ಎಸೆಸೆಲ್ಸಿ ಪರೀಕ್ಷೆಯನ್ನು ಅತ್ಯುತ್ಸಾಹದಿಂದ ಎದುರಿಸಿ

ಉದಯವಾಣಿ ಫೋನ್‌ ಇನ್‌ ಕಾರ್ಯಕ್ರಮ

Team Udayavani, Mar 14, 2020, 6:57 AM IST

ಎಸೆಸೆಲ್ಸಿ ಪರೀಕ್ಷೆಯನ್ನು ಅತ್ಯುತ್ಸಾಹದಿಂದ ಎದುರಿಸಿ

ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಉದಯವಾಣಿ ದಿನಪತ್ರಿಕೆಯು ಗುರುವಾರ ಎಸೆಸೆಲ್ಸಿ ವಿದ್ಯಾರ್ಥಿಗಳಿಗಾಗಿ ಫೋನ್‌ ಇನ್‌ ಕಾರ್ಯಕ್ರಮವನ್ನು ಮಣಿಪಾಲದ ಕಚೇರಿಯಲ್ಲಿ ಆಯೋಜಿಸಿತ್ತು. ಗಣಿತ ಮತ್ತು ವಿಜ್ಞಾನ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಕರೆ ಮಾಡಿ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಪಡೆದುಕೊಂಡರು. ಗಣಿತದ ಬಗ್ಗೆ ಮಟಪಾಡಿ ಶ್ರೀನಿಕೇತನ ಪ್ರೌಢಶಾಲೆಯ ಶಿಕ್ಷಕರಾದ ಹರಿಕೃಷ್ಣ ಹೊಳ್ಳ, ವಿಜ್ಞಾನದ ವಿವಿಧ ವಿಭಾಗಗಳಾದ ಜೀವಶಾಸ್ತ್ರದಲ್ಲಿ ನಾವುಂದ ಸರಕಾರಿ ಪ.ಪೂ. ಕಾಲೇಜಿನ ಅಧ್ಯಾಪಕ ಕೃಷ್ಣಮೂರ್ತಿ ಪಿ.ಕೆ., ರಸಾಯನ ಶಾಸ್ತ್ರದಲ್ಲಿ ಹಂಗಾರಕಟ್ಟೆ ಚೇತನಾ ಪ್ರೌಢಶಾಲೆಯ ಶಿಕ್ಷಕ ಗೋವಿಂದ ರಾವ್‌, ಭೌತಶಾಸ್ತ್ರದಲ್ಲಿ ಮಣಿಪಾಲ ಪ.ಪೂ. ಕಾಲೇಜಿನ ಅಧ್ಯಾಪಕ ನಾಗೇಂದ್ರ ಪೈ ಅವರು ವಿದ್ಯಾರ್ಥಿಗಳ ಪ್ರಶ್ನೆಗಳು ಹಾಗೂ ಸಂದೇಹಗಳಿಗೆ ಸವಿವರವಾಗಿ ಉತ್ತರಿಸಿದರು. ಪ್ರಮುಖ ಪ್ರಶ್ನೆಗಳಿಗೆ ಒಟ್ಟಾಗಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ.

 ಪರೀಕ್ಷೆ ದಿನದ ತಯಾರಿ ಹೇಗೆ?
-ಮಕ್ಕಳು ಈ ಲೆಕ್ಕ ಗೊತ್ತಿದೆ, ಸುಲಭ ಎಂದು ಪರೀಕ್ಷೆಯ ಹಿಂದಿನ ದಿನ ಅಭ್ಯಾಸ ಮಾಡಲು ಹೋಗದೆ ಪರೀಕ್ಷೆ ಬರೆಯುವಾಗ ತಪ್ಪು ಮಾಡುವ ಅನೇಕ ಉದಾಹರಣೆಗಳಿವೆ. ಸುಲಭ ಎಂಬ ನಿರ್ಲಕ್ಷ್ಯ ತೋರದೆ ಕಲಿತ ಲೆಕ್ಕಗಳತ್ತ ಮತ್ತೆ ಗಮನಹರಿಸಬೇಕು. ಪ್ರಮೇಯ, ಸೂತ್ರ, ಸಿದ್ಧಾಂತಗಳನ್ನು
ನೋಡಿಕೊಂಡು ಹೋಗಬೇಕು.

 ಕಡ್ಡಾಯವಾಗಿ ಪಾಲಿಸಬೇಕಾದ ಅಂಶಗಳು
-ಕಂಪಾಸ್‌ ಬಾಕ್ಸ್‌ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು. ಹೆಚ್ಚುವರಿ ಪೆನ್ನುಗಳು, ಸ್ಕೇಲ್‌, ಇರೇಸರ್‌ ಇತ್ಯಾದಿ ಇರಬೇಕು. ಪರೀಕ್ಷೆ ಬರೆಯುವಾಗ ಸಾಮಾನ್ಯವಾಗಿ ವಿದ್ಯಾರ್ಥಿಗಳು ಗೊತ್ತಿರುವ ಪ್ರಶ್ನೆಗಳಿಗೆ ಉತ್ತರವನ್ನು ವೇಗವಾಗಿ ಬರೆದು ಮುಗಿಸಿ ಬಳಿಕ ಗೊತ್ತಿಲ್ಲದ ಪ್ರಶ್ನೆಗಳನ್ನು ಬಿಡಿಸಲು ವ್ಯರ್ಥವಾಗಿ ಬಹಳಷ್ಟು ಸಮಯ ಕಳೆಯುವ ತಪ್ಪನ್ನು ಮಾಡು ತ್ತಾರೆ. ಇದರ ಬದಲು ಗೊತ್ತಿರುವ ಪ್ರಶ್ನೆಗಳಿಗೆ ಗಡಿಬಿಡಿ ಮಾಡದೆ ಹಂತಗಳು, ಸೂತ್ರ ಇತ್ಯಾದಿಗಳನ್ನು ಸರಿ ಯಾಗಿ ಬರೆಯಲು ಅಗತ್ಯವಿದ್ದಷ್ಟು ಸಮಯ ತೆಗೆದು ಕೊಳ್ಳಿ. ಆಗ ಆ ಪ್ರಶ್ನೆಗಳಿಗೆ ಪೂರ್ತಿ ಅಂಕ ಬರುತ್ತವೆ.

