ಬೈಂದೂರು ಅಭಿವೃದ್ಧಿಗೆ ಇಲಾಖೆಗಳ ಸಮನ್ವಯ ಕೊರತೆ
ಆಸ್ಪತ್ರೆಗೆ ನಿಗದಿಯಾದ ಜಾಗದಲ್ಲಿ ಪಿ.ಡಬ್ಲ್ಯು.ಡಿ.ಯಿಂದ ಆವರಣ ಗೋಡೆ!
Team Udayavani, Mar 18, 2020, 1:00 AM IST
ಬೈಂದೂರು: ಎಲ್ಲವೂ ಅಂದು ಕೊಂಡಂತೆ ಆಗಿದ್ದರೆ ಇಷ್ಟರವರೆಗೆ ಬೈಂದೂರು ಎನ್ನುವ ಹೊಸ ತಾಲೂಕು ರಾಜ್ಯದಲ್ಲೇ ಹೈಟೆಕ್ ತಾಲೂಕಾಗಿ ಸಿದ್ಧ ವಾಗುತ್ತಿತ್ತು. ಆದರೆ ಇಲ್ಲಿನ ಇಲಾಖೆಗಳ ಸಮನ್ವಯ ಕೊರತೆಯಿಂದ ಬೈಂದೂರಿನ ಪರಿಸ್ಥಿತಿ ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಂಬಂತಾಗಿದೆ!
ಆಸ್ಪತ್ರೆಗೆ ಮೀಸಲಿಟ್ಟ ಜಾಗದಲ್ಲಿ ಗೋಡೆ
ಈಗಾಗಲೇ ಒಂದು ಹಂತದಲ್ಲಿ ಪ್ರಮುಖ ಇಲಾಖೆಗಳು ಎಲ್ಲೆಲ್ಲಿ ಬರಬೇಕು ಎನ್ನುವ ಕುರಿತು ಶಾಸಕರು ಹಾಗೂ ಸಂಸದರ ನಿರ್ದೇಶನದಲ್ಲಿ ಜಾಗ ಗುರುತಿಸಲಾಗಿದೆ. ಆ ಪ್ರಕಾರ ಈಗಿರುವ ಪಿ.ಡಬ್ಲ್ಯು.ಡಿ. ವಸತಿಗೃಹದ ಬಳಿ ತಾಲೂಕು ಆಸ್ಪತ್ರೆ ನಿರ್ಮಿಸುವುದನ್ನು ಬಹುತೇಕ ಅಂತಿಮಗೊಳಿಸಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಇಲ್ಲಿರುವ ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವ ಜತೆಗೆ ಸಮೀಪದಲ್ಲಿ ಕೋರ್ಟ್ ಕೂಡ ನಿರ್ಮಿಸಲು ಸಿದ್ಧತೆ ಮಾಡಲಾಗಿದೆ. ಆದರೆ ಇದೇ ಜಾಗದಲ್ಲಿ ಪಿ.ಡಬ್ಲ್ಯು.ಡಿ. ಇಲಾಖೆ ಅಂದಾಜು 3 ಲಕ್ಷ ರೂ. ಅನುದಾನದಲ್ಲಿ ಹೊಸದಾಗಿ ಆವರಣಗೋಡೆ ನಿರ್ಮಿಸಲು ಆರಂಭಿಸಿದೆ. ಉದ್ದೇಶಿತ ಆಸ್ಪತ್ರೆ ನೀಲನಕಾಶೆ ಇನ್ನೂ ಪೂರ್ಣಗೊಂಡಿಲ್ಲ. ಅದು ಪೂರ್ಣಗೊಂಡರೆ ಈ ಆವರಣ ಗೋಡೆ ತೆರವುಗೊಳಿಸಬೇಕಾದ ಪರಿಸ್ಥಿತಿ ಕೂಡ ಇದೆ. ಇಷ್ಟಿದ್ದೂ ಸರಕಾರದ ಅನುದಾನ ದುಂದುವೆಚ್ಚವಾಗುತ್ತಿದೆ. ಮಾರ್ಚ್ ಅಂತ್ಯದಲ್ಲಿ ಹಣ ವಾಪಸ್ ಹೋಗುವ ಕಾರಣ ತರಾತುರಿಯಲ್ಲಿ ಆವರಣ ಗೋಡೆ ಕೆಲಸ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಮಹತ್ವದ ಯೋಜನೆಗಳ ಸಾಕಾರಕ್ಕೆ ವಿಳಂಬ
ಬೈಂದೂರು ತಾಲೂಕು ಎನ್ನುವುದು ಕೇವಲ ಕಡತಗಳಿಗೆ ಮೀಸಲಾದರೆ ಸಾಲದು, ಬದಲಾಗಿ ಜನರಿಗೆ ತಾಲೂಕಿನಲ್ಲಿ ಸಿಗುವ ಸೇವೆ ದೊರೆಯಬೇಕಿದೆ. ಮೂರು ವರ್ಷ ಕಳೆದರೂ ಕಂದಾಯ ಮತ್ತು ಆರೋಗ್ಯ ಇಲಾಖೆಗಳಲ್ಲಿನ ಕೆಲಸಕ್ಕೆ ಜನರು ಇನ್ನೂ ಕುಂದಾಪುರವನ್ನೇ ಅವಲಂಬಿಸಬೇಕಿದೆ. ಕಂದಾಯ ಇಲಾಖೆಯಲ್ಲಿ ಸರ್ವೆ ಇಲಾಖೆಗೆ ಸ್ಥಳಾವಕಾಶದ ಕೊರತೆ ಇದೆ. ಚುನಾವಣೆ ವಿಭಾಗ ಕಾರ್ಯಾರಂಭವಾಗಿದೆ. ಆಹಾರ ವಿಭಾಗ ಇದುವರೆಗೆ ಬಂದಿಲ್ಲ. ಭೂನ್ಯಾಯ ಮಂಡಳಿ ಸಿಟ್ಟಿಂಗ್‌ಗಳು ನಡೆಯುತ್ತಿವೆ. ಆದರೆ ಕಡತಗಳು ಕುಂದಾಪುರದಲ್ಲಿವೆ. ಈ ಬಗ್ಗೆ ಪತ್ರಿಕೆ ಬೆಳಕು ಚೆಲ್ಲಿದ ಬಳಿಕ ಈ ವಾರದಲ್ಲಿ ಆರಂಭಿಸುವುದಾಗಿ ಕಂದಾಯ ಇಲಾಖೆ ತಿಳಿಸಿದೆ.
