ಹಣ ಕೊಡದಿದ್ದಕ್ಕೆ ಬಾಡಿಗೆ ತಾಯಿಯ ಗರ್ಭಪಾತ!
Team Udayavani, Mar 16, 2020, 3:08 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಕಾನೂನ್ಮಾತಕವಾಗಿ ಬಾಡಿಗೆ ತಾಯ್ತನಕ್ಕಾಗಿ ಗರ್ಭ ಧರಿಸಿದ್ದ ಮಹಿಳೆ ಬಳಿ ಹಣಕ್ಕೆ ಬೇಡಿಕೆ ಇಟ್ಟಿದಲ್ಲದೆ, ಹಣ ಕೊಡಲು ನಿರಾಕರಿಸಿದಾಗ ಆಕೆ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿ ಗರ್ಭ ಪಾತ ಮಾಡಿಸಿರುವ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ.
ಮೈಕೋ ಲೇಔಟ್ ನಿವಾಸಿ 27 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಬೊಮ್ಮನಹಳ್ಳಿಯ ಸ್ವಾತಿ ಮಹಿಳಾ ಸಂಘಟನೆಯ ಪೂಜಾ, ಪ್ರೇಮಾ, ಆಶಾ, ರೀಟಾ, ಪ್ರಮೀಳಾ ಮತ್ತು ಮಂಜುನಾಥ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿ ಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳಿಂದ ಗರ್ಭಪಾತಕ್ಕೊಳದ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿ ದ್ದಾರೆ ಎಂದು ಪೊಲೀಸರು ಹೇಳಿದರು.
ಬಡ ಕುಟುಂಬದ ಸಂತ್ರಸ್ತೆ ಸಂಸಾರದ ನಿರ್ವಹಣೆಗಾಗಿ ಬಾಡಿಗೆ ತಾಯ್ತನಕ್ಕೆ ಒಪ್ಪಿಕೊಂಡಿದ್ದು, ವಿಶ್ವಾಸ್ ಫರ್ಟಿಲಿಟಿ ಸೆಂಟರ್ ಮೂಲಕ ಬಾಡಿಗೆ ತಾಯಿಯಾಗಿದ್ದರು. ಕಾನೂನ್ಮಾತಕವಾ ಗಿಯೂ ಎಲ್ಲ ಪ್ರಕ್ರಿಯೆ ನಡೆಸಲಾಗಿದೆ. ಮದುರೀಮನಾಗ್ ಮತ್ತು ದೀಪಾಂ ಜನಾಗ್ ದಂಪತಿಯ ಪ್ರನಾಳ ಶಿಶು ವಿಧಾನದಲ್ಲಿ ಗರ್ಭಧರಿಸಿದ್ದು, ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು.
ವಿಶ್ವಾಸ್ ಫರ್ಟಿಲಿಟಿ ಸೆಂಟರ್‌ನ ಬಾಡಿಗೆ ತಾಯಂದಿರನ್ನು ನೋಡಿಕೊಳ್ಳುವ ಸಾಯಿ ಆರ್ಟ್ ಬ್ಯಾಂಕ್ ಸಂಸ್ಥೆಯ ಮಾಲೀಕರಾದ ಗೀತಾ ಅವರ ಪಿಜಿ (ಪೇಯಿಂಗ್ ಗೆಸ್ಟ್)ಯಲ್ಲಿ ಸಂತ್ರಸ್ತೆ ಯನ್ನು ಪೋಷಣೆ ಮಾಡಲಾಗುತ್ತಿತ್ತು. ಈ ಮಧ್ಯೆ ಆರೋಪಿಗಳು ಪಿಜಿಗೆ ನುಗ್ಗಿ ತಾವುಗಳು ಬೊಮ್ಮನಹಳ್ಳಿಯ “ಸ್ವಾತಿ ಮಹಿಳಾ ಸಂಘಟನೆ’ ಸದಸ್ಯರು ಎಂದು ಹೇಳಿ, ಬಾಡಿಗೆ ತಾಯ್ತನಕ್ಕೆ ಪಡೆಯುತ್ತಿರುವ ಹಣದಲ್ಲಿ ತಮಗೂ ಪಾಲು ಕೊಡುವಂತೆ ಕೇಳಿದ್ದಾರೆ.
