ಕೊರೊನಾ ಭೀತಿ: ಪ್ರವಾಸಿ ತಾಣ, ಸಂತೆಗಳಲ್ಲಿ ಜನರಿಲ್ಲ
ಹೆಚ್ಚಿನ ಕಡೆಗಳಲ್ಲಿ ಜನಜೀವನ ಸಾಮಾನ್ಯ; ಮೀನು ಖರೀದಿಗೆ ಜನ
Team Udayavani, Mar 16, 2020, 5:30 AM IST
ಕುಂದಾಪುರ: ಕೊರೊನಾ ಸಾರ್ವತ್ರಿಕವಾಗಿ ಹರಡದಂತೆ ಸರಕಾರ ಹತ್ತು ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂ ಡಿರುವ ಮಧ್ಯೆಯೇ ಜನತೆ ನಿರಾತಂಕರಾಗಿದ್ದಾರೆ. ಸಾಮಾನ್ಯ ದಿನಗಳಂತೆ ತಮ್ಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಆಸ್ಪತ್ರೆ
ಸರಕಾರಿ ಆಸ್ಪತ್ರೆಯಲ್ಲಿ ಕ್ಷಿಪ್ರ ಕಾರ್ಯಾಚರಣೆಗೆ ತಂಡಗಳನ್ನು ರಚಿಸಲಾಗಿದೆ. ವೈದ್ಯರು, ನರ್ಸ್, ಡಿ ಗ್ರೂಪ್ ಸಿಬಂದಿ ಸೇರಿದಂತೆ ವಿವಿಧ ತಂಡಗಳನ್ನು ಆಡಳಿತ ಶಸ್ತ್ರಚಿಕಿತ್ಸಕ ಡಾ| ರಾಬರ್ಟ್ ರೆಬೆಲ್ಲೋ ಅವರು ರಚಿಸಿದ್ದಾರೆ. 10 ಬೆಡ್‌ಗಳ ತೀವ್ರನಿಗಾ ವಾರ್ಡ್‌ನ್ನು ಸಿದ್ಧಪಡಿಸಲಾಗಿದೆ. ಪಿಪಿಇ (ಪರ್ಸನಲ್ ಪ್ರೊಟೆಕ್ಟಿವ್ ಎಕ್ವಿಪ್‌ಮೆಂಟ್) ಕಿಟ್‌ಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಲಾಗಿದೆ. ಮಾಸ್ಕ್ಗಳನ್ನು, ಆಂಟಿವೈರಸ್ ಔಷಧಗಳನ್ನು ತಯಾರಾಗಿಟ್ಟುಕೊಳ್ಳಲಾಗಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಸ್ಯಾನಿಟೈಸರ್ ಇಲ್ಲ
ನಗರದ ಯಾವುದೇ ಮೆಡಿಕಲ್ ಸ್ಟೋರ್‌ಗಳಲ್ಲಿ, ಇತರ ಅಂಗಡಿಗಳಲ್ಲಿ ಸ್ಯಾನಿಟೈಸರ್ ದೊರೆಯುತ್ತಿಲ್ಲ. ಕಳೆದ ಕೆಲವು ದಿನಗಳಿಂದ ಸರಬರಾಜಾಗುತ್ತಿಲ್ಲ. ಕೆಲವೆಡೆ ಬಂದ ಸ್ಟಾಕನ್ನು ಕೂಡಾ ಮರಳಿ ಪಡೆದ ಸರಬರಾಜು ಸಂಸ್ಥೆಗಳು ಅವುಗಳನ್ನು ಬೆಂಗಳೂರಿಗೆ ಕಳುಹಿಸಿವೆ ಎನ್ನುತ್ತಾರೆ ಮೆಡಿಕಲ್‌ನವರು. ಒಂದು ಮೆಡಿಕಲ್‌ನಲ್ಲಿ ಶನಿವಾರ 200 ಸ್ಯಾನಿಟೈಸರ್‌ಗಳನ್ನು ತರಿಸ ಲಾಗಿದ್ದು ರವಿವಾರ ಮಧ್ಯಾಹ್ನದ ವೇಳೆಗೆ ಅದು ಖಾಲಿಯಾಗಿವೆ. ಸುಮಾರು 40 ರೂ.ಗೆಲ್ಲ ದೊರೆ ಯುವ ಸ್ಯಾನಿಟೈಸರ್ ಬೆಲೆ ಏಕಾಏಕಿ 120 ರೂ.ವರೆಗೆ ಏರಿಕೆಯಾಗಿದೆ. ಕಂಪೆನಿಗಳೇ ಅಧಿಕ ದರ ವಿಧಿಸಿ ಮಾರಾಟ ಮಾಡುತ್ತಿವೆ. ಮುಖಗವಸು ಕೂಡಾ ಅತ್ಯಂತ ಬೇಡಿಕೆ ಹೊಂದಿದ್ದು, ಇದರ ದರ ದಲ್ಲೂ ಏರಿಕೆಯಾಗಿದ್ದು ಸ್ಟಾಕ್ ಕಡಿಮೆಯಾಗಿದೆ.
