ಕೊರೊನಾ ಮತ್ತೊಂದು ಪ್ರಕರಣ-ಹೆಚ್ಚಿದ ಆತಂಕ
ಸಂತೆ, ಜಾತ್ರೆ, ಉರುಸುಗಳಿಗೆ ಜಿಲ್ಲಾಡಳಿತ ನಿರ್ಬಂಧತೆರೆದಿರಲಿವೆ ಅಗತ್ಯ ವಸ್ತು ಪೂರೈಕೆ ಅಂಗಡಿಗಳು
Team Udayavani, Mar 16, 2020, 10:37 AM IST
ಕಲಬುರಗಿ: ಪ್ರಚಂಚವನ್ನೇ ತಲ್ಲಣಗೊಳಿಸಿರುವ ಕೊರೊನಾ ಸೋಂಕಿನಿಂದ ವ್ಯಕ್ತಿಯೊಬ್ಬ ಮೃತಪಟ್ಟಿದ್ದರಿಂದ ಹಾಗೂ ಅದೇ ವ್ಯಕ್ತಿಯ ಕುಟುಂಬದ ಮಹಿಳೆಯೊಬ್ಬಳಿಗೆ ಈ ಸೋಂಕು ತಗುಲಿದ್ದು ದೃಢಪಟ್ಟಿರುವುದರಿಂದ ನಗರ ತತ್ತರಿಸಿದ್ದು, ಜಿಲ್ಲಾದ್ಯಂತ 133ನೇ ಕಲಂ ಜಾರಿ ಮಾಡಲಾಗಿದೆ.
ಕೊರೊನಾ ಸೋಂಕಿಗೆ ಮೃತಪಟ್ಟ ದೇಶದ ಮೊದಲ ವ್ಯಕ್ತಿ ಕಲಬುರಗಿ ನಗರದವರೇ ಆಗಿರುವುದರಿಂದ ಜಿಲ್ಲಾಡಳಿತ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ವಸ್ತುಗಳನ್ನು ಪೂರೈಸುವ ಅಂಗಡಿಗಳನ್ನು ಮಾತ್ರ ತೆರೆಯಲು ಅನುಮತಿ ನೀಡಿದೆ. ಉಳಿದಂತೆ ಒಂದು ವಾರ ಕಾಲ ದೊಡ್ಡ-ದೊಡ್ಡ ಮಾಲ್‌ಗಳು, ವಾಣಿಜ್ಯ ಮಳಿಗೆಗಳನ್ನು ಮುಚ್ಚಿಸಿದೆ. ಸಾರ್ವಜನಿಕ ಕಾರ್ಯಕ್ರಮಗಳಿಗೂ ನಿರ್ಬಂಧ ಹೇರಿದೆ. ಅಲ್ಲದೇ ಸಂತೆ, ಜಾತ್ರೆ, ಉರುಸುಗಳಿಗೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ರವಿವಾರ ರಜೆ ದಿನವಾಗಿದ್ದರೂ ನಗರದ ಪ್ರಮುಖ ರಸ್ತೆಗಳಲ್ಲೂ ಜನ ಸುಳಿಯಲಿಲ್ಲ. ಅಲ್ಲದೇ, ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ರಸ್ತೆ ಬದಿ ಅಂಗಡಿ, ಅನಗತ್ಯ ವಸ್ತುಗಳು, ಅಂಡಿಗಳನ್ನು ಬಂದ್ ಮಾಡಿಸಿದ್ದರು. ಹೀಗಾಗಿ ಇಡೀ ನಗರದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಸೂಪರ್ ಮಾರ್ಕೆಟ್, ಕಿರಾಣ ಬಜಾರ್ ಪ್ರದೇಶದಲ್ಲಿ ಹಲವು ಅಂಗಡಿ-ಮುಗ್ಗಟ್ಟುಗಳು ತೆರೆದಿದ್ದವು. ತರಕಾರಿ, ಹಣ್ಣು, ಹೂವು ಹಾಗೂ ದಿನಸಿ ಅಂಗಡಿಗಳು ಆರಂಭವಾಗಿದ್ದರೂ ಅಗಂಡಿಗಳ ಬಳಿಗೆ ಜನರೇ ಸುಳಿಯಲಿಲ್ಲ.
ನಗರ ಸಾರಿಗೆ ಬಸ್‌ಗಳು ಮತ್ತು ಆಟೋಗಳು ಸಂಚಾರ ಇದ್ದರೂ ಪ್ರಯಾಣಿಕರು ಇಲ್ಲದೇ ಖಾಲಿ-ಖಾಲಿಯಾಗಿ ಸಂಚರಿಸುವುದು ಕಂಡು ಬಂತು. ಶಾಂಪಿಂಗ್ ಮಾಲ್‌ಗಳು, ಶಾಂಪಿಂಗ್ ಮಾರ್ಟ್‌ಗಳು, ಚಿತ್ರಮಂದಿರಗಳು, ಹೋಟೆಲ್‌ಗಳು, ಬೇಕರಿಗಳು, ಕೆಲ ಶೋರೂಂಗಳು ಬಂದ್ ಆಗಿದ್ದವು. ಉದ್ಯಾನವನಗಳಿಗೆ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರಿಂದ ಜನರು ಇರಲಿಲ್ಲ. ಐತಿಹಾಸಿಕ ಶರಣಬಸವೇಶ್ವರ ಜಾತ್ರೆ ಕಡೆಗೂ ಜನರು ಸುಳಿಯಲಿಲ್ಲ. ಜನತೆ ಸೇರದಂತೆ ನೋಡಿಕೊಳ್ಳಲು ಕೆಲ ಅಂಗಡಿಗಳನ್ನು ಅಧಿಕಾರಿಗಳು ತೆರವುಗೊಳಿಸುತ್ತಿದ್ದರೆ, ವ್ಯಾಪಾರವಾಗದ ಕಾರಣ ಕೆಲ ವ್ಯಾಪಾರಸ್ಥರು ತಮ್ಮ ಮಳಿಗೆಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.