ನಿಂತಿತು ನೋಡಾ, ಬೆಂಗಳೂರು

ಓಡುವ ನಗರದ ಮೌನದ ಜೋಗುಳ

Team Udayavani, Mar 14, 2020, 6:04 AM IST

nintitu

ಮೊನ್ನೆ ಮೊನ್ನೆಯ ತನಕ ವಾಲಗದ ಸದ್ದಿನಲ್ಲಿ ಮೈಮರೆತಿದ್ದ, ಭರತನಾಟ್ಯದ ತಾಂ ಥೈ ದಿದ್ದಿತಾಂಗೆ ಸಾಕ್ಷಿಯಾಗಿದ್ದ, ಹೊಸದೊಂದು ನಾಟಕಕ್ಕೆ ವೇದಿಕೆ ಒದಗಿಸಿದ್ದ ಸ್ಥಳಗಳು, “ಹೇಳಲಾರೆ ಕಾರಣ’ ಎಂಬಂತೆ ಗಪ್‌ಚುಪ್‌ ಆಗಿಬಿಟ್ಟಿವೆ! ದಿನವೂ ಮೈಮೇಲೇ ಹೋಗುವಂತೆ ನುಗ್ಗಿ ಬರುತ್ತಿದ್ದ ವಾಹನಗಳ ಕರ್ಕಶ ಸದ್ದಿಗೆ, ಕಾಲರಾ ಮಾರಿಗೆ, ಕೂಗುಮಾರಿಯ ಹಾಡಿಗೂ ಬೆಚ್ಚದಿದ್ದ ಬೆಂಗಳೂರು, ಕೊರೋನಾ ಎಂಬ ಹೆಮ್ಮಾರಿಗೆ ಹೆದರಿ ನಡುಗತೊಡಗಿದೆ…

ವರ್ಷದ 365 ದಿನವೂ ಗಿಜಿಗಿಜಿ ಅನ್ನುವಂಥ ಊರು, ನಮ್ಮ ಬೆಂಗಳೂರು. ಈ ಊರಲ್ಲಿ 300ಕ್ಕೂ ಹೆಚ್ಚು ಕಲ್ಯಾಣಮಂಟಪಗಳಿವೆ. 200ಕ್ಕೂ ಹೆಚ್ಚು ಸಭಾಂಗಣಗಳಿವೆ. 50ಕ್ಕೂ ಮೀರಿದ ರಂಗಮಂದಿರಗಳಿವೆ. ಪ್ರತಿಯೊಂದು ಬಡಾವಣೆಯಲ್ಲೂ ಐದಕ್ಕೂ ಹೆಚ್ಚು ಬಯಲು ರಂಗಮಂದಿರಗಳಿವೆ. ಇವೆಲ್ಲಾ ವರ್ಷವಿಡೀ ಬ್ಯುಸಿಯಾಗಿರುತ್ತವೆ.

ಇಲ್ಲೇನಾದರೂ ಕಾರ್ಯಕ್ರಮ ಮಾಡಬೇಕು ಅಂದರೆ, ಮೂರು ಅಥವಾ ಆರು ತಿಂಗಳ ಮೊದಲೇ ಜಾಗ ಕಾಯ್ದಿರಿಸಬೇಕು! ಶನಿವಾರ ಭಾನುವಾರಗಳಲ್ಲಂತೂ ರಂಗಮಂದಿರ, ಸಭಾಂಗಣ, ಕಲ್ಯಾಣಮಂಟಪಗಳು ಸಿಗಬೇಕೆಂದರೆ ಪುಣ್ಯ ಮಾಡಿರಬೇಕು! ಹಾಗಿತ್ತು ಪರಿಸ್ಥಿತಿ… ಅಂಥ ಗಿಜಿಗಿಜಿ ಜಾಗಗಳೆಲ್ಲ ಈಗಿಂದೀಗಲೇ ಖಾಲಿ ಹೊಡೆಯತೊಡಗಿವೆ. ಮೊನ್ನೆ ಮೊನ್ನೆಯ ತನಕ ವಾಲಗದ ಸದ್ದಿನಲ್ಲಿ ಮೈಮರೆತಿದ್ದ,

ಭರತನಾಟ್ಯದ ತಾಂ ಥೈ ದಿದ್ದಿತಾಂಗೆ ಸಾಕ್ಷಿಯಾಗಿದ್ದ, ಹೊಸದೊಂದು ನಾಟಕಕ್ಕೆ ವೇದಿಕೆ ಒದಗಿಸಿದ್ದ ಸ್ಥಳಗಳು, “ಹೇಳಲಾರೆ ಕಾರಣ’ ಎಂಬಂತೆ ಗಪ್‌ಚುಪ್‌ ಆಗಿಬಿಟ್ಟಿವೆ! ದಿನವೂ ಮೈಮೇಲೇ ಹೋಗುವಂತೆ ನುಗ್ಗಿ ಬರುತ್ತಿದ್ದ ವಾಹನಗಳ ಕರ್ಕಶ ಸದ್ದಿಗೆ, ಕಾಲರಾ ಮಾರಿಗೆ, ಕೂಗುಮಾರಿಯ ಹಾಡಿಗೂ ಬೆಚ್ಚದಿದ್ದ ಬೆಂಗಳೂರು, ಕೊರೋನಾ ಎಂಬ ಹೆಮ್ಮಾರಿಗೆ ಹೆದರಿ ನಡುಗತೊಡಗಿದೆ.

