ದ್ವಿತೀಯ ದಿನವೂ ವಿದ್ಯಾರ್ಥಿಗಳ ಭರಪೂರ ಸ್ಪಂದನೆ

ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಉದಯವಾಣಿ ಫೋನ್‌ಇನ್‌

Team Udayavani, Mar 14, 2020, 6:13 AM IST

Phone-In-Puc

ಉಡುಪಿ: ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಉದಯವಾಣಿ ದಿನಪತ್ರಿಕೆಯು ಗುರುವಾರ ಎಸೆಸೆಲ್ಸಿ ವಿದ್ಯಾರ್ಥಿಗಳಿಗಾಗಿ ಆರಂಭಿಸಿದ ಫೋನ್‌ಇನ್‌ ಕಾರ್ಯಕ್ರಮ ಶುಕ್ರವಾರವೂ ಮಣಿಪಾಲದ ಕಚೇರಿಯಲ್ಲಿ ಮುಂದುವರಿಯಿತು. ಇಂಗ್ಲಿಷ್‌, ಹಿಂದಿ, ಸಂಸ್ಕೃತ, ಸಮಾಜಶಾಸ್ತ್ರ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಿದರು.

ಎರಡನೇ ದಿನವೂ ಕರೆಗಳ ಮಹಾಪೂರವೇ ಹರಿದುಬಂತು. ಬೈಲೂರು, ಜಮಖಂಡಿ, ಮಂಗಳೂರು, ಮುದರಂಗಡಿ, ಬಂಟ್ವಾಳ, ಹಿರಿಯಡಕ್ಕ, ಕಾರವಾರ, ಸುರತ್ಕಲ್‌, ಕುಂದಾಪುರ, ಬೈಕಂಪಾಡಿ, ಮಣ್ಣಗುಡ್ಡೆ ಸಹಿತ ಹಲವಾರು ಹಲವಾರು ಕಡೆಗಳಿಂದ ಕರೆಗಳು ಬಂದವು. ವಿದ್ಯಾರ್ಥಿಗಳಿಂದ ತೂರಿಬಂದ ಪ್ರಶ್ನೆಗೆ ಸಂಪನ್ಮೂಲ ವ್ಯಕ್ತಿಗಳು ಅಷ್ಟೇ ಸರಳವಾಗಿ ಉತ್ತರಿಸಿದರು.

ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜು ಮುಂಡ್ಕೂರಿನ ಶಿಕ್ಷಕ ಕೆ. ವಿವೇಕಾನಂದ ಹೆಗ್ಡೆ ಹಾಗೂ ಕಾರ್ಕಳದ ಎಂ.ವಿ. ಶಾಸ್ತ್ರಿ ಹೈಸ್ಕೂಲಿನ ಶಿಕ್ಷಕ ಪ್ರಕಾಶ್‌ ರಾವ್‌ ಅವರು ಇಂಗ್ಲಿಷ್‌, ಕಲ್ಯಾಣಪುರದ ಡಾ| ಟಿಎಂಎ ಪೈ ಹೈಸ್ಕೂಲಿನ ಶಿಕ್ಷಕ ವೆಂಕಟೇಶ್‌ ಎಚ್‌.ಎನ್‌. ಅವರು ಹಿಂದಿ ಹಾಗೂ ಸಂಸ್ಕೃತ ವಿಷಯ, ಸಮಾಜ ವಿಜ್ಞಾನ ವಿಷಯದಲ್ಲಿ ಬಾಲಕಿಯರ ಸರಕಾರಿ ಪ.ಪೂ. ಕಾಲೇಜಿನ ಶೇಖರ ಭೋವಿ, ಕನ್ನಡ ವಿಷಯದಲ್ಲಿ ಕಾವಡಿ ಸರಕಾರಿ ಪ.ಪೂ. ಕಾಲೇಜಿನ ಕಿರಣ್‌ ಹೆಗ್ಡೆ ಮಾಹಿತಿ ನೀಡಿದರು.

1 ಗಂಟೆಯಿಂದ 2 ಗಂಟೆಗಳಿಗೆ ವಿಸ್ತಾರ
ವಿದ್ಯಾರ್ಥಿಗಳ ದೂರವಾಣಿ ಕರೆಗಳು ಕಚೇರಿಗೆ ನಿರಂತರ ಬರತೊಡಗಿದವು. ಹಲವಾರು ರೀತಿಯ ಪ್ರಶ್ನೆಗಳಿಗೆ ಸಂಪನ್ಮೂಲ ವ್ಯಕ್ತಿಗಳು ವಿಸ್ತಾರವಾಗಿ ಉತ್ತರಿಸಿದರು. ಸಂಜೆ 6ಗಂಟೆಗೆ ಆರಂಭಗೊಂಡ 1 ಗಂಟೆಯ ಪೋನ್‌ ಇನ್‌ ಕಾರ್ಯಕ್ರಮಕ್ಕೆ ಬಂದ ಅಭೂತಪೂರ್ವ ಪ್ರತಿಕ್ರಿಯೆಯಿಂದಾಗಿ ಮತ್ತೂ 1 ಗಂಟೆ ವಿಸ್ತರಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳು ಕೂಡ ವಿದ್ಯಾರ್ಥಿಗಳ ಸ್ಪಂದನೆ ಕಂಡು ಖುಷಿಪಟ್ಟರು.

