ಕೇರಳದಲ್ಲಿ ಹೆಚ್ಚಿನ ಶಂಕಿತ ಕೊರೊನಾ; ತಾ| ಗಡಿ ಪ್ರದೇಶದಲ್ಲಿ ನಿಗಾಕ್ಕೆ ಸೂಚನೆ
ಬಂಟ್ವಾಳ ತಾಲೂಕು ಪಂಚಾಯತ್ ಸಾಮಾನ್ಯ ಸಭೆ
Team Udayavani, Mar 18, 2020, 10:45 PM IST
ಬಂಟ್ವಾಳ: ಇಲ್ಲಿನ ತಾ.ಪಂ. ಸಭೆಯಲ್ಲಿ ಕೊರೊನಾ ವೈರಸ್ ವಿಚಾರ ಚರ್ಚೆ ಯಾಯಿತು. ಕೇರಳ ಭಾಗದಲ್ಲಿ ಶಂಕಿತ ಕೊರೊನಾ ಪ್ರಕರಣಗಳು ಕಂಡು ಬಂದಿರುವುದರಿಂದ ತಾ|ನ ಗಡಿ ಪ್ರದೇಶ ದಲ್ಲಿ ಹೆಚ್ಚಿನ ನಿಗಾ ವಹಿಸುವ ಕುರಿತು ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧಿ ಕಾರಿಗಳಿಗೆ ನಿರ್ದೇಶನ ನೀಡಿದರು.
ಬಿ.ಸಿ. ರೋಡ್‌ನಲ್ಲಿರುವ ಬಂಟ್ವಾಳ ತಾ.ಪಂ.ನ ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ನಡೆದ ತಾ.ಪಂ.ಸಾಮಾನ್ಯ ಸಭೆಯಲ್ಲಿ ಸದಸ್ಯ ಪ್ರಭಾಕರ ಪ್ರಭು ಅವರು, ಕೊರೊನಾ ವೈರಸ್ ಜಾಗೃತಿ ಕುರಿತಂತೆ ತಾ| ಆರೋಗ್ಯಾಧಿಕಾರಿ, ತಹಶೀಲ್ದಾರ್ ಹಾಗೂ ಇಡೀ ತಂಡದ ಕಾರ್ಯವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಕೊರೊನಾ ವೈರಸ್ ಕುರಿತು ಹಬ್ಬುತ್ತಿರುವ ಗಾಳಿಸುದ್ದಿ ಬಗ್ಗೆ ಸ್ಪಷ್ಟಪಡಿಸುವಂತೆ ಮನವಿ ಮಾಡಿದರು.
ಈ ವೇಳೆ ಕೊರೊನಾದ ಲಕ್ಷಣಗಳು, ಮುಂಜಾಗ್ರತ ಕ್ರಮಗಳ ಕುರಿತು ಸುದೀರ್ಘ ವಿವರ ನೀಡಿದ ತಾ| ಆರೋಗ್ಯಾಧಿಕಾರಿ ಡಾ| ದೀಪಾ ಪ್ರಭು, ತಾ|ನಲ್ಲಿ ಈಗಾ ಗಲೇ 4 ಮಂದಿಯನ್ನು ತಪಾಸಣೆ ನಡೆಸ ಲಾಗಿದ್ದು, ಎಲ್ಲ ವರದಿಗಳು ನೆಗೆಟಿವ್ ಆಗಿವೆ. ಮದುವೆ ಸಮಾರಂಭಗಳಲ್ಲಿ ಹೆಚ್ಚು ಜನ ಸೇರಿಸದಂತೆ ಮದುವೆ ಹಾಲ್‌ಗಳಿಗೂ ನೋಟಿಸ್ ನೀಡಲಾಗಿದೆ. ಜತೆಗೆ ಬಂಟ್ವಾಳ, ವಿಟ್ಲ, ವಾಮದಪದವು ಸರಕಾರಿ ಆಸ್ಪತ್ರೆಗಳಲ್ಲಿ ಐಸೊಲೇಟೆಡ್ ವಾರ್ಡ್ ಮಾಡ ಲಾಗಿದ್ದು, ಇತರ ಆಸ್ಪತ್ರೆಗಳಲ್ಲೂ ಇಂತಹ ವಾರ್ಡ್‌ಗಳನ್ನು ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ತಾ|ನ ಗಡಿ ಪ್ರದೇಶ ಕೇರಳದ ಪೈವಳಿಕೆ ಯಿಂದ ಕೆಲವು ಮಂದಿ ಕೊರೊನಾ ಶಂಕಿತರನ್ನು ಕರೆದುಕೊಂಡು ಹೋಗಿರುವ ಮಾಹಿತಿ ಇದ್ದು, ಹೀಗಾಗಿ ಗಡಿ ಪ್ರದೇಶದ ಕುರಿತು ನಿಗಾ ಇರಿಸುವಂತೆ ಸದಸ್ಯ ಉಸ್ಮಾನ್ ಕರೋಪಾಡಿ ಆಗ್ರಹಿಸಿದರು. ವಿವರ ನೀಡಿದ ಟಿಎಚ್‌ಒ, ಗಡಿ ಪ್ರದೇಶ ಕನ್ಯಾನ, ಅಡ್ಯನಡ್ಕ, ಪೆರುವಾಯಿ, ಬಾಕ್ರ ಬೈಲು ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚಿನ ನಿಗಾ ನೀಡುವ ನಿಟ್ಟಿನಲ್ಲಿ ತಾನು, ತಹಶೀಲ್ದಾರ್ ಅವರು ಭೇಟಿ ನೀಡಿದ್ದೇವೆ ಎಂದರು.
