ಕೊರೊನಾ ಕರಿನೆರಳು: ಐಪಿಎಲ್ ವೀಕ್ಷಕರಿಗೆ ಕೊರೊನಾ ಸ್ಕ್ರೀನಿಂಗ್!
Team Udayavani, Mar 10, 2020, 11:05 AM IST
ಮುಂಬೈ: ಕೊರೊನಾ ವೈರಸ್‌ನಿಂದಾಗಿ 13ನೇ ಆವೃತ್ತಿ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಟಿ20 ಕೂಟಕ್ಕೆ ಕರಿನೆರಳು ಆವರಿಸಿದೆ. ಆದರೆ ಕೊರೊನಾವನ್ನು ಸಮರ್ಥವಾಗಿ ಎದುರಿಸಿ, ಐಪಿಎಲ್ ಕೂಟವನ್ನು ಯಶಸ್ವಿಯಾಗಿ ಆಯೋಜಿ ಸುವ ವಿಶ್ವಾಸವನ್ನು ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಇಟ್ಟು ಕೊಂಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಮೂಲಗಳು ತಿಳಿಸಿದ್ದು ಹೀಗೆ, “ಪರಿಸ್ಥಿತಿಯ ಅವಲೋಕನವನ್ನು ಸೂಕ್ಷ್ಮವಾಗಿ ಮಾಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಐಪಿಎಲ್ ಮುಂದೂಡುವ ಪ್ರಶ್ನೆಯೇ ಇಲ್ಲ. ನಿಗದಿಯಂತೆ ಕೂಟ ನಡೆಸಲಾಗುತ್ತದೆ. ಪ್ರತಿಯೊಂದು ಅಂಶವು ನಮ್ಮ ಗಮನದಲ್ಲಿದೆ. ಹೆಚ್ಚುವರಿ ವೈದ್ಯಕೀಯ ತಂಡವನ್ನು ಕ್ರೀಡಾಂಗಣದ ಸುತ್ತ ನೇಮಿಸುತ್ತೇವೆ. ಕ್ರಿಕೆಟ್ ವೀಕ್ಷಿಸಲು ಬರುವ ಪ್ರತಿಯೊಬ್ಬರಿಗೆ ಕೊರೊನಾ ಸ್ಕ್ರೀನಿಂಗ್ ನಡೆಸಲಾಗುತ್ತದೆ’ ಎಂದು ತಿಳಿಸಿದೆ.
ಕೊರೊನಾ ಭೀತಿಯಿಂದ ಮುಂಬೈನಲ್ಲಿ ಐಪಿಎಲ್ ಪಂದ್ಯಾವಳಿಯನ್ನು ಆಯೋಜಿಸಲು ಮಹಾರಾಷ್ಟ್ರ ಸರಕಾರ ಹಿಂದೇಟು ಹಾಕಿದೆ. ಇದೇ ವೇಳೆ ಕರ್ನಾಟಕ ಸರಕಾರ ಕೂಡ ಇದೇ ಕುರಿತಾಗಿ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.