2,200 ಹುತಾತ್ಮರ ಕುಟುಂಬದ ಆರೋಗ್ಯ ವಿಮೆ CRPFನಿಂದಲೇ ಪಾವತಿ
Team Udayavani, Mar 15, 2020, 9:55 PM IST
ನವದೆಹಲಿ: ಕರ್ತವ್ಯದ ವೇಳೆ ಅಸುನೀಗಿರುವ 2,200 ಸಿಬ್ಬಂದಿಯ ಕುಟುಂಬ ವರ್ಗಕ್ಕೆ ಸಮಗ್ರ ಆರೋಗ್ಯ ಸೇವೆ ಹಾಗೂ ಸಂಪೂರ್ಣವಾಗಿ ಆರೋಗ್ಯ ವಿಮೆ ಪ್ರೀಮಿಯಂ ಪಾವತಿ ಮಾಡುವ ನಿರ್ಧಾರವನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಕೈಗೊಂಡಿದೆ.
ಇದೇ ಮೊದಲ ಬಾರಿಗೆ ಇಂಥ ತೀರ್ಮಾನ ಕೈಗೊಳ್ಳಲಾಗುತ್ತಿದೆ. ಸಿಆರ್ಪಿಎಫ್ ನಲ್ಲಿ ವಿವಿಧ ರ್ಯಾಂಕಿಂಗ್ನ 3.25 ಲಕ್ಷ ಮಂದಿ ಸಿಬ್ಬಂದಿ ಇದ್ದಾರೆ. ಮಾ.19ರಂದು ನಡೆಯಲಿರುವ 81ನೇ ಸ್ಥಾಪನಾ ದಿನದಂದು ಈ ಬಗ್ಗೆ ಘೋಷಣೆ ಮಾಡಲಾಗುತ್ತದೆ. ಪ್ರೀಮಿಯಂ ಪಾವತಿ ಮಾಡುವ ಮೊತ್ತವನ್ನು ಯೋಧರ ಕಲ್ಯಾಣಕ್ಕಾಗಿ ಬಳಕೆ ಮಾಡುವ ನಿಧಿಯಿಂದ ಪಡೆದುಕೊಳ್ಳಲಾಗುತ್ತದೆ ಎಂದು ಸಿಆರ್ಪಿಎಫ್ ಮಹಾನಿರ್ದೇಶಕ ಎ.ಪಿ.ಮಹೇಶ್ವರಿ ಭಾನುವಾರ ತಿಳಿಸಿದ್ದಾರೆ.
ಇದುವರೆಗಿನ ವ್ಯವಸ್ಥೆ ಪ್ರಕಾರ, ಹುತಾತ್ಮರಾಗಿರುವ ಯೋಧರ ಕುಟುಂಬ ಸದಸ್ಯರೇ ಆರೋಗ್ಯ ವಿಮೆಯ ಪ್ರೀಮಿಯಂ ಅನ್ನು ಪಾವತಿ ಮಾಡಿ, ಸರ್ಕಾರದಿಂದ ಸಿಗುವ ಆರೋಗ್ಯಸೇವೆಯ ಸೌಲಭ್ಯ ಪಡೆಯಬೇಕಾಗಿತ್ತು. ಆದರೆ, ಇನ್ನು ಮುಂದೆ ಸಿಆರ್ಪಿಎಫ್ ತನ್ನದೇ ನಿಧಿಯಿಂದ ಇದನ್ನು ಪಾವತಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.