ಕೆರೆಮನೆಯಲ್ಲಿ ನಾಟ್ಯೋತ್ಸವ


Team Udayavani, Mar 15, 2020, 5:28 AM IST

ಕೆರೆಮನೆಯಲ್ಲಿ ನಾಟ್ಯೋತ್ಸವ

ಕಳೆದ ಫೆಬ್ರವರಿ 20ರಿಂದ 24ರವರೆಗೆ ಉತ್ತರಕನ್ನಡ ಜಿಲ್ಲೆಯ ಗುಣವಂತೆಯಲ್ಲಿ ಆಯೋಜನೆಗೊಂಡಿದ್ದ “ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ’ ದಲ್ಲಿ ಸಹೃದಯರಿಗೆ ದೇಶದ ವಿವಿಧ ಪ್ರದೇಶಗಳ ರಂಗಕಲೆಗಳನ್ನು ವೀಕ್ಷಿಸುವ ಅಪೂರ್ವ ಅವಕಾಶ ದೊರೆಯಿತು.

ಯಕ್ಷಗಾನಕ್ಕೊಂದು ಹೊಸ ಭಾಷ್ಯ ಬರೆದಂತೆ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯನ್ನು ಮುನ್ನಡೆಸಿ ಜನಮನದಲ್ಲಿ ವಿಶೇಷ ಛಾಪನ್ನು ಒತ್ತಿದ ಕೆರೆಮನೆ ಶಂಭು ಹೆಗಡೆಯವರ ಹೆಸರಲ್ಲಿ ಆಯೋಜನೆಗೊಳ್ಳುತ್ತಿರುವ ರಾಷ್ಟ್ರೀಯ ನಾಟ್ಯೋತ್ಸವ ಕರ್ನಾಟಕದಾದ್ಯಂತ ಜನಮನ್ನಣೆ ಪಡೆದಿದೆ. ದೇಶದ ವಿವಿಧೆಡೆಯ ಕಲಾತಂಡಗಳು ಇಲ್ಲಿ ಬಂದು ಪ್ರದರ್ಶನ ನೀಡುತ್ತವೆ.

ಕೆರೆಮನೆ ಶಂಭು ಹೆಗಡೆಯವರ ಬಳಿಕ ಮೇಳವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವವರು ಅವರ ಪುತ್ರ ಶಿವಾನಂದ ಹೆಗಡೆಯವರು. ಶಂಭು ಹೆಗಡೆಯವರೂ ತಮ್ಮನ್ನು ಯಕ್ಷಗಾನಕ್ಕಷ್ಟೇ ಮೀಸಲಿಟ್ಟವರಲ್ಲ. ಮಾಯಾ ರಾವ್‌ ಅವರಿಂದ ಕಥಕ್‌ ಕಲಿತುದಲ್ಲದೆ ಕೊರಿಯಾಗ್ರಫಿಯಲ್ಲೂ ಪರಿಣಿತರಾಗಿ ಭಾರತದಾದ್ಯಂತ ತಿರುಗಾಡಿದವರು. ಮೇಳ ಕಟ್ಟಿಕೊಂಡು ಇಲ್ಲವೆ ಅಧ್ಯಯನದ ದೃಷ್ಟಿಯಿಂದ ಓಡಾಡಿದವರು. ಪುತ್ರನನ್ನೂ ಅದರಲ್ಲಿ ಪಳಗಿಸಿದವರು.

ಅಪ್ಪನ ಉನ್ನತವಾದ ಯೋಚನೆಗಳನ್ನು ಸರಿಯಾಗಿಯೇ ಗ್ರಹಿಸಿರುವ ಕೆರೆಮನೆ ಶಿವಾನಂದ ಹೆಗಡೆ ಅವರು, “ನಾಟ್ಯೋತ್ಸವ’ ಎಂಬ ಪರಿಕಲ್ಪನೆಯನ್ನು ರೂಪಿಸಿದರು. ಗುಣವಂತೆ ಎಂಬ ಹೆಚ್ಚು ಪರಿಚಿತವಲ್ಲದ ಸ್ಥಳದಲ್ಲಿ ಇದು ಆವಿರ್ಭಾವಗೊಂಡಿತು. ಉತ್ಸವದ ಪರಿಕಲ್ಪನೆಯನ್ನು ಯಕ್ಷಗಾನಕ್ಕೆ ಸೀಮಿತಗೊಳಿಸದೇ, ಇತರ ಕಲಾಪ್ರಕಾರಗಳನ್ನು ಒಳಗೊಳ್ಳುವ ಮಾದರಿಯಲ್ಲಿ ಅದನ್ನು ವಿಸ್ತರಿಸಿದರು.

