ಜ್ಞಾನ ಹಾಗೂ ಶ್ರಮ ಒಂದಕ್ಕೊಂದು ಪೂರಕವಾಗಿದ್ದರೆ ಯಶಸ್ಸು ಖಂಡಿತ..


Team Udayavani, Mar 11, 2020, 5:14 AM IST

IAS-Interview

ಪರಿಚಯ
ರಾಜೇಶಪ್ರಸಾದ್‌ ಅವರು ಐಎಎಸ್‌ ಅಧಿಕಾರಿ. ಹೊಸದಿಲ್ಲಿಯಲ್ಲಿ ಜಿಎಸ್‌ಟಿ ಆಯುಕ್ತ ರಾಗಿದ್ದಾರೆ. ಮೂಲತಃ ಹಿರಿಯಡಕದವರಾದ ಇವರು ಸಾಮಾನ್ಯ ಆರ್ಥಿಕ ಹಿನ್ನೆಲೆಯಿಂದ ಬಂದವರು. ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿ ಪರಿಶ್ರಮ, ಪ್ರಬಲ ಇಚ್ಛಾಬಲದಿಂದ ಉನ್ನತ ಸ್ತರಕ್ಕೆ ಏರಿದವರು. “ಸುದಿನ’ ಸಂದರ್ಶನದಲ್ಲಿ ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.

 ಐಎಎಸ್‌ ತಯಾರಿ ಹೇಗೆ?
ಜ್ಞಾನಭಂಡಾರಕ್ಕೆ ಹೊಸ ಹೊಸ ಚಿಂತನೆಗಳನ್ನು ಸೇರಿಸಿಕೊಳ್ಳಬೇಕು. ಐಎಎಸ್‌ ಅತೀ ಸುಲಭವಾಗಿ ಓದಿ ಮುಗಿಸುವ ವಿಷಯವಲ್ಲ. ಆಳವಾದ ಜ್ಞಾನ ವನ್ನು ಹಿಡಿದಿಟ್ಟುಕೊಳ್ಳಲು ಉತ್ತಮ ಪುಸ್ತಕಗಳನ್ನು ಖರೀದಿಸಬೇಕು. ಇದರ ಜತೆಗೆ ಸರಿಯಾದ ಮಾರ್ಗದರ್ಶನ ಹಾಗೂ ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಉತ್ಸಾಹವನ್ನೂ ಬೆಳೆಸಿಕೊಳ್ಳಬೇಕು. ದಿನಪತ್ರಿಕೆ, ಸಂಪಾದಕೀಯ, ಪ್ರಚಲಿತ ವಿಚಾರಗಳ ಬಗ್ಗೆ ಹೆಚ್ಚು ಗಮನಹರಿಸಬೇಕು.

 ಸಮಯ ಹೊಂದಾಣಿಕೆ ಹೇಗೆ?
ಮುಖ್ಯವಾಗಿ ಸಾಮಾಜಿಕ ಜಾಲತಾಣಗಳನ್ನು ಸದುಪಯೋಗಿಸಿಕೊಳ್ಳಬೇಕು. ಸ್ವಲ್ಪ ಸಮಯ ಸಿಕ್ಕರೂ ಅದನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿ ಕೊಳ್ಳಬೇಕು. ಕ್ಷಣಾರ್ಧದಲ್ಲಿ ಲೋಕಜ್ಞಾನವನ್ನು ಕಂಡುಕೊಳ್ಳುವ ಸಾಧನಗಳು ಕೈಯಲ್ಲಿರುವಾಗ ಅದರ ಪರಿಪೂರ್ಣ ಉಪಯೋಗ ವನ್ನೂ ಪಡೆದು ಕೊಳ್ಳಬೇಕು.

