ಕೊರೊನಾ ಎಫೆಕ್ಟ್: ಅಘೋಷಿತ ಬಂದ್
ಮಾಂಸಾಹಾರಿ ಹೋಟೆಲ್‌ಗೆ ಬಾರದ ಗ್ರಾಹಕ ಪ್ರಯಾಣಿಕರಿಲ್ಲದೇ ಬಸ್ ನಿಲ್ದಾಣ ಖಾಲಿ ಖಾಲಿ
Team Udayavani, Mar 15, 2020, 11:19 AM IST
ಹರಿಹರ: ಕೊರೊನಾ ವೈರಾಣು ಭೀತಿಯ ಜತೆಗೆ ಬಿಸಿಲಿ ಧಗೆ ಅಲ್ಲದೆ ರಜಾ ದಿನವಾದ ಕಾರಣ ಕಾರಣ ನಗರದಲ್ಲಿ ಎರಡನೇ ಶನಿವಾರ ಅಘೋಷಿತ ಬಂದ್ ವಾತಾವರಣ ಕಂಡು ಬಂತು.
ರಾಜ್ಯದಲ್ಲಿ 7 ದಿನಗಳ ಕಾಲ ಶಾಲಾ ಕಾಲೇಜುಗಳು, ಸಿನಿಮಾ ಮಂದಿರ, ಮಾಲ್‌ಗಳನ್ನು ತೆರೆಯಲು ನಿರ್ಬಂಧ ವಿಧಿಸಿರುವ ಪರಿಣಾಮ ಮೊದಲ ದಿನ ಹರಿಹರ ನಗರ ಜನರಿಲ್ಲದೆ ಭಣಗುಡುತ್ತಿತ್ತು.
ಸದಾ ಜನನಿಬಿಡತೆಯಿಂದ ಕೂಡಿರುತ್ತಿದ್ದ ಗಾಂಧಿ ವೃತ್ತ, ಶಿವಮೊಗ್ಗ ವೃತ್ತ, ಮುಖ್ಯ ರಸ್ತೆ, ಶಿವಮೊಗ್ಗ ರಸ್ತೆ, ಹಳೆ ಪಿ.ಬಿ.ರಸ್ತೆಗಳು ಎಂದಿನಂತೆ ಜನ-ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು.
ಅಂಗಡಿ ಮುಗ್ಗಟ್ಟುಗಳಲ್ಲಿ ಎಂದಿನಂತೆ ಗ್ರಾಹಕರು ಕಂಡುಬರಲಿಲ್ಲ. ಶಾಪಿಂಗ್ ಕಾಂಪ್ಲೆಕ್ಸ್, ಮೋರ್, ಜಿ7ನಂತಹ ಮಾಲ್‌ಗಳಲ್ಲೂ ವ್ಯಾಪಾರ ಕ್ಷೀಣಿಸಿತ್ತು. ಹೋಟೆಲ್‌ಗಳು ಬಾಗಿಲು ತೆರೆದಿದ್ದರೂ ಎಂದಿನಂತೆ ವ್ಯಾಪಾರವಿರಲಿಲ್ಲ. ತಯಾರಿಸಿಟ್ಟ ಆಹಾರ ಪದಾರ್ಥವೂ ವೇಸ್ಟ್ ಆಗುವ ಆತಂಕದಲ್ಲಿ ಮಾಲೀಕರಿದ್ದರು. ಮಾಂಸಾಹಾರಿ ಹೋಟೆಲ್ ಗಳಲ್ಲಂತೂ ಜನರ ಸುಳಿವೇ ಇರಲಿಲ್ಲ. ರಸ್ತೆ ಬದಿ ಹೋಟೆಲ್‌ಗಳಲ್ಲೂ ಗಿರಾಕಿಗಳಿರಲಿಲ್ಲ, ಪರಿಣಾಮ ಬಹುತೇಕ ಗೂಡಾಂಗಡಿಗಳನ್ನು ಮಧ್ಯಾಹ್ನದ ಹೊತ್ತಿಗೆ ಬಂದ್ ಮಾಡಿಕೊಂಡು ತೆರಳಲಾಯಿತು.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಎಂದಿನಂತೆ ಬಸ್ ಸಂಚಾರ ಇತ್ತಾದರೂ ಪ್ರಯಾಣಿಕರಿಲ್ಲದ್ದರಿಂದ ಬಹುತೇಕ ಬಸ್ಸುಗಳು ಖಾಲಿಯಾಗಿ ಮುಂದೆ ಸಾಗಿದವು.
ನಗರದ ಜಯಶ್ರೀ ಹಾಗೂ ಶ್ರೀಕಾಂತ್ ಚಿತ್ರಮಂದಿರಗಳಲ್ಲಿ ಪ್ರದರ್ಶನ ರದ್ದುಗೊಳಿಸಲಾಗಿತ್ತು. ಕಾಲೇಜಿಗೆ ರಜೆ ಇರುವುದರಿಂದ ಸಿನಿಮಾವಾದರೂ ನೋಡೋಣವೆಂದು ಬರುತ್ತಿದ್ದ ಕೆಲ ಯುವಕರು ಮಂದಿರದ ಎದುರಿದ್ದ ಕೊರೊನಾ ವೈರಸ್ ಪ್ರಭಾವದಿಂದ ಈ ದಿನ ಪ್ರದರ್ಶನ ಇರುವುದಿಲ್ಲ ಎಂಬ ಫಲಕ ನೋಡಿ ವಾಪಾಸ್ ಆಗುತ್ತಿದ್ದ ದೃಶ್ಯ ಕಂಡು ಬಂತು.
ತಾಲೂಕಿನಾದ್ಯಂತ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳು ಬಂದ್ ಆಗಿದ್ದವು. ನರ್ಸರಿ, ಅಂಗನವಾಡಿ ಶಾಲೆಗಳನ್ನೂ ರಜೆ ಮಾಡಲಾಗಿತ್ತು. ಗ್ರಾಮೀಣ ಸಾರಿಗೆ ಬಸ್ಸುಗಳೂ ಖಾಲಿಯಾಗಿ ಸಂಚರಿಸಿದವು. ಜನಸಂದಣಿ ಇರುವ ಸಿಟಿ ಸಹವಾಸವೇ ಬೇಡವೆಂದು ಜನರು ಗ್ರಾಮದಲ್ಲೆ ಉಳಿಯಲು ನೋಡಿದಂತೆ ಕಂಡು ಬಂತು. ಆದರೆ ಸಂಜೆ ವೇಳೆಗೆ ನಗರದ ಬೀದಿಗಳಲ್ಲಿ ಜನಸಂಚಾರ ಹೆಚ್ಚಾಯಿತು. ಅಲ್ಲಲ್ಲಿ ಮಾರುಕಟ್ಟೆ ಪ್ರದೇಶಗಳು ಗಿಜಿಗಿಡಲಾರಂಭಿಸಿದವು. ನಗರ ಪ್ರದೇಶದ ಬಹುತೇಕರು ಹಗಲು ಹೊತ್ತಿನಲ್ಲಿ ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕಿದ್ದು ಕೊರೊನಾ ಭೀತಿಗೋ, ಬಿಸಿಲ ಧಗೆಯಿಂದಲೋ ತಿಳಿಯದಂತಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.