ದೇವರ ಅನುಸಂಧಾನಕ್ಕೆ ಭಕ್ತಿ ಮಾರ್ಗ ಶ್ರೇಷ್ಠ
ಕಲಾವಿದ ಹರೀಶ್ ಡೋಂಗ್ರೆ ಅಭಿಮತಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಕೇಂದ್ರದಿಂದ ಬನದಲ್ಲಿ ದಾಸ ಗಾಯನ ಕಾರ್ಯಕ್ರಮ
Team Udayavani, Mar 15, 2020, 4:55 PM IST
ಶೃಂಗೇರಿ: ದೇವರ ಜೊತೆಗೆ ಅನುಸಂಧಾನಕ್ಕೆ ಭಕ್ತಿ ಮಾರ್ಗ ಅತ್ಯಂತ ಉನ್ನತವಾದ ದಾರಿ. ಈ ಮಾರ್ಗದ ಹೆಗ್ಗಳಿಕೆ ದಾಸವರೇಣ್ಯರು ರಚಿಸಿದ ಹಾಡುಗಳಲ್ಲಿವೆ ಎಂದು ಕಲಾವಿದ, ಅರ್ಚಕ ಹರೀಶ್ ಡೋಂಗ್ರೆ ತಿಳಿಸಿದ್ದಾರೆ.
ಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಕೇಂದ್ರ ಟ್ರಸ್ಟ್ ನೆಮ್ಮಾರು, ಹೊಸೂರು ಗ್ರಾಮದ ಅಬ್ಬಿಗುಂಡಿಯಲ್ಲಿ ಏರ್ಪಡಿಸಿದ್ದ ಬನದಲ್ಲಿ ದಾಸ ಗಾಯನ ಕಾರ್ಯಕ್ರಮವನ್ನು ತಾಳ ನುಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ದಾಸ ಪಂಥದ ಗೀತ ರಚನೆಗಳಲ್ಲಿ ಭಕ್ತಿಯ ಪರಾಕಾಷ್ಠೆ ಮಾತ್ರವಲ್ಲದೇ, ಬದುಕಿನ ಲೌಕಿಕತೆಗೂ ಕನ್ನಡಿಯಾಗಿದೆ. ಹೀಗೆ ಆಧ್ಯಾತ್ಮ ಮತ್ತು ಲೌಕಿಕತೆಯ ಸಮ್ಮಿಲನದ ಅಪರೂಪದ ಸಾಹಿತ್ಯ ಪ್ರಕಾರವಾಗಿದೆ. ಇದನ್ನು ಮಾಧುರ್ಯ ಪೂರ್ಣವಾಗಿ ಹಾಡಿದಾಗ ಭಕ್ತಿಯ ಮತ್ತು ಸಂಗೀತದ ವಾತಾವರಣ ಯುಕ್ತವಾಗಿ ಒಡಮೂಡಿ ಹೊಸದೊಂದು ಲೋಕವನ್ನು ಅನಾವರಣಗೊಳಿಸುತ್ತದೆ. ಅತ್ಯಂತ ದುರ್ಗಮ ತಾಣವಾದ ಅಬ್ಬಿಗುಂಡಿಯಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಸಂಸ್ಥೆ ಮೇಲ್ಪಂಕ್ತಿಯಾಗಿದೆ. ಈ ಸಂಸ್ಥೆಯು ಬಹುತೇಕ ಕಾರ್ಯಕ್ರಮಗಳನ್ನು ಸಂಪೂರ್ಣ ಹಳ್ಳಿ ಇಲ್ಲವೇ ಕಾಡಿನ ಪ್ರದೇಶದಲ್ಲಿ ನಡೆಸುತ್ತಾ ಕಲಾ ಸಂಘಟನೆಗೆ ಹೊಸ ಭಾಷ್ಯ ಬರೆಯುತ್ತಿದೆ. ಸಂಸ್ಥೆಯ ಈ ರೀತಿಯ ಯಶಸ್ವೀ ಪರಿಕಲ್ಪನೆಯ ಹಿಂದೆ ನಾಡು ಕಂಡ ಶ್ರೇಷ್ಠ ಸಾಂಸ್ಕೃತಿಕ ಸಂಘಟಕ ರಮೇಶ್ ಬೇಗಾರ್ ಅವರ ಕನಸಿರುವುದು ಸ್ಪಷ್ಟವಾಗಿದೆ ಎಂದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ರಮೇಶ್ ಬೇಗಾರ್ ಮಾತನಾಡಿ, ಕಲೆ ಕಟ್ಟ ಕಡೆಯ ಗ್ರಾಮವನ್ನು ಮತ್ತು ಗ್ರಾಮಸ್ಥರನ್ನು ತಲುಪಬೇಕು ಎಂಬುದನ್ನು