ಕೊರೊನಾ ಸೋಂಕು ತಡೆಗೆ ಸಕಲ ಸಿದ್ಧತೆ
Team Udayavani, Mar 10, 2020, 10:45 AM IST
ಸಾಂದರ್ಭಿಕ ಚಿತ್ರ
ಕಲಬುರಗಿ: ಜಗತ್ತಿನಾದ್ಯಂತ ಕೊರೊನಾ ಸೋಂಕು ಮಾರಣಾಂತಿಕವಾಗಿ ಹರಡುತ್ತಿದ್ದು, ದೇಶದಲ್ಲೂ ತಲ್ಲಣ ಉಂಟು ಮಾಡುತ್ತಿದೆ. ಈ ನಡುವೆ ಜಿಲ್ಲೆಯಲ್ಲಿ ಸೋಂಕು ಹರಡುವಿಕೆ ತಡೆಯಲು ಜಿಲ್ಲಾ ಆರೋಗ್ಯ ಇಲಾಖೆ ಮತ್ತಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಜಿಮ್ಸ್ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿದ್ದ ಐದು ಬೆಡ್‌ಗಳ ವಿಶೇಷ ಘಟಕವನ್ನು 12 ಬೆಡ್‌ಗಳಿಗೆ ವಿಸ್ತರಿಸಿದೆ.
ಯಾವುದೇ ಸಮಯದಲ್ಲಿ ಕೊರೊನಾ ಶಂಕಿತರಿಗೆ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಸರ್ವ ಸನ್ನದ್ಧ ಸ್ಥಿತಿಯಲ್ಲಿದೆ. ಮಾ.3ರಂದು ನಗರದ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್-ಜಿಲ್ಲಾಸ್ಪತ್ರೆ) ಕಟ್ಟಡದ ಮೊದಲ ಮಹಡಿಯಲ್ಲೇ ತುರ್ತು ಕ್ರಮವಾಗಿ ಐದು ಬೆಡ್‌ಗಳ ವಿಶೇಷ ಘಟಕ ತೆರೆಯಲಾಗಿತ್ತು. ಈಗ ಅದರ ಬದಲಾಗಿ ಜಿಮ್ಸ್ ಕಟ್ಟಡದ ಹಿಂಭಾಗಕ್ಕೆ ಹೊಂದಿಕೊಂಡಿರುವ ಹಾಗೂ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಮುಂಭಾಗದಲ್ಲಿರುವ ಹಿರಿಯ ನಾಗರಿಕರ ಸಾಮಾನ್ಯ ಒಳರೋಗಿಗಳ ವಿಭಾಗವನ್ನು ಸಂಪೂರ್ಣ “ಕೋವಿಡ್-19′ ಕೊರೊನಾ ಘಟಕವನ್ನಾಗಿ ಪರಿವರ್ತಿಸಲಾಗಿದೆ.
ಸುಸಜ್ಜಿತ ಕಟ್ಟಡ: ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಶಂಕಿತರು ಅಥವಾ ಸಂಶಯಾಸ್ಪದ ವ್ಯಕ್ತಿಗಳಿಗೆ ತುರ್ತು ಚಿಕಿತ್ಸೆ ನೀಡಿ ನಿಗಾ ವಹಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಜಿಮ್ಸ್ ಆಸ್ಪತ್ರೆ ವೈದ್ಯರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. “ಕೋವಿಡ್-19′ ಕೊರೊನಾ ಘಟಕವನ್ನಾಗಿ ಪರಿವರ್ತಿಸಿರುವ ಹಿರಿಯ ನಾಗರಿಕರ ಸಾಮಾನ್ಯ ಒಳರೋಗಿಗಳ ವಿಭಾಗ ಪ್ರತ್ಯೇಕವಾದ ಕಟ್ಟಡ ಹೊಂದಿದ್ದು, ಸುಸಜ್ಜಿತವಾಗಿದೆ. ವೈದ್ಯರು ಕೊಠಡಿ, ನರ್ಸ್ ಗಳ ಕೊಠಡಿ, ತಪಾಸಣಾ ಕೊಠಡಿ ಹಾಗೂ ರೋಗಿಗಳಿಗೆ ಎರಡು ವಾರ್ಡ್‌ಗಳು ಇದ್ದು, ಎಲ್ಲ ಕೊಠಡಿಗಳು ಪ್ರತ್ಯೇಕವಾಗಿವೆ. ಎರಡು ವಾರ್ಡ್‌ಗಳನ್ನು ಪುರುಷರು ಮತ್ತು ಮಹಿಳೆಯರಿಗೆಂದು ಬೇರೆ-ಬೇರೆ ವಿಂಗಡಿಸಲಾಗಿದೆ. ಪ್ರತಿ ವಾರ್ಡ್‌ಗಳಲ್ಲಿ ತಲಾ ಆರು ಬೆಡ್‌ಗಳಂತೆ ಒಟ್ಟಾರೆ ರೋಗಿಗಳಿಗೆ 12 ಬೆಡ್‌ಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸೋಮವಾರ ಜಿಲ್ಲಾ ವೈದ್ಯಾಧಿಕಾರಿ ಡಾ| ಎಂ.ಎ. ಜಬ್ಟಾರ್, ಜಿಲ್ಲಾ ಶಸ್ತ್ರಜ್ಞ ಡಾ| ಎ.ಎಸ್.ರುದ್ರವಾಡಿ, ನಿರ್ದೇಶಕಿ ಜಿಮ್ಸ್ ಡಾ| ಕವಿತಾ ಪಾಟೀಲ, ಜಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ| ಎ.ಎಸ್. ರುದ್ರವಾಡಿ ಘಟಕಕ್ಕೆ ಭೇಟಿ ನೀಡಿ ಸುಮಾರು ಹೊತ್ತು ಪರಿಶೀಲನೆ ನಡೆಸಿದರು. ನರ್ಸ್‌ಗಳು ಹಾಗೂ ಸ್ವತ್ಛತಾ ಸಿಬ್ಬಂದಿ ಘಟಕವನ್ನು ಸಜ್ಜುಗೊಳಿಸುವಲ್ಲಿ ಮಗ್ನರಾಗಿದ್ದರು.
