ಬೆಂಗರೆಯಲ್ಲಿ ಮಲ್ಪೆ ಮಾದರಿಯ “ಸೀ ವಾಕ್’ ಅನುಷ್ಠಾನಕ್ಕೆ ಸರಕಾರ ಉತ್ಸುಕ
ಮಂಗಳೂರು ಬೀಚ್ ಪ್ರವಾಸೋದ್ಯಮದಲ್ಲಿ ಹೊಸ ನಿರೀಕ್ಷೆ
Team Udayavani, Mar 16, 2020, 5:02 AM IST
ಸಾಂದರ್ಭಿಕ ಚಿತ್ರ.
ಮಹಾನಗರ: ಕೇರಳ ಹಾಗೂ ಉಡುಪಿಯ ಮಲ್ಪೆಯಲ್ಲಿ ಪ್ರವಾಸೋದ್ಯಮಕ್ಕೆ ಹೊಸ ಆಕರ್ಷಣೆ ಸೃಷ್ಟಿಸಿರುವ “ಸೀ ವಾಕ್’ ಪರಿಕಲ್ಪನೆಯನ್ನು ಮಂಗಳೂರಿನ ಬೆಂಗರೆ ಪರಿಸರದ ಬ್ರೇಕ್ ವಾಟರ್‌ನಲ್ಲಿ ಕೈಗೊಳ್ಳುವ ಬಗ್ಗೆ ರಾಜ್ಯಸರಕಾರ ಇಚ್ಛಾಶಕ್ತಿ ತೋರಿದೆ.
ಮಂಗಳೂರು ಪರಿಸರದ ಬೀಚ್ ಅಭಿವೃದ್ಧಿ ನಿಟ್ಟಿನಲ್ಲಿ ಯಾವುದೇ ಹೊಸ ಯೋಜನೆಯನ್ನು ಆರಂಭ ಮಾಡುತ್ತಿಲ್ಲ ಎಂಬ ಪ್ರವಾಸಿಗರ ಆಕ್ಷೇಪದ ಮಧ್ಯೆಯೇ ಇದೀಗ ಸೀ ವಾಕ್ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರಕಾರ ಉತ್ಸುಕತೆ ತೋರಿದೆ. ಇದು ಸಾಧ್ಯವಾದರೆ, ಇಲ್ಲಿನ ಬೀಚ್ ಪ್ರವಾಸೋದ್ಯಮದಲ್ಲಿ ಹೊಸ ನಿರೀಕ್ಷೆ ಮೂಡಿದಂತಾಗುತ್ತದೆ.
ಕೇರಳದಲ್ಲಿ ಯಶಸ್ವಿ
ಕೇರಳದ ಹಲವು ಕಡಲ ಕಿನಾರೆಗಳಲ್ಲಿ ಈಗಾಗಲೇ ಸೀ ವಾಕ್ ಪರಿಕಲ್ಪನೆ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, ಪ್ರವಾಸೋದ್ಯಮ ಕೇಂದ್ರಗಳಾಗಿ ಬೆಳೆದಿದೆ. ರಾಜ್ಯದಲ್ಲಿ ಮೊದಲ ಸೀ ವಾಕ್ ಮಲ್ಪೆಯಲ್ಲಿ ಎರಡು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ಇಲ್ಲೂ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಭೇಟಿ ನೀಡಿ ಸಮುದ್ರದ ಸೌಂದರ್ಯ ಆಸ್ವಾದಿಸುತ್ತಿದ್ದಾರೆ. ಮಲ್ಪೆ ಬೋಟ್ ಜೆಟ್ಟಿಯ ಬಳಿ ಸಮುದ್ರದಲ್ಲಿ ಹಿಂದೆ ಇದ್ದ ಬ್ರೇಕ್ ವಾಟರ್ ಕಲ್ಲಿನ ಹಾದಿಯ ಮೇಲೆ ರಾಜ್ಯದ ಮೊದಲ ಸೀ ವಾಕ್ ವೇ ನಿರ್ಮಾಣಗೊಂಡಿದೆ. ಸಮುದ್ರ ಮೇಲ್ಭಾಗದಲ್ಲಿ 450 ಮೀ. ಉದ್ದ ಹಾಗೂ 2.4 ಮೀ. ಅಗಲವಿದೆ. ಇಲ್ಲಿ ಪ್ರವಾಸಿಗರು ನಡೆದಾಡಲು ಅನುಕೂಲವಾಗುವಂತೆ ಇಂಟರ್‌ಲಾಕ್ ಅಳವಡಿಸಲಾಗಿದೆ. ಸಮುದ್ರ ಸೌಂದರ್ಯವನ್ನು ಕುಳಿತು ವೀಕ್ಷಿಸಲು ಕಲ್ಲಿನ ಬೆಂಚ್‌ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ವಾಕ್‌ವೆà ಅಂತರದಲ್ಲಿ ಸುಂದರ ಕಲಾಕೃತಿ, ಅಲಂಕಾರಿಕಾ ದೀಪಗಳನ್ನು ಅಳವಡಿಸಲಾಗಿದೆ.
