ಮಾರಿಯೊ
Team Udayavani, Mar 16, 2020, 4:06 AM IST
ಇಂದು ಸ್ಮಾರ್ಟ್‌ಫೋನಿನಲ್ಲಿ ಆಂಡ್ರಾಯ್ಡ ಗೇಮ್‌ಗಳು ಬಹಳಷ್ಟಿವೆ. ಅಲ್ಲದೆ ದೊಡ್ಡ ಪ್ರಮಾಣದಲ್ಲಿ ಗೇಮಿಂಗ್ ಗೀಳು ಇರುವವರಿಗಾಗಿ ಪ್ಲೇಸ್ಟೇಷನ್ನುಗಳು, ಕಂಪ್ಯೂಟರ್ ಗೇಮ್‌ಗಳು ಇವೆ. ಪಬ್‌ಜಿ ನಮ್ಮನ್ನು ಆವರಿಸಿಕೊಂಡಿರುವ ಕಾಲವಿದು. ಒಂದೇ ಗೇಮನ್ನು ಜಗತ್ತಿನ ಆವುದೋ ಮೂಲೆಯಲ್ಲಿ ಕುಳಿತವರು ಒಟ್ಟಿಗೆ ಆಡುವ ಕಾಲವಿದು. ಈ ಸಮಯದಲ್ಲಿ ಪಿ.ಸಿ(ಪರ್ಸನಲ್ ಕಂಪ್ಯೂಟರ್) ಜಮಾನಾ ಶುರುವಾಗುತ್ತಿದ್ದ ಕಾಲಘಟ್ಟದಲ್ಲಿ ಚಾಲ್ತಿಯಲ್ಲಿದ್ದ ಗೇಮುಗಳಲ್ಲಿ ಇಂದಿಗೂ ಜನಪ್ರಿಯತೆಯನ್ನು ಉಳಿಸಿಕೊಂಡಿರುವುದು ಮಾರಿಯೊ ಗೇಮ್‌ನ ಹೆಗ್ಗಳಿಕೆ. ತುಂಬಾ ಸರಳವಾದ ಆಟವಾಗಿತ್ತು ಅದು. ಮಾರಿಯೊ ಎನ್ನುವುದು ಆ ಗೇಮಿನಲ್ಲಿ ಬರುವ ಪ್ರಮುಖ ಪಾತ್ರದ ಹೆಸರು. ಕೀಬೋರ್ಡಿನ ಸಹಾಯದಿಂದ ನಿಯಂತ್ರಿಸಬಹುದು. ಆತನ ಹಾದಿಯಲ್ಲಿ ಎದುರಾಗುವ ಚಿತ್ರವಿಚಿತ್ರ ಜೀವಿಗಳಿಂದ ಆತನನ್ನು ಕಾಪಾಡಿಕೊಳ್ಳುವುದು ಆಟಗಾರನ ಎದುರಿದ್ದ ಸವಾಲು. ಅಪಾಯ ಎದುರಾದಾಗ ಆತನನ್ನ ಮೇಲಕ್ಕೆ ನೆಗೆಸಬೇಕಾಗಿತ್ತು. ತುಂಬಾ ಸರಳವಾದ ಆ ಗೇಮ್‌ನ ಖ್ಯಾತಿ ಎಷ್ಟಿತ್ತೆಂದರೆ ಹಾಲಿವುಡ್‌ನಲ್ಲಿ ಅದರದ್ದೇ ಅನಿಮೇಷನ್ ಸಿನಿಮಾ ಕೂಡಾ ತಯಾರಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Udupi: ಜ.15ಕ್ಕೆ ಗಡುವು; ಕಾಮಗಾರಿ ಇನ್ನೂ ಮುಗಿದಿಲ್ಲ
ಗದಗ: ಸರ್ಕಾರಿ ಶಾಲೆ ಗೋಡೆಗೆ ಚಂದದ ಚಿತ್ತಾರ – ಬಂದಿದೆ ಜಿಲ್ಲಾಮಟ್ಟದ ಪ್ರಶಸ್ತಿ…
Chamarajanagara: ತರಗತಿಯಲ್ಲಿ ಕುಸಿದು ಬಿದ್ದು ಮೂರನೇ ತರಗತಿ ಬಾಲಕಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.