ಗಮನ ಸೆಳೆಯುತ್ತಿದೆ ಪ್ಲಾಸ್ಟಿಕ್‌ ಸೇತುವೆ


Team Udayavani, Mar 14, 2020, 3:07 PM IST

ಗಮನ ಸೆಳೆಯುತ್ತಿದೆ ಪ್ಲಾಸ್ಟಿಕ್‌ ಸೇತುವೆ

ಗಂಗಾವತಿ: ಇತಿಹಾಸ ಪ್ರಸಿದ್ಧ ತಾಲೂಕಿನ ಆನೆಗೊಂದಿಯ ನವವೃಂದಾವನದಲ್ಲಿರುವ 9 ಯತಿಗಳ ವೃಂದಾವನ ದರ್ಶನ ಮಾಡುವುದು ಇನ್ಮುಂದೆ ಸರಳವಾಗುವುದು. ನವವೃಂದಾವನ ಗಡ್ಡಿಗೆ ಹೋಗಲು ವ್ಯಾಸರಾಯ(ರಾಜ) ಮಠದ ವತಿಯಿಂದ ತಾತ್ಕಲಿಕವಾಗಿ 200 ಮೀಟರ್‌ ಉದ್ದದ ಪ್ಲಾಸ್ಟಿಕ್‌ ಸೇತುವೆ ನಿರ್ಮಿಸಿದ್ದು ಗಮನ ಸೆಳೆಯುತ್ತಿದ್ದೆ. ಹೊಸಪೇಟೆ ತಾಲೂಕಿನ ವೆಂಕಟಾಪೂರ ಸೀಮೆಯ ದಂಡೆ ಮತ್ತು ನವವೃಂದಾವನ ಗಡ್ಡಿ ಮಧ್ಯೆ ತೇಲುವ ತಾತ್ಕಲಿಕ ಪ್ಲಾಸ್ಟಿಕ್‌ ಸೇತುವೆ ನಿರ್ಮಿಸಲಾಗಿದೆ.

ಗುರುವಾರದಿಂದ ಆರಂಭವಾಗಿರುವ ವ್ಯಾಸರಾಯ(ರಾಜ)ರ ಆರಾಧನಾ ಕಾರ್ಯಕ್ರಮದಲ್ಲಿ ವ್ಯಾಸರಾಯರ ಮಠದ ಪೂಜ್ಯರು ಪಾಲ್ಗೊಂಡು ಪೂಜೆ ಧಾರ್ಮಿಕ ಕಾರ್ಯಕ್ರಮ ನಡೆಸಲು ಅನಕೂಲವಾಗುವಂತೆ ಮಠದ ವತಿಯಿಂದ ತೇಲುವ ತಾತ್ಕಲಿಕ ಸೇತುವೆಯನ್ನು ಮಹಾರಾಷ್ಟ್ರದ ಪುಣೆಯ ಖಾಸಗಿ ಕಂಪನಿಯವರು ನಿರ್ಮಿಸಿದ್ದಾರೆ. ಸಾಮಾನ್ಯವಾಗಿ ಪ್ಲಾಸ್ಟಿಕ್‌ ನೀರಿನಲ್ಲಿ ತೇಲುತ್ತದೆ. ನವವೃಂದಾವನ ಗಡ್ಡಿ ಮತ್ತು ವೆಂಕಟಾಪೂರ ಸೀಮೆಯ ದಂಡೆಯಿಂದ ಸುಮಾರು 200 ಮೀಟರ್‌ ಅಂತರವಿದ್ದು, ಇಲ್ಲಿ ತುಂಗಭದ್ರಾ ನದಿ ನೀರು ಒಂದು ಮಡುವಿನಲ್ಲಿ ನಿಲ್ಲುತ್ತದೆ. ನಿಂತ ನೀರಿನಲ್ಲಿ ತೇಲುವ ಪ್ಲಾಸ್ಟಿಕ್‌ ಡಬ್ಬಿಗಳ ಮೂಲಕ ಸೇತುವೆ ನಿರ್ಮಾಣಗೊಂಡಿದೆ.

