ಶ್…! ಇದು ಓದುವ ಸ್ಥಳ


Team Udayavani, Mar 18, 2020, 4:07 AM IST

silent

ಪರೀಕ್ಷೆ ಬಂತು ಪರೀಕ್ಷೆ. ಮಾರ್ಚ್‌ ತಿಂಗಳು ಆರಂಭವಾಯಿತೆಂದರೆ, ಯುಕೆಜಿಯಿಂದ ಹಿಡಿದು ಎಲ್ಲಾ ಮಕ್ಕಳಿಗೆ ಪರೀಕ್ಷೆಯ ಕಾಲ. ಮಕ್ಕಳ ಜತೆ ಪೋಷಕರಿಗೂ ಹೆಚ್ಚು ಟೆನ್ಷನ್‌. ಏಕಾಗ್ರತೆಯ ಓದಿಗೆ ಕೊಡುವಷ್ಟೇ ಪ್ರಾಮುಖ್ಯವನ್ನು ಓದುವ ವಾತಾವರಣಕ್ಕೂ ನೀಡಬೇಕಾಗಿದೆ.ಇ ದು ಪರೀಕ್ಷಾ ಸಮಯ. ಓದಲಿರುವ ಪುಸ್ತಕದ ಪುಟಗಳ ಗಾತ್ರ ಬೆಳೆಯುತ್ತಿದೆ. ಓದಲಿರುವ ಸಮಯ ಕಡಿಮೆಯಾಗುತ್ತಲೇ ಇದೆ. ಈ ಸೂಚ್ಯ ಸಮಯದಲ್ಲಿ ಪರೀಕ್ಷಾ ತಯಾರಿ, ಓದುವ ಸ್ಥಳ ಹೇಗಿರಬೇಕು ಗೊತ್ತೇ..? ಪರೀಕ್ಷಾ ಒತ್ತಡದ ಸಂದರ್ಭದಲ್ಲಿ, ಸಿಕ್ಕ ಸಿಕ್ಕ ಕಡೆಗಳಲ್ಲಿ ಕೂತು ಪುಟಗಳನ್ನು ನೋಡುವ ಅಭ್ಯಾಸ ಬಹಳಷ್ಟು ವಿದ್ಯಾರ್ಥಿಗಳಿಗೆ ಈಗ ರೂಢಿಯಾಗಿದೆ. ಆದರೆ ಏಕಾಗ್ರ ತೆಗೆ ಭಂಗ ತರುವ, ಮನ ಸ್ಸಿನ ಹತೋಟಿ ತಪ್ಪಿ ಸುವ ಹಲವಾರು ಸಂದರ್ಭಗಳು ಮತ್ತು ತಂತ್ರಜ್ಞಾನಗಳ ಪ್ರಭಾವ ಇಂದು ಬಲವಾಗಿದೆ. ಅವುಗಳಿಂದ ದೂರ ಇದ್ದು ಓದುವುದ ರಿಂದ ಮಾತ್ರ ಪರಿ ಣಾಮ ನಿಶ್ಚಲವಾಗಿ ಧನಾತ್ಮಕವಾಗಿರಲು ಸಾಧ್ಯವಿದೆ.

ಪ್ರಶಾಂತವಾದ ಸ್ಥಳ
ಪ್ರಶಾಂತವಾದ ವಾತಾವರಣವಿರುವ ಕಡೆ ಅಧ್ಯಯನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಇದರಿಂದ “ಎಫೆಕ್ಟು ರೀಡಿಂಗ್‌’ ಸಾಧ್ಯ. ಗದ್ದಲಗಳು ಅಥವಾ ಗಮನವನ್ನು ವಿಕೇಂದ್ರಿತಗೊಳಿಸುವ ಪ್ರದೇಶಗಳಿಂದ ಸಾಧ್ಯವಾದಷ್ಟು ದೂರ ಇರುವುದು ಒಳಿತು. ಇದರಿಂದ ಆಧ್ಯಯನಗೊಳಿಸಿದ ಅಂಶಗಳು ಪುಸ್ತಕದಿಂದ ಮಸ್ತಕಕ್ಕೆ ಪರಿಣಾಮಕಾರಿಯಾಗಿ ತಲುಪಲು ಸಾಧ್ಯ.

ಕೊಠಡಿಗಳು ಸ್ವಚ್ಛವಾಗಿ, ಚೊಕ್ಕವಾಗಿರಲಿ
ಅಭ್ಯಸಿಸುವ ಕೊಠಡಿಗಳು ಸ್ವತ್ಛವಾಗಿರಬೇಕು. ಸ್ವಚ್ಛತೆಯಿಂದ ಮನಸ್ಸು ಅರಳಲು ಸಾಧ್ಯ. ಪರಿಣಾಮಕಾರಿ ಓದು ಅಥವಾ ಅಭ್ಯಾಸಕ್ಕೆ ಅಂತರಾಳದ ಶುದ್ಧತೆಯ ಜತೆಗೆ ಬಹಿರಂಗ ಶುಚಿ ತ್ವವೂ ಅಷ್ಟೇ ಮುಖ್ಯ. ಕೊಠಡಿಗಳನ್ನು ಸ್ವತ್ಛವಾಗಿರಿಸಿ, ಪುಸ್ತಕವನ್ನು ಸರಿಯಾಗಿ ಜೋಡಿಸಿ ಕೊಠಡಿಯನ್ನು ಅಧ್ಯಯನಕ್ಕೆ ಪೂರಕವಾಗಿರಿಸಬೇಕು. ಇದರಿಂದ ಓದು ಸುಲಭವಾಗಲಿದೆ.

