ಒಲಿಂಪಿಕ್ಸ್ ರದ್ದು ಊಹಿಸಲೂ ಅಸಾಧ್ಯ: ಟೋಕಿಯೋ ಗವರ್ನರ್
Team Udayavani, Mar 12, 2020, 9:22 PM IST
ಟೋಕಿಯೋ: ವಿಶ್ವಾದ್ಯಂತ ಕೊರಾನಾ ವೈರಸ್ ಭೀತಿ ಹೆಚ್ಚುತ್ತಿರುವಂತೆಯೇ ಈ ವರ್ಷದ ಜು. 24ರಿಂದ ಆ.9ರವರೆಗೆ ನಿಗದಿಯಾಗಿರುವ ಒಲಿಂಪಿಕ್ಸ್ ರದ್ದುಗೊಳ್ಳುವ ಸಾಧ್ಯತೆಗಳಿವೆ ಎಂಬ ವದಂತಿಗಳ ನಡುವೆಯೇ ಇಂಥ ಬೆಳವಣಿಗೆಯನ್ನು ಊಹಿಸಲೂ ಅಸಾಧ್ಯ ಎಂದು ಟೋಕಿಯೋ ನಗರ ಗವರ್ನರ್ ಯೂರಿಕೋ ಕೊçಕೆ ಹೇಳಿದ್ದಾರೆ.
ಸದ್ಯದ ಸ್ಥಿತಿಯಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದ ಮೇಲೆ ಕೊರೊನಾ ಪರಿಣಾಮ ಬೀರಲಾರದು ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲವಾದರೂ ಕ್ರೀಡಾಕೂಟವನ್ನೇ ರದ್ದುಗೊಳಿಸಬಹುದಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬುದನ್ನು ಊಹಿಸಲಸಾಧ್ಯ ಎಂದವರು ಹೇಳಿದರು.
ಕ್ರೀಡಾಕೂಟದ ಸಂಘಟಕರು ಒಲಿಂಪಿಕ್ಸ್‌ನ್ನು ನಿಗದಿಯಂತೆ ನಡೆಸಲು ತೀರ್ಮಾನಿಸಿರುವರಾದರೂ ಈ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಹೊಂದಿದೆ. ಒಲಿಂಪಿಕ್ಸ್‌ನ್ನು ಮುಂದೂಡುವ ಅಥವಾ ರದ್ದುಗೊಳಿಸುವ ಬಗ್ಗೆ ಈವರೆಗೆ ಯಾವುದೇ ಚರ್ಚೆಗಳು ನಡೆದಿಲ್ಲ ಎಂದವರು ತಿಳಿಸಿದರು.
ಕೊರಾನಾ ವೈರಸ್ ವಿಶ್ವಾದ್ಯಂತ ಪಸರಿಸುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಐಒಸಿ ನಿರಂತರ ಸಂಪರ್ಕದಲ್ಲಿದೆ.
ಬಾಸ್ಕೆಟ್‌ಬಾಲ್ ಆಟಗಾರನಿಗೆ ಕೊರಾನಾ
ಕೊರಾನಾ ಸೋಂಕಿನ ಹಿನ್ನೆಲೆಯಲ್ಲಿ ಈಗಾಗಲೇ ಹಲವಾರು ಕ್ರೀಡಾಕೂಟಗಳನ್ನು ಮುಂದೂಡಲಾಗಿದ್ದರೆ ಇನ್ನು ಕೆಲವಷ್ಟನ್ನು ರದ್ದುಗೊಳಿಸಲಾಗಿದೆ. ಇಷ್ಟು ಮಾತ್ರವಲ್ಲದೆ ಕೆಲವು ಕ್ರೀಡಾಳುಗಳಿಗೂ ಕೊರೊನಾ ಸೋಂಕು ತಗಲಿರುವ ಶಂಕೆ ಇದೆ. ಇದೀಗ ಗುರುವಾರದಂದು ಆರಂಭವಾಗಬೇಕಿದ್ದ ಅಮೆರಿಕದ ಬಾಸ್ಕೆಟ್‌ಬಾಲ್ ಟೂರ್ನಮೆಂಟ್‌ನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಅಟಾ ಜಾಝ್ ಕ್ರೀಡಾಳು ಓರ್ವನಿಗೆ ಕೋವಿಡ್-19 ತಗಲಿರುವುದು ಪ್ರಾಥಮಿಕ ಪರೀಕ್ಷೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇಟಲಿಯಲ್ಲಿ ಈಗಾಗಲೇ ಎ.3ರ ವರೆಗೆ ಹಲವಾರು ಕ್ರೀಡಾಕೂಟಗಳನ್ನು ಎ. 3ರ ವರೆಗೆ ಮುಂದೂಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia: ಪರ್ತ್‌ಗೆ ಆಗಮಿಸಿದ ರೋಹಿತ್ ಶರ್ಮ
Pro Kabaddi League: ಬೆಂಗಾಲ್ ವಾರಿಯರ್ ಮೇಲೆ ಪುಣೇರಿ ಪಲ್ಟಾನ್ ಸವಾರಿ
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.