- 5 ಅಂಕದ ಪ್ರಶ್ನೆಗಳು ಯಾವ ಭಾಗದಿಂದ ಬರುತ್ತವೆ? 5 ಅಂಕಕ್ಕೆ ಲೆಕ್ಕಗಳು ಬರುತ್ತವೆಯೇ? ಭೌತಶಾಸ್ತ್ರದಲ್ಲಿ ಅನ್ವಯ ಪ್ರಶ್ನೆಗಳು ಯಾವ ವಿಭಾಗದಿಂದ ಬರಬಹುದು?
-ಶಬರಿ ಶೆಟ್ಟಿ, ಉಡುಪಿ
ಹೆಚ್ಚು ಅಂಕಗಳಿರುವ ಪಾಠಕ್ಕೆ ಮಹತ್ವ ನೀಡಬೇಕಾಗುತ್ತದೆ. ಈ ಪ್ರಶ್ನೆ ವಿಜ್ಞಾನದ ಯಾವ ಭಾಗದಿಂದಲೂ ಬರಬಹುದು. 5 ಅಂಕದ ಪ್ರಶ್ನೆ ಲೆಕ್ಕ ಬಿಡಿಸುವ ಪ್ರಶ್ನೆಯಾಗಿರು ವುದಿಲ್ಲ. 2 ಅಥವಾ 3 ಅಂಕದ ಪ್ರಶ್ನೆಗಳಲ್ಲಿ ಲೆಕ್ಕಗಳು ಬರಬಹುದು. ಭೌತಶಾಸ್ತ್ರದಲ್ಲಿ ಅನ್ವಯ ಪ್ರಶ್ನೆಗಳು, ವಿದ್ಯುತ್‌ ಶಕ್ತಿ, ಬೆಳಕು ಪಾಠದಿಂದ ಬರುವ ಸಾಧ್ಯತೆ ಹೆಚ್ಚು.

- ವಿಜ್ಞಾನ ವಿಷಯದಲ್ಲಿ 60 ಅಂಕ ಗಳಿಸಲು ಕೆಲವು ಸಲಹೆ ಸಿಗಬಹುದೇ?
-ಅಲ್ತಾಫ್, ಬಿ.ಸಿ.ರೋಡ್‌
12 ಅಂಕದ ಚಿತ್ರಗಳು ಬರುತ್ತವೆ. ಚಿತ್ರಗಳು ಮತ್ತು ಅದರ ಭಾಗಗಳು ಹಾಗೂ ಅವುಗಳ ಕಾರ್ಯ ತಿಳಿದುಕೊಳ್ಳಬೇಕು. ಸಾಮಾನ್ಯವಾಗಿ ಒಂದು ನಿಯಮ ಪರೀಕ್ಷೆಗೆ ಬರುವ ಸಾಧ್ಯತೆ ಇರುತ್ತದೆ. ಪಾಠದಲ್ಲಿನ ಎಲ್ಲ ನಿಯಮಗಳನ್ನು ತಿಳಿದುಕೊಂಡಿರಬೇಕು. ಉಳಿದಂತೆ, ವ್ಯತ್ಯಾಸಗಳು ರಾಸಾಯನಿಕ ಸಮೀಕರಣಗಳ ಸರಿದೂಗಿಸುವಿಕೆ, ಹೈಡ್ರೋಕಾರ್ಬನ್‌ಗಳ ರಚನಾಸೂತ್ರ, ಚುಕ್ಕಿ ರಚನೆ, ಕ್ರಿಯಾಗುಂಪುಗಳನ್ನು ಕಲಿತುಕೊಳ್ಳಿ. ವಿದ್ಯುತ್‌ ಶಕ್ತಿ, ಬೆಳಕು ಪಾಠಗಳಿಂದ ಲೆಕ್ಕಗಳು ಬರುವ ಸಾಧ್ಯತೆಗಳಿರುತ್ತವೆ. ಕಿರಣ ಚಿತ್ರವನ್ನು ಸರಿಯಾಗಿ ಅಭ್ಯಾಸಿಸಿಕೊಳ್ಳಬೇಕು.

- ವಿವರಣಾತ್ಮಕ ಪ್ರಶ್ನೆಗಳಿಗೆ ಎಷ್ಟು ಉತ್ತರ ಬರೆಯಬೇಕು? ಚಿತ್ರಗಳ ಭಾಗ ಗಳನ್ನು ಕಲಿಯುವುದು ಅಗತ್ಯವೇ? ಪಠ್ಯಪುಸ್ತಕಕ್ಕೆ ಹೊರತಾದ ಪ್ರಶ್ನೆಗಳು ಬರುತ್ತವಲ್ಲ? ಉದಾ: ಹಣ್ಣಿನ ಮಾಗುವಿಕೆಗೆ ಕಾರಣವಾದ ಹಾರ್ಮೋನ್‌ ಯಾವುದು?
-ಅವನಿ, ವಿಟ್ಲ
ವಿವರಣಾತ್ಮಕ ಪ್ರಶ್ನೆಗಳನ್ನು ಉಪ ಪ್ರಶ್ನೆಗಳಾಗಿ ಕೇಳುತ್ತಾರೆ. ಹಾಗಾಗಿ ಎಷ್ಟು ಉತ್ತರ ಬರೆಯಬೇಕು ಎಂಬ ಬಗ್ಗೆ ಗೊಂದಲ ಇರುವುದಿಲ್ಲ . ವಾರ್ಷಿಕ ಪರೀಕ್ಷೆಯಲ್ಲಿ ಪ್ರಶ್ನೆಗಳು ಸ್ಪಷ್ಟ ಮತ್ತು ನಿರ್ದಿಷ್ಟವಾಗಿರುತ್ತವೆ. ಹಾಗಾಗಿ ಆತಂಕ ಬೇಡ. ಚಿತ್ರದ ಭಾಗಗಳು ಮತ್ತು ಅವುಗಳ ಕಾರ್ಯಗಳನ್ನು ಖಂಡಿತ ಕಲಿತುಕೊಳ್ಳಬೇಕು. 3 ಅಂಕದ ಚಿತ್ರವಿದ್ದರೆ ಸಾಮಾನ್ಯವಾಗಿ ಭಾಗ ಗುರುತಿಸಿದ್ದಕ್ಕೆ 1 ಅಂಕ ಇರುತ್ತದೆ. ಹಣ್ಣಿನ ಮಾಗುವಿಕೆಗೆ ಕಾರಣವಾದ ಹಾರ್ಮೋನ್‌ ಸೈಟೋಕೈನಿನ್‌. ಇದರ ಬಗ್ಗೆ ಪಠ್ಯಪುಸ್ತಕದಲ್ಲಿ ಮಾಹಿತಿ ಇದೆ, ವಿಜ್ಞಾನ ಭಾಗ 2, ಪುಟ ಸಂಖ್ಯೆ 88 ಗಮನಿಸಿ.

