ಸೆನ್ಸಾರ್ ಹಾದಿಯಲ್ಲಿ “ಸಲಗ’
Team Udayavani, Mar 12, 2020, 7:01 AM IST
“ದುನಿಯಾ’ ವಿಜಯ್ ಅಭಿನಯದ “ಸಲಗ’ ಚಿತ್ರದ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು, ಮಂಗಳವಾರ ಚಿತ್ರಕ್ಕೆ ಕುಂಬಳಕಾಯಿ ಒಡೆಯಲಾಗಿದೆ. ಈ ಮೂಲಕ ಚಿತ್ರತಂಡ ಈಗ ಬಿಡುಗಡೆಯ ತಯಾರಿಯಲ್ಲಿ ಬಿಝಿಯಾಗಿದೆ. ಯುಗಾದಿಗೆ ಚಿತ್ರ ಬಿಡುಗಡೆ ಮಾಡೋದು ಚಿತ್ರತಂಡದ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಚಿತ್ರದ ಕೆಲಸಗಳು ಭರದಿಂದ ಸಾಗುತ್ತಿದೆ.
ಮೊದಲ ಬಾರಿಗೆ ವಿಜಯ್ ನಿರ್ದೇಶನ ಮಾಡಿದ್ದು, ಇದು ಔಟ್ ಅಂಡ್ ಔಟ್ ಆ್ಯಕ್ಷನ್ ಸಿನಿಮಾವಾಗಿದೆ. “ಸಲಗ’ ಚಿತ್ರದ ಹಾಡುಗಳನ್ನು ಎ2 ಮ್ಯೂಸಿಕ್ ಹೊರತಂದಿದೆ. ಚಿತ್ರದ ಹಾಡುಗಳಿಗೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಶಿವಸೇನ ಛಾಯಾಗ್ರಹಣವಿದೆ. ಚಿತ್ರದಲ್ಲಿ “ಡಾಲಿ’ ಧನಂಜಯ್, “ಕಾಕ್ರೋಚ್’ ಸುಧಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದು, ಇದೊಂದು ಪಕ್ಕಾ ಮಾಸ್ ಎಂಟರ್‌ಟೈನ್‌ಮೆಂಟ್ ಸಿನಿಮಾ ಆಗಿ ಹೊರಬರುತ್ತಿದೆ.
“ದುನಿಯಾ’ ವಿಜಯ್ ಮೊದಲ ನಿರ್ದೇಶನದ ಸಿನಿಮಾ ಆಗಿರುವುದರಿಂದ ಸಹಜವಾಗಿಯೇ ಇದು ಕುತೂಹಲ ಕೆರಳಿಸಿದೆ. ಇನ್ನು, ವಿಜಯ್ ಅಭಿನಯದ ಚಿತ್ರ ಬಿಡುಗಡೆಯಾಗದೆ ಎರಡು ವರ್ಷಗಳಾಗಿವೆ. ಹಾಗಾಗಿ, “ಸಲಗ’ ಚಿತ್ರದ ಬಿಡುಗಡೆಯನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ. ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರವನ್ನು ಕೆ.ಪಿ.ಶ್ರೀಕಾಂತ್ ಈ ಚಿತ್ರದ ನಿರ್ಮಾಪಕರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.