ಕತ್ತಿನ ಕಪ್ಪುಕಲೆ ನಿವಾರಣೆಗೆ ಇಲ್ಲಿದೆ ಸರಳ ಟಿಪ್ಸ್‌


Team Udayavani, Mar 10, 2020, 5:56 AM IST

ಕತ್ತಿನ ಕಪ್ಪುಕಲೆ ನಿವಾರಣೆಗೆ ಇಲ್ಲಿದೆ ಸರಳ ಟಿಪ್ಸ್‌

ಮುಖ ಸ್ವಲ್ಪ ಕಾಂತಿ ಕಳೆದುಕೊಂಡರೂ ಎಲ್ಲಿಲ್ಲದಂತೆ ಚಿಂತೆ ಮಾಡಿ ಬಗೆ ಬಗೆಯ ಪರಿಹಾರ ಕ್ರಮಗಳನ್ನು ಹುಡುಕಲಾಗುತ್ತದೆ. ಆದರೆ ಮುಖಕ್ಕೆ ಇರುವ ಪ್ರಾಮುಖ್ಯ ಕತ್ತಿನ ಭಾಗಕ್ಕೂ ಇದ್ದು ಅದು ಕಪ್ಪು ಕಲೆಯನ್ನು ಹೊಂದಿದ್ದರೆ ಸಾರ್ವಜನಿಕವಾಗಿ ಮುಜುಗರಕ್ಕೆ ಇಡಾಗಲೂಬಹುದು. ಹಾಗಾದರೆ ಇದಕ್ಕೆ ಮದ್ದಿಲ್ಲವೇ? ಕಪ್ಪು ಕಲೆಗೆ ಕಾರಣವೇನು, ನಿವಾರಣಾ ಮಾರ್ಗಗಳು ಸಹಿತ ಇತ್ಯಾದಿ ಅಂಶಗಳ ಮಾಹಿತಿ ಇಲ್ಲಿದೆ.

ಕಪ್ಪು ಕಲೆಯಾಗಲು ಕಾರಣ
ದೇಹದಲ್ಲಿ ಹಾರ್ಮೋನ್‌ ಬದಲಾವಣೆಯಿಂದ ತೂಕ ಹೆಚ್ಚಾಗುವ ಸಂದರ್ಭದಲ್ಲಿ ಕತ್ತಿನ ಭಾಗದಲ್ಲಿ ಚರ್ಮವು ವಿಸ್ತಾರಗೊಳ್ಳುತ್ತದೆ. ಚರ್ಮದ ಮೇಲೆ ಧೂಳಿನ ಕಣಗಳು ಕೂತು ಅದು ದೇಹದಲ್ಲಿ ಕಪ್ಪುಕಲೆಯನ್ನು ಉಂಟುಮಾಡುತ್ತದೆ. ಗರ್ಭಿಣಿಯರೂ ಬಾಣಂತಿಯಾದ ಬಳಿಕ ದೇಹದ ತೂಕ ಇಳಿದಾಗ ಈ ಕಲೆ ಅವರಿಗೆ ಕಿರಿಕಿರಿ ಅನುಭವ ನೀಡುತ್ತದೆ. ಮಕ್ಕಳು ಹೊರಗಡೆ ಜಾಸ್ತಿ ಆಟವಾಡಿದಾಗ ಬೆವರು ಮತ್ತು ಧೂಳಿನ ಪ್ರದೂಷಣೆ ಮಕ್ಕಳಲ್ಲಿ ಕಪ್ಪು ಕಲೆಯನ್ನು ಉಂಟು ಮಾಡಿ ಹೆತ್ತವರಿಗೂ ತಲೆ ನೋವಿನ ಅನುಭವವನ್ನು ನೀಡುತ್ತದೆ.

ಕಾಫಿ ಪುಡಿ, ಜೇನು ತುಪ್ಪ
ಹಿಂದಿನಿಂದಲೂ ಜೇನು ತುಪ್ಪ ಮತ್ತು ಕಾಫಿ ಪುಡಿಯನ್ನು ಸೌಂದರ್ಯ ವೃದ್ಧಿಗೆ ಬಳಸುವ ವಾಡಿಕೆ ಇತ್ತು. ಜೇನು ತಿನ್ನಲು ಸಿಹಿಯಾಗಿರುತ್ತದೆ ಅದೇ ರೀತಿ ಇದರಲ್ಲಿ ರಿಬೋಫ್ಲೇವಿಸ್‌, ಥಾಯಾಮಿನ್‌, ಲವಣ ಮತ್ತು ಖನಿಜ ಸತ್ವಗಳು ಹೇರಳವಾಗಿ ಲಭ್ಯವಿದ್ದು ಮಖದ ಕಾಂತಿಗೆ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಕಾಫಿ ಪುಡಿಯೂ ತ್ವಚೆಯ ಧೂಳನ್ನು ಹೊರಗೊಳಿಸುವ ಕಾರಣದಿಂದ ಇದನ್ನು ಸಹ ಬಳಕೆ ಮಾಡುತ್ತಾರೆ. ಕಾಫಿ ಪುಡಿ ಮತ್ತು ಜೇನನ್ನು ಮಿಶ್ರಣಗೊಳಿಸಿ ಕತ್ತು ಮತ್ತು ಮುಖದ ಭಾಗಕ್ಕೆ ಮಸಾಜ್‌ಮಾಡಿಕೊಳ್ಳಬೇಕು. ಒಂದೂವರೆ ಗಂಟೆಯ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಯಾವುದೇ ಸೋಪ್‌ ಅಥವಾ ಫೇಸ್‌ ವಾಶ್‌ ಬಳಸದೇ ಕತ್ತು ಮತ್ತು ಮುಖವನ್ನು ತೊಳೆದುಕೊಳ್ಳಬೇಕು. ಹೀಗೆ ವಾರಕ್ಕೆ ಮೂರು ಬಾರಿ ಮಾಡುವುದರಿಂದ ಕತ್ತಿನ ಕಪ್ಪುಕಲೆಯನ್ನು ನಿವಾರಿಸಬಹುದಾಗಿದೆ.

