ಪ್ರಧಾನಿಯಿಂದ ಕನ್ನಡದಲ್ಲಿ ಹುಟ್ಟುಹಬ್ಬ ಶುಭಾಶಯ
Team Udayavani, Mar 19, 2020, 3:06 AM IST
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಕನ್ನಡದಲ್ಲಿ ಹುಟ್ಟುಹಬ್ಬದ ಶುಭಾಶಯ ಪತ್ರ ನೀಡಿರುವುದಕ್ಕೆ ಸಂತಸಗೊಂಡಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಧನ್ಯವಾದ ಸಲ್ಲಿಸಿದ್ದಾರೆ. ಡಿ.ವಿ.ಸದಾನಂದಗೌಡ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕಳೆದ ಮಾ.16ರಂದು ಪ್ರಧಾನಿ ನರೇಂದ್ರ ಮೋದಿಯವರು ಕನ್ನಡದಲ್ಲಿಯೇ ಶುಭಾಶಯ ಪತ್ರ ರವಾನಿಸಿದ್ದಾರೆ.
“ತಮ್ಮ ಜನ್ಮದಿನದ ಪ್ರಯುಕ್ತ ತಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಕಾಂಕ್ಷೆಗಳು. ತಾವು ಅತ್ಯಂತ ದೀರ್ಘಕಾಲ ಆರೋಗ್ಯಯುತವಾಗಿ ಜೀವಿಸುವಂತಾಗಲಿ ಹಾಗೂ ಜೀವನದ ಪ್ರತಿ ಹೆಜ್ಜೆಯಲ್ಲೂ ಯಶಸ್ಸು ತಮ್ಮದಾಗಲಿ. ಈ ಶುಭ ಸಂದರ್ಭದ ಸಂತೋಷವು ತಮ್ಮಲ್ಲಿ ಮುಂದಿನ ಭವ್ಯ ರಾಷ್ಟ್ರ ನಿರ್ಮಾಣಕ್ಕೆ ಹೊಸ ಶಕ್ತಿ ಹಾಗೂ ಉತ್ಸಾಹಗಳನ್ನು ತುಂಬುವಂತಾಗಲಿ. ಮುಂಬರುವ ವರ್ಷ ಗಳಲ್ಲಿ ತಮ್ಮ ಉತ್ತಮ ಆರೋಗ್ಯ ಮತ್ತು ಸುಸ್ಥಿತಿಯು ಮುಂದು ವರಿಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಪ್ರಧಾನಿ ಮೋದಿಯವರು ಪತ್ರ ಮುಖೇನ ಶುಭಾಶಯ ಕೋರಿದ್ದಾರೆ.
Thank you Hon. @PMOIndia Sri @narendramodi ji for extending birthday greetings. Your blessings continue to inspire me in carrying out my duties in public life. pic.twitter.com/VKcZRMBxnm
— Sadananda Gowda (@DVSadanandGowda) March 18, 2020
ಈ ಪತ್ರವನ್ನು ಫೇಸ್‌ಬುಕ್‌ನಲ್ಲಿ ಬುಧವಾರ ಪೋಸ್ಟ್ ಮಾಡಿರುವ ಡಿ.ವಿ.ಸದಾನಂದಗೌಡ, “ಜನ್ಮದಿನದ ಶುಭಾಶಯ ಕೋರಿದ ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಧನ್ಯವಾದಗಳು. ನಿಮ್ಮ ಶುಭ ಹಾರೈಕೆಯು ನಾನು ಜನಸೇವೆ ಮುಂದುವರಿಸಲು ಇನ್ನಷ್ಟು ಚೈತನ್ಯ, ಪ್ರೇರಣೆ ನೀಡುತ್ತದೆ. ನೀವು ಕನ್ನಡದಲ್ಲಿಯೇ ಶುಭ ಕೋರಿದ್ದು, ಇನ್ನಷ್ಟು ಖುಷಿ ತಂದಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
NIA ವಿಶೇಷ ನ್ಯಾಯಾಲಯಕ್ಕೆ ಹಾಜರಾದ ಶರಣಾದ ಆರು ನಕ್ಸಲರು
Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.