- ಹೆಚ್ಚಿನ ಪ್ರಶ್ನೆ ಗಳೆಲ್ಲ ನೇರ ಪ್ರಶ್ನೆ ಗಳಿರದೇ ಅನ್ವಯ ಪ್ರಶ್ನೆಗಳೇ ಇರು ತ್ತವಲ್ಲ.?
-ಅನನ್ಯಾ ಭಟ್‌, ಯಲ್ಲಾಪುರ
ಖಂಡಿತ ಇಲ್ಲ. ಯಾವ ವಿಧದ ಪ್ರಶ್ನೆಗಳು ಎಷ್ಟಿರಬಬೇಕೆಂಬುದು ಸ್ಪಷ್ಟವಾಗಿ ನಿರ್ಧರಿಸ ಲ್ಪಟ್ಟಿರುತ್ತದೆ. ಅದರಂತೆ ಒಟ್ಟು 80 ಅಂಕಗಳಲ್ಲಿ 16 ಅಂಕಗಳ ಪ್ರಶ್ನೆಗಳು ಅನ್ವಯಗಳಾಗಿದ್ದು ಅದರಲ್ಲೂ ಹೆಚ್ಚಿನವು ಸರಳ ಅನ್ವಯಗಳಾಗಿ ರುತ್ತವೆ. 4 ಅಂಕಗಳಷ್ಟು ಉನ್ನತ ಮಟ್ಟದ ಆಲೋಚನೆಯ ಪ್ರಶ್ನೆಗಳಿರುತ್ತವೆ. ಅದರಂತೆ ನೇರವಾದ ಪ್ರಶ್ನೆಗಳೂ ಇರುತ್ತವೆ. ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸಿದ ಪೂರ್ವಸಿದ್ಧತಾ ಪರೀಕ್ಷೆಯ ಮಾದರಿಯಲ್ಲೇ ಮುಂದಿನ ಪರೀಕ್ಷೆ ಇರುತ್ತದೆ.

- 5 ಅಂಕದ ಪ್ರಶ್ನೆಗಳು ಯಾವ ವಿಷಯದಿಂದ ಬರುತ್ತವೆ?
-ಶಶಾಂಕ್‌, ಮೂಲ್ಕಿ; ಸನ್ನಿಧಿ, ಶ್ರೇಯಾ, ಉಡುಪಿ
ಜೀವಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ ವಿಷಯಗಳಲ್ಲಿ ಪ್ರಶ್ನೆಗಳನ್ನು ಕೇಳುತ್ತಾರೆ. ಮುಖ್ಯವಾಗಿ ಯಾವ ವಿಷಯದಲ್ಲಿ ಅಂಕಗಳ ಹಂಚಿಕೆ ಹೆಚ್ಚಿರುತ್ತದೋ ಆ ವಿಷಯದಲ್ಲಿ 5 ಅಂಕದ ಪ್ರಶ್ನೆಗಳು ಬರುವ ಸಾಧ್ಯತೆ ಹೆಚ್ಚು. ಭೌತಶಾಸ್ತ್ರ ವಿಷಯದಲ್ಲಿ ವಿದ್ಯುತ್ಕಾಂತೀಯ ಪರಿಣಾಮಗಳು, ಬೆಳಕು, ರಸಾಯನಶಾಸ್ತ್ರದಲ್ಲಿ ಆಮ್ಲ, ಪ್ರತ್ಯಾಮ್ಲ ವಿಷಯಗಳನ್ನು ಕೇಳ ಬಹುದು. ಕೆಲವು ಪ್ರಶ್ನೆಗಳನ್ನು ವಿಭಿನ್ನ ರೀತಿ ಯಲ್ಲಿಯೂ ಕೇಳಬಹುದು. ಅದಕ್ಕಾಗಿ ಮೊದಲು ಪ್ರಶ್ನೆಯನ್ನು ಚೆನ್ನಾಗಿ ಓದಿ ಮನ ದಟ್ಟು ಮಾಡಿಕೊಳ್ಳಬೇಕು. ವಿದ್ಯುತ್‌, ಬೆಳಕು ಪಾಠಗಳನ್ನು ಹೆಚ್ಚು ಅಭ್ಯಾಸ ಮಾಡಿದರೆ ಒಳ್ಳೆಯದು. ಲೋಹ -ಅಲೋಹ, ವಿದ್ಯುತ್‌ ಪ್ರವಾಹದ ಕಾಂತೀಯ ಪರಿಣಾಮ, ಜೀವ ಶಾಸ್ತ್ರದಲ್ಲಿ ಲೈಫ್ ಪ್ರಾಸೆಸ್‌, ಅನುವಂಶೀಯತೆ ಪಾಠಗಳ ಕಡೆಗೆ ಗಮನ ಕೊಡಿ.

