ಕೋಟೇಶ್ವರ: ಕಗ್ಗಂಟಾದ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ
ಸ್ವಚ್ಛಗೊಳಿಸಿದರೂ ಮತ್ತೆ ಮತ್ತೆ ಪ್ರತ್ಯಕ್ಷವಾಗುವ ಮೂಟೆಗಟ್ಟಲೆ ತ್ಯಾಜ್ಯ
Team Udayavani, Mar 15, 2020, 4:07 AM IST
ಕೋಟೇಶ್ವರ: ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ವ್ಯಾಪಾರ ವ್ಯವಹಾರಗಳ ಕೇಂದ್ರವಾಗಿ ಬೆಳೆಯುತ್ತಿರುವ ಕೋಟೇಶ್ವರಕ್ಕೆ ಇದೀಗ ತ್ಯಾಜ್ಯದ ಸಮಸ್ಯೆ ಕಪ್ಪುಚುಕ್ಕೆಯಾಗಿದೆ.
ಎಲ್ಲೆಂದರಲ್ಲಿ ತ್ಯಾಜ್ಯ ಎಸೆತ
ಕೋಟೇಶ್ವರ-ಹಾಲಾಡಿ ಸಾಗುವ ಜಂಕ್ಷನ್ ಬಳಿ ಸರ್ವಿಸ್ ರಸ್ತೆಯ ಅನತಿ ದೂರದಲ್ಲಿ ಬಸ್ಸಿಗಾಗಿ ಕಾಯುವ ಪ್ರಯಾಣಿ ಕರಿಗೆ ತ್ಯಾಜ್ಯದ ವಾಸನೆ ಇನ್ನೂ ತಪ್ಪಿಲ್ಲ. ವ್ಯಾಪಾರ ವ್ಯವಹಾರಕ್ಕಾಗಿ ಇಲ್ಲಿಗೆ ಆಗಮಿಸುವ ವಿವಿಧ ಜನರಿಗೆ, ಶಾಲೆ ವಿದ್ಯಾರ್ಥಿಗಳಿಗೆ ಇದು ಪ್ರಮುಖ ಬಸ್ ತಂಗುದಾಣವಾಗಿದೆ. ಆದರೆ ಇಲ್ಲಿ ತ್ಯಾಜ್ಯಗಳನ್ನು ಎಸೆಯುತ್ತಿರುವುದು ಪ್ರಯಾಣಿಕರಿಗೆ ಅತೀವ ಕಿರಿಕಿರಿ ಸೃಷ್ಟಿಸಿದೆ.
ಸಾಂಕ್ರಾಮಿಕ ರೋಗ ಭೀತಿ
ಒಂದೆಡೆ ವಿಲೇವಾರಿಯಾಗದ ತ್ಯಾಜ್ಯವಾದರೆ, ಇನ್ನೊಂದೆಡೆ ವಿವಿಧೆಡೆಯಿಂದ ಹರಿದು ಬರುವ ಕೊಳಚೆ ನೀರು ಕಾಗೇರಿಯತ್ತ ಸಾಗುವ ಮೂಲಕ ಅಲ್ಲಿನ ತೋಡು ಗಬ್ಬೆದ್ದು ಹೋಗಿದೆ. ಇದು ಸ್ಥಳೀಯ ಜಲಮೂಲಗಳಿಗೆ ಹಾನಿ ಮಾಡುವ ಸಾಧ್ಯತೆಯೂ ಇದೆ. ಇದೂ ಪರಿಸರದ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಹೆದ್ದಾರಿ ಇಕ್ಕೆಲಗಳಲ್ಲಿ ತ್ಯಾಜ್ಯ
ಕೋಟೇಶ್ವರ ರಾ.ಹೆದ್ದಾರಿಯ ಹಿಂದು ರುದ್ರ ಭೂಮಿ ಸನಿಹ ಸಹಿತ ಪಂಚಾಯತ್ ಕಚೇರಿಯ ಬಳಿ ಇರುವ ಸರ್ವಿಸ್ ರಸ್ತೆಗಳಲ್ಲಿ ಮೂಟೆಗಟ್ಟಲೆ ತ್ಯಾಜ್ಯ ಕಂಡುಬಂದಿದೆ. ಇದರಲ್ಲಿ ಕೊಳೆತ ಮಾಂಸ, ಮೀನು ಅಲ್ಲದೇ ಇನ್ನಿತರ ದುರ್ವಾಸನೆಯಿಂದ ಕೂಡಿದ ತ್ಯಾಜ್ಯಗಳನ್ನು ಎಸೆಯಲಾಗಿದೆ.
