ಶತಾಯುಷಿ ಸಾಹಿತಿ ಪಾಪು ನಿಧನಕ್ಕೆ ಗಣ್ಯರ ಕಂಬನಿ
Team Udayavani, Mar 16, 2020, 11:20 PM IST
ಬೆಂಗಳೂರು: ಹಿರಿಯ ಸಾಹಿತಿ ಮತ್ತು ‘ಪ್ರಪಂಚ’ ಪತ್ರಿಕೆಯ ಸ್ಥಾಪಕ ಸಂಪಾದಕರಾಗಿದ್ದ ಪತ್ರಕರ್ತ ಶತಾಯುಷಿ ಡಾ. ಪಾಟೀಲ ಪುಟ್ಟಪ್ಪನವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜೀ ಮುಖ್ಯಮಂತ್ರಿಗಳಾದ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ, ಜೆಡಿಎಸ್ ಮುಖಂಡ ಹಾಗೂ ಮಾಜೀ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಾಜೀ ಪ್ರಧಾನಿ ಮತ್ತು ಜೆಡಿ(ಎಸ್) ಪಕ್ಷದ ವರಿಷ್ಠ ದೇವೇಗೌಡ ಸಹಿತ ಸಹಿತ ಹಲವಾರು ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.
‘ರಾಜ್ಯದ ನೆಲ-ಜಲ-ಭಾಷೆಯ ರಕ್ಷಣೆಗಾಗಿ ಸದಾ ಟೊಂಕಕಟ್ಟಿ ನಿಲ್ಲುತ್ತಿದ್ದ ಪಾಪು ಕನ್ನಡದ ನಿಷ್ಠಾವಂತ ಕಾವಲುಗಾರರಾಗಿದ್ದರು.
ಅವರ ಗೆಳೆಯರು ಮತ್ತು ಕುಟುಂಬದವರ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ.’ ಎಂದು ಕಾಂಗ್ರೆಸ್ ನಾಯಕ ಮತ್ತು ಮಾಜೀ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ನಾಡೋಜ, ಖ್ಯಾತ ಪತ್ರಕರ್ತ ಹಾಗೂ ಲೇಖಕ ಪಾಟೀಲ ಪುಟ್ಟಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿ ಶ್ರೀ @BSYBJP ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶತಾಯುಷಿ ಪಾಟೀಲ ಪುಟ್ಟಪ್ಪನವರು ಸ್ವಾತಂತ್ರ್ಯ ಹೋರಾಟಗಾರರಾಗಿ ಪತ್ರಿಕೋದ್ಯಮ, ಸಾಹಿತ್ಯ ರಚನೆ ಮತ್ತು ಕನ್ನಡಪರ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿದ್ದವರು. 1/3
— CM of Karnataka (@CMofKarnataka) March 16, 2020
2/3
‘ಪಾಪು’ ಎಂದೇ ಪರಿಚಿತರಾಗಿದ್ದ ಅವರು, ನವಯುಗ ಮಾಸ ಪತ್ರಿಕೆ ಸಂಪಾದಕರಾಗಿದ್ದರು. ‘ಪ್ರಪಂಚ’ ಪತ್ರಿಕೆ ಸ್ಥಾಪಿಸಿದ್ದಲ್ಲದೆ, ಸಾಹಿತಿ, ಅಂಕಣಕಾರರಾಗಿ ಪ್ರಸಿದ್ಧರು.2 ಅವಧಿಗೆ ರಾಜ್ಯಸಭಾ ಸದಸ್ಯರಾಗಿ, ಕನ್ನಡ ಕಾವಲು ಮತ್ತು ಗಡಿ ಸಲಹಾ ಸಮಿತಿ ಸಂಸ್ಥಾಪನಾ ಅಧ್ಯಕ್ಷ, ಅಖಿಲ ಕರ್ನಾಟಕ ಹೋರಾಟ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿದ್ದರು.