ಭವಿಷ್ಯದ ಪರಿಕಲ್ಪನೆ
ತಾಲೂಕು ಕೇಂದ್ರವನ್ನಾಗಿ ರೂಪಿಸುವ ವೇಳೆ ಎಡವದೆ ಇರಬೇಕಾದ್ದು ತುರ್ತು ಅಗತ್ಯ. ಇದಕ್ಕೆ ಅಧಿಕಾರಿ ವರ್ಗ, ಜನಪ್ರತಿನಿಧಿಗಳ ಸಮನ್ವಯ, ಆಲೋಚನೆಗಳೂ ಬೇಕು. ಯೋಜನೆಗಳ ಪ್ರಕಾರ ಈಗಿರುವ ತಹಶೀಲ್ದಾರರ ಕಚೇರಿ ಮಿನಿ ವಿಧಾನಸೌಧವಾಗುತ್ತದೆ. ಪಕ್ಕದಲ್ಲೇ ತಾಲೂಕು ಆಸ್ಪತ್ರೆ, ನ್ಯಾಯಾಲಯ, ಲೋಕೋಪಯೋಗಿ ಕಚೇರಿ, ಪ್ರವಾಸಿ ಮಂದಿರ ಇದೆ. ಪಾರ್ಕಿಂಗ್ ಹಾಗೂ ಇತರ ಅನುಕೂಲದ ದೃಷ್ಟಿಯಿಂದ ಮತ್ತು ಎಲ್ಲ ಕಚೇರಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಲ್ಟಿಸ್ಟೋರ್ ಕಟ್ಟಡ ನಿರ್ಮಿಸುವ ಅಗತ್ಯವಿದೆ. ಇಲಾಖೆಗಳು ಮಾದರಿ ತಾಲೂಕಿನ ಭವಿಷ್ಯದ ಚಿಂತನೆ ಇಟ್ಟುಕೊಂಡು ಅಭಿವೃದ್ಧಿ ಪೂರಕ ಯೋಜನೆಯ ರೂಪುರೇಷೆಗಳೊಂದಿಗೆ ಮುನ್ನಡೆಯುವುದು ಅಗತ್ಯ.
ಸಿಟ್ಟಿಂಗ್ ದಿನಾಂಕಗಳು ನಿಗದಿ
ತಾಲೂಕು ಕೇಂದ್ರದ ಪರಿಕಲ್ಪನೆಯಲ್ಲಿ ಆಯಾಯ ಇಲಾಖೆ ಕಾರ್ಯನಿರ್ವಹಿಸಲು ಸಿದ್ಧತೆ ನಡೆಸಿದೆ. ಕೆಲವು ಇಲಾಖೆಗಳು ಈಗಾಗಲೇ ಕಾರ್ಯಾರಂಭ ಮಾಡಿವೆ. ಭೂ ನ್ಯಾಯಮಂಡಳಿ ಸಿಟ್ಟಿಂಗ್ ದಿನಾಂಕಗಳು ನಿಗದಿಯಾಗಿದೆ. ಕಚೇರಿ ಈ ವಾರದಲ್ಲಿ ಆರಂಭವಾಗಲಿದೆ.
-ಬಿ.ಪಿ. ಪೂಜಾರ್, ತಹಶೀಲ್ದಾರ್ ಬೈಂದೂರು.
ಆವರಣಗೋಡೆಯಿಂದ ಸಮಸ್ಯೆಯಿಲ್ಲ
ಬೈಂದೂರಿನಲ್ಲಿ ನಿರ್ಮಾಣವಾಗುತ್ತಿರುವ ಆವರಣ ಗೋಡೆ ಲೋಕೋಪಯೋಗಿ ಇಲಾಖೆ ಅನುದಾನದಿಂದ ನಡೆಯುತ್ತಿದೆ. ಇದು ಆಸ್ಪತ್ರೆ ನಿರ್ಮಾಣಕ್ಕೆ ಮೀಸಲಿರುವ ಜಾಗಕ್ಕೆ ತೊಂದರೆಯಾಗದು. ಇಲಾಖೆ ಅನುದಾನ ವರ್ಷಾಂತ್ಯದಲ್ಲಿ ನಿರ್ವಹಿಸಬೇಕಾಗಿರುವುದರಿಂದ ಕಾಮಗಾರಿ ಆರಂಭವಾಗಿದೆ. ತಾಲೂಕು ಕೇಂದ್ರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಇಲಾಖೆ ಕಾರ್ಯಯೋಜನೆ ರೂಪಿಸಿದೆ.
-ದುರ್ಗಾದಾಸ್, ಎಂಜಿನಿಯರ್, ಲೋಕೋಪಯೋಗಿ ಇಲಾಖೆ.
– ಅರುಣ್ ಕುಮಾರ್ ಶಿರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.