ಸವಾಲಾದ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ಕಳೆದ ಹಲವು ತಿಂಗಳಿಂದ ತ್ಯಾಜ್ಯ ವಿಲೇವಾರಿ ಬಗ್ಗೆ ಉದಯವಾಣಿ ಸಚಿತ್ರ ವರದಿ ಮೂಲಕ ಬೆಳಕುಚೆಲ್ಲಿತ್ತು, ತತ್ ಕ್ಷಣ ಗ್ರಾ.ಪಂ. ಸ್ಪಂದಿಸಿ ತ್ಯಾಜ್ಯ ವಿಲೇವಾರಿಗೊಳಿಸಿತ್ತು. ಆದರೆ ಇಲ್ಲಿ ಮತ್ತೆ ತ್ಯಾಜ್ಯ ಎಸೆಯುತ್ತಿರುವುದು ಗ್ರಾ.ಪಂ.ಗೆ ನುಂಗಲಾರದ ತುತ್ತಾಗಿದೆ.
ಪ್ರಯತ್ನ ನಡೆಯುತ್ತಿದೆ
ಒಣ ಕಸ ವಿಲೇವಾರಿಗೆ ಗ್ರಾ.ಪಂ. ಕ್ರಮಕೈಗೊಂಡಿದ್ದರೂ, ಹಸಿ ಕಸ ವಿಲೇವಾರಿಗೆ ಸರಿಯಾದ ವ್ಯವಸ್ಥೆ ಒದಗಿಸುವುದು ಪ್ರಸ್ತುತ ಕಷ್ಟಸಾಧ್ಯ. ಹಿಂದು ರುದ್ರ ಭೂಮಿ ಬಳಿ ಪರಿಸರ ಮಾಲಿನ್ಯವಾಗದಂತೆ ನಿಗಾವಹಿಸಿ ಎಸ್.ಎಲ್.ಆರ್.ಎಂ. ಘಟಕ ಪ್ರಾರಂಭಿಸುವ ಬಗ್ಗೆ ಆಡಳಿತಾತ್ಮಕ ಪ್ರಯತ್ನ ನಡೆಯುತ್ತಿದೆ. -ತೇಜಪ್ಪ ಕುಲಾಲ್, ಪಿಡಿಒ. ಕೋಟೇಶ್ವರ, ಗ್ರಾ.ಪಂ.
ಮುತುವರ್ಜಿ ವಹಿಸಬೇಕು
ಕೋಟೇಶ್ವರ ಗ್ರಾ.ಪಂ.ವ್ಯಾಪ್ತಿಯಲ್ಲಿ ಶೀಘ್ರದಲ್ಲೇ ಹಸಿ ಹಾಗೂ ಒಣ ಕಸ ವಿಲೇವಾರಿ ಪ್ರಕ್ರಿಯೆ ಆರಂಭಗೊಂಡಲ್ಲಿ ಸ್ವಸ್ಥ ಪರಿಸರ ನಿರ್ಮಾಣ ಸಾಧ್ಯ. ಈ ದಿಸೆಯಲ್ಲಿ ಜನಪ್ರತಿನಿ ಧಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು.
-ರವಿಂದ್ರ ನಾವಡ ಎಸ್.ಎನ್, ಅಧ್ಯಕ್ಷ ರೋಟರಿ ಕ್ಷಬ್ ಕೋಟೇಶ್ವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Cleanliness: ಮನೆ ಮನೆಯಿಂದ ದೇಶವೇ ಸ್ವಚ್ಚ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Siddapura: ಬುಲೆಟ್ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.