 ಯಶಸ್ಸಿಗೆ ಸರಳ ಸೂತ್ರ ಏನು?
ಐಎಎಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಸಾಲದು; ನಿತ್ಯವೂ ಜ್ಞಾನಾರ್ಜನೆ ಗಳಿಸುತ್ತಿರಬೇಕು. ಯೋಜನಾ ಬದ್ಧ ತಯಾರಿ, ಶಿಸ್ತು, ಕಠಿನ ಪರಿಶ್ರಮಗಳಿಂದ ಉತ್ತಮ ಫ‌ಲಿತಾಂಶ ನಿರೀಕ್ಷಿಸಬಹುದು. ಮುಖ್ಯವಾಗಿ ಎಲ್ಲ ಕ್ಷೇತ್ರ ಗಳಲ್ಲೂ ಅಪಾರವಾದ ಜ್ಞಾನ ಬೇಕು. ಅನಾವಶ್ಯಕವಾಗಿ ಗೊಂದಲಪಡದೆ ಕಷ್ಟಪಟ್ಟು ಯಶಸ್ಸು ಸಾಧಿಸಲು ಶ್ರಮಿಸ ಬೇಕು. ಜ್ಞಾನ ಹಾಗೂ ಶ್ರಮ ಒಂದಕ್ಕೊಂದು ಪೂರಕವಾಗಿದ್ದರೆ ಯಶಸ್ಸು ಖಂಡಿತ ಲಭಿಸುತ್ತದೆ.

 ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್‌ ಅಗತ್ಯವೇ?
ನಾಗರಿಕ ಪರೀಕ್ಷೆ ಉತ್ತೀರ್ಣರಾಗಲು ಮುಖ್ಯ ವಾಗಿ ಬೇಕಾದದ್ದು ಆಸಕ್ತಿ, ಪ್ರಬಲ ಇಚ್ಛಾಶಕ್ತಿ, ಕಠಿನ ಪರಿಶ್ರಮದ ಓದು. ಇದಕ್ಕೆ ಕೇವಲ ಬುದ್ಧಿವಂತಿಕೆ ಬೇಕೆಂದು ಅರ್ಥವಲ್ಲ. ನಾನು ಬಿಕಾಂ ಪದವಿ ಓದುವಾಗ ಸಾಮಾನ್ಯ ವಿದ್ಯಾರ್ಥಿ. ಅನಂತರ ಜೀವನೋಪಾಯಕ್ಕಾಗಿ ಗೋವಾದಲ್ಲಿ ರೈಲ್ವೇ ಇಲಾಖೆಗೆ ಸೇರಿದೆ. ಆಗ ನಾನು ಸೇರಿದ್ದು ಕ್ಲರ್ಕ್‌ ಆಗಿ. ಎರಡು ವರ್ಷವಾದ ಬಳಿಕ ವಿಜಯ ಬ್ಯಾಂಕ್‌, ಬಳಿಕ ಬ್ಯಾಂಕ್‌ ಆಫ್ ಬರೋಡಕ್ಕೆ ಸೇರಿದೆ. ನಾಗರಿಕ ಪರೀಕ್ಷೆಯನ್ನು ಉತ್ತೀರ್ಣವಾಗಬೇಕೆಂದು ಪಣತೊಟ್ಟು ಯಶಸ್ಸು ಕಂಡಿದ್ದೇನೆ. ವಿದ್ಯಾಭ್ಯಾಸಕ್ಕೆ ಪೂರಕವಾಗಿ ತರಬೇತಿ ಪಡೆಯಲು ಕೋಚಿಂಗ್‌ ಉಪಯೋಗವಾಗುತ್ತದೆ. ಅದಕ್ಕಿಂತಲೂ ನಮ್ಮ ಸಿದ್ಧತೆ ಉತ್ತಮವಾಗಿದ್ದರೆ ಒಳ್ಳೆಯದು.

 ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕರಾವಳಿ ಭಾಗದವರ ಆಸಕ್ತಿ ಕ್ಷೀಣಿಸುತ್ತಿದೆಯೇ?
ಈ ಭಾಗದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಸರಿಯಾದ ಮಾಹಿತಿ ಕೊರತೆ ಇದೆ. ಸಾಮರ್ಥ್ಯ ಸದುಪಯೋಗಿಸಿ ಉತ್ತಮವಾಗಿ ಕಾರ್ಯ ನಿರ್ವಹಿಸಿದರೆ ಯಶಸ್ಸು ಸಿಗುತ್ತದೆ. ಈ ಭಾಗದ ವಿದ್ಯಾರ್ಥಿಗಳು ಹೆಚ್ಚಾಗಿ ಎಂಜಿನಿಯರಿಂಗ್‌, ವೈದ್ಯಕೀಯ ಕ್ಷೇತ್ರವನ್ನೇ ಹೆಚ್ಚಾಗಿ ಅವಲಂಬಿಸಿಕೊಂಡಿರು ತ್ತಾರೆ. ಬಿಹಾರ, ಉತ್ತರಪ್ರದೇಶಗಳಲ್ಲಿ ವಿದ್ಯಾರ್ಥಿ ಗಳು ಪ್ರಾಥಮಿಕ ವಿದ್ಯಾಭ್ಯಾಸದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚಿನ ಒತ್ತು ನೀಡುತ್ತಾರೆ. ಇದು ಒಟ್ಟಾರೆ ಶೈಕ್ಷಣಿಕ ಪ್ರಗತಿಗೂ ಕಾರಣವಾಗು ತ್ತದೆ.

 ಬೇರೆ ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು?
ಇತರ ರಾಜ್ಯಗಳಲ್ಲಿ ಎಂಬಿಬಿಎಸ್‌, ಎಂಜಿನಿಯರಿಂಗ್‌ ಸಹಿತ ಉನ್ನತ ವ್ಯಾಸಂಗ ಮಾಡಿದವರು ಕೂಡ ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಾರೆ. ಸಾರ್ವಜನಿಕ ಸೇವೆ ಮಾಡುವ ಉದ್ದೇಶವನ್ನು ಇಟ್ಟುಕೊಂಡು ಐಎಎಸ್‌, ಐಪಿಎಸ್‌, ಐಎಫ್ಎಸ್‌ ಸಹಿತ ಹಲವಾರು ಕ್ಷೇತ್ರಗಳನ್ನು ಆಯ್ದುಕೊಂಡು ಜನರೊಂದಿಗೆ ನಿರಂತರ ಸೇವೆಯಲ್ಲಿರುತ್ತಾರೆ. ಯಾವ ವಿದ್ಯಾಭ್ಯಾಸ ಹೊಂದಿದವರು ಕೂಡ ಆಸಕ್ತಿಯಿದ್ದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ.

 ವಿದ್ಯಾರ್ಥಿಗಳಿಗೆ ಕಿವಿಮಾತು?
ಬಾಲ್ಯದಿಂದಲೇ ಹೊಸ-ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಉತ್ಸಾಹ ಬೆಳೆಸಿಕೊಳ್ಳಬೇಕು. ಮಾಹಿತಿಗಳ ಮೂಲವನ್ನು ಗಾಢವಾಗಿ ಗ್ರಹಿಸಬೇಕು. ವಿವಿಧ ವಿಷಯಗಳಲ್ಲಿ ಪರಿಣತಿ ಸಾಧಿಸಿ ಕೊಳ್ಳಬೇಕು. ಯಾವುದೇ ವಿಷಯ ಕಷ್ಟ ಎಂದು ಸುಮ್ಮನಾಗಬಾರದು. ಅದರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಬೇಕು. ಶಾಲಾಕಾಲೇಜುಗಳು ಕೂಡ ವಿದ್ಯಾರ್ಥಿಗಳ ಯೋಜನಾ ಬದ್ಧ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಬೇಕು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪ್ರೇರಣೆ ನೀಡಬೇಕು.

   ಪುನೀತ್‌ ಸಾಲ್ಯಾನ್‌

ಟಾಪ್ ನ್ಯೂಸ್

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.