ಭಾರತದಲ್ಲಿ 83 ಮಂದಿಗೆ ಕೊರೊನಾ ದೃಢ; ರಾಜ್ಯವಾರು ಅಂಕಿಅಂಶ ಪ್ರಕಟಿಸಿದ ಕೇಂದ್ರ
ಕೊರೊನಾ ಸೋಂಕು 66 ಮಂದಿ ಭಾರತೀಯರಿಗೆ, 17 ಜನ ವಿದೇಶಿಯರಲ್ಲಿ ಪತ್ತೆಯಾಗಿದೆ.
Team Udayavani, Mar 14, 2020, 6:27 PM IST
Representative Image
ನವದೆಹಲಿ: ಇಡೀ ಜಗತ್ತನ್ನು ತನ್ನ ಅಂಕೆಗೆ ತೆಗೆದುಕೊಳ್ಳಲು ಹೊರಟಿರುವ ಕೊರೊನಾ ವೈರಸ್ ಹಾವಳಿ ಈಗ ದೇಶದಲ್ಲಿಯೂ ಆತಂಕದ ವಾತಾವರಣ ಸೃಷ್ಟಿಸಿದ್ದು, ಇದೀಗ ಕೋವಿಡ್ -19 ಪ್ರಕರಣಗಳ ಬಗ್ಗೆ ಆರೋಗ್ಯ ಸಚಿವಾಲಯ ಶನಿವಾರ ಅಂಕಿಅಂಶವನ್ನು ಬಿಡುಗಡೆ ಮಾಡಿದೆ.
ದೇಶಾದ್ಯಂತ ಒಟ್ಟು 83 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಪಾಸಿಟಿವ್ ಎಂಬುದಾಗಿ ತಿಳಿದು ಬಂದಿದೆ. ಇದರೊಂದಿಗೆ ಭಾರತದಲ್ಲಿ ಕೊರೊನಾ ವೈರಸ್ ಗೆ ಇಬ್ಬರು ಸಾವನ್ನಪ್ಪಿದ್ದು, 83 ಜನರಿಗೆ ಕೊರೊನಾ ಸೋಂಕು ಇದ್ದಿರುವುದು ಖಚಿತವಾಗಿದೆ ಎಂದು ವರದಿ ತಿಳಿಸಿದೆ.
ಸಚಿವಾಲಯದ ಮಾಹಿತಿ ಪ್ರಕಾರ ಕೊರೊನಾ ಸೋಂಕು 66 ಮಂದಿ ಭಾರತೀಯರಿಗೆ, 17 ಜನ ವಿದೇಶಿಯರಲ್ಲಿ ಪತ್ತೆಯಾಗಿದೆ. ದಿಲ್ಲಿಯಲ್ಲಿ ಒಬ್ಬ ಮಹಿಳೆ ಹಾಗೂ ಕಲಬುರಗಿಯಲ್ಲಿ 76 ವರ್ಷದ ಅಜ್ಜ ಸೇರಿದಂತೆ ದೇಶದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿ ವಿವರಿಸಿದೆ.
ದಿಲ್ಲಿ:
ದೇಶದ ರಾಜಧಾನಿ ದಿಲ್ಲಿಯಲ್ಲಿ ಏಳು ಪ್ರಕರಣ ಪತ್ತೆಯಾಗಿದ್ದು, ಎಲ್ಲರು ಭಾರತೀಯ ಪ್ರಜೆಗಳು. ಮಾರ್ಚ್ 13ರಂದು 68 ವರ್ಷದ ಮಹಿಳೆಯೊಬ್ಬರು ದಿಲ್ಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದರು.
ದಿಲ್ಲಿಯಲ್ಲಿ ಎಲ್ಲಾ ಶಾಲೆಗಳು, ಸಿನಿಮಾ ಮಂದಿರಗಳು, ವಿವಿ, ಐಪಿಎಲ್, ಸೆಮಿನಾರ್ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿದೆ. ಸೋಂಕು ವೈರಸ್ ಅನ್ನು ರಾಜ್ಯ ಸರ್ಕಾರ ಮುಂದಿನ ಕೆಲವು ದಿನಗಳಲ್ಲಿ ಹೆಚ್ಚು ಹರಡದಂತೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದೆ.
ಹರ್ಯಾಣ:
ಹರ್ಯಾಣದಲ್ಲಿ ಹದಿನಾಲ್ಕು ಮಂದಿಗೆ ಕೊರೊನಾ ವೈರಸ್ ಇದ್ದಿರುವುದು ಖಚಿತವಾಗಿದ್ದು, ಇವರೆಲ್ಲಾ ವಿದೇಶಿ ಪ್ರಜೆಗಳಾಗಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ಸಾರ್ವಜನಿಕ ಸಭೆ, ಸಮಾರಂಭ, ಕ್ರೀಡಾ ಚಟುವಟಿಕೆ, ಜನರು ಗುಂಪುಗೂಡುವುದನ್ನು ನಿಷೇಧಿಸುವಂತೆ ಆರೋಗ್ಯ ಸಚಿವ ಅನಿಲ್ ವಿಜಿ ಆದೇಶ ನೀಡಿದ್ದಾರೆ. ಸೋನೆಪತ್ ನಲ್ಲಿರುವ ಜಿಂದಾಲ್ ವಿವಿಯಲ್ಲಿ ಮಾರ್ಚ್ 29ರವರೆಗೆ ಯಾವುದೇ ತರಗತಿಗಳು ನಡೆಯುವುದಿಲ್ಲ ಎಂದು ತಿಳಿಸಿದೆ.
