ತಮಾಷೆ ಮಾಡಿದ್ದ ಬಾಸ್ಕೆಟ್ ಬಾಲ್ ತಾರೆಗೆ ಕೊರೊನಾ: ಆಟೋಗ್ರಾಫ್ ಪಡೆದಿದ್ದ ಬಾಲಕಿಗೂ ಸೋಂಕು
Team Udayavani, Mar 14, 2020, 3:03 PM IST
ಪ್ಯಾರಿಸ್: ಕೊರೊನಾ ವೈರಸ್ ಅನ್ನು ತಮಾಷೆ ಮಾಡಿದ್ದ ಫ್ರಾನ್ಸ್ನ ಖ್ಯಾತ ಬಾಸ್ಕೆಟ್ಬಾಲ್ ಆಟಗಾರ ರೂಡಿ ಗಾಬರ್ಟ್ ಸ್ವತಃ, ಸೋಂಕಿಗೊಳಗಾಗಿರುವ ವಿಚಿತ್ರ ಪ್ರಸಂಗ ನಡೆದಿದೆ. ಅಮೆರಿಕದ ಎನ್ ಬಿಎನಲ್ಲಿ ಉಟಾಹ್ಜಾಜ್ ತಂಡದ ಪರ ಆಡುತ್ತಿರುವ ಅವರು, ಮೊನ್ನೆ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡುವಾಗ ಮೈಕ್, ಧ್ವನಿಮುದ್ರಣ ಉಪಕರಣಗಳನ್ನೆಲ್ಲ ಒಂದೊಂದಾಗಿ ಮುಟ್ಟಿ ನಂಗೇನು ಆಗಲ್ಲ ಎಂದಿದ್ದರು.
ಬುಧವಾರ ರಾತ್ರಿಯಷ್ಟೊತ್ತಿಗೆ ಅವರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ! ಅದರ ಪರಿಣಾಮ ಉಟಾಹ್ ಮತ್ತು ಒಕ್ಲಹಾಮ ಸಿಟಿ ನಡುವಿನ ಪಂದ್ಯ ರದ್ದಾಗಿದೆ.
ಇಷ್ಟೇ ಅಲ್ಲದೆ ಕಳೆದ ವಾರ ರೂಡಿ ಗೋಬರ್ಟ್ ಬಳಿಯಲ್ಲಿ ಆಟೋಗ್ರಾಫ್ ಪಡೆದಿದ್ದ ಮಗುವಿಗೆ ಕೂಡಾ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ.
ಅಮೆರಿಕದ ಅತಿ ಪ್ರಸಿದ್ಧ ಕೂಟ ಎನ್ಬಿಎ ತಾತ್ಕಾಲಿಕವಾಗಿ ರದ್ದಾಗಿದೆ. ಸದ್ಯ ಗಾಬರ್ಟ್ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಡೊನೊವಾನ್ ಮಿಚೆಲ್ ಎಂಬ ಇನ್ನೊಬ್ಬ ಆಟಗಾರನಿಗೆ ಸೋಂಕು ತಗುಲಿದೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.