ಸಮುದ್ರದ ಸೊಬಗು
ಸವಿಯುವ ಅವಕಾಶ
ಸಾಮಾನ್ಯವಾಗಿ ಮಳೆಗಾಲದ ಅವಧಿಯಲ್ಲಿ ಸಮುದ್ರಕ್ಕೆ ಇಳಿಯಲು ಅವಕಾಶ ಇರುವುದಿಲ್ಲ. ಸಮುದ್ರ ಹೆಚ್ಚು ರಫ್ ಆಗಿರುವುದರ ಜತೆಯಲ್ಲಿ ಹೆಚ್ಚು ಅಪಾಯಕಾರಿಯಾಗಿರುತ್ತದೆ. ಸೀ ವಾಕ್ ನಿರ್ಮಾಣವಾದರೆ ಮಳೆಗಾಲದ ಸಂದರ್ಭದಲ್ಲೂ ಸಮುದ್ರದ ಸೊಬಗನ್ನು ಸವಿಯುವ ಅವಕಾಶ ಲಭ್ಯವಾಗಲಿದೆ.
ಏನಿದು ಸೀ ವಾಕ್?
ಸೀ ವಾಕ್ ಅಂದರೆ ಸಮುದ್ರದ ಮೇಲೆ ನಡೆದಾಡುವುದು ಎಂದರ್ಥ. ಈಗಾಗಲೇ ಇರುವ ಬ್ರೇಕ್‌ವಾಟರ್‌ನ ಮೇಲೆ ಪ್ರವಾಸಿಗರಿಗೆ ನಡೆದಾಡುವ ಪಾಥ್ ನಿರ್ಮಿಸಲಾಗುವುದು. ಸಮುದ್ರದಲ್ಲಿ ಸುಮಾರು ಒಂದು ಕಿ.ಮೀ. ದೂರದವರೆಗೆ ನಡೆದಾಡುವ ಅನುಭವವನ್ನು ಇದು ನೀಡಲಿದೆ. ಸಮುದ್ರದ ಅಲೆಗಳಿಂದ ಏಳುವ ರಭಸದ ಗಾಳಿಗೆ ಮೈಯೊಡ್ಡುವ ಅವಕಾಶ, ಯುವಜನರ ಕ್ರೇಜಿಗಾಗಿ ಸೆಲ್ಫಿ ಪಾಯಿಂಟ್, ಸುಂದರ ದೀಪಸ್ತಂಭಗಳು, ನಡೆದಾಡಲು ಅನುಕೂಲ ಆಗುವ ವ್ಯವಸ್ಥೆ ಇದರಲ್ಲಿ ಒಳಗೊಳ್ಳಲಿದೆ. ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಆಕರ್ಷಿಸುವುದು ಈ ಯೋಜನೆಯ ಉದ್ದೇಶ.
ವರದಿಗೆ ಸೂಚನೆ
ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಮಂಗಳೂರಿನ ಸಮುದ್ರದಲ್ಲೂ ಸೀ ವಾಕ್ ನಿರ್ಮಿಸುವ ಸಾಧ್ಯತೆಗಳ ಬಗ್ಗೆ ವರದಿ ನೀಡುವಂತೆ ಬಂದರು, ಒಳನಾಡು ಜಲಸಾರಿಗೆ ಇಲಾಖೆಗೆ ಸೂಚನೆ ನೀಡಲಾಗಿದೆ. ಪ್ರವಾಸೋದ್ಯಮ ಇಲಾಖೆಯು ಈ ಬಗ್ಗೆ ವಿಶೇಷ ಆದ್ಯತೆ ನೀಡಿ ಕಾರ್ಯ ನಡೆಸಲಿದೆ. ಸೀ ವಾಕ್‌ನಿಂದ ಕಡಲ ಕಿನಾರೆಗೆ ಇನ್ನಷ್ಟು ಪ್ರವಾಸಿಗರು ಬರುವ ನಿರೀಕ್ಷೆಯಿದೆ.
-ಡಿ. ವೇದವ್ಯಾಸ ಕಾಮತ್, ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.