- ರಾಸಾಯನಿಕ ಸಮೀಕರಣ ಕಷ್ಟ ಅನಿಸುತ್ತದೆ, ಏನು ಮಾಡಬಹುದು?
 -ಅಖೀಲಾ, ಶಂಕರಪುರ
3 ಅಂಕಕ್ಕೆ ಪ್ರಶ್ನೆಗಳನ್ನು ಕೇಳುತ್ತಾರೆ. ಸರಳವಾದ ರಾಸಾಯನಿಕ ಕ್ರಿಯೆಗಳನ್ನು ಬರೆದಿಟ್ಟು ಕೊಂಡು ಕಲಿಯಬೇಕು. ಪಠ್ಯಪುಸ್ತಕದ ಸಮೀಕರಣಗಳನ್ನು ಸರಿದೂಗಿ ಸುವುದನ್ನು ಡ್ರಿಲ್‌ ವರ್ಕ್‌ ಮೂಲಕ ಕಲಿಯಬೇಕು.

- ಭೌತಶಾಸ್ತ್ರ ವಿಷಯದಲ್ಲಿ ಲೆಕ್ಕಗಳು ಯಾವ ಪಾಠದಿಂದ ಬರಬಹುದು?
-ಸ್ವಾತಿ, ಕೋಟೇಶ್ವರ
ವಿದ್ಯುತ್‌ ಶಕ್ತಿ ಪಾಠ ಮತ್ತು ಬೆಳಕು ಪಾಠದಿಂದ ಲೆಕ್ಕಗಳು ಬರುವ ಸಾಧ್ಯತೆ ಹೆಚ್ಚು. ಪಠ್ಯದಲ್ಲಿರುವ ಉದಾಹರಣೆ ಲೆಕ್ಕಗಳು ಮತ್ತು ಅಭ್ಯಾಸದ ಲೆಕ್ಕಗಳನ್ನು ಕಲಿತುಕೊಳ್ಳಿ. ಸಂಖ್ಯೆಗಳು ಬದಲಾಗಬಹುದು ಅಷ್ಟೇ.

- ಗೋಡೆಗೆ ಬಿಳಿಬಣ್ಣಕ್ಕಾಗಿ ಸುಣ್ಣ ಬಳಿಯುತ್ತೇವಲ್ಲ, ಅದೇನು?
-ಪ್ರಜ್ವಲ್‌ಕೃಷ್ಣ, ಉಪ್ಪಿನಂಗಡಿ
ಕ್ಯಾಲ್ಸಿಯಂ ಕಾರ್ಬೋನೇಟನ್ನು ಸುಟ್ಟು ಕ್ಯಾಲ್ಸಿಯಂ ಆಕ್ಸೆ„ಡನ್ನು ಪಡೆಯುತ್ತಾರೆ. ಇದಕ್ಕೆ ಸುಟ್ಟ ಸುಣ್ಣ ಎನ್ನುತ್ತೇವೆ. ಇದನ್ನು ನೀರಿಗೆ ಹಾಕಿದಾಗ ಕ್ಯಾಲ್ಸಿಯಂ ಹೈಡ್ರಾಕ್ಸೆ„ಡ್‌ ಆಗಿ ಪರಿವರ್ತನೆ ಆಗುತ್ತದೆ. ಇದನ್ನು ಅರಳಿದ ಸುಣ್ಣ ಎನ್ನುತ್ತೇವೆ. ಇದನ್ನು ಗೋಡೆಗೆ ಬಳಿಯಲು ಬಳಸುತ್ತಾರೆ.

- ಲೈಫ್ ಪ್ರಾಸೆಸ್‌ನಲ್ಲಿ ಯಾವ ಪ್ರಶ್ನೆ ಕೇಳಬಹುದು?
-ಅಪ್ಸಾ , ಮೂಲ್ಕಿ
3 ಅಂಕಕ್ಕೆ ಮಾನವನ ಜೀರ್ಣಾಂಗ ವ್ಯೂಹ ಮತ್ತು ಹೃದಯ ಚಿತ್ರಗಳಿವೆ. 2 ಅಂಕದ 3 ಚಿತ್ರಗಳಿವೆ. ಆದ್ದರಿಂದ 1 ಚಿತ್ರ ನಿರೀಕ್ಷಿಸಬಹುದು. ಅಮೀಬಾ ದಲ್ಲಿ ಪೋಷಣೆ, ಸಸ್ಯಗಳಲ್ಲಿ ವಿಸರ್ಜನೆ, ಮಾನವನಲ್ಲಿ ಇಮ್ಮಡಿ ರಕ್ತ ಪರಿಚಲನೆಗಳಂತಹ ವಿವರಣಾತ್ಮಕ 2 ಅಥವಾ 3 ಅಂಕದ ಪ್ರಶ್ನೆಗಳನ್ನು ಸಂಗ್ರಹಿಸಿಕೊಂಡು ಓದಿಕೊಳ್ಳಿ.

- ಯಾವ ಪಾಠದಿಂದ ಅನ್ವಯ ಪ್ರಶ್ನೆಗಳನ್ನು ಕೇಳುತ್ತಾರೆ?
-ನಾಗರತ್ನಾ, ಬೈಕಂಪಾಡಿ
ಇಂಥದ್ದೇ ಪಾಠದಿಂದ ಎಂದು ಹೇಳು ವುದು ಕಷ್ಟ. ಆದರೆ ಬೆಳಕು, ವಿದ್ಯುತ್‌ ಶಕ್ತಿ, ಲೋಹ ಮತ್ತು ಅಲೋಹಗಳು, ಧಾತು ಗಳ ಆವರ್ತನೀಯ ವರ್ಗೀಕರಣ, ನಿಯಂತ್ರಣ ಮತ್ತು ಸಹಭಾಗಿತ್ವ, ಜೀವಿಗಳು ಹೇಗೆ ಸಂತಾ ನೋತ್ಪತ್ತಿ ನಡೆಸುತ್ತವೆ, ಆನುವಂಶೀಯತೆ ಈ ಪಾಠಗಳಲ್ಲಿ ಅನ್ವಯ ಪ್ರಶ್ನೆಗಳಿಗೆ ಅವಕಾಶ ಹೆಚ್ಚು. ಇಲ್ಲಿ ಬರುವ ಪರಿಕಲ್ಪನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. ನಮ್ಮ ಪರಿಸರ, ಶಕ್ತಿಯ ಆಕರಗಳು ಪಾಠದಿಂದ ಸರಳ ಅನ್ವಯ ಪ್ರಶ್ನೆಗಳನ್ನು ನಿರೀಕ್ಷಿಸಬಹುದು.