ಕೇರಳ:
ಕೇರಳ ರಾಜ್ಯದಲ್ಲಿ ಅತೀ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, 19 ಜನರಿಗೆ ಕೊರೊನಾ ಸೋಂಕು ಇದ್ದಿರುವುದು ಖಚಿತವಾಗಿದೆ. ಇವರಲ್ಲಿ ಮೂವರು ಮಂದಿ ಚೇತರಿಕೆಯಾಗುತ್ತಿದ್ದಾರೆ. ಅಲ್ಲದೇ ಹಕ್ಕಿಜ್ವರದ ಆತಂಕದ ಹಿನ್ನೆಲೆಯಲ್ಲಿ ಪರಪ್ಪನಂಗಡಿ ಪ್ರದೇಶದಲ್ಲಿರುವ ಕೋಳಿಯನ್ನು ಕೊಲ್ಲುವಂತೆ ಕೇರಳ ಸರ್ಕಾರ ಆದೇಶ ನೀಡಿದೆ.
ಕರ್ನಾಟಕ:
ರಾಜ್ಯದಲ್ಲಿ ಆರು ಪ್ರಕರಣಗಳು ಪತ್ತೆಯಾಗಿದೆ. ಕೋವಿಡ್ 19ಕ್ಕೆ ಕಲಬುರಗಿಯ 76ವರ್ಷದ ವೃದ್ಧರೊಬ್ಬರು ಸಾವನ್ನಪ್ಪುವ ಮೂಲಕ ಭಾರತದಲ್ಲಿ ಮೊದಲ ಸಾವಿನ ಪ್ರಕರಣವಾದಂತಾಗಿದೆ. ಸೌದು ಅರೇಬಿಯಾದಿಂದ ಆಗಮಿಸಿದ್ದ ಈ ವ್ಯಕ್ತಿ ಕಲಬುರಗಿಯಲ್ಲಿ ಮಾ.10ರಂದು ನಿಧನರಾಗಿದ್ದರು.
ಈ ಪ್ರಕರಣದ ನಂತರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕರ್ನಾಟಕದಲ್ಲಿ ಒಂದು ವಾರ ಶಟ್ ಡೌನ್ ಮಾಡುವಂತೆ ಶುಕ್ರವಾರ ಆದೇಶ ನೀಡಿದ್ದರು.
ಮಹಾರಾಷ್ಟ್ರ:
ಮಹಾರಾಷ್ಟ್ರದಲ್ಲಿ ಒಟ್ಟು 14 ಪ್ರಕರಣಗಳು ಪತ್ತೆಯಾಗಿದ್ದು, ಶುಕ್ರವಾರ ರಾತ್ರಿ ಐವರು ಕೊರೊನಾ ವೈರಸ್ ಶಂಕಿತ ರೋಗಿಗಳು ಮೇಯೊ ಆಸ್ಪತ್ರೆಯಿಂದ ಪರಾರಿಯಾಗಿದ್ದರು. ನಂತರ ಪೊಲೀಸರ ಕಾರ್ಯಾಚರಣೆಯ ಮೂಲಕ ರೋಗಿಗಳನ್ನು ಆಸ್ಪತ್ರೆಗೆ ವಾಪಸ್ ಕರೆತರಲಾಗಿತ್ತು.
ಎಲ್ಲಾ ಸಿನಿಮಾ ಮಂದಿರ, ಜಿಮ್ಸ್, ಸ್ವಿಮ್ಮಿಂಗ್ ಫೂಲ್ ಗಳನ್ನು ಮಾರ್ಚ್ 30ರವರೆಗೆ ಬಂದ್ ಮಾಡುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆದೇಶ ನೀಡಿದ್ದಾರೆ.
ಉತ್ತರಪ್ರದೇಶ:
ಉತ್ತರಪ್ರದೇಶದಲ್ಲಿ 11 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ ಹತ್ತು ಮಂದಿ ಭಾರತೀಯರು, ಒಬ್ಬರು ವಿದೇಶಿ ಪ್ರಜೆ. ಇವರದಲ್ಲಿ ಏಳು ಮಂದಿ ಆಗ್ರಾದವರು. ಇಬ್ಬರು ಘಾಜಿಯಾಬಾದ್, ಒಬ್ಬರು ನೋಯ್ಡಾ, ಒಬ್ಬರು ಲಕ್ನೋ ನಿವಾಸಿ ಎಂದು ವರದಿ ಹೇಳಿದೆ.
ರಾಜ್ಯಾದ್ಯಂತ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ 1268 ಪ್ರತ್ಯೇಕ ಬೆಡ್ ಗಳ ಕೊಠಡಿಯ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ವೈರಸ್ ಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ 4,100 ವೈದ್ಯರಿಗೆ ತರಬೇತಿ ನೀಡಲಾಗಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.