— CM of Karnataka (@CMofKarnataka) March 16, 2020
3/3
ಪಾಟೀಲ ಪುಟ್ಟಪ್ಪನವರ ನಿಧನದಿಂದ ಕನ್ನಡ ನಾಡು ಧೀಮಂತ ವ್ಯಕ್ಯಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ವಿಷಾದಿಸಿರುವ ಮುಖ್ಯಮಂತ್ರಿಗಳು, ಭಗವಂತನು ಮೃತರ ಆತ್ಮಕ್ಕೆ ಶಾಂತಿ ನೀಡಿ, ಅವರ ಕುಟುಂಬಕ್ಕೆ ದು:ಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.— CM of Karnataka (@CMofKarnataka) March 16, 2020
ಹಿರಿಯ ಪತ್ರಕರ್ತ,ಕನ್ನಡದ ಕಟ್ಟಾಳು ಮತ್ತು ರಾಜ್ಯಸಭೆಯ ಮಾಜಿ ಸದಸ್ಯರಾದ ಪಾಟೀಲ್ ಪುಟ್ಟಪ್ಪ ಅವರ ಅಗಲಿಕೆಯಿಂದ ನಾಡು-ನುಡಿ ಬಡವಾಗಿದೆ.
ರಾಜ್ಯದ ನೆಲ-ಜಲ-ಭಾಷೆಯ ರಕ್ಷಣೆಗಾಗಿ ಸದಾ ಟೊಂಕಕಟ್ಟಿ ನಿಲ್ಲುತ್ತಿದ್ದ ಪಾಪು ಕನ್ನಡದ ನಿಷ್ಠಾವಂತ ಕಾವಲುಗಾರರಾಗಿದ್ದರು.
ಅವರ ಗೆಳೆಯರು ಮತ್ತು ಕುಟುಂಬದವರ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. pic.twitter.com/pEEr19OjMf— Siddaramaiah (@siddaramaiah) March 16, 2020
ಪಾಪು ಎಂಬ ಕಾವ್ಯನಾಮದಿಂದಲೇ ಖ್ಯಾತರಾದವರು ಪಾಟೀಲ ಪುಟ್ಟಪ್ಪ.ಕನ್ನಡ ಸಾಹಿತ್ಯ ಮತ್ತು ಪತ್ರಿಕಾ ರಂಗದಲ್ಲಿ ಬಹುದೊಡ್ಡ ಹೆಸರು ಗಳಿಸಿದವರು.ಬೆಳಗಾವಿಯಲ್ಲಿ ನಡೆದ 70ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಪಾಪುರವರು ಕನ್ನಡ ನಾಡು, ನುಡಿಗಾಗಿ ಜೀವನದುದ್ದಕ್ಕೂ ಶ್ರಮಿಸಿದವರು.ಇಂದು ಅವರು ನಮ್ಮನ್ನೆಲ್ಲ ಅಗಲಿದ್ದಾರೆ.
(1/2)— H D Kumaraswamy (@hd_kumaraswamy) March 16, 2020
ಪಾಟೀಲ ಪುಟ್ಟಪ್ಪ ಅವರ ನಿಧನ ಇಡೀ ಕರ್ನಾಟಕಕ್ಕೆ ತುಂಬಲಾರದ ಬಹುದೊಡ್ಡ ನಷ್ಟ. ಅವರ ಕುಟುಂಬದವರಿಗೆ ಮತ್ತು ಅನುಯಾಯಿಗಳಿಗೆ ಈ ದುಃಖ ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ. ಧೀಮಂತ ನಾಯಕನಿಗೆ ಭಾವಪೂರ್ವ ವಿದಾಯಗಳು.
(2/2)— H D Kumaraswamy (@hd_kumaraswamy) March 16, 2020
ಕರ್ನಾಟಕದ ಹಿರಿತನದ ಮತ್ತೊಂದು ಕೊಂಡಿ ಕಳಚಿದೆ.