- ಧಾತುಗಳ ಆವರ್ತನ ಕೋಷ್ಠಕ ಪಾಠ ಯಾವ ರೀತಿ ಕಲಿಯಬಹುದು?
-ದರ್ಶನ್‌, ಉಡುಪಿ
ಮೊದಲಿಗೆ ಈ ಪಾಠದಲ್ಲಿನ ನಿಯಮ ಗಳನ್ನು ಕಲಿಯಬೇಕು. ಆವರ್ತನೀಯ ಪ್ರವೃತ್ತಿಗಳಾದ ಪರಮಾಣು ಗಾತ್ರ, ವಿದ್ಯುತ್‌ ಋಣೀಯತೆ, ಧನೀಯತೆ, ಕ್ರಿಯಾಶೀಲತೆ ಗಳನ್ನು ತಿಳಿದುಕೊಳ್ಳಬೇಕು. ಅವು ಆವರ್ತ ಮತ್ತು ಗುಂಪುಗಳಲ್ಲಿ ಹೇಗೆ ಬದಲಾಗುತ್ತವೆ ಎಂಬುದನ್ನು ಕಲಿತುಕೊಂಡಿರಬೇಕು.

- ಅನ್ವಯ ಪ್ರಶ್ನೆಗಳು ಇರುತ್ತವೆಯೇ?
-ಭಾರತೀ, ಮುಧೋಳ
16 ಅಂಕದ ಅನ್ವಯ ಪ್ರಶ್ನೆಗಳಿರುತ್ತವೆ. ಹೆಚ್ಚಿನವು ಸರಳ ಅನ್ವಯಗಳಾಗಿರುತ್ತವೆ. 4 ಅಂಕಗಳಿಗೆ ಉನ್ನತ ಮಟ್ಟದ ಆಲೋಚನೆಯ ಪ್ರಶ್ನೆಗಳಿರುತ್ತವೆ.

– ಆಮ್ಲ-ಪ್ರತ್ಯಾಮ್ಲದಲ್ಲಿ ಯಾವ ಪ್ರಶ್ನೆಗಳನ್ನು ಕೇಳಬಹುದು?
-ಪಲ್ಲವಿ, ಕುಂದಾಪುರ
ಆಮ್ಲ, ಪ್ರತ್ಯಾಮ್ಲಗಳ ವರ್ತನೆ, ಲವಣ ತಯಾರಿಕೆ, ಉಪಯೋಗ, ಸೋಡಿಯಂ ಹೈಡ್ರಾಕ್ಸೆ„ಡ್‌ ತಯಾರು ಮಾಡುವುದನ್ನು ಕೇಳಬಹುದು. ಟಏ ಮೌಲ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕಲಿತುಕೊಳ್ಳಿ. ಜೀವಕ್ರಿಯೆಗಳು ಪಾಠದಲ್ಲಿ ಜೀರ್ಣಾಂಗವ್ಯೂಹ, ವಿಸರ್ಜನ ವ್ಯೂಹದ ಪ್ರಶ್ನೆಗಳನ್ನು ಕೇಳಬಹುದು.

- ರಸಾಯನಶಾಸ್ತ್ರ ವಿಷಯದಲ್ಲಿ ಯಾವ ಪ್ರಶ್ನೆಗಳು ಬರಬಹುದು?
-ಅಶ್ವಿ‌ಧಾ, ಕೋಟೇಶ್ವರ
ರಸಾಯನ ಶಾಸ್ತ್ರದಿಂದ 3 ಅಂಕದ 1 ಚಿತ್ರ ಬರುವ ಸಾಧ್ಯತೆ ಹೆಚ್ಚು. ಎಲ್ಲ ಚಿತ್ರಗಳು, ಭಾಗ ಗಳು ಮತ್ತು ಅವುಗಳ ಕಾರ್ಯ ತಿಳಿದುಕೊಳ್ಳಿ. ರಾಸಾಯನಿಕ ಕ್ರಿಯೆಗಳು, ರಾಸಾಯ ನಿಕ ಸಮೀಕರಣಗಳನ್ನು ಸರಿದೂಗಿಸುವುದು, ರಾಸಾಯನಿಕ ಕ್ರಿಯೆಗಳ ವಿಧ ಕಲಿತುಕೊಳ್ಳಿ. ಆಮ್ಲ – ಪ್ರತ್ಯಾಮ್ಲಗಳು ಪಾಠದಿಂದ ಟಏ ಮೌಲ್ಯ, ಲವಣಗಳ ತಯಾರಿಕೆ, ಉಪ ಯೋಗಗಳು ಇತ್ಯಾದಿ ಅಂಶಗಳು ಮುಖ್ಯ. ಆಮ್ಲ ಮತ್ತು ಪ್ರತ್ಯಾಮ್ಲಿಯ ಲಕ್ಷಣಗಳಿಗೆ ಕಾರಣವಾದ ಅಂಶಗಳು, 3 ವಿಧದ ಆಕ್ಸೆಡ್‌ಗಳನ್ನು ತಿಳಿದುಕೊಳ್ಳಿ.
ಲೋಹಗಳು-ಅಲೋಹಗಳು ಪಾಠದಲ್ಲಿನ ಕ್ರಿಯಾಶೀಲತೆಯ ಸರಣಿಯನ್ನು ಸರಿಯಾಗಿ ಅರ್ಥೈಸಿಕೊಂಡಲ್ಲಿ ಪಠ್ಯದ ಹೆಚ್ಚಿನ ಭಾಗ ಕಲಿತಂತೆಯೇ. ಇದರ ಬಗ್ಗೆ ಗಮನ ಕೊಡಿ. ಮಿಶ್ರ ಲೋಹಗಳು, ಉಪಯೋಗ ಕಲಿತುಕೊಳ್ಳಿ. ಗಾಳಿಯ ಘಟಕಗಳೊಂದಿಗೆ ಲೋಹದ ವರ್ತನೆ ತಿಳಿದುಕೊಳ್ಳಿ. ಹೈಡ್ರೊಕಾರ್ಬನ್‌ಗಳು ಪಾಠದಲ್ಲಿ ಕ್ರಿಯಾಗುಂಪುಗಳು, ಚುಕ್ಕಿರಚನೆ, ರಚನಾ ಸೂತ್ರಗಳನ್ನು ತಿಳಿದುಕೊಳ್ಳಿ.

