ಒಕ್ಕಟ್ಟಿನಿಂದ ಬಸವ ಜಯಂತಿ ಆಚರಣೆಗೆ ಸಲಹೆ
Team Udayavani, Mar 12, 2020, 4:42 PM IST
ಬೆಳಗಾವಿ: ಏಪ್ರಿಲ್ 26 ರಂದು ನಡೆಯಲಿರುವ ಬಸವ ಜಯಂತಿ ಆಚರಣೆಯ ಮೆರವಣಿಗೆ ಸಂದರ್ಭದಲ್ಲಿ ಶಿಸ್ತು ಸಮಯದ ನಿಬಂಧನೆ ಹಾಕಿಕೊಳ್ಳಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಚನಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು .ವಚನ ಸ್ಪರ್ಧೆ ಶರಣರ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಬೇಕು ಎಂದು ವೀರಶೈವ, ಲಿಂಗಾಯತ ಸಂಘಟನೆಗಳ ಪದಾಧಿಕಾರಿಗಳು ಹೇಳಿದರು.
ಬಸವ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ನಗರದ ವೀರಶೈವ ಮಹಾಸಭೆಯ ಸಭಾಗೃಹದಲ್ಲಿ ನಡೆದ ವೀರಶೈವ, ಲಿಂಗಾಯತ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಈ ಸಲಹೆ ನೀಡಿದ ಸದಸ್ಯರು, ಬಸವ ಜಯಂತಿ ಒಂದು ದಿನಕ್ಕೆ ಸೀಮಿತವಾಗಬಾರದು .ಶಿವಾಜಿ ಜಯಂತಿ ಆಚರಣೆ ಮಾದರಿಯಲ್ಲಿ ಬಸವ ಜಯಂತಿಯನ್ನು ಸಹ ಉತ್ಸಾಹದಿಂದ ಆಚರಿಸುವಂತಾಗಬೇಕು ಭಿನ್ನಾಭಿಪ್ರಾಯ ಬದಿಗಿಟ್ಟು ಬಸವ ಮನಸ್ಸುಗಳೆಲ್ಲ ಒಂದಾಗಿ ಆಚರಿಸುವಂತಾಗಬೇಕು ಎಂದು ಹೇಳಿದರು.
ಆಚರಣೆಯ ಪೂರ್ವಭಾವಿಯಾಗಿ ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ, ವಚನ ಸ್ಪರ್ಧೆ ಏರ್ಪಡಿಸಬೇಕು. ಮುಖ್ಯವಾಗಿ ಕಾರ್ಯಕ್ರಮದಲ್ಲಿ ಎಲ್ಲ ಪಂಗಡಗಳ ಎಲ್ಲ ಜನರು ಭಿನ್ನಾಭಿಪ್ರಾಯ ಮರೆತು ಉತ್ಸವ ನಡೆಸಲು ಮುಂದಾಗಬೇಕು. ಮನಸ್ಸುಗಳು ಘಾಸಿಯಾಗುವಂತೆ ಮಾತನಾಡುವುದು ಬೇಡ. ಬಸವಣ್ಣನವರನ್ನು ಒಂದು ಪಂಗಡಕ್ಕೆ ಸೀಮಿತ ಮಾಡುವುದು ಬೇಡ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಮಾಜಿ ಉಪಮಹಾಪೌರ ಜ್ಯೋತಿ ಭಾವಿಕಟ್ಟಿ ಅವರನ್ನು ಬೆಳಗಾವಿಯಲ್ಲಿ ನಡೆಯಲಿರುವ ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ನಂತರ ಮಾತನಾಡಿದ ಅವರು, ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ತಮಗೆ ಒಪ್ಪಿಸಿರುವ ಕಾರ್ಯವನ್ನು ಸಮಾಜದ ಎಲ್ಲರ ಸಲಹೆ, ಸೂಚನೆ ಸಹಕಾರದೊಂದಿಗೆ ಸಮರ್ಥವಾಗಿ ನಿಭಾಯಿಸುವುದಾಗಿ ಹೇಳಿದರು.
ಸಭೆಯಲ್ಲಿ ಡಾ.ಎಚ್.ಬಿ. ರಾಜಶೇಖರ್, ಸೋಮು ಮಾವಿನಕಟ್ಟಿ, ಮಾಜಿ ಶಾಸಕ ಎಸ್ .ಸಿ.ಮಾಳಗಿ, ಖಡಬಡಿ, ಯ.ರು.ಪಾಟೀಲ,
ಮುರುಗೇಶ ಶಿವಪೂಜಿ, ಮುದಕವಿ, ಎ.ಟಿ.ಪಾಟೀಲ, ಶೈಲಜಾ ಭಿಂಗೆ, ಎಸ್.ಆರ್. ಚೋಬಾರಿ, ಪ್ರತಿಭಾ ಕಳ್ಳಿಮಠ , ಸುನಂದಾ ಎಮ್ಮಿ , ದಿವ್ಯಾ ವಾಲಿ, ಸದಾಶಿವ ದೇವರಮನಿ ಉಪಸ್ಥಿತರಿದ್ದರು. ಗುರುದೇವಿ ಹುಲೆಪ್ಪನವರಮಠ ಕಾರ್ಯಕ್ರಮ ನಿರ್ವಹಿಸಿದರು. ಕೊರಬು ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.