ಸಭಾಂಗಣ ಖಾಲಿ ಇಲ್ಲ…: ಪುಸ್ತಕ ಬಿಡುಗಡೆ, ಸಿಡಿಯೊಂದರ ಲೋಕಾರ್ಪಣೆ, ಮಕ್ಕಳ ರಂಗಪ್ರವೇಶ, ನಾಟಕವೊಂದರ ಮೊದಲ ಪ್ರದರ್ಶನ- ಇಂಥ ಕಾರ್ಯಕ್ರಮಗಳೆಲ್ಲ ಬೆಂಗಳೂರಲ್ಲೇ ನಡೆಯಬೇಕು ಎಂಬುದು ಎಲ್ಲರ ಆಸೆ, ಕನಸು! ಬೆಂಗಳೂರಲ್ಲಿ ಪ್ರೋಗ್ರಾಂ ಮಾಡಿದ್ರೆ ಹೆಚ್ಚು ಜನರನ್ನು ತಲುಪಬಹುದು, ಪತ್ರಿಕೆಗಳಲ್ಲಿ ಸುದ್ದಿ ಹಾಕಿಸಬಹುದು, ಆ ಮೂಲಕವೂ ಪ್ರಚಾರ ಪಡೆಯಬಹುದು ಎಂಬುದೇ ಈ ಯೋಚನೆಯ ಹಿಂದಿದ್ದ ಸರಳ ಲೆಕ್ಕಾಚಾರ.

“ಪುಸ್ತಕ ಬರೆಯುವುದು, ಪ್ರಿಂಟ್‌ ಮಾಡಿಸುವುದು, ಮಕ್ಕಳಿಗೆ ಡ್ಯಾನ್ಸ್‌ ಕಲಿಸುವುದು, ನಾಟಕದ ನಿರ್ದೇಶನ ಮಾಡುವುದು…’ ಇವೆಲ್ಲಾ ಸುಲಭ. ಆದರೆ, ಕಾರ್ಯಕ್ರಮಕ್ಕೆ ಆಡಿಟೋರಿಯಂ ಹುಡುಕುವುದಿದೆಯಲ್ಲ, ಅದೇ ನಿಜವಾದ ಕಷ್ಟ ಎಂಬುದು ಎಲ್ಲರ ಮಾತಾಗಿತ್ತು. ಪ್ರತಿಯೊಂದು ಬಡಾವಣೆಯಲ್ಲೂ 20ರ ಸಂಖ್ಯೆಯಲ್ಲಿದ್ದ ಸಭಾಂಗಣಗಳು ವರ್ಷವಿಡೀ ಬ್ಯುಸಿಯಾಗಿರುತ್ತಿದ್ದವು. ಎಲ್ಲ ಸಭಾಂಗಣಗಳ ತಾಯಿಯಂತಿರುವ ರವೀಂದ್ರ ಕಲಾಕ್ಷೇತ್ರದಲ್ಲಂತೂ ಒಂದೇ ದಿನದಲ್ಲಿ ನಾಲ್ಕು ಕಾರ್ಯಕ್ರಮಗಳು ನಡೆದಿದ್ದೂ ಉಂಟು.

ಚಾಮರಾಜಪೇಟೆಯಲ್ಲಿರುವ ಸಾಹಿತ್ಯ ಪರಿಷತ್‌ ಸಭಾಂಗಣ, ಗಾಂಧಿಬಜಾರ್‌ನ ವಾಡಿಯಾ ಹಾಲ್‌, ಕೆ.ಆರ್‌.ರಸ್ತೆಯ ಗಾಯನ ಸಮಾಜ, ಮಲ್ಲೇಶ್ವರದ ಸೇವಾಸದನ, ಅನನ್ಯ ಸಭಾಂಗಣ, ಹನುಮಂತನಗರದ ಕಲಾಸೌಧ, ಜೆ.ಪಿ.ನಗರದ ರಂಗಶಂಕರ, ಬಸವೇಶ್ವರ ನಗರದ ಕೆಎಲ್‌ಇ ಕಲಾಪೂರ್ಣಿಮ, ವೈಯಾಲಿಕಾವಲ್‌ನ ಚೌಡಯ್ಯ ಹಾಲ್‌, ಜೆ.ಸಿ.ರಸ್ತೆಯ ಎಡಿಎ ರಂಗಮಂದಿರ, ಕೋರಮಂಗಲದ ಅಟ್ಟ ಗಲಾಟ, ಕೆಂಗೇರಿಯ ಬ್ರಾಹ್ಮಣ ಸಭಾ ಮಂದಿರ… ಇವೆಲ್ಲಾ “ಹೌಸ್‌ಫ‌ುಲ್‌’ ಬೋರ್ಡ್‌ನ ಜೊತೆಗೇ ಉಸಿರಾಡುತ್ತಿದ್ದ ತಾಣಗಳು.

