![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Mar 18, 2020, 3:07 AM IST
ಬೆಂಗಳೂರು: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಹಲವು ಮುಂಜಾಗ್ರತಾ ಕ್ರಮ ಕೈಗೊಂಡಿರುವ ಹೈಕೋರ್ಟ್, ಮಂಗಳವಾರದಿಂದ ನ್ಯಾಯಾಲಯಕ್ಕೆ ಭೇಟಿ ನೀಡಿದ ಕಕ್ಷಿದಾರರರು, ಸಿಬ್ಬಂದಿ, ನ್ಯಾಯಾಂಗ ಹಾಗೂ ಸರ್ಕಾರಿ ಅಧಿಕಾರಿಗಳು, ಸಂದರ್ಶಕರನ್ನು “ಥರ್ಮಲ್ ಸ್ಕ್ರೀನಿಂಗ್’ಗೆ ಒಳಪಡಿಸಲಾಯಿತು.
ಹೈಕೋರ್ಟ್‌ನ ಎಲ್ಲ ಪ್ರವೇಶ ದ್ವಾರಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ನಡೆಸಿದರು. ಆ ಕಾರ್ಯವನ್ನು ಸ್ವತಃ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಅವರೇ ಬೆಳಗ್ಗೆ ಕಲಾಪ ಆರಂಭವಾಗುವ ಮುನ್ನ ಹಾಗೂ ಮಧ್ಯಾಹ್ನ ಭೋಜನ ವಿರಾಮದ ವೇಳೆ ಪರಿಶೀಲಿಸಿದರು.
ಅಧಿಕಾರಿಗೆ ತರಾಟೆ: ಮಾಸ್ಕ್ ಧರಿಸಿ ಕೋರ್ಟ್ ಹಾಲ್‌ನಲ್ಲಿ ಕೂತಿದ್ದ ಸರ್ಕಾರಿ ಅಧಿಕಾರಿಗೆ ಮುಖ್ಯ ನ್ಯಾಯಮೂರ್ತಿಗಳು ತರಾಟೆಗೆ ತೆಗೆದು ಕೊಂಡರು. ಮಾಸ್ಕ್ ಧರಿಸಿ ಕೂತಿದ್ದ ವ್ಯಕ್ತಿಯನ್ನು ಗಮ ನಿಸಿದ ಸಿಜೆ, ಆತ ಯಾರೆಂದು ವಿಚಾರಿಸುವಂತೆ ಕೋರ್ಟ್ ಆಫೀಸರ್‌ಗೆ ಸೂಚಿಸಿದರು. ವಕೀಲರೊಂದಿಗೆ ಬಂದಿರುವುದಾಗಿ ಆ ಅಧಿಕಾರಿ ತಿಳಿಸಿದರು.
“ಮಾಸ್ಕ್ ಹಾಕಿಕೊಂಡಿರುವುದೇಕೆ?’ ಎಂದು ಸಿಜೆ ಮರು ಪ್ರಶ್ನೆ ಮಾಡಿದಾಗ, “ಕೊರೊನಾ ವೈರಸ್ ಭೀತಿಯಿಂದ ಮಾಸ್ಕ್ ಹಾಕಿಕೊಂಡಿದ್ದಾರೆ’ ಎಂದು ವಕೀಲರು ಉತ್ತರಿಸಿದರು. ಅದಕ್ಕೆ, “ಕೊರೊನಾ ವೈರಸ್ ಸೋಂಕಿತರಷ್ಟೇ ಮಾಸ್ಕ್ ಧರಿಸಬೇಕು’ ಎಂದರಲ್ಲದೆ, “ಸೋಂಕು ಇದ್ದರೆ, ಆತನನ್ನು ಕೋರ್ಟ್‌ನಿಂದ ಹೊರ ಹಾಕಿ’ ಎಂದು ಸಿಜೆ ಹೇಳಿದರು. ತಮಗೆ “ಕೊರೊನಾ ಸೋಂಕು ಇಲ್ಲ’ ಎಂದು ತಿಳಿಸಿದ ಆ ಅಧಿಕಾರಿ, ಮಾಸ್ಕ್ ತೆಗೆದು ಕಲಾಪ ವೀಕ್ಷಿಸಿದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.