ಪರೀಕ್ಷೆ ತಯಾರಿ ಹೇಗೆ?
ವಿದ್ಯಾರ್ಥಿಗಳು ಎಲ್ಲ ವಿಷಯಗಳನ್ನು ಪರೀಕ್ಷೆ ಪೂರ್ವದಲ್ಲಿ ಅಭ್ಯಾಸ ಮಾಡಿ ಕೊಂಡು ಸಮಗ್ರ ವಿಷಯದ ಕೀ ನೋಟ್‌ ತಯಾರಿಸಿಕೊಳ್ಳಬೇಕು. ಪರೀಕ್ಷೆ ಹಿಂದಿನ ದಿನ ಕೀ ನೋಟ್‌ ಓದಿದ ತತ್‌ಕ್ಷಣ ಎಲ್ಲ ವಿಷಯಗಳು ನೆನಪಿಗೆ ಬರವಂತೆ ನೋಡಿಕೊಳ್ಳಬೇಕು.

ಪರೀಕ್ಷೆ ಕೊಠಡಿ ಹೋಗುವ ಮುನ್ನ ಯಾವುದೇ ಚರ್ಚೆ ಹಾಗೂ ಗೊಂದಲಕ್ಕೆ ತುತ್ತಾಗಬಾರದು. ಪೂರ್ವದಲ್ಲಿ ತಯಾರಿಸಲಾದ ಕೀ ನೋಟ್‌ ಸಹಾಯದಿಂದ ಮತ್ತೂಮ್ಮೆ ವಿಷಯವನ್ನು ಅವಲೋಕನ ಮಾಡಬೇಕು. ಗೆಳೆಯರೊಂದಿಗೆ ಪ್ರಶ್ನೆಗಳ ಚರ್ಚಿಸಿದರೆ ಒತ್ತಡಕ್ಕೆ ತುತ್ತಾಗುವ ಸಾಧ್ಯತೆ ಇದೆ.

ತಜ್ಞರಿಂದ ವಿದ್ಯಾರ್ಥಿಗಳಿಗೆ ಸಲಹೆ
 ಆಂಗ್ಲ ವಿಷಯ
ಆಂಗ್ಲ ವಿಷಯದಲ್ಲಿ ಮೊದಲ ಬಾರಿಗೆ ಪತ್ರ ಬರೆವಣಿ ಗೆಗೆ 5 ಅಂಕ ನೀಡಲಾಗಿದೆ. ಆ ಬಗೆಗಿನ ಹಂತಗಳನ್ನು ಕಲಿಯಬೇಕು. ಒಟ್ಟು ಸಾರಾಂಶದಲ್ಲೂ 2 ಪಾಯಿಂಟ್‌ಗಳಿರಬೇಕು. 3 ಪದ್ಯಗಳು 4 ಪಠ್ಯಗಳಿಂದ 7 ಅಂಕ ಸುಲಭದಲ್ಲಿ ಗಳಿಸಿಕೊಳ್ಳಬಹುದು. ಗ್ರ್ಯಾಂಡ್‌ ಮಾ ಕ್ಲೈಂಬ್ಸ್ ಎ ಟ್ರೀ, ಜಾಜ್‌ ಪೊಯಮ್‌, ದ ಸಾಂಗ್‌ ಆಫ್ ಇಂಡಿಯಾ, ಐ ಆ್ಯಮ್‌ ದ ಲ್ಯಾಂಡ್‌ ಇವಿಷ್ಟು ವಿಷಯದಲ್ಲಿ 4 ಅಂಕ ಹಾಗೂ
3 ಅಂಕಗಳ ಪ್ರಶ್ನೆಗಳು ಸಿಗಲಿವೆ.

