ಐಪಿಎಲ್ ಪ್ರಶಸ್ತಿ ಮೊತ್ತ ಕಡಿತಕ್ಕೆ ಫ್ರಾಂಚೈಸಿಗಳ ಆಕ್ರೋಶ
Team Udayavani, Mar 11, 2020, 10:50 AM IST
ಮುಂಬೈ: ಪ್ಲೇ ಆಫ್ ಗೇರಿದ ತಂಡಗಳ ಒಟ್ಟು ಬಹುಮಾನ ಮೊತ್ತವನ್ನು ಬಿಸಿಸಿಐ ಬಹಳ ಕಡಿಮೆ ಮಾಡಿದೆ. ಇದರಿಂದ ಐಪಿಎಲ್ ಫ್ರಾಂಚೈಸಿಗಳು ಸಿಟ್ಟಾಗಿವೆ. ಎಂಟೂ ಫ್ರಾಂಚೈಸಿಗಳು ಒಟ್ಟಾಗಿ ಬಿಸಿಸಿಐಗೆ ಪತ್ರ ಬರೆದು ಈ ನಿರ್ಧಾರವನ್ನು ಮರುಪರಿಶೀಲಿಸಬೇಕು, ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದಿವೆ. ಆದರೆ ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಮಾತ್ರ, ಇದನ್ನು ಹಿಂಪಡೆಯುವುದು ಸಾಧ್ಯವಿಲ್ಲ ಎಂದು ಈಗಾಗಲೇ ಖಚಿತಪಡಿಸಿದ್ದಾರೆ.
ಒಟ್ಟು ನಾಲ್ಕು ತಂಡಗಳು ಪ್ಲೇ ಆಫ್ ಗೇರಲಿವೆ. ಅದರಲ್ಲಿ ಎರಡು ತಂಡಗಳು ಫೈನಲ್ ಗೇರಲಿವೆ. ಈ ಹಂತದಲ್ಲಿ ಒಟ್ಟು 50 ಕೋಟಿ ರೂ.ಗಳನ್ನು ಪ್ರಶಸ್ತಿ ಮೊತ್ತವಾಗಿ ಈ ಹಿಂದೆ ವ್ಯಯಿಸಲಾಗುತ್ತಿತ್ತು. ಗೆದ್ದ ತಂಡಕ್ಕೆ 20 ಕೋಟಿ ರೂ. ದ್ವಿತೀಯಸ್ಥಾನಿಗೆ 10 ಕೋಟಿ ರೂ. ನೀಡಲಾಗುತ್ತಿತ್ತು. ಈಗದನ್ನು ಬಿಸಿಸಿಐ ಅರ್ಧದಷ್ಟು ಕಡಿತ ಮಾಡಿದೆ. ಅಂದರೆ ವಿಜೇತ ತಂಡ 10 ಕೋಟಿ ರೂ, ದ್ವಿತೀಯ ತಂಡ 6.25 ಕೋಟಿ ರೂ. ಪಡೆಯಲಿದೆ. ಈ ಬಗ್ಗೆ ಬಿಸಿಸಿಐ ಹೇಳುವುದಿಷ್ಟೇ. 2013ರಲ್ಲಿ ಐಪಿಎಲ್ ಫ್ರಾಂಚೈಸಿಗಳು ನಮಗೆ ನಷ್ಟವಾಗುತ್ತಿದೆ ಎಂದಿದ್ದವು. ಆದ್ದರಿಂದ ಪ್ರಶಸ್ತಿ ಮೊತ್ತ ಹೆಚ್ಚಿಸಲಾಗಿತ್ತು. ಈಗ ಫ್ರಾಂಚೈಸಿಗಳಿಗೆ ಗಳಿಕೆ ಚೆನ್ನಾಗಿದೆ. ಆದ್ದರಿಂದ ಕಡಿತ ಮಾಡಲಾಗಿದೆ ಎಂದು ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಹೇಳಿದ್ದಾರೆ.
ಫ್ರಾಂಚೈಸಿಗಳಿಗೆ ಸಿಟ್ಟು ತರಿಸಿರುವ ಇನ್ನೊಂದು ವಿಷಯ, ಪಂದ್ಯದ ಆತಿಥ್ಯ ವಹಿಸಲು ರಾಜ್ಯಸಂಸ್ಥೆಗಳಿಗೆ ನೀಡುವ ಶುಲ್ಕ ಏರಿಸಿದ್ದು. ಈ ಹಿಂದೆ 30 ಲಕ್ಷ ರೂ. ಇತ್ತು, ಈಗದು 50 ಲಕ್ಷ ರೂ. ಆಗಿದೆ. ರಾಜ್ಯಸಂಸ್ಥೆಗಳು ಮೈದಾನದ ಗುಣಮಟ್ಟ ಮಾತ್ರ ಏರಿಸುವುದಿಲ್ಲ, ಹೆಚ್ಚುವರಿ ಸೌಲಭ್ಯ ನೀಡುವುದಿಲ್ಲ. ಆದರೆ ಹಣ ಮಾತ್ರ ಕೇಳುತ್ತವೆ ಎಂದು ಫ್ರಾಂಚೈಸಿಗಳು ದೂರಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.