ಸಂಸ್ಥೆಯ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ಸಂಸ್ಥೆ ನಕ್ಸಲ್ ಬಾತ್ ಸ್ಥಳ ಸೇರಿದಂತೆ ಬೇರೆ ಬೇರೆ ಪ್ರದೇಶದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸುತ್ತಾ ಸಮಾಜದ ಎಲ್ಲಾ ಸ್ತರದ ಜನರನ್ನು ತಲುಪುತ್ತಿದೆ. ಕಾಲ್ನಡಿಗೆಯ ಸಂಚಾರ ಮಾತ್ರ ಇರುವ ದುರ್ಗಮ ತಾಣಗಳಲ್ಲಿಯೂ ಕಾರ್ಯಕ್ರಮ ಏರ್ಪಡಿಸಿದ ಹೆಗ್ಗಳಿಕೆ ನಮ್ಮ ಸಂಸ್ಥೆಗಿದೆ ಎಂದರು. ಸುಬ್ರಹ್ಮಣ್ಯ ಆಚಾರ್ಯ ನಿರೂಪಿಸಿ, ಕಕ್ಕರಣೆ ಮಹಾಬಲ ವಂದಿಸಿದರು.
ಜನಮನ ಗೆದ್ದ ದಾಸವಾಣಿ: ಉಡುಪಿಯ ನಾರಾಯಣ ಸರಳಾಯ ಮತ್ತು ಸಂಗಡಿಗರಿಂದ ದಾಸವಾಣಿ ಕಾರ್ಯಕ್ರಮ ಸೇರಿದ್ದ ಅಪಾರ ಸಂಖ್ಯೆಯ ಗ್ರಾಮಸ್ಥರನ್ನು ರಂಜಿಸಿತು. ಸರಳಾಯರು ವಂದಿಪೆ ನಿನಗೆ ಗಣನಾಥ ಎಂಬ ನಾಟರಾಗದ ಕೃತಿಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದರು. ಮೋಹನ ರಾಗದಲ್ಲಿ ಪ್ರಸ್ತುತಪಡಿಸಿದ ಪಿಳ್ಳಂಗೋವಿ ಹಾಡು, ಕಾಪಿ ರಾಗದ ಆಡಿಸಿದಳ್ ಯಶೋಧೆ, ಮಧ್ಯಮಾವತಿ ರಾಗದ ಲಕ್ಷ್ಮೀ ಬಾರಮ್ಮ ಕೃತಿಗಳು ಪ್ರೇಕ್ಷಕರ ಮನ ಸೂರೆಗೊಂಡವು.
ಪಕ್ಕವಾದ್ಯದಲ್ಲಿ ಸುಹಾಸ್ ಹೆಬ್ಟಾರ್, ಪುತ್ತೂರು ಇವರು ತಬಲಾದಲ್ಲಿ, ಕೀ ಬೋರ್ಡ್ ನಲ್ಲಿ ಎಂ.ಕೆ. ಶ್ರೀನಿ ಮತ್ತು ವಿಶೇಷ ಉಪಕರಣದಲ್ಲಿ ಸುಮಂತ್ ಹೆಬ್ಟಾರ್ ಸಹಕಾರ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Chikkamagaluru: ಮೂರು ದಿನದ ಬಾಣಂತಿ ಮೃತ್ಯು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪ
Kottigehara: ನಿರ್ದೇಶಕ ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ಖಳನಟನಾಗಿ ನಟಿಸಿದ ಬಣಕಲ್ ನಿವಾಸಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Elephant: ಕಾಫಿನಾಡಿನಲ್ಲಿ ಕಾಡಾನೆ ನೈಟ್ ರೌಂಡ್ಸ್… ಇದು ಮುಗಿಯದ ಗೋಳು ಎಂದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್ ಭೇಟಿ: 21ರಿಂದ ಮೋದಿ ಪ್ರವಾಸ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.