ನಾಡಿನ ಹಿರಿಯ ಚೇತನ, ನಾಡೋಜ, ಪಾಟೀಲ ಪುಟ್ಟಪ್ಪನವರ – ಪಾ ಪು ನಿಧನಕ್ಕೆ ನನ್ನ ಹೃತ್ಪೂರ್ವಕ ಶ್ರದ್ಧಾಂಜಲಿ. pic.twitter.com/irs98rlab0
— S.Suresh Kumar, Minister – Govt of Karnataka (@nimmasuresh) March 16, 2020
ಹಿರಿಯ ಕನ್ನಡ ಹೋರಾಟಗಾರ, ಪತ್ರಕರ್ತ, ಬರಹಗಾರ ನಾಡೋಜ ಪಾಟೀಲ ಪುಟ್ಟಪ್ಪ ಅವರು ನಮ್ಮನ್ನು ಅಗಲಿದ್ದು ನನಗೆ ಅತೀವ ದುಃಖವನ್ನುಟುಮಾಡಿದೆ.
ಖ್ಯಾತ ಲೇಖಕರು, ಹಿರಿಯ ಪತ್ರಕರ್ತ, ‘ಪ್ರಪಂಚ’ ಪತ್ರಿಕೆಯ ಸ್ಥಾಪಕ ಹಾಗು ಸಂಪಾದಕರು ಆಗಿದ್ದ ಶ್ರೀ ಪಾಟೀಲ್ ಪುಟ್ಟಪ್ಪ ಅವರು ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿದ್ದರು. pic.twitter.com/nqL7ABPwNI
— Pralhad Joshi (@JoshiPralhad) March 16, 2020
ಆತ್ಮೀಯರು, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಹಿರಿಯ ಪತ್ರಕರ್ತರು, ಸಾಹಿತಿ,ಶತಾಯುಷಿ ಶ್ರೀ ಡಾ.ಪಾಟೀಲ ಪುಟ್ಟಪ್ಪ ಅವರನಿಧನ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ
ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಕುಟುಂಬಕ್ಕೆ ದುಃಖಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ#Patilputtappa pic.twitter.com/Pt2J295ASE
— Jagadish Shettar (@JagadishShettar) March 16, 2020
ಸಾಹಿತಿ, ಪತ್ರಕರ್ತರು, ಮೇಲಾಗಿ ನಾಡಿನ ಭಾಷೆಯ ಹಿತಕ್ಕಾಗಿ ತಮ್ಮ ಜೀವಮಾನವಿಡೀ ದಣಿದ ನಾಡೋಜ ಪ್ರಶಸ್ತಿ ಪುರಸ್ಕೃತರಾದ ಡಾ. ಪಾಟೀಲ್ ಪುಟ್ಟಪ್ಪನವರು ವಿಧಿವಶರಾದ ಸುದ್ದಿ ಮನಸಿಗೆ ವ್ಯಸನವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬಸ್ಥರಿಗೆ ಹಾಗು ನಾಡಿನ ಜನತೆಗೆ ಆ ಭಗವಂತ ಕರುಣಿಸಲಿ pic.twitter.com/XimmYPOnCY
— H D Devegowda (@H_D_Devegowda) March 16, 2020
ನಾಡೋಜ ಶ್ರೀ ಪಾಟೀಲ್ ಪುಟ್ಟಪ್ಪನವರ ಅಗಲಿಕೆಯಿಂದ ಕನ್ನಡ ಸಾಹಿತ್ಯಲೋಕ ಬಡವಾಗಿದೆ. ಅವರ ಕುಟುಂಬ ಹಾಗೂ ಅಭಿಮಾನಿ ವರ್ಗದವರಿಗೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. pic.twitter.com/aCQamVwq9N
— Mahantesh kavatagimath (@MKavatagimath) March 16, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.