– ರಿಫ್ಲೆಕ್ಸ್‌ ಆ್ಯಕ್ಷನ್‌ನಲ್ಲಿ ಮಿದುಳು ನೇರವಾಗಿ ಭಾಗವಹಿಸುತ್ತದೆಯೇ?
-ದೀಕ್ಷಿತಾ, ಮಂಗಳೂರು
ಇಲ್ಲ. ಸಂದೇಶಗಳು ಮಿದುಳಿಗೆ ತಲುಪುವ ಮೊದಲೇ ಮಿದುಳುಬಳ್ಳಿಗೆ ತಲುಪುತ್ತವೆ. ಆದ್ದರಿಂದ ಪ್ರತಿಕ್ರಿಯೆ ಉಂಟಾಗುತ್ತದೆ.

– Spore formation ಎಲ್ಲಿ , ಹೇಗೆ ನಡೆಯುತ್ತದೆ?
ರೈಝೋಪಸ್‌ಗಳಂತಹ ಫ‌ಂಗೈಗಳಲ್ಲಿ ನ್ಪೋರ್‌ ಫಾರ್ಮೇಶನ್‌ (ಬೀಜಾಣುಗಳು) ಉಂಟಾಗುತ್ತವೆ. ಅದು ದಪ್ಪನಾದ ಭಿತ್ತಿಯಿಂದ ಆವೃತವಾಗಿದ್ದು, ಅನುಕೂಲವಾದ ಸ್ಥಿತಿಯಲ್ಲಿ ಕೋಶ ವಿಭಜನೆ ಹೊಂದಿ ಹೊಸ ಜೀವಿಯಾಗಿ ಬೆಳೆಯುತ್ತದೆ.

– ಈ ಬಾರಿ ಬುಕ್‌ಲೆಟ್‌ನಲ್ಲಿಯೇ ಗ್ರಾಫ್ ಇರುತ್ತದೆಯೇ?
 -ಮೈನಾ, ನೀಲಾವರ
-ಹೌದು. ಈ ಬಾರಿ ಗಣಿತ ಪರೀಕ್ಷೆಗೆ ಉತ್ತರಿಸುವ ಬುಕ್‌ಲೆಟ್‌ನ ಪುಟಗಳ ಸಂಖ್ಯೆ ಹೆಚ್ಚು ಮಾಡಲಾಗಿದೆ. ಹಿಂದೆ 28 ಪುಟಗಳಿದ್ದವು, ಈ ಬಾರಿ 36 ಪುಟಗಳ ಬುಕ್‌ಲೆಟ್‌ ಇರಲಿದೆ. ಇದರಲ್ಲಿ ಕೊನೆಯ 2 ಹಾಳೆ ಗಳು ಗ್ರಾಫ್ಶೀಟ್‌ ಆಗಿರುತ್ತವೆ. ಬುಕ್‌ಲೆಟ್‌ನಲ್ಲೇ ಒಳ ಗೊಂಡಿರುವುದರಿಂದ ನೂಲಿನಲ್ಲಿ ಕಟ್ಟುವ ಅಗತ್ಯವಿಲ್ಲ.

– ರೇಖಾತ್ಮಕ ಸಮೀಕರಣ ಪಾಠದಲ್ಲಿ ಮುಖ್ಯ ವಾಗಿ ಯಾವ ಪ್ರಶ್ನೆಗಳನ್ನು ಕಲಿಯಬೇಕು? ನಿರ್ದೇಶಾಂಕ ರೇಖಾಗಣಿತದಲ್ಲಿ ಯಾವುದೆಲ್ಲ ಮುಖ್ಯ? ಸೂತ್ರಗಳು ಇರುತ್ತವೆಯೇ?
 -ಶಬರಿ, ಕೋಟೇಶ್ವರ
– ಒಂದು ಗ್ರಾಫ್ ಲೆಕ್ಕ ಅಂದರೆ, ನಕ್ಷೆ ವಿಧಾನದಲ್ಲಿ ಬಿಡಿಸಿ ಪ್ರಶ್ನೆ 4 ಅಂಕಗಳಿಗೆ ಬರುತ್ತದೆ. 2 ಅಂಕದ ವರ್ಜ್ಯ, ಆದೇಶ ವಿಧಾನ, ಸೂತ್ರ ಉಪ ಯೋಗಿಸಿ ಮಾಡುವ ಲೆಕ್ಕ ಸೇರಿದಂತೆ ರೇಖಾತ್ಮಕ ಸಮೀಕರಣಗಳು ಭಾಗ ದಿಂದ 6 ಅಂಕದ ಪ್ರಶ್ನೆಗಳು ಬರುತ್ತವೆ. ಜತೆಗೆ ಇನ್ನೊಂದು ಅಂಕದ ಪ್ರಶ್ನೆ
ಬರುವ ನಿರೀಕ್ಷೆ ಇದೆ. ನಿರ್ದೇಶಾಂಕ ರೇಖಾ ಗಣಿತದಲ್ಲಿ 2 ಮತ್ತು 3 ಅಂಕಗಳ ಪ್ರಶ್ನೆಗಳು ಖಂಡಿತ ಬರುತ್ತವೆ. 3 ಅಂಕಗಳ ತ್ರಿಭುಜದ ವಿಸ್ತೀರ್ಣ ಕಂಡು ಹಿಡಿಯುವುದಕ್ಕೆ ಸಂಬಂಧಿಸಿದ ಪ್ರಶ್ನೆ ಮತ್ತು 2 ಅಂಕಗಳ ಬಿಂದುಗಳ ನಡುವಿನ ದೂರ ಕಂಡು ಹಿಡಿಯುವ ಲೆಕ್ಕ ಇರುವುದು. ಒಟ್ಟು ಪ್ರಶ್ನೆಪತ್ರಿಕೆಯಲ್ಲಿ ಒಂದು ಅಂಕದ 2 ಸೂತ್ರಗಳು ಬರುವುದು ಖಂಡಿತ.

