ಕೊರೊನಾ ಭೀತಿ: ಬನ್ನೇರುಘಟ್ಟ ಉದ್ಯಾನ ಖಾಲಿ
Team Udayavani, Mar 12, 2020, 6:01 PM IST
ಆನೇಕಲ್ : ಕೊರೊನಾ ವೈರೆಸ್ ಭೀತಿ ಬೆಂಗಳೂರನ್ನು ಆವರಿಸಿದೆ. ಬೆಂಗಳೂರಿನಲ್ಲಿ ಕೊರೊನಾ ಸೊಂಕಿತರು ಪತ್ತೆಯಾಗುತ್ತಿದ್ದಂತೆ ಪ್ರವಾಸಿ ತಾಣಗಳು ಬಿಕೋ ಎನ್ನುತ್ತಿದ್ದು, ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.
ಕಳೆದ ಮಾರ್ಚ ತಿಂಗಳಿಗೆ ಹೋಲಿಸಿದರೆ ಈ ತಿಂಗಳ ಆರಂಭದ ನಂತರ, ದಿನ ದಿಂದ ದಿನಕ್ಕೆ ಉದ್ಯಾನವನಕ್ಕೆ ಬರುವ ಪ್ರವಾಸಿಗರ ಸಂಖ್ಯೆ ತೀರಾ ಕಡಿಮೆಯಾಗಿದೆ. ಸೋಮವಾರ ಕೇವಲ 1900 ಮಂದಿ ಪ್ರವಾಸಿಗರು ಉದ್ಯಾನವಕ್ಕೆ ಆಗಮಿಸಿದ್ದರು. ಬುಧವಾರ ಇದರ ಪ್ರಮಾಣ ಮತ್ತಷ್ಟು ಕಡಿಮೆಯಾಗಿತ್ತು.
ಮುಂಜಾಗ್ರತಾ ಕ್ರಮ : ಕೊರೋನಾ ವೈರೆಸ್ ಹರಡದಂತೆ ಮುನ್ನೆಚರಿಕಾ ಕ್ರಮವಾಗಿ, ಉದ್ಯಾನವನದ ಎಲ್ಲಾ ಸಿಬ್ಬಂದಿಗೆ ಮಾಸ್ಕ್ ನೀಡಲಾಗಿದೆ. ಕೈ ಶುದ್ಧ ಮಾಡಿಕೊಳ್ಳಲು ಸ್ಯಾನಿಟೇಸರ್ ಬಾಟಲ್‌ಗಳನ್ನು ಇಡಲಾಗಿದೆ. ಬರುವ ಪ್ರವಾಸಿಗರು ಕೈ ಶುದ್ಧ ಮಾಡಿಕೊಂಡು ಮೃಗಾಲಯದೊಳಗೆ ಪ್ರವೇಶಿಸುವ ವ್ಯವಸ್ಥೆ ಮಾಡಲಾಗಿದೆ.
ವಿದ್ಯಾರ್ಥಿಗಳಿಂದ ಜಾಗೃತಿ: ಪ್ರತಿ ಭಾನುವಾರ ಉದ್ಯಾನವನಕ್ಕೆ ಬರುವ ಇಕೋ ಕ್ಲಬ್ ವಿದ್ಯಾರ್ಥಿಗಳಿಂದ ಪ್ರವಾಸಿಗರಿಗೆ ಕೆಮ್ಮುವಾಗ ಕರ್ಚಿಪ್ ಬಳಸಿ, ಆಗಿಂದಾಗೆ ಕೈಗಳನ್ನು ತೊಳೆದು ಕೊಳ್ಳುತ್ತಿರಿ. ಸ್ಯಾನಿಟೈಸರ್ ಬಳಸುತ್ತಿರಿ . ಜ್ವರ, ಕೆಮ್ಮು ಇರುವ ವ್ಯಕ್ತಿಗಳಿಂದ ಅಂತರ ಕಾಯ್ದು ಕೊಳ್ಳಿ ಎಂದು ಜಾಗೃತಿ ಮೂಡಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.