ಅಗತ್ಯ ಚಿಕಿತ್ಸಾ ಸಲಕರಣೆ: ಕೊರೊನಾ ಸೋಂಕು ಬಗ್ಗೆ ಜನತೆ ಅನಗತ್ಯ ಆತಂಕ ಪಡುವ ಅಗತ್ಯವಿಲ್ಲ. ರೋಗ ಹರಡದಂತೆ ಎಲ್ಲ ರೀತಿಯ ಕಟ್ಟೆಚ್ಚರ ವಹಿಸಲಾಗಿದ್ದು, ಮುನ್ನೆಚ್ಚರಿಕ ಕ್ರಮವಾಗಿ ಕೊರೊನಾ ಶಂಕಿತರನ್ನು ಪ್ರತ್ಯೇಕ ತಪಾಸಣೆಗೆ ಒಳಪಡಿಸಲು ಘಟಕವನ್ನು ಸ್ಥಾಪಿಸಲಾಗಿದೆ. ಅಗತ್ಯ ಚಿಕಿತ್ಸಾ ಸಲಕರಣೆಗಳೊಂದಿಗೆ ತಕ್ಷಣ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕೊರೊನಾ ಶಂಕಿತರ ಚಿಕಿತ್ಸೆಗೆ ಪ್ರತ್ಯೇಕ ವೈದ್ಯರು, ನರ್ಸ್‌ಗಳ ತಂಡ ರಚಿಸಲಾಗಿದೆ. ಎರಡು ವಾರ್ಡ್‌ಗಳೂ ವೆಂಟಿಲೇಟರ್ ವ್ಯವಸ್ಥೆಯುಳ್ಳ ವಾರ್ಡ್‌ಗಳಾಗಿವೆ. ಪ್ರತಿ ಬೆಡ್‌ಗೆ ಆಕ್ಸಿಜನ್ ಸಿಲಿಂಡರ್ ಕಲ್ಪಿಸಲಾಗಿದೆ. ಎನ್-95 ಮಾಸ್ಕ್ಗಳು, ತ್ರಿಬಲ್ ಲೆಯರ್ ಮಾಸ್ಕ್ಗಳು ಹಾಗೂ ಔಷಧಿ ಮತ್ತು ಮಾತ್ರೆಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕಲಬುರಗಿ ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಸೋಂಕು ಪತ್ತೆಯಾಗಿಲ್ಲ. ರೋಗ ಹರಡದಂತೆ ಎಲ್ಲ ರೀತಿಯ ಕಟ್ಟೆಚ್ಚರ ವಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಮಧ್ಯರಾತ್ರಿ 12ಗಂಟೆಗೆ ಬಂದರೂ ಚಿಕಿತ್ಸೆ ಕೊಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. –ಡಾ| ಎಂ.ಎ. ಜಬ್ಟಾರ್, ಜಿಲ್ಲಾ ವೈದ್ಯಾಧಿಕಾರಿ
ಪ್ರತ್ಯೇಕ ಆ್ಯಂಬುಲೆನ್ಸ್ : ಕೊರೊನಾ ಸೋಂಕು ಶಂಕಿತರಿಗಾಗಿಯೇ ಪ್ರತ್ಯೇಕ ಆ್ಯಂಬುಲೆನ್ಸ್ ವ್ಯವಸ್ಥೆಯನ್ನೂ ಆರೋಗ್ಯ ಇಲಾಖೆ ಮಾಡಿದೆ. ರೋಗದ ಲಕ್ಷಣಗಳು ಕಂಡು ಬಂದ ವ್ಯಕ್ತಿಯನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್ ಸಹಕಾರಿಯಾಗಲಿದೆ. ಸದ್ಯಕ್ಕೆ ಕಲಬುರಗಿ ಮಹಾನಗರ ವ್ಯಾಪ್ತಿಯಲ್ಲಿ ದಿನದ 24 ಗಂಟೆ ಆ್ಯಂಬುಲೆನ್ಸ್ ಕಾರ್ಯ ನಿರ್ವಹಿಸಲಿದೆ. ಆ್ಯಂಬುಲೆನ್ಸ್‌ನಲ್ಲೂ ಪ್ರತ್ಯೇಕವಾದ ಸಿಬ್ಬಂದಿ ಹಾಗೂ ಚಾಲಕರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಂಗಪ್ಪ ಗಧಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Kannada: ಕನ್ನಡ ನಾಡಲ್ಲಿ ಪ್ರತಿದಿನವೂ ನಿತ್ಯೋತ್ಸವವಿರಲಿ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
ಹೊಸಪೇಟೆ: ಸ್ಕ್ಯಾನ್ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.