ಟೌನ್‌ಹಾಲ್‌ ಮರೆಯುವುದುಂಟೆ?: ಸದಾ ಗಿಜಿಗಿಜಿ ಅನ್ನುತ್ತಲೇ ಇರುವ ತಾಣ ಅಂದುಕೊಂಡಾಗ ನೆನಪಾಗುವ ಇನ್ನೊಂದು ತಾಣ ಟೌನ್‌ಹಾಲ್‌. ಕಾರ್ಮಿಕರು, ನೌಕರರು, ಶೋಷಿತರು, ಶೋಷಕರು, ಪೋಷಕರು, ಬಾಲಕರು, ಹೋರಾಟಗಾರರು, ಹಾರಾಟಗಾರರು, ಮಾರಾಟಗಾರರು, ಪ್ರಗತಿಪರರು, ಅವರ ವಿರೋಧಿಗಳು, ರಾಜಕೀಯ ನಾಯಕರು, ಅವರ ಹಿಂಬಾಲಕರು, ಎಡ, ಬಲ, ಮಧ್ಯ, ನಡುಪಂಥದವರು- ಹೀಗೆ,

ಛಪ್ಪನ್ನೈವತ್ತಾರು ಬಗೆಯ ಜನರೆಲ್ಲ ತಮಗೆ ಅನ್ಯಾಯವೋ, ಅಸಮಾಧಾನವೋ ಆದಾಗ ಓಡೋಡಿ ಬಂದು ಮನದ ರೋಷವನ್ನೆಲ್ಲ ಹೇಳಿಕೊಳ್ಳುತ್ತಿದ್ದುದೇ ಟೌನ್‌ಹಾಲ್‌ನ ಕಲ್ಲುಗಳ ಮೇಲೆ ಕೂತು; ಟೌನ್‌ಹಾಲ್‌ನ ಮುಂದೆ ನಿಂತು! ಮೊನ್ನೆಮೊನ್ನೆಯವರೆಗೂ ವಾರಕ್ಕೆ ಎರಡಾದರೂ ಪ್ರತಿಭಟನೆಗಳಿಗೆ, ಧಿಕ್ಕಾರದ ಮಾತುಗಳಿಗೆ ಟೌನ್‌ಹಾಲ್‌ನ ಅಂಗಳ ಸಾಕ್ಷಿಯಾಗುತ್ತಿತ್ತು. “ಪ್ರತಿಭಟನೆಗಿದು ಜಾಗವಲ್ಲ’ ಎಂಬ ಹುಕುಂ ಹೊರಬಿದ್ದ ಮೇಲೆ- ಬಸ್ಸು, ಲಾರಿ, ಬೈಕು, ಕಾರುಗಳ ಹಾರನ್‌ಗಳು ಟೌನ್‌ಹಾಲ್‌ನ ಗೋಡೆಗೆ ಅಪ್ಪಳಿಸುತ್ತಿದ್ದವು.

ಈಗ ಕೊರೊನಾ ಕಾರಣಕ್ಕೆ ಒಂದಿಡೀ ವಾರ ಇದಕ್ಕೆಲ್ಲಾ ಬ್ರೇಕ್‌ ಬಿದ್ದಿದೆ! ಇಷ್ಟು ದಿನ ಬೆಳಗ್ಗೆ, ಸಂಜೆ, ಮಧ್ಯಾಹ್ನ – ನಗರದ ಉದ್ದಗಲಕ್ಕೂ ಮಾತಿನ ಬಾಂಬು ಮತ್ತು ಒರಿಜಿನಲ್‌ ಆಟಂ ಬಾಂಬುಗಳು ಗಂಟೆಗೊಮ್ಮೆ ಸಿಡಿದಾಗಲೂ ಬೆಚ್ಚದಿದ್ದ ಬೆಂಗಳೂರು ಒಂದಿಡೀ ವಾರ ಮಾತಿಲ್ಲದೆ, ಹಾಡಿಲ್ಲದೆ, ರಂಗ ಸಂಗೀತದ ಜೋಗುಳವಿಲ್ಲದೆ, ಕೊಳಲಿನ ನಾದ ಕೇಳದೆ ಇರಬೇಕಲ್ಲ ಎಂಬ ಯೋಚನೆಗೇ ಬೆಚ್ಚುತ್ತಿದೆ…

ಟಾಪ್ ನ್ಯೂಸ್

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

4-bng-crime

Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

5-ptr

Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು

simha roopini kannada movie

Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್‌ ರಾಜ್‌ ನಿರ್ದೇಶನ

4-bng-crime

Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.