ರಸದೌತಣವಾದ ಶ್ರೀ ರಾಮ ಪಟ್ಟಾಭಿಷೇಕ

Team Udayavani, Mar 13, 2020, 5:45 PM IST

srirama-pattabhikshek

ಮೂಡಬಿದಿರೆ ಯಲ್ಲಿ ಯಕ್ಷೊàಪಾಸನಮ್‌ ಮೂಡಬಿದ್ರಿಯ ಎಂ. ಶಾಂತಾರಾಮ ಕುಡ್ವಾ ಅವರ ಸಂಯೋಜಕತ್ವದಲ್ಲಿ ಅತಿಥಿ ಕಲಾವಿದರಿಂದೊಡಗೂಡಿ ನೆರವೇರಿದ ಪಾರ್ತಿ ಸುಬ್ಬ ವಿರಚಿತ ಶ್ರೀ ರಾಮ ಪಟ್ಟಾಭಿಷೇಕ ತಾಳಮದ್ದಳೆ ಕೂಟ ಜನಮನ ಗೆದ್ದಿತು.

ಚಕ್ರವರ್ತಿ ದಶರಥನು ರಾಜ್ಯಭಾರವನ್ನು ಹಿರಿಯ ಪತ್ನಿ ಕೌಸಲ್ಯಾ ದೇವಿಯ ಪುತ್ರನಾದ ಶ್ರೀ ರಾಮಚಂದ್ರನಿಗೆ ವಹಿಸಿಕೊಡಲು ಉತ್ಸುಕನಾಗಿ ಮೂಹೂರ್ತ ನಿಗದಿಪಡಿಸುತ್ತಾನೆ. ವಿಚಾರ ತಿಳಿದ ಕೈಕೇಯಿಯ ದಾಸಿ ಮಂಥರೆಯು ಕೈಕೇಯಿಯ ಮನಸ್ಸನ್ನು ಕೆಡಿಸಿ ಹುಳಿ ಹಿಂಡುತ್ತಾಳೆ.ಹೀಗೆ ಮಂಥರೆಯಿಂದ ಮನ ಪರಿವರ್ತನೆಗೊಂಡ ಕೈಕೇಯಿಯು ಪಟ್ಟಾಭಿಷೇಕದ ದಿನ, ಸಮಾರಂಭಕ್ಕೆ ಹೋಗದೆ ತನ್ನ ಸೌಂದರ್ಯವನ್ನು ಏಕಾಏಕಿ ಅಸ್ತವ್ಯಸ್ತಗೊಳಿಸಿ ಶೋಕಾಗಾರದಲ್ಲಿ ಮಲಗಿದ್ದ ಸಂದರ್ಭದಲ್ಲಿ ತನ್ನನ್ನು ಕಾಣಲು ಬಂದ ದಶರಥನಲ್ಲಿ ಅಂದು ಕೊಟ್ಟ ನ್ಯಾಸವಾಗಿ ಉಳಿದಿರುವ ಎರಡು ವರವನ್ನು ಕೇಳಲು ಇದೀಗ ಬಯಸಿದ್ದು ಆ ಪ್ರಕಾರ ನಿಗದಿತ ಮೂಹೂರ್ತದಲ್ಲಿ ತನ್ನ ಮಗನಾದ ಭರತನಿಗೆ ಪಟ್ಟ ಕಟ್ಟಬೇಕು ಹಾಗೂ ರಾಮನನ್ನು ಕಾಡಿಗಟ್ಟಬೇಕು ಎಂದು ಹೇಳುತ್ತಾಳೆ.ಈ ಅನಿರೀಕ್ಷಿತ ಆಘಾತದಿಂದ ದುಃಖೀತನಾಗಿ ಮರುಗುತ್ತಿದ್ದ ತಂದೆಯನ್ನು ರಾಮನು ಸಮಾಧಾನಪಡಿಸಿ, ಪತ್ನಿ ಸೀತೆ, ತಮ್ಮ ಲಕ್ಷ್ಮಣನೊಂದಿಗೆ ಕಾಡಿಗೆ ಹೊರಡಲು ಸಿದ್ಧವಾಗುತ್ತಾನೆ.ಹೀಗೆ ಮಂಥರೆಯ ಕುತಂತ್ರದಿಂದ ಶ್ರೀ ರಾಮ ಪಟ್ಟಾಭಿಷೇಕ ಮುರಿದು ಬೀಳುತ್ರದೆ.

ಮಂಥರೆಯಾಗಿ ಶಾಂತಾರಾಮ ಕುಡ್ವಾರವರು ಕೈಕೇಯಿಯ ಮನಪರಿವರ್ತನೆ ಮಾಡಿ ಹುಳಿ ಹಿಂಡುವ ರಾಜಕೀಯ ಸೃಷ್ಟಿಸಿದ ಸನ್ನಿವೇಶ ಪ್ರಸಕ್ತ ರಾಜಕೀಯ ಸ್ಥಿತಿಗತಿಯನ್ನು ನೆನಪಿಗೆ ತರಿಸುವಂತೆ ಮಾಡಿತು.