ಬಿಡುವಿನಲ್ಲಿ ಸಂಗೀತ ಆಲಿಸಿ
ನಮ್ಮಲ್ಲಿ ಬಹುತೇಕ ವಿದ್ಯಾರ್ಥಿಗಳಿಗೆ ಸಂಗೀತವನ್ನು ಕೇಳಿಸಿಕೊಳ್ಳದೆ ಓದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಶುದ್ಧ ತಪ್ಪು ಕಲ್ಪನೆ. ಸಂಗೀತದ ಜತೆಗೆ ಕೆಲಸ ಮಾಡಲು ಸಾಧ್ಯ. ಆದರೆ ಓದು ಸಾಧ್ಯವೇ ಇಲ್ಲ. ಅತ್ತ ಸಂಗೀತವನ್ನು ಆಸ್ವಾಧಿಸದೆ ಇತ್ತ ಓದನ್ನು ಅರ್ಥ ಮಾಡಿಕೊಳ್ಳಲಾಗದ ಕ್ಲಿಷ್ಟ ಪರಿಸ್ಥಿತಿ ಇದು. ಮನಸ್ಸನ್ನು ಕೇಂದ್ರೀಕರಿಸಲು ಕಷ್ಟವಾಗುತ್ತದೆ. ಓದಿನ ನಡುವೆ ಬಿಡುವು ಮಾಡಿ ಕೊಂಡು ಸಂಗೀತ ಕೇಳುವುದು, ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು, ಸ್ನೇಹಿತರೊಂದಿಗೆ ಒಂದಷ್ಟು ಸಮಯ ವ್ಯಯಿಸುವುದರಿಂದ ಓದಿನಿಂದ ಉಂಟಾದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು.

ಮಲಗಿಕೊಂಡು ಓದುವ ಸಾಹಸ ಬೇಡ
ಬಹಳಷ್ಟು ವಿದ್ಯಾರ್ಥಿಗಳು ಮಲಗಿಕೊಂಡು ಓದಲು ಇಷ್ಟಪಡುತ್ತಾರೆ. ಇದರಿಂದ ಪುಸ್ತಕದ ಪುಟವನ್ನು ತಿರುವಿ ಹಾಕಬಹುದೇ ಹೊರತು ಏಕಾಗ್ರತೆ ಮೂಡಲು ಸಾಧ್ಯವೇ ಇಲ್ಲ. ದೇಹಕ್ಕೆ ಆರಾಮ ಅಥವಾ ಹಿತಕರವಾದ ವಾತವಾರಣ ಲಭಿಸಿದ ಕೂಡಲೇ ನಿದ್ದೆಗೆ ಮನಸ್ಸು ಹರಿಯುತ್ತದೆ. ಇದರಿಂದ ಮಲಗಿಕೊಂಡು ಓದುವ ಕಲೆ ಕರಗತವಾಗಿದ್ದರೂ ಪರೀಕ್ಷೆ ಸಿದ್ಧತೆ ವೇಳೆ
ಇದು ಅಪಾಯಕಾರಿ.

ಆಹಾರ ಸೇವನೆಯ ಜತೆಗೆ ಓದು ಬೇಡ ಕೆಲವರಿಗೆ ಓದುತ್ತಾ ತಿಂಡಿ ತಿನ್ನುವ ಅಭ್ಯಾಸವಿರುತ್ತದೆ. ಪರೀಕ್ಷೆ ಸಮಯದಲ್ಲಿ ಇದನ್ನು ದೂರ ಇರಿಸುವುದೇ ಒಳಿತು. ಆಹಾರವನ್ನು ಸೇವಿಸುತ್ತಾ ಓದುವ ಅಭ್ಯಾಸ ಆರೋಗ್ಯಕ್ಕೂ ಒಳ್ಳೆಯದಲ್ಲ. ಚಾಟ್ಸ್‌, ಸ್ವೀಟ್ಸ್‌, ಕಾಫಿ, ಟೀ ಸೇವನೆ ಜತೆಗೆ ಓದುವುದರಿಂದ ಆಹಾರ ಸರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಓದು ಪೂರ್ಣವಾಗು ವುದೂ ಇಲ್ಲ. ಅಗತ್ಯವಿದ್ದರೆ ಜತೆಗೆ ನೀರನ್ನು ಇಟ್ಟುಕೊಳ್ಳಿ. ನೀರನ್ನು ಸೇವಿಸುವುದರಿಂದ ಓದಿಗೆ ಪೂರಕವಾದ ವಾತಾವರಣ ದೇಹದಲ್ಲಿ ರೂಪುಗೊಳ್ಳುತ್ತದೆ ಎಂಬುದು ಸಂಶೋಧನೆಗಳಿಂದಲೂ ದೃಢಪಟ್ಟಿವೆ.

 ದೃಶ್ಯಕಾವ್ಯ

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

arest

Kumbla: ಯುವಕನನ್ನು ಅಪಹರಿಸಿ ಕೊಲೆಗೆ ಯತ್ನ; ಬಂಧನ

crime

Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.