ಅಕ್ಕಿ ಹಿಟ್ಟು- ಟೊಮೇಟೋ
ಅಕ್ಕಿ ಹಿಟ್ಟಿನಲ್ಲಿ ತರಾತರಿ ತಿಂಡಿ ಮಾಡಿ ತಿಳಿದವರಿಗೆ ಅದರಲ್ಲಿಯೂ ಸೌಂದರ್ಯವೃದ್ಧಿ ಮಾಡಲು ಸಾಧ್ಯವಿದೆ ಎಂಬ ಸತ್ಯ ತಿಳಿದಿರಲಾರದು. ಅಕ್ಕಿ ಹಿಟ್ಟನ್ನು ಲಿಂಬೆಹಣ್ಣನ್ನು ಮಿಶ್ರಗೊಳಿಸಿ ಅರ್ಧ ಭಾಗ ಟೊಮೇಟೊಗೆ ಅದನ್ನು ಮೆತ್ತಿಕೊಂಡು ಕತ್ತಿನ ಸುತ್ತ 15ರಿಂದ 20 ನಿಮಿಷಗಳ ಕಾಲ ಮಸಾಜ್‌ ಮಾಡಬೇಕು. ಬಳಿಕ ತಣ್ಣಗಿನ ನೀರಿನಲ್ಲಿ ಕತ್ತಿನ ಭಾಗವನ್ನು ತೊಳೆದುಕೊಳ್ಳಬೇಕು ಈ ರೀತಿ ವಾರಕ್ಕೆ ನಾಲ್ಕು ಭಾರಿ ಮಾಡಿದರೆ ಸಮಸ್ಯೆ ನಿವಾರಣೆ.

ಮೊಟ್ಟೆ- ಅರಿಶಿನ
ಮೊಟ್ಟೆಯಲ್ಲಿರುವ ಕ್ಯಾಲ್ಸಿಯಂ ಮತ್ತು ಅರಶಿನದ ಆ್ಯಂಟಿ ಆಕ್ಸಿಡೆಂಟ್‌ ಕಲೆಗಳನ್ನು ನಿವಾರಿಸಬಹುದಾಗಿದೆ. ಮೊಟ್ಟೆಯ ಬಿಳಿ ಭಾಗವನ್ನು ತೆಗೆದಿಟ್ಟು ಅದಕ್ಕೆ ಅರಶಿನವನ್ನು ಬೆರೆಸಬೇಕು. ಇದನ್ನು ಮುಖ ಮತ್ತು ಕತ್ತಿನ ಭಾಗಕ್ಕೆ ಮಸಾಜ್‌ ಮಾಡಿ 10 ರಿಂದ 15 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ಬಳಿಕ ಮುಖಕ್ಕೆ ಅಲೋವೆರಾ ಜೆಲ್‌ ಬಳಸಿ ಪುನಃ ಮಸಾಜ್‌ ಮಾಡಬೇಕು. ಇದರಿಂದ ಮುಖದ ಕಾಂತಿ ಹೆಚ್ಚಾಗುವುದರೊಂದಿಗೆ ಕತ್ತಿನ ಕಪ್ಪು ಕಲೆಯನ್ನು ನಿವಾರಿಸಬಹುದು.

ಟಾಪ್ ನ್ಯೂಸ್

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

5

Mangaluru: ಎಎಸ್‌ಐಗೆ ಗಾಯ; ಡಿವೈಎಫ್ಐ ವಿರುದ್ಧ ಪ್ರಕರಣ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Untitled-1

Missing case: ಎರಡು ಪ್ರತ್ಯೇಕ ನಾಪತ್ತೆ ಪ್ರಕರಣ; ದೂರು ದಾಖಲು

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

de

Guttigar: ಮಾವಿನಕಟ್ಟೆ; ಮರದಿಂದ ಬಿದ್ದು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.