ರಾಷ್ಟ್ರದೆಲ್ಲೆಡೆಯಿಂದ ಆಹ್ವಾನಿತರಾಗಿ ಬರುವ ಜಾನಪದ, ಸಂಗೀತ, ನೃತ್ಯ, ನಾಟಕ, ಗೊಂಬೆಯಾಟ ಮಾತ್ರವಲ್ಲದೆ ನೆರೆರಾಜ್ಯಗಳಲ್ಲಿರುವ ಯಕ್ಷಗಾನದ ವೈವಿಧ್ಯಗಳನ್ನು ಕರೆತಂದು ಕನ್ನಡಿಗರಿಗೆ “ನೋಡಿ ಹೀಗಿದೆ ನಮ್ಮ ಭಾರತ’ ಎಂದು ತೋರಿಸುವ ಔದಾರ್ಯ ಅವರದು.

ತಮ್ಮ ತಂಡವನ್ನು ಆಹ್ವಾನಿಸಿದಲ್ಲಿಗೆ ಹೋಗಿ, ಅಲ್ಲಿಗೆ ಬಂದ ಇನ್ನಿತರ ಕಡೆಯ ಕಲಾತಂಡಗಳ ಪ್ರದರ್ಶನವನ್ನು ಕಂಡು ಗಮನಿಸಿ, ಅದರ ವೈವಿಧ್ಯಕ್ಕೆ ಮಾರುಹೋಗಿ, ಅದರ ಅನನ್ಯತೆಯನ್ನು ಮನಗಂಡು ಇಡಗುಂಜಿಗೆ ಆಹ್ವಾನಿಸುತ್ತಾರೆ. ಹಾಗಾಗಿ, ಕನ್ಯಾಕುಮಾರಿಯಿಂದ, ಪಂಜಾಬ್‌, ಕಾಶ್ಮೀರದವರೆಗೆ, ಗುಜರಾತಿನಿಂದ ಪೂರ್ವದ ಅಸ್ಸಾಂವರೆಗೆ ಅವರ ಗೃಧೃದೃಷ್ಟಿ ಹರಿದದ್ದೇ ಈ ನಾಟ್ಯೋತ್ಸವ ಪ್ರಸಿದ್ಧಿ ಪಡೆಯಲು ಕಾರಣವಾಯಿತು.

ಎಲ್ಲೆಲ್ಲಿಂದಲೋ ಕಲಾ ತಂಡವನ್ನು ಕರೆತಂದರೆ ಸಾಕೆ? ಅವರಿಗೆ ಅವರ ಕಲಾಪ್ರದರ್ಶನಕ್ಕೆ ತಕ್ಕುದಾದ ರಂಗಮಂಚ ಬೇಡವೆ? ಅರ್ಧ ಚಂದ್ರಾಕೃತಿಯ ರಂಗಮಂಚ ಪ್ರತಿವರ್ಷ ಉನ್ನತಿಗೇರುತ್ತ ಈಗ ಅತ್ಯುತ್ತಮ ಮಟ್ಟದ, ಸರ್ವಸಜ್ಜಿತ “ಯಕ್ಷಾಂಗಣ’ ಮೈತಳೆದಿದೆ.

ಈ ರಾಷ್ಟ್ರೀಯ ನಾಟ್ಯೋತ್ಸವ ಐದು-ಆರು ದಿನಗಳ ಉದ್ದಕ್ಕೂ ನಡೆಯುತ್ತದೆ. ಜೊತೆಗೆ ಯಕ್ಷಗಾನದ ನಾನಾ ಪ್ರಕಾರಗಳಲ್ಲಿ ಮರೆಗೆ ಸರಿದ ಹೆಸರಾಂತ ಕಲಾವಿದರನ್ನು ಹಿಮ್ಮೇಳದ ಕಲಾವಿದರನ್ನು ಗುರುತಿಸಿ ಸನ್ಮಾನಿಸುವುದೂ ನಡೆಯುತ್ತ ಬಂದಿದೆ. ಎಲ್ಲೂ ರಂಗವನ್ನೇರದೆ, ಸನ್ಮಾನ, ಪ್ರಶಸ್ತಿ ಎಂಬುದರೇನೆಂದು ಅರಿಯದ ಅಬೋಧ ಕಲಾವಿದರು ಪ್ರಾಯದ ದೆಸೆಯಿಂದ, ಅನಾರೋಗ್ಯ ಪೀಡಿತರಾಗಿ ಯಕ್ಷರಂಗದಿಂದ ದೂರವುಳಿದವರನ್ನು ರಂಗಕ್ಕೆ ಕರೆತಂದು ಸನ್ಮಾನಿಸುತ್ತಿರುವುದು ಗಮನಾರ್ಹ.