ಬಸ್ ಸ್ಟಾಂಡ್
ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ರವಿವಾರ ಹಗಲಿನ ವೇಳೆ ಅಂತಹ ದೊಡ್ಡ ಪ್ರಮಾಣದ ಬದಲಾವಣೆ ಕಂಡು ಬರಲಿಲ್ಲ. ಎಂದಿನ ರವಿವಾರಗಳಂತೆಯೇ ಜನರ ಓಡಾಟ ಇದ್ದಿತ್ತು. ಬಸ್‌ಗಳೂ ಇದ್ದವು. ಕೆಲವರು ಮಾತ್ರ ಮುಖಕ್ಕೆ ಮುಖಗವಸು ಹಾಕಿದ್ದರು. ಇನ್ನಿತರರು ಸಾಮಾನ್ಯವಾಗಿಯೇ ಇದ್ದರು.
ಪ್ರವಾಸಿಗರ ಸಂಖ್ಯೆ ಕಡಿಮೆ
ಗಂಗೊಳ್ಳಿ/ ಮರವಂತೆ/ ಹೆಮ್ಮಾಡಿ/ ಬಸ್ರೂರು: ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ತ್ರಾಸಿ – ಮರವಂತೆ ಬೀಚ್‌ನಲ್ಲಿ ರವಿವಾರ ಪ್ರವಾಸಿಗರ ಸಂಖ್ಯೆ ತುಂಬಾ ಕಡಿಮೆ ಇದ್ದಂತೆ ಕಂಡು ಬಂತು. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ರವಿವಾರವಾದ್ದರಿಂದ ಎಂದಿನಂತೆ ಜನ ಸಂಚಾರ ವಿರಳವಾಗಿತ್ತು.
ಬೇರೆ ಸಮಯಗಳಲ್ಲಿ ರವಿವಾರ ನೂರಾರು ಸಂಖ್ಯೆಯ ಪ್ರವಾಸಿಗರು ದೂರ-ದೂರದ ಊರುಗಳಿಂದ ಮರವಂತೆಯ ಕಡಲು – ನದಿಯ ಸೌಂದರ್ಯವನ್ನು ಆಸ್ವಾದಿಸಲು ಬರುತ್ತಿದ್ದರು. ಆದರೆ ಈ ವಾರ ಬೆರಳೆಣಿಕೆಯಷ್ಟು ಮಂದಿ ಮಾತ್ರ ಇದ್ದರು. ಗಂಗೊಳ್ಳಿಯ ಸೀವಾಕ್, ಕೋಡಿಯ ಸೀವಾಕ್‌ನಲ್ಲೂ ಜನ ಕಡಿಮೆಯಾಗಿದ್ದಾರೆ. ಬಸ್ರೂರಿನಲ್ಲೂ ಜನ ಸಂಚಾರ ವಿರಳವಿದ್ದು ಹೊಟೇಲ್‌ಗಳಲ್ಲಿ ಜನ ಕಡಿಮೆಯಿದ್ದರು.
ಮೀನು ಖರೀದಿಗೆ ಜನ
ಸಂತೆ, ಪೇಟೆಗಳಲ್ಲಿ ರವಿವಾರದ್ದರಿಂದ ಜನ ಸಂಚಾರ ಕಡಿಮೆಯಿದ್ದರೂ ಕೂಡ ಮುಳ್ಳಿಕಟ್ಟೆಯಲ್ಲಿರುವ ಮೀನು ಮಾರುಕಟ್ಟೆ, ಗಂಗೊಳ್ಳಿಯಲ್ಲಿರುವ ಮೀನು ಮಾರುಕಟ್ಟೆಗಳಲ್ಲಿ ಮೀನು ಖರೀದಿಗೆ ಜನ ಹೆಚ್ಚಿನ ಆಸಕ್ತಿ ತೋರಿದಂತೆ ಕಂಡು ಬಂತು.
