ಇಂದಿರಾ ಕ್ಯಾಂಟೀನ್‌ಗಳಲ್ಲಿ ಗ್ರಾಹಕರ ಸಂಖ್ಯೆ ಶೇ.50 ಇಳಿಕೆ
Team Udayavani, Mar 14, 2020, 11:50 AM IST
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ಕೊರೊನಾ ವೈರಸ್ ಇಂದಿರಾ ಕ್ಯಾಂಟೀನ್ ಮೇಲೂ ಪ್ರಭಾವ ಬೀರಿದ್ದು, ಮುರ್ನಾಲ್ಕು ದಿನಗಳಿಂದ ಕ್ಯಾಂಟೀನ್ ಗಳಿಗೆ ಬರುವವರ ಸಂಖ್ಯೆ ಶೇ. 50ರಷ್ಟು ಕಡಿಮೆಯಾಗಿದೆ. ಕೊರೊನಾ ವೈರಸ್ ಭೀತಿಯಲ್ಲಿ ಜನ ಹೊರಗಿನ ತಿಂಡಿ, ತಿನಿಸು ಹಾಗೂ ಊಟ ಸೇವಿಸುವುದನ್ನು ಕಡಿಮೆ ಮಾಡಿದ್ದಾರೆ.
ಇಂದಿರಾ ಕ್ಯಾಂಟೀನ್‌ಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ, ನ್ಯೂ ಇಂಗ್ಲಿಷ್ ಸ್ಕೂಲ್ ಸಮೀಪದ ಅಗ್ನಿಶಾಮಕ ದಳ ಕಚೇರಿ ಬಳಿ, ಸೋನಿಯಾ ಗಾಂಧಿ ನಗರ, ಹಳೇಹುಬ್ಬಳ್ಳಿಯ ಎಸ್.ಎಂ. ಕೃಷ್ಣ ನಗರ, ಬೆಂಗೇರಿಯ ವಾರದ ಸಂತೆ ಬಳಿ, ಉಣಕಲ್ಲ, ಹೊಸ ಬಸ್ ನಿಲ್ದಾಣ ಬಳಿ ಹಾಗೂ ಧಾರವಾಡದ ಮಿನಿ ವಿಧಾನ ಸೌಧ, ಹೊಸ ಬಸ್ ನಿಲ್ದಾಣ ಬಳಿ ತೆರೆಯಲಾಗಿದೆ. ಇದುವರೆಗೆ ಈ ಕ್ಯಾಂಟೀನ್‌ಗಳಲ್ಲಿ ದಿನಕ್ಕೆ ಕನಿಷ್ಠ 500 ಪ್ಲೇಟ್‌ನಷ್ಟು ತಿಂಡಿ, ತಿನಿಸು ಹಾಗೂ ಊಟಗಳು ಮಾರಾಟವಾಗುತ್ತಿದ್ದವು.
ಆದರೆ ಕೊರೊನಾ ವೈರಸ್ ರಾಜ್ಯದಲ್ಲೂ ಕಾಣಿಸಿಕೊಂಡಿದೆ ಎಂಬ ಮಾತುಗಳು ಕೇಳಿಬರುತ್ತಿದ್ದಂತೆ ಇಂದಿರಾ ಕ್ಯಾಂಟೀನ್ ಗೆ ಬರುವವರ ಸಂಖ್ಯೆ ಕ್ಷೀಣಿಸುತ್ತ ಸಾಗಿದೆ. ಈಗ ಅದು 250-300ಕ್ಕೆ ಇಳಿದಿದೆ ಎಂದು ತಿಳಿದುಬಂದಿದೆ.
ಕಿಮ್ಸ್ ಆಸ್ಪತ್ರೆ, ಧಾರವಾಡದ ಮಿನಿ ವಿಧಾನ ಸೌಧ ಮತ್ತು ಬಸ್ ನಿಲ್ದಾಣದ ಕ್ಯಾಂಟೀನ್‌ಗಳಲ್ಲಿ ಪ್ರತಿದಿನ ಹಮಾಲರು, ಕಾರ್ಮಿಕರು, ನೌಕರರು ಸೇರಿದಂತೆ ಇನ್ನಿತರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಿಂಡಿ ಹಾಗೂ ಊಟ ತೆಗೆದುಕೊಳ್ಳುತ್ತಿದ್ದರು. ಈಗ ಬೆಳಗ್ಗೆ ಇಡ್ಲಿ ಸೇರಿದಂತೆ ಯಾವುದೇ ತಿಂಡಿಗಳನ್ನು ತೆಗೆದುಕೊಳ್ಳಲು ಬರುತ್ತಿಲ್ಲ. ಅಲ್ಲದೆ ಮಧ್ಯಾಹ್ನದ ಊಟವನ್ನು ತೆಗೆದುಕೊಂಡು ಹೋಗುತ್ತಿಲ್ಲ. ಒಂದಿಷ್ಟು ವಿದ್ಯಾರ್ಥಿಗಳು ಮಾತ್ರ ಬರುತ್ತಿದ್ದಾರೆ. ಹೀಗಾಗಿ ತಿಂಡಿ ಹಾಗೂ ಊಟ ಉಳಿಯುತ್ತಿದೆ. ಅಲ್ಲದೆ ಸರಕಾರ ಶಾಲೆ-ಕಾಲೇಜುಗಳಿಗೆ ಒಂದು ವಾರ ರಜೆ ಘೋಷಿಸಿದೆ. ಇಂತಹ ಸಂದರ್ಭದಲ್ಲಿ ನಾವು ಕ್ಯಾಂಟೀನ್ ತೆರೆಯಬೇಕೋ ಬೇಡವೋ ಎಂಬುದು ಕ್ಯಾಂಟೀನ್ ಸಿಬ್ಬಂದಿ ಅಳಲು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
ಭುಗಿಲೆದ್ದ ಮೀಸಲು ರೊಚ್ಚು; ಸದನದ ಒಳ-ಹೊರಗೆ ಪ್ರತಿಭಟನೆ; ಉತ್ತರ ಕರ್ನಾಟಕದಲ್ಲಿ ಆಕ್ರೋಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.