ಈ ಮಂಡಳಿಯ ಸ್ಥಾಪನೆ 85 ವರ್ಷಗಳ ಹಿಂದೆ, ಶಂಭು ಹೆಗಡೆಯವರ ತಂದೆ ಕೆರೆಮನೆ ಶಿವರಾಮ ಹೆಗಡೆಯವರಿಂದ ಆಯಿತು. ಶಿವರಾಮ ಹೆಗಡೆಯವರ ನಂತರ ಮಗ ಶಂಭು ಹೆಗಡೆಯವರ ಹೆಗಲಿಗೆ ಜವಾಬ್ದಾರಿ ಬಿದ್ದಾಗ ತಮ್ಮ ಗಜಾನನ ಹೆಗಡೆಯವರೂ ಅಣ್ಣನ ಜೊತೆಗೂಡಿದರು. ಪ್ರಸ್ತುತ ಕೆರೆಮನೆ ಶಿವಾನಂದ ಹೆಗಡೆಯವರು ಅಜ್ಜ ಕೆರೆಮನೆ ಶಿವರಾಮ ಹೆಗಡೆ, ತಂದೆ ಕೆರೆಮನೆ ಶಂಭು ಹೆಗಡೆ, ಚಿಕ್ಕಪ್ಪ ಗಜಾನನ ಹೆಗಡೆಯವರ ಹೆಸರಲ್ಲಿ ಪ್ರಶಸ್ತಿಗಳನ್ನು ಸ್ಥಾಪಿಸಿ ಕೆರೆಮನೆ ಶಂಭು ಹೆಗಡೆ ಅಖಿಲ ಭಾರತ ನಾಟ್ಯೋತ್ಸವವನ್ನು ಈಗ ಹನ್ನೊಂದು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ.

ಈ ಬಾರಿ ಸೈಯದ್‌ ಸಲಾವುದ್ದೀನ್‌ ಪಾಷಾ ನಿರ್ದೇಶನದಲ್ಲಿ ಗಾಲಿಕುರ್ಚಿಯಲ್ಲಿ ವಿಶೇಷಚೇತನರ ವೈವಿಧ್ಯಮಯ ನಾಟ್ಯ, ಕರ್ನಾಟಕ ಕಲಾದರ್ಶಿನಿಯವರು ಪ್ರಸ್ತುತಪಡಿಸಿದ ಯಕ್ಷಗಾನ ಬ್ಯಾಲೆ ಅಭಿಮನ್ಯು ವಧೆ ಆಕರ್ಷಕವಾಗಿತ್ತು. ಹಿರಿಯ ಕಲಾವಿದರ ಸ್ಮರಣೆಯೂ ಕಾರ್ಯಕ್ರಮದ ಭಾಗ. ಶಿವ ಮತ್ತು ಶಕ್ತಿ ಒಡಿಸ್ಸಿ ನೃತ್ಯ, ಬಸ್ತರ್‌ ಬ್ಯಾಂಡ್‌ನಿಂದ ಛತ್ತೀಸ್‌ಗಡದ ಆದಿವಾಸಿ ನೃತ್ಯ, ಅಸ್ಸಾಂನ ಜಾನಪದ ನೃತ್ಯ ಕ್ರಿಸ್ಟಿರ್‌ ಕೊಠಿಯ, ಕೊಳಲುವಾದನ ತೊಳ್ಪಾವಕುತ್ತು ಎಂಬ ಕೇರಳದ ತೊಗಲು ಗೊಂಬೆಯಾಟ, ಕೂಚಿಪುಡಿ, ಕೆರೆಮನೆ ಮಂಡಳಿ ವತಿಯಿಂದ ಯಕ್ಷಗಾನ ಪ್ರದರ್ಶನವೂ ನಡೆಯಿತು.

ತಿಲಕನಾಥ ಮಂಜೇಶ್ವರ

ಟಾಪ್ ನ್ಯೂಸ್

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

10

Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು

11(1)

Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

Receive Kantraj report and reveal: Anjaney’s appeal to CM

Davanagere: ಕಾಂತರಾಜ್‌ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.