2+2 ಅಳತೆಯ 10 ಕೆಜಿ ಭಾರದ ಪ್ಲಾಸ್ಟಿಕ್‌ ಡಬ್ಬಿಗಳನ್ನು ಸರಿಯಾದ ರೀತಿಯಲ್ಲಿ ಜೋಡಿಸಿ ಲಾಕ್‌ ಮಾಡಲಾಗುತ್ತದೆ. ಎರಡು ದಂಡೆಯಿಂದ ಹಗ್ಗವನ್ನು ಬಿಗಿಯಾಗಿ ಕಟ್ಟಿ ಸೇತುವೆ ನಿರ್ಮಿಸಲಾಗುತ್ತದೆ. ಈ ಸೇತುವೆಯನ್ನು ನಿಂತ ನೀರಿನಲ್ಲಿ ಮಾತ್ರ ಜನರು ಸಂಚರಿಸಲು ಬಳಕೆ ಮಾಡಬಹುದು. ಭಾರವಾದ ವಸ್ತುಗಳನ್ನು ತೆಗೆದುಕೊಂಡ ಹೋದರೆ ಮುಳುಗುವ ಅವಕಾಶಗಳಿರುತ್ತವೆ. ಆರಾಧನಾ ಸಂದರ್ಭದಲ್ಲಿ ಮಾತ್ರ ತೇಲುವ ಪ್ಲಾಸ್ಟಿಕ್‌ ಸೇತುವೆ ನಿರ್ಮಿಸಿ ನಂತರ ತೆಗೆಯಲಾಗುತ್ತದೆ. ತಾತ್ಕಲಿಕ ಸೇತುವೆ ನಿರ್ಮಾಣದಿಂದ ಆರಾಧನೆಗೆ ಆಗಮಿಸುವ ಭಕ್ತರಿಗೆ ಮತ್ತು ಪೂಜ್ಯರಿಗೆ ಅನುಕೂಲವಾಗಿದೆ.

ವೆಂಕಟಾಪೂರ ಕಡೆಯಿಂದ ನವವೃಂದಾವನ ಗಡ್ಡಿಗೆ ಆಗಮಿಸಲು ತುಂಗಭದ್ರಾ ನದಿಯ ನಿಂತ ನೀರಿನಲ್ಲಿ ಎಲ್ಲ ಸುರಕ್ಷತಾ ಕ್ರಮಗಳಿಗೆ ಅನುಗುಣವಾಗಿ ಮಹಾರಾಷ್ಟ್ರದ ಪುಣೆಯ ಖಾಸಗಿ ಕಂಪನಿ ತೇಲುವ ತಾತ್ಕಲಿಕ ಸೇತುವೆ ನಿರ್ಮಿಸಿದೆ. ತಜ್ಞರ ತಾಂತ್ರಿಕತೆಗೆ ಅನುಗುಣವಾಗಿ ತೆಲುವ ಸೇತುವೆ ತುಂಗಭದ್ರಾ ನದಿಯಲ್ಲಿ ನಿರ್ಮಿಸಲಾಗಿದೆ. ನವವೃಂದಾವನದಲ್ಲಿರುವ 9 ಯತಿಗಳ ವೃಂದಾವನ ದರ್ಶನ ಮಾಡುವವರಿಗೆ ಇದರಿಂದ ಅನುಕೂಲವಾಗಿದೆ. ಆನೆಗೊಂದಿ ಭಾಗದಲ್ಲಿ ಇಂತಹ ತೇಲುವ ಸೇತುವೆ ನಿರ್ಮಾಣ ಅಸಾಧ್ಯವಾಗಿದೆ. ಆನೆಗೊಂದಿ ಕಡೆ ತುಂಗಭದ್ರಾ ನದಿಯಲ್ಲಿ ಕಲ್ಲು ಬಂಡೆ ಹಾಗೂ ನೀರಿನ ಹರಿವು ರಭಸವಾಗಿರುವುದರಿಂದ ಸೇತುವೆ ನಿರ್ಮಾಣ ಅಸಾಧ್ಯವಾಗಿದೆ.  -ಸುಮಂತ ಕುಲಕರ್ಣಿ, ವ್ಯವಸ್ಥಾಪಕರು ಶ್ರೀರಾಘವೇಂದ್ರಸ್ವಾಮಿ ಮಠ ಆನೆಗೊಂದಿ

 

-ಕೆ.ನಿಂಗಜ್ಜ

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

3-tavaragera

Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.