ಕೋವಿಡ್ 19 ವೈರಸ್ ತಡೆಗೆ ನಿಷೇಧಾಜ್ಞೆ ಜಾರಿ
Team Udayavani, Mar 18, 2020, 4:02 PM IST
ಕೋಲಾರ: ಕೊರೊನಾ ಹಾವಳಿ ತಪ್ಪಿಸಲು ಮುಂಜಾಗ್ರತೆ ಕ್ರಮವಾಗಿ ಜಿಲ್ಲೆ ಗಡಿ ಭಾಗದಲ್ಲಿ ತಪಾಸಣೆ ಕೇಂದ್ರ ಸ್ಥಾಪಿಸುವುದರ ಜತೆಗೆ ಮುನ್ನೆ ಚ್ಚರಿಕೆ ಕ್ರಮವಾಗಿ ಜನ ಗುಂಪು ಸೇರದಂತೆ ಜಿಲ್ಲಾದ್ಯಂತ ಮಾ.17 ರಿಂದ ಮುಂದಿನ ಆದೇಶದ ವರೆಗೂ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮನವಿ ಮಾಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರ ರೊಂದಿಗೆ ಮಾತನಾಡಿ, ಬೇರೆ ರಾಜ್ಯಗಳಿಂದ ಜಿಲ್ಲೆಗೆ ಬರುವ ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಲಾಗುವುದು. ರಕ್ತದ ಮಾದರಿಯ ವರದಿ ಬರುವ ತನಕ ಆ ವ್ಯಕ್ತಿಯನ್ನು ನಿಗಾ ಘಟಕದಲ್ಲಿ ಇರಿಸಲಾಗುತ್ತದೆ. ಸೋಂಕು ಇಲ್ಲ ಎಂದು ದೃಢಪಟ್ಟ ಮೇಲೆ ಮನೆಗೆ ಕಳುಹಿಸಲಾಗುತ್ತದೆ ಎಂದು ಹೇಳಿದರು.
ಜಿಲ್ಲೆಯ ನಂಗಲಿ, ರಾಯಲ್ಪಾಡು, ಮಾಲೂರು ಸೇರಿದಂತೆ ಗಡಿ ಭಾಗಗಳ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆಗೆ ಕೇಳಲಾಗಿದೆ. ಇತ್ತೀಚೆಗೆ ವೈದ್ಯರು ಒಳಗೊಂಡ ತಂಡ ರಚಿಸಿ, ತಪಾಸಣೆ ಕಾರ್ಯ ಆರಂಭಿಸಲಾಗುವುದು. ಕೊರೊನಾ ಬಗ್ಗೆ ಅರಿವು ಪಡೆದುಕೊಡು ಜನ ಗುಂಪುಗಳಾಗಿ ಸೇರುವುದನ್ನು ಬಿಡಬೇಕು. ಧಾರ್ಮಿಕ ಕೇಂದ್ರಗಳಲ್ಲಿ ಪ್ರಾರ್ಥನೆ ಮಾಡುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಂಕ್ರಾಮಿಕ (ಕೆಮ್ಮು, ನೆಗಡಿ, ಜ್ವರ) ಇರುವವರು ಮಾಸ್ಕ್ ಹಾಕಿಕೊಳ್ಳಬೇಕು. ಹೊರಗಡೆ ಎಲ್ಲೂ ಓಡಾಡದೆ ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳಬೇಕು. ಎಂದು ಸಲಹೆ ನೀಡಿದರು.
ಜಿಲ್ಲಾದ್ಯಂತ ನಡೆಯುವ ಸಂತೆ, ಜಾತ್ರೆ, ಉತ್ಸವ ಇನ್ನಿತರೆ ಜನಸಂದಣಿ ಸೇರುವ ಕಾರ್ಯಕ್ರಮಗಳನ್ನು, ಜಾತ್ರೆ, ಉತ್ಸವ, ಸಾಮೂಹಿಕ ವಿವಾಹಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಈ ಪ್ರಯುಕ್ತ ಸಾಮೂಹಿಕವಾಗಿ ನಡೆಯುವ ಸಾಮೂಹಿಕ ಆಹಾರ ಹಾಗೂ ಪ್ರಸಾದ ವಿತರಣೆ ರದ್ದುಪಡಿಸಲಾಗಿದೆ. ಬೇಸಿಗೆ ಶಿಬಿರ, ಸಮಾರಂಭಗಳು, ವಿಚಾರ ಸಂಕಿರಣಗಳು ಮತ್ತಿತರ ಕಾರ್ಯ ಕ್ರಮಗಳನ್ನು ಆಯೋಜಿಸ ಬಾರದು.
ಮದುವೆ ಸಮಾರಂಭಗಳನ್ನು ಹೆಚ್ಚಿನ ಜನ ಸಂದಣಿ ಸೇರದಂತೆ ಸರಳವಾಗಿ ಆಯೋಜಿಸಲು ಸೂಚಿಸಿರುವುದಾಗಿ ತಿಳಿಸಿದರು. ದೇವಾಲಯಗಳು ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ದಿನನಿತ್ಯದ ಧಾರ್ಮಿಕ ವಿಧಿ ವಿಧಾನಗಳು, ಧಾರ್ಮಿಕ ಕಾರ್ಯಕ್ರಮಗಳನ್ನು ಮುಂಜಾಗ್ರತಾ ಕ್ರಮವನ್ನು ವಹಿಸಿ ನಡೆಸುವ ಷರತ್ತಿಗೊಳಪಟ್ಟು ವಿನಾಯಿತಿ ನೀಡಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.