ಕೊರೊನಾ ಲಸಿಕೆ ಪರೀಕ್ಷೆ ಆರಂಭ- ಟ್ರಂಪ್; ಲಸಿಕೆ ತಯಾರಿಸಿದ ಕಂಪನಿ ಯಾವುದು ಗೊತ್ತಾ?
ಮತ್ತೊಂದೆಡೆ ಅಮೆರಿಕದಲ್ಲಿ ಮೊದಲ ಮಾನವ ಲಸಿಕೆಯ ಪರೀಕ್ಷೆ ಆರಂಭಗೊಂಡಿರುವುದಾಗಿ ವರದಿ ತಿಳಿಸಿದೆ.
Team Udayavani, Mar 17, 2020, 4:19 PM IST
Representative Image
ನ್ಯೂಯಾರ್ಕ್:ಕೊರೊನಾ ವೈರಸ್ ಸೋಂಕು ಹಲವು ದೇಶಗಳಲ್ಲಿ ಲಾಕ್ ಡೌನ್ ಗೆ ಕಾರಣವಾಗಿದ್ದು, ಭಾರತ ಸೇರಿದಂತೆ ವಿಶ್ವಾದ್ಯಂತ ಸೋಂಕಿತರ ಸಂಖ್ಯೆ ಹೆಚ್ಚಳವಾಗತೊಡಗಿದೆ. ಮತ್ತೊಂದೆಡೆ ಅಮೆರಿಕದಲ್ಲಿ ಮೊದಲ ಮಾನವ ಲಸಿಕೆಯ ಪರೀಕ್ಷೆ ಆರಂಭಗೊಂಡಿರುವುದಾಗಿ ವರದಿ ತಿಳಿಸಿದೆ.
ಜಾಗತಿಕವಾಗಿ ಕೊರೊನಾ ಮಹಾಮಾರಿಗೆ 7 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಮಹತ್ವದ ಬೆಳವಣಿಗೆ ಎಂಬಂತೆ ಕೊರೊನಾ ವೈರಸ್ ವಿರುದ್ಧ ರಕ್ಷಿಸಿಕೊಳ್ಳಲು ವೈದ್ಯಕೀಯ ಕ್ಷೇತ್ರದಲ್ಲಿ ಕಂಡುಹಿಡಿದ ಮೊದಲ ಹಂತದ ಸಂಶೋಧನಾ ಲಸಿಕೆಯ ಪರೀಕ್ಷೆ ನಡೆಸಲಾಗುತ್ತಿದೆ ಎಂದು ವರದಿ ವಿವರಿಸಿದೆ.
ಭಾರತ ಮತ್ತು ನಾರ್ವೆ ಜಾಗತಿಕ ಮೈತ್ರಿಯಲ್ಲಿ ಕೆಪಿಡಬ್ಲ್ಯುಎಚ್ ಆರ್ ಐ ಸ್ಥಾಪಿಸಿದ್ದು, ಇಲ್ಲಿ ಮೊದಲ ಬಾರಿಗೆ ವ್ಯಕ್ತಿಯೊಬ್ಬರ ಮೇಲೆ ಲಸಿಕೆ ಪ್ರಯೋಗ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಇಂದು ನಾನು ಸಂತೋಷದ ವಿಷಯವನ್ನು ಹೇಳುತ್ತಿದ್ದೇನೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ, ಪ್ರಥಮ ಹಂತದ ಲಸಿಕೆಯ ವೈದ್ಯಕೀಯ ಪ್ರಯೋಗ ಇಂದು ಆರಂಭಗೊಂಡಿದೆ. ಇತಿಹಾಸದಲ್ಲಿಯೇ ಅತೀ ವೇಗದಲ್ಲಿ ಕಂಡುಹಿಡಿದ ಲಸಿಕೆಗಳಲ್ಲಿ ಒಂದಾಗಿದೆ. ಅಲ್ಲದೇ ನಾವು ಆ್ಯಂಟಿವೈರಲ್ ಥೆರಪಿ ಮತ್ತು ಇತರ ಚಿಕಿತ್ಸೆ ಲಸಿಕೆಯನ್ನು ಕಂಡುಹಿಡಿಯುತ್ತಿರುವುದಾಗಿ ವಿವರಿಸಿದರು.
ಔಷಧ ಕಂಡುಹಿಡಿದ ಕಂಪನಿ ಮೋಡರ್ನಾ:
ಮೋಡರ್ನಾ ಎಂಬ ಖಾಸಗಿ ಕಂಪನಿ ಈ ಲಸಿಕೆಯನ್ನು ಕಂಡುಹಿಡಿದಿದೆ. ಮೊದಲ ಹಂತದ ಲಸಿಕೆಯನ್ನು ಸ್ವಯಂ ಆಗಿ ಬಂದ ವ್ಯಕ್ತಿಗೆ ನೀಡಿ ಪರೀಕ್ಷೆ ನಡೆಸಲಾಗುತ್ತಿದೆ. ಲಸಿಕೆ ಪರೀಕ್ಷೆಯಲ್ಲಿ ಸುಮಾರು 45 ಮಂದಿ ಪಾಲ್ಗೊಂಡಿದ್ದಾರೆ. ಇದಕ್ಕೆ mRNA-1273 ಎಂದು ಹೆಸರಿಡಲಾಗಿದ್ದು, ಈ ಲಸಿಕೆಯ ಅಡ್ಡಪರಿಣಾಮ ಮತ್ತು ಲಸಿಕೆ ಎಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲದು ಎಂಬುದನ್ನು ಇನ್ನೂ ಎರಡು ಹಂತಗಳಲ್ಲಿ ಪರೀಕ್ಷೆ ನಡೆಸಬೇಕಾಗುತ್ತದೆ. ಈ ಪ್ರಕ್ರಿಯೆಗೆ ಕನಿಷ್ಠ ಒಂದು ವರ್ಷ ಬೇಕಾಗಲಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಸೋಂಕಿನ 2ನೇ ಹಂತದ ಲಸಿಕೆಯನ್ನು ಕೂಡಾ ಈಗಾಗಲೇ ಸಿದ್ದಪಡಿಸಲಾಗುತ್ತಿದೆ ಎಂದು ಮೋಡರ್ನಾ, ಕೆಲವೇ ತಿಂಗಳಿನಲ್ಲಿ ಆರಂಭಿಸುವುದಾಗಿ ತಿಳಿಸಿದೆ. ಕೊರೊನಾ ವೈರಸ್ ಗೆ ಲಸಿಕೆಯನ್ನು ಅತೀ ಶೀಘ್ರವಾಗಿ ಅಭಿವೃದ್ಧಿಪಡಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.