ರಾಜಕೀಯ ಷಡ್ಯಂತ್ರಗಳನ್ನು ಕದ್ದಾಲಿಸುವುದು ತಪ್ಪಲ್ಲ,ತನಗೆ ಕಿವಿ ಕೇಳುವುದಿಲ್ಲವಾದರೂ ,ಗೋಡೆಗೆ ಕಿವಿ ಕೊಟ್ಟು ಕೇಳಿದಾಗ, ಪಿಸುಪಿಸು, ಗುಸುಗುಸು, ಮಿಣಿಮಿಣಿ ಮಾತುಗಳು ಆವಾಗ ಮಾತ್ರ ಕೇಳುವುದು. ಅದು ದೇವರು ಕೊಟ್ಟ ವರ ಎಂದು ಹೇಳಿದ್ದು ನಗೆಗೆಡಲಿನಲ್ಲಿ ತೇಲಿಸಿತು.
ಕೈಕೇಯಿಯಾಗಿ ತಾರಾನಾಥ ವರ್ಕಾಡಿ ಮತ್ತು ದಶರಥನಾಗಿ ಶಂಭು ಶರ್ಮ ವಿಟ್ಲರವರ ಸಂವಾದ ದೀರ್ಘ‌ಕಾಲದವರೆಗೆ ನಡೆದು ಪ್ರಬುದ್ಧತೆ ಮೆರೆಯಿತು. ನ್ಯಾಸವಾಗಿ ಉಳಿದುಕೊಂಡಿದ್ದ ಮತ್ತೆರಡು ವರಗಳನ್ನು ಅನ್ಯಾಯವಾದಾಗ ತಾನು ಕೇಳುವುದು ತನ್ನ ಹಕ್ಕು,ಕೊಡುವುದು ಅದು ನಿಮ್ಮ ಔದಾರ್ಯವಲ್ಲ ,ಬದ್ಧತೆ ಎಂದು ಕೈಕೇಯಿ ಕೆಣಕಿದುದು ಮಾರ್ಮಿಕವಾಗಿತ್ತು.ಮಂಗಳಕರವಾದ ವಾತಾವರಣದಲ್ಲಿ ನಮ್ಮ ಹೃದಯವನ್ನು ಕೂಡ ಮಂಗಳಕರವಾಗಿ ಅಂತರಂಗದಲ್ಲಿ ಶುದ್ಧವನ್ನಿಟ್ಟುಕೊಳ್ಳಬೇಕು. ಅಂತಹ ಅಂತರಂಗ ಶುದ್ಧಿಯಿಂದ ಏನೂ ಬೇಕಾದರೂ ಕೇಳು ಕೊಡುತ್ತೇನೆ.ಅದು ನಿನ್ನದಾಯಿತೆಂದು ತಿಳಿ ಎಂದು ಅಷ್ಟೇ ಮಾರ್ಮಿಕವಾದ ನುಡಿ ದಶರಥನಾಗಿ ಶಂಭು ಶರ್ಮಾರ¨ªಾಗಿತ್ತು.ಶ್ರೀ ರಾಮನಾಗಿ ಯುವ ಅರ್ಥದಾರಿ ಸುನಿಲ್‌ ಹೊಲಾಡು ದಶರಥನನ್ನು ಸಮಾಧಾನಪಡಿಸಿದ ರೀತಿ, ಕೈಕೆಯಿಯೊಂದಿಗಿನ ಸಂವಾದ ಮರ್ಯಾದಾ ಪುರುಷೋತ್ತಮನ ದಾಟಿಯಲ್ಲಿ ಅರ್ಥ ಹೇಳಿ ಅರ್ಥಗಾರಿಕೆಯಲ್ಲಿ ಉತ್ತಮ ಭವಿಷ್ಯವಿದೆ ಎಂದು ಶ್ರುತ ಪಡಿಸಿದರು.ಲಕ್ಷ್ಮಣನಾಗಿ ಹಿರಿಯ ಅರ್ಥದಾರಿ ದಾಮೋದರ ಸಫ‌ಲಿಗರವರು ತಮಗೆ ಒದಗಿ ಬಂದ ಎರಡು ಪದ್ಯಗಳಲ್ಲಿ ಅರ್ಥ ಪ್ರಬುದ್ಧತೆ ಮೆರೆದರು.ಉತ್ತಮ ರಸದೌತಣ ಒದಗಿಸಿದ ಈ ಕಥಾನಕದ ಹಿಮ್ಮೇಳದಲ್ಲಿ ಮೊದಲಾರ್ಧದಲ್ಲಿ ಭಾಗವತರಾಗಿ ಗಿರೀಶ್‌ ರೈ ಕಕ್ಕೆಪದವು,ಅನಂತರದ ಮಾಧವ ಆಚಾರ್ಯ ಸಂಪಿಗೆ ಸುಮಧುರವಾಗಿ ಹಾಡಿದರು.ಚೆಂಡೆಯಲ್ಲಿ ರವಿರಾಜ್‌ ಜೈನ್‌,ಮದ್ದಳೆಯಲ್ಲಿ ಆನಂದ ಗುಡಿಗಾರ ಮತ್ತು ಶ್ರವಣ ಕುಮಾರ್‌ರವರು ಸಾಥ್‌ ನೀಡಿದರು.

ಎಂ.ರಾಘವೇಂದ್ರ ಭಂಡಾರ್ಕರ್‌

ಟಾಪ್ ನ್ಯೂಸ್

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್‌

Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್‌

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.