ಗಣಿತ ಪರೀಕ್ಷೆಗೆ ಸಿದ್ಧತಾ ಸೂತ್ರಗಳು
- ಗಣಿತದಲ್ಲಿ ಮಕ್ಕಳು ಸಾಮಾನ್ಯವಾಗಿ ಎದುರಿಸುವ ಸಮಸ್ಯೆಗಳು

– ಗಣಿತದ ಕಲಿಕೆಯೆಂದರೆ ಒಂದೊಂದೇ ಮೆಟ್ಟಿಲು ಏರಿದಂತೆ. ಹೀಗಾಗಿ ಪ್ರಾಥಮಿಕ ಶಾಲೆಯಿಂದಲೇ ಕೂಡಿಸುವ, ಕಳೆಯುವ, ಗುಣಿಸುವ, ಭಾಗಾಕಾರದಂಥ ಮೂಲ ಸೂತ್ರ ರಕ್ತಗತವಾಗಬೇಕು. ಇದರಿಂದ ಮುಂದೆ ದೊಡ್ಡ ತರಗತಿಗೆ ಹೋಗುವಾಗ ಅನುಕೂಲವಾಗುತ್ತದೆ.

- ಗಣಿತ ವಿಷಯದಲ್ಲಿ ವಿದ್ಯಾರ್ಥಿಗಳು ಪ್ರಮುಖವಾಗಿ ಗಮನ ಹರಿಸಬೇಕಾದ ಅಂಶಗಳು

-ಗಣಿತ ಕಲಿಕೆಗೆ ಹೆಚ್ಚು ಪರಿಶ್ರಮ ಅಗತ್ಯವಾಗಿ ಬೇಕು. ಹೆಚ್ಚು ಹೆಚ್ಚು ಲೆಕ್ಕಗಳನ್ನು ಬಿಡಿಸುತ್ತಾ ಕಲಿಯಬೇಕು. ಹೆಚ್ಚು ಲೆಕ್ಕಗಳನ್ನು ಬಿಡಿಸಿದಾಗ ಮಾತ್ರ ಸರಿಯಾಗಿ ಕಲಿಯಲು ಸಾಧ್ಯ. ಹಾಗೆಯೇ ತರಗತಿಗಳಿಗೆ ಗೈರಾಗಬಾರದು. ರಜೆ ಮಾಡಿದ ವಿದ್ಯಾರ್ಥಿ ಮರುದಿನ ಮತ್ತೂಂದು ವಿದ್ಯಾರ್ಥಿಯಿಂದ ನೋಟ್ಸ್‌ ಪಡೆದು, ಬರೆಯುತ್ತಾನೆ. ಆತ ತಪ್ಪು ಮಾಡಿದ್ದರೆ ಈತನದೂ ತಪ್ಪಾಗುತ್ತದೆ.

- ಗಣಿತ ಪರೀಕ್ಷೆಗೆ ಕೊನೆಯ 15 ದಿನಗಳ ತಯಾರಿ

-ಆರಂಭದ ದಿನದಿಂದಲೇ ಕಠಿನ ಹಂತದ ಲೆಕ್ಕಗಳನ್ನು ಅಭ್ಯಾಸ ಮಾಡಬೇಕು. ಒಂದು ವೇಳೆ ಆರಂಭದಲ್ಲಿ ಕಲಿಯದೆ ಇದ್ದರೆ ಕೊನೆಯ 10-15 ದಿನಗಳಲ್ಲಿ ಆ ಕಠಿನ ಲೆಕ್ಕಗಳನ್ನು ಅಭ್ಯಾಸ ಮಾಡದೆ ಈಗಾಗಲೇ ತಿಳಿದಿರುವುದರ ಪುನರ್‌ಮನನ ಮಾಡಿ. ಅರ್ಥವಾಗದ ಲೆಕ್ಕಗಳನ್ನು ಬಿಡಿಸಲು ಹೊರಟು ಗೊಂದಲ ಮಾಡಿಕೊಳ್ಳುವುದು ಬೇಡ.

ಓರ್ವ ವಿದ್ಯಾರ್ಥಿ ಕೇಳಿದ ಪ್ರಶ್ನೆ:
sec4θ – sec2θ = tan4θ + tan2θ ಎಂದು ಸಾಧಿಸಿ.
ec4θ – sec2θ
= sec2θ (sec2θ – 1)
= sec2θ × tan2θ
= (tan2θ + 1) tan2θ
= tan4θ + tan2θ

ಕನಿಷ್ಠ 50 ಅಂಕಗಳನ್ನು ಗಳಿಸಲು ವಿದ್ಯಾರ್ಥಿಗಳು ಇವುಗಳನ್ನು ಕಲಿತುಕೊಳ್ಳಿರಿ.