ಕೋಳಿಜ್ವರ ಆತಂಕವಿಲ್ಲ
ಗ್ರಾಮೀಣ ಭಾಗಗಳಲ್ಲಿ ಕೋಳಿ ಸಾಕಣೆ ಮಾಡುವವರು ತಮ್ಮ ಕೋಳಿಗಳನ್ನು ಸಾಮೂಹಿಕವಾಗಿ ಹೂಳುವ ಕೆಲಸ ಮಾಡುತ್ತಿದ್ದಾರೆ. ಇದು ಯಾವ ಕಾರಣಕ್ಕೆ ಎಂದು ಸದಸ್ಯ ಪ್ರಭಾಕರ ಪ್ರಭು ಪ್ರಶ್ನಿಸಿದರು. ಅದಕ್ಕೆ ಪಶು ವೈದ್ಯಾಧಿಕಾರಿ ಡಾ| ಹೆನ್ರಿ ಉತ್ತರಿಸಿ, ಕೇರಳದಲ್ಲಿ ಹಕ್ಕಿ ಜ್ವರ ಕಂಡುಬಂದಿತ್ತು. ಆದರೆ ಕೇರಳದಿಂದ ಯಾವುದೇ ಕೋಳಿಗಳನ್ನು ಕರ್ನಾಟಕಕ್ಕೆ ತರಲಾಗುತ್ತಿಲ್ಲ. ಆದರೆ ಇಲ್ಲಿಂದ ಕೋಳಿಗಳನ್ನು ಕೇರಳಕ್ಕೆ ಕೊಂಡು ಹೋಗಲಾಗುತ್ತಿದೆ. ಅಂತಹ ಸಾಗಾಟ ವಾಹನಗಳ ಕುರಿತು ಸಾರಡ್ಕ, ಉಕ್ಕುಡಗಳಲ್ಲಿ ಚೆಕ್ ಮಾಡಲಾಗುತ್ತಿದೆ. ಆದರೆ ಕೆಲವು ಬಾರಿ ವಾಹನಗಳು ಬೇರೆ ರೂಟ್‌ಗಳಲ್ಲಿ ಬರುತ್ತವೆ. ಸದ್ಯಕ್ಕೆ ಇಲ್ಲಿ ಯಾವುದೇ ರೀತಿಯ ಕೋಳಿ ಜ್ವರದ ಪ್ರಕರಣಗಳಿಲ್ಲ. ಅದಕ್ಕಾಗಿ ರ್ಯಾಪಿಡ್ ರಿಯಾಕ್ಷನ್ ಟೀಮ್ ಕೂಡ ಮಾಡಲಾಗಿದ್ದು, ಒಂದು ವೇಳೆ ಕಂಡುಬಂದರೆ ಒಂದು ಕಿ.ಮೀ. ವ್ಯಾಪ್ತಿಯ ಕೋಳಿಗಳನ್ನು ಸಾಮೂಹಿಕವಾಗಿ ಹೂಳಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಮರಳಿನ “ಮಾಮೂಲಿ’ ಸಮಸ್ಯೆ: ಆರೋಪ
ತಾ|ನ ನದಿಗಳಲ್ಲಿ ಹೇರಳವಾಗಿ ಮರಳು ಸಿಗುತ್ತಿದ್ದು, ಆದರೆ ಬ್ಲಾಕ್‌ಗಳನ್ನು ಮಾಡಿ ಕಾನೂನುಬದ್ಧ ಮರಳುಗಾರಿಕೆಗೆ ಅವಕಾಶ ನೀಡದೇ ಇರುವುದರಿಂದ ಬಡವರಿಗೆ ಮನೆ ಕಟ್ಟುವುದಕ್ಕೂ ತೊಂದರೆಯಾಗುತ್ತಿದೆ. ಗಣಿ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಮಾಮೂಲಿ ನೀಡಿದರೆ ಮರಳು ಸಾಗಾಟಕ್ಕೆ ಅವಕಾಶವಿದೆ ಎಂದು ಸದಸ್ಯ ಪ್ರಭಾಕರ ಪ್ರಭು ಆರೋಪ ಮಾಡಿದರು.
ಮರಳಿನ ಬ್ಲಾಕ್‌ಗಳ ಕುರಿತಂತೆ ಪ್ರತಿ ಕ್ರಿಯಿಸಿದ ತಹಶೀಲ್ದಾರ್ ರಶ್ಮಿ ಎಸ್.ಆರ್., ತಾ|ನಲ್ಲಿ ಮರಳಿನ ಬ್ಲಾಕ್‌ಗಳನ್ನು ಗುರುತಿಸುವ ಕಾರ್ಯವನ್ನು ಈಗಾಗಲೇ ಮಾಡಲಾಗಿದೆ. ಆದರೆ ಅನುಮತಿಯನ್ನು ಗಣಿ ಇಲಾಖೆ ನೀಡಬೇಕಾಗುತ್ತದೆ ಎಂದು ತಿಳಿಸಿದರು. ಈ ಕುರಿತು ಗಣಿ ಇಲಾಖೆ, ಜಿಲ್ಲಾಧಿಕಾರಿಗಳಿಗೆ ಬರೆಯಲು ಸಭೆ ನಿರ್ಣಯಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.