 ಹಿಂದಿ ಭಾಷೆ
ರಜಾ ಪತ್ರಕ್ಕೆ 5 ಅಂಕಗಳಿರುತ್ತವೆ. 4 ಅಂಕದ ಕಂಠಪಾಠ ಪದ್ಯಕ್ಕೆ ಹೆಚ್ಚು ಒತ್ತು ನೀಡಬೇಕು. 3 ಅಂಕದ ಸಮ್ಮರಿ ಪದ್ಯವನ್ನು ತಿಳಿದುಕೊಳ್ಳಬೇಕು. 3 ಅಂಕದ ಭಾವಾರ್ಥಕ್ಕೆ ಹೆಚ್ಚು ಮಹತ್ವ ನೀಡಬೇಕು. 15 ಅಂಕಗಳಿಗೆ ಆಗುವಷ್ಟು ಗದ್ಯಪಾಠದಿಂದ ಪ್ರಶ್ನೆಗಳನ್ನು ಕೇಳುತ್ತಾರೆ ಇದಕ್ಕೆ ತಯಾರಿ ನಡೆಸಬೇಕು. ಕರ್ನಾಟಕ ಸಂಪದ, ಗಿಲ್ಲು, ಇಂಟರ್‌ನೆಟ್‌ಕ್ರಾಂತಿ, ಇಮಾನ್‌ದಾರ್‌ ಕೀ ಸಮ್ಮಿಲನ್‌ನಿಂದ ಹೆಚ್ಚು ಓದಿದರೆ ಒಳ್ಳೆಯದು. ಇದರಿಂದ 3-4 ಅಂಕದ ಪ್ರಶ್ನೆ ಅಧಿಕ ಬರುವ ಸಾಧ್ಯತೆಗಳಿವೆ.

 ಸಮಾಜ ವಿಜ್ಞಾನ
ಸಮಾಜ ವಿಷಯದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಗೊಂದಲವಿದ್ದ ವಿವಿಧ ಕದನ, ಒಪ್ಪಂದ, ನಕ್ಷೆ ಗುರುತಿಸು ವುದು, ಇತಿಹಾಸ, ರಾಜ್ಯ ಶಾಸ್ತ್ರ, ಭೂಗೋಳ ಶಾಸ್ತ್ರ ಸೇರಿ ದಂತೆ ಅನೇಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರು.

 ಕನ್ನಡ
ವ್ಯಾಕರಣ, ಸಂದರ್ಭ ಸಹಿತ ವಿವರಿಸಿ, ಗಾದೆ ಮಾತು, ಪದ್ಯ, ಪ್ರಬಂಧಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡರು. ಕೊನೆಯ ಅವಧಿ ತಯಾರಿ ಕುರಿತು ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಂಡರು.

ಟಾಪ್ ನ್ಯೂಸ್

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

4-bharamasagara

Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್‌ ಆದ ಯುವಕನ ಹತ್ಯೆ

ಸಿಎಸ್‌ ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

Ranchi

Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

1

Udupi: ಪೊಲೀಸ್‌ ಅಧಿಕಾರಿಯೆಂದು ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ

Udupi: ನ. 29 ರಿಂದ ಡಿ. 1 ಎಂಜಿಎಂ ಕಾಲೇಜಿಗೆ ಅಮೃತ ಮಹೋತ್ಸವ ಸಂಭ್ರಮ

Udupi: ನ. 29 ರಿಂದ ಡಿ. 1 ಎಂಜಿಎಂ ಕಾಲೇಜಿಗೆ ಅಮೃತ ಮಹೋತ್ಸವ ಸಂಭ್ರಮ

Udupi: ಗೀತಾರ್ಥ ಚಿಂತನೆ-107: ಮರಣವೂ- ನಾಟಕದ ಅಲಂಕಾರವೂ…

Udupi: ಗೀತಾರ್ಥ ಚಿಂತನೆ-107: ಮರಣವೂ- ನಾಟಕದ ಅಲಂಕಾರವೂ…

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

Arrested: ಬಿಹಾರದ ಬೆಡ್‌ಶೀಟ್‌ ಗ್ಯಾಂಗ್‌ನ 8 ಮಂದಿ ಸೆರೆ

Arrested: ಬಿಹಾರದ ಬೆಡ್‌ಶೀಟ್‌ ಗ್ಯಾಂಗ್‌ನ 8 ಮಂದಿ ಸೆರೆ

Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್‌; ಆರೋಪಿ ಸೆರೆಗೆ 3 ತಂಡ ರಚನೆ

Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್‌; ಆರೋಪಿ ಸೆರೆಗೆ 3 ತಂಡ ರಚನೆ

Bomb Threat: ಹೋಟೆಲ್‌, ಶಾಲೆ ಆಯ್ತು, ಈಗ ಬ್ಯಾಂಕ್‌ಗೆ ಬಾಂಬ್‌ ಬೆದರಿಕೆ ಇ-ಮೇಲ್‌ ಸಂದೇಶ

Bomb Threat: ಹೋಟೆಲ್‌, ಶಾಲೆ ಆಯ್ತು, ಈಗ ಬ್ಯಾಂಕ್‌ಗೆ ಬಾಂಬ್‌ ಬೆದರಿಕೆ ಇ-ಮೇಲ್‌ ಸಂದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.