ಪ್ರಶ್ನೆಗಳು                                                                                                ಅಂಕ
ತ್ರಿಭುಜಗಳ ಪಾಠದಲ್ಲಿ ಒಂದು ಪ್ರಮೇಯ                                                        4

ವೃತ್ತಗಳ ಪಾಠದಲ್ಲಿ ಒಂದು ಪ್ರಮೇಯ                                                            3

ಸಮರೂಪ ತ್ರಿಭುಜದ ರಚನೆ ಅಥವಾ ಸ್ಪರ್ಶಕಗಳ ನಡುವೆ ನಿರ್ದಿಷ್ಟ ಕೋನ
ಏರ್ಪಡುವಂತೆ ವೃತ್ತಕ್ಕೆ ಎರಡು ಸ್ಪರ್ಶಕ ಗಳನ್ನು ರಚಿಸುವುದು.                           3 or 4

ಬಾಹ್ಯ ಬಿಂದುವಿನಿಂದ ವೃತ್ತಕ್ಕೆ ಸ್ಪರ್ಶಕಗಳನ್ನು ರಚಿಸುವುದು
ಅಥವಾ ರೇಖಾಖಂಡವನ್ನು ದತ್ತ ಅನುಪಾತದಲ್ಲಿ ವಿಭಾಗಿಸುವುದು.                        2

ಏಕಕಾಲಿಕ ಸಮೀಕರಣಗಳನ್ನು ನಕ್ಷೆಯ ವಿಧಾನದಲ್ಲಿ ಬಿಡಿಸುವುದು                       4

ಬಹು ಪದೋಕ್ತಿಗಳ ದೀರ್ಘ‌ ಭಾಗಾಕಾರ                                                          3

ಸರಾಸರಿ ಅಥವಾ ಮಧ್ಯಮ ಬೆಲೆ ಅಥವಾ ರೂಢಿಬೆಲೆ ಲೆಕ್ಕಾಚಾರ                      3 or 4

ಓಜಿವ್‌ ರಚನೆ                                                                                               3

ರೇಖಾತ್ಮಕ ಸಮೀಕರಣ ಬಿಡಿಸುವುದು                                                               2

ದೂರ ಅಥವಾ ತ್ರಿಕೋನದ ವಿಸ್ತೀರ್ಣ ಕಂಡುಹಿಡಿಯುವುದು                                    2

ಮಧ್ಯಬಿಂದುವಿನ ನಿರ್ದೇಶಾಂಕ ಕಂಡುಹಿಡಿಯುವುದು                                           2

ಬಹು ಪದೋಕ್ತಿಗಳ ಭಾಗಾಕಾರ ಅಥವಾ ಶೂನ್ಯತೆಗಳನ್ನು
ಕಂಡುಹಿಡಿಯುವುದು ಅಥವಾ ಶೂನ್ಯತೆಗಳ ಮೊತ್ತ ಮತ್ತು ಗುಣಲಬ್ಧ
ಕಂಡುಹಿಡಿಯುವುದು, ಬಹುಪದೋಕ್ತಿ ರಚಿಸುವುದು                                                  2

ಸಮಾಂತರ ಶ್ರೇಢಿಗಳು ಪಾಠದಲ್ಲಿ an ಮತ್ತು sn ಗೆ ಸಂಬಂಧಿಸಿದ ಸರಳ ಲೆಕ್ಕಗಳು    2

ಸೂತ್ರ ಬಳಸಿ ವರ್ಗಸಮೀಕರಣ ಬಿಡಿಸುವುದು                                                       2

ವರ್ಗಸಮೀಕರಣದ ಮೂಲಗಳ ಸ್ವಭಾವ ಕಂಡುಹಿಡಿಯುವುದು                                 2

ಸಂಖ್ಯೆಗಳನ್ನು ಅವಿಭಾಜ್ಯ ಅಪವರ್ತನ ಗಳ ಗುಣಲಬ್ಧವಾಗಿ ಬರೆಯುವುದು
ಅಥವಾ ಮ.ಸಾ.ಅ. ಮತ್ತು ಲ.ಸಾ.ಅ. ಕಂಡುಹಿಡಿಯುವುದು ಅಥವಾ
ಅಭಾಗ ಲಬ್ಧ ಸಂಖ್ಯೆ ಎಂದು ಸಾಧಿಸುವುದು                                                           2

ಸಂಭವನೀಯತೆ                                                                                             2

ಕೊಟ್ಟಿರುವ ಚಿತ್ರದಲ್ಲಿ ಬಣ್ಣ ಹಾಕಿದ ಭಾಗದ ವಿಸ್ತೀರ್ಣ ಲೆಕ್ಕಿಸುವುದು                             2

ಅಗತ್ಯ ಇರುವಲ್ಲಿ ಸೂತ್ರಗಳನ್ನು ಬರೆಯುವುದು ಅಥವಾ ಚಿತ್ರಗಳನ್ನು ಬಿಡಿಸುವುದು          3

ಒಟ್ಟು                                                                                                               50

ಟಾಪ್ ನ್ಯೂಸ್

1-russia

Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

1-INS

Indian Navy; ಪಾಕ್,ಚೀನಾದ ಮೂಲೆ ಮೂಲೆಗೂ ತಲುಪುವ ಕ್ಷಿಪಣಿ ಪರೀಕ್ಷೆ

1-JPC

JPC ಅವಧಿ ವಿಸ್ತರಣೆ: ವಕ್ಫ್ ಮಸೂದೆ ಮಂಡನೆ ಮುಂದಿನ ವರ್ಷಕ್ಕೆ?

sensex

Stock market; ಲಾಭದ ಆಸೆಗೆ 11 ಕೋಟಿ ರೂ. ಕಳಕೊಂಡ್ರು!

hk-patil

Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್‌

doctor 2

America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-russia

Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

1-INS

Indian Navy; ಪಾಕ್,ಚೀನಾದ ಮೂಲೆ ಮೂಲೆಗೂ ತಲುಪುವ ಕ್ಷಿಪಣಿ ಪರೀಕ್ಷೆ

1-JPC

JPC ಅವಧಿ ವಿಸ್ತರಣೆ: ವಕ್ಫ್ ಮಸೂದೆ ಮಂಡನೆ ಮುಂದಿನ ವರ್ಷಕ್ಕೆ?

sensex

Stock market; ಲಾಭದ ಆಸೆಗೆ 11 ಕೋಟಿ ರೂ. ಕಳಕೊಂಡ್ರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.