ಅದಕ್ಕೆ ಗರ್ಭಿಣಿ ಹಾಗೂ ಪಿಜಿ ಮಾಲೀಕರಾದ ಗೀತಾ ನಿರಾಕರಿಸಿದ್ದಾರೆ. ಅದಕ್ಕೆ ಆರೋಪಿಗಳು, ಒಂದು ವೇಳೆ ಹಣ ಕೊಡದಿದ್ದರೆ ಗರ್ಭಿಣಿಯರಿಗೆ ಹೊಡೆದು ಗರ್ಭಪಾತ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಆಗ ಸಂತ್ರಸ್ತೆ, ಹೊಟ್ಟೆಪಾಡಿಗಾಗಿ ಬಾಡಿಗೆ ತಾಯಿ ಆಗಿದ್ದೇನೆ ಬಿಟ್ಟು ಬಿಡಿ ಎಂದು ಗೋಗರೆದಿದ್ದಾರೆ. ಆಗ ಪ್ರೇಮಾ ಎಂಬ ಆರೋಪಿ, “ನೀನು ಹಾಗೂ ನಿನ್ನ ಮಗುವನ್ನು ಉಳಿಸಿಕೊಳ್ಳಬೇಕಾದರೆ ನಮಗೆ ಹಣ ಕೊಡಲೇಬೇಕು’ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.
ಕೂದಲಿಡಿದು ಎಳೆದಾಡಿ, ಮನಸೋಯಿಚ್ಛೆ ಹಲ್ಲೆ: ಮಾ.11ರಂದು ರಾತ್ರಿ 10 ಗಂಟೆಗೆ ಮತ್ತೂಮ್ಮೆ ಪಿಜಿಗೆ ಬಂದ ಆರೋಪಿಗಳು, “ಈ ಮೊದಲು ಹೇಳಿದಂತೆ ಮಾಮೂಲಿ ಕೊಡಬೇ ಕೆಂದು ಹೇಳಲಾಗಿತ್ತು. ಇಷ್ಟು ದಿನಗಳಾದರೂ ಏಕೆ ನೀಡಿಲ್ಲ ಎಂದು ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾರೆ. ಬಳಿಕ ಆಕೆಯ ಕೂದಲನ್ನು ಹಿಡಿದು ಎಳೆದಾಡಿ ಮನಸೋ ಇಚ್ಛೆ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ಆಕೆಯ ಮೇಲಿನ ಹಲ್ಲೆ ತಡೆಯಲು ಮುಂದಾದ ಪಿಜಿ ಮುಖ್ಯಸ್ಥೆ ಗೀತಾ ಹಾಗೂ ಇತರೆ ಯುವತಿಯರಿಗೂ ಥಳಿಸಿದ್ದಾರೆ. ಈ ವೇಳೆ ಸಂತ್ರಸ್ತೆ, ತಾನೂ ಗರ್ಭಿಣಿ ಯಾಗಿದ್ದೇನೆ ಹೊಡೆಯಬೇಡಿ ಎಂದು ಅಂಗಲಾಚಿದರೂ ದುಷ್ಕರ್ಮಿಗಳು, ಆಕೆಯನ್ನು ನೆಲಕ್ಕೆ ಬೀಳಿಸಿ ಕಾಲಿನಲ್ಲಿ ಒದ್ದಿದ್ದಾರೆ. ಈ ವೇಳೆ ಸಂತ್ರಸ್ತೆಗೆ ತೀವ್ರ ರಕ್ತಸ್ರಾವ ವಾಗಿದ್ದು, ಅಸ್ವಸ್ಥಗೊಂಡು ಕುಸಿದು ಬಿದ್ದಿ ದ್ದಾಳೆ. ಆದರೂ ಬಿಡದ ಆರೋಪಿ ಮಹಿಳೆಯರು ಗರ್ಭಪಾತ ಮಾಡಿಯೇ ಹೋಗುತ್ತೇವೆ ಎಂದು ಕಾಲಿನಿಂದ ಹೊಟ್ಟೆಗೆ ಒದ್ದಿದ್ದಾರೆ.
ಪರಿಣಾಮ ಇನ್ನಷ್ಟು ರಕ್ತಸ್ರಾವವಾಗಿ ಸಂತ್ರಸ್ತೆ ಅರೆಪ್ರಜ್ಞಾ ಸ್ಥಿತಿ ತಲುಪಿಸಿದ್ದಾರೆ. ಅನಂ ತರ ಆರೋಪಿಗಳು ಹೋಗುತ್ತಿದ್ದಂತೆ ಪಿಜಿಯಲ್ಲಿದ್ದ ಮಹಿಳೆಯರು ಸಂತ್ರಸ್ತೆ ಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಗರ್ಭಪಾತವಾಗಿದೆ ಎಂದು ದೃಢಪಡಿಸಿದ್ದಾರೆ. ಹೀಗಾಗಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ದೂರು ನೀಡಿ ದ್ದಾರೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು ಸ್ವಾತಿ ಮಹಿಳಾ ಸಂಘಟನೆಗೆ ಸೇರಿದವರಾಗಿದ್ದು, ಇದು ವರೆಗೂ ಬಂಧಿಸಿಲ್ಲ. ಸಂತ್ರಸ್ತೆ ಚೇತರಿಸಿಕೊಳ್ಳುತ್ತಿದ್ದಾರೆ.
-ಶ್ರೀನಾಥ್ ಮಹದೇವ್ ಜೋಶಿ, ಡಿಸಿಪಿ ಆಗ್ನೇಯ ವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.