ಮೀನು ಖರೀದಿಗೆ ಜನ
ಸಂತೆ, ಪೇಟೆಗಳಲ್ಲಿ ರವಿವಾರದ್ದರಿಂದ ಜನ ಸಂಚಾರ ಕಡಿಮೆಯಿದ್ದರೂ ಕೂಡ ಮುಳ್ಳಿಕಟ್ಟೆಯಲ್ಲಿರುವ ಮೀನು ಮಾರುಕಟ್ಟೆ, ಗಂಗೊಳ್ಳಿಯಲ್ಲಿರುವ ಮೀನು ಮಾರುಕಟ್ಟೆಗಳಲ್ಲಿ ಮೀನು ಖರೀದಿಗೆ ಜನ ಹೆಚ್ಚಿನ ಆಸಕ್ತಿ ತೋರಿದಂತೆ ಕಂಡು ಬಂತು.ಹೆಮ್ಮಾಡಿ, ತಲ್ಲೂರು, ಗಂಗೊಳ್ಳಿ, ಶಂಕರ ನಾರಾಯಣ, ಹಾಲಾಡಿ, ಬೆಳ್ವೆ, ತ್ರಾಸಿ, ಮರವಂತೆ ಸೇರಿದಂತೆ ಹೆಚ್ಚಿನೆಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಭೀತಿಯಲ್ಲಿ ಅಲ್ಲದಿದ್ದರೂ, ರವಿವಾರವಾದ್ದರಿಂದ ಜನ ಸಂಚಾರ ಕಡಿಮೆಯಿತ್ತು.
ಸಂತೆಗೂ ಎಫೆಕ್ಟ್
ಪ್ರತಿ ರವಿವಾರ ಗೋಳಿಯಂಗಡಿ ಪೇಟೆಯಲ್ಲಿ ವಾರದ ಸಂತೆ ನಡೆಯುತ್ತದೆ. ಇಲ್ಲಿ ಕೊಂಚ ಪ್ರಮಾಣದಲ್ಲಿ ಜನರ ಸಂಖ್ಯೆ ಇಳಿಮುಖವಾಗಿತ್ತು.
ಮುಂಜಾಗ್ರತೆ ಕ್ರಮ
ದೇಗುಲ ವ್ಯವಸ್ಥಾಪನ ಸಮಿತಿ, ಆರೋಗ್ಯ ಇಲಾಖೆಯ ಸಹಭಾಗಿತ್ವದಲ್ಲಿ ದೇಗುಲಕ್ಕೆ ಆಗಮಿಸುವ ಭಕ್ತರ ಆರೋಗ್ಯದ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಅನಾರೋಗ್ಯಕ್ಕೀಡಾದ ವ್ಯಕ್ತಿಗಳು ಕಂಡುಬಂದರೆ ತಪಾಸಣೆಗೆ ಸೂಕ್ತ ವ್ಯವಸ್ಥೆ ಏರ್ಪಡಿಸಲಾಗಿದೆ. ತಾಲೂಕು ವೈದ್ಯಾಧಿಕಾರಿ ಅವರ ಮಾರ್ಗದರ್ಶನದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಶುಚಿತ್ವಕ್ಕೆ ಆದ್ಯತೆ ನೀಡಲಾಗಿದ್ದು ಕ್ರಿಮಿನಾಶಕ ಔಷಧ ಸಿಂಪಡಿಸಲಾಗುತ್ತಿದೆ. ಪರಿಸರ ಮಾಲಿನ್ಯವಾಗದಂತೆ ಸ್ವತ್ಛತೆಗೆ ಆದ್ಯತೆ ನೀಡಲಾಗಿದೆ. ಗ್ರಾ.ಪಂ. ವತಿಯಿಂದ ಹೆಚ್ಚಿನ ಸಹಕಾರ ನೀಡಲಾಗುತ್ತಿದೆ
-ಪ್ರಕಾಶ ಪೂಜಾರಿ, ಅಧ್ಯಕ್ಷರು, ಗ್ರಾ.ಪಂ., ಕೊಲ್ಲೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.