ಕಾಯಿಲೆಗಳಾಗಿರುವಂತಹ ಮಧುಮೇಹ, ಕ್ಯಾನ್ಸರ್ ಮತ್ತು ಹೃದಯದ ಸಮಸ್ಯೆಯು ಬರಬಹುದು. ನಿತ್ಯ ಯೋಗಾಭ್ಯಾಸ ಮಾಡುವುದರಿಂದ ಉರಿಯೂತ ಶಮನ ಮಾಡಬಹುದು. ಯೋಗವು ಉರಿಯೂತ ಉಂಟು ಮಾಡುವ ಎÇÉಾ ಸಾಧ್ಯತೆಗಳನ್ನು ತಡೆಯುತ್ತದೆ.
ದೇಹಕ್ಕೆ ಚೈತನ್ಯ
ಯೋಗಾಭ್ಯಾಸ ಮಾಡಿದರೆ ನೀವು ದಿನವಿಡೀ ಚೈತನ್ಯದಿಂದ ಇರಬಹುದು. ಇದು ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚಿಸುತ್ತದೆ.ರಕ್ತದ ಸರಬರಾಜು ಹೆಚ್ಚಾಗುವಂತೆ ಶಕ್ತಿ ನೀಡುತ್ತದೆ. ಯೋಗದ ಸಂದರ್ಭ ಹೆಚ್ಚಿನ ಆಮ್ಲಜನಕ ಸೇವನೆಯಾಗುತ್ತದೆ. ಇದರಿಂದ ದೇಹದ ಸಂಪೂರ್ಣ ಶಕ್ತಿಯು ಹೆಚ್ಚಾಗುವುದು.
ಸ್ಥಿತಿ ಸ್ಥಾಪಕತ್ವ ಹೆಚ್ಚಾಗುತ್ತದೆ
ಯೋಗದಿಂದ ದೇಹದ ಎಲ್ಲ ಸ್ನಾಯುಗಳು ಎಳೆಯಲ್ಪಡುವುದು. ನೀವು ಪ್ರತಿ ನಿತ್ಯವು ಯೋಗಾಭ್ಯಾಸ ಮಾಡಿದರೆ ಅದರಿಂದ ನಿಮ್ಮೊಳಗೆ ಬದಲಾವಣೆ ಕಂಡು ಕೊಳ್ಳಬಹುದಾಗಿದೆ. ಹಿಂದಕ್ಕೆ ಬಾಗುವುದು ಅಥವಾ ಕಾಲಿನ ಹೆಬ್ಬೆರಳನ್ನು ಮುಟ್ಟುವಂತಹ ಚಟುವಟಿಕೆ ನಿಮಗೆ ಆರಂಭದಲ್ಲಿ ಸಾಧ್ಯವಾಗದು. ನೀವು ನಿತ್ಯ ಯೋಗಾಭ್ಯಾಸ ಮಾಡಿದರೆ ಆಗ ಅದರಿಂದ ನಿಮಗೆ ಇದು ಸುಲಭವಾಗುವುದು. ಯೋಗದ ಬಳಿಕ ದೇಹದಲ್ಲಿನ ಸ್ನಾಯುಗಳು ಬಲಗೊಳ್ಳುವುದು ಮಾತ್ರವಲ್ಲದೇ ಸ್ನಾಯುಗಳ ಮೇಲೆ ಒತ್ತಡ ಬೀಳುವುದು ಕಡಿಮೆಯಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.