ನಬಾರ್ಡ್‌ನಿಂದ 2.44 ಲಕ್ಷ ಕೋಟಿ ರೂ. ಸಾಲ


Team Udayavani, Mar 19, 2020, 3:09 AM IST

BSY

ಬೆಂಗಳೂರು: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀ ಣಾಭಿವೃದ್ಧಿ ಬ್ಯಾಂಕ್‌ (ನಬಾರ್ಡ್‌) 2020-21ನೇ ಸಾಲಿನಲ್ಲಿ ಕೃಷಿ ವಲಯಕ್ಕೆ 2.44 ಲಕ್ಷ ಕೋಟಿ ರೂ.ಸಾಲ ಸಾಮರ್ಥಯದ ಅಂದಾಜಿನ ಸಂಬಂಧ ರಾಜ್ಯ ಆದ್ಯತಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.

ವಿಧಾನಸೌಧದಲ್ಲಿ ಬುಧವಾರ ವರದಿ ಸ್ವೀಕರಿಸಿ ಮಾತ ನಾಡಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂ ರಪ್ಪ, ನಬಾರ್ಡ್‌ ಸಲ್ಲಿಸಿರುವ ರಾಜ್ಯದ ಆದ್ಯತಾ ವರದಿ ಪ್ರಕಾರ 2020-21ನೇ ಸಾಲಿನಲ್ಲಿ 2,44,564 ಕೋಟಿ ರೂ.ಅಂದಾಜು ಸಾಲ ಸಾಮರ್ಥಯವಿದೆ. ಇದು 2019-20ನೇ ಸಾಲಿನ ಸಾಲದ ಅಂದಾಜಿಗಿಂತ ಶೇ. 4.3ರಷ್ಟು ಹೆಚ್ಚುವರಿಯಾಗಿದೆ. ಕೃಷಿ ವಲಯದ ಸಮಸ್ಯೆ ಗಳಿಂದ ಹೊರತರುವ ನಿಟ್ಟಿನಲ್ಲಿ ಸೂಕ್ತ ಕ್ರಿಯಾ ಯೋಜನೆ ರೂಪಿಸಬೇಕಿದೆ ಎಂದು ಹೇಳಿದರು.

ನಬಾರ್ಡ್‌ನ 2020-21ನೇ ಸಾಲಿನ ರಾಜ್ಯ ಆದ್ಯತಾ ವರದಿಯು ರಾಜ್ಯದ ಆರ್ಥಿಕತೆಯನ್ನು ವಿಶೇಷವಾಗಿ ಕೃಷಿ ವಲಯ ಬಲಪಡಿಸಲು ಪೂರಕವಾದ ನಿರ್ಣಯಗ ಳನ್ನು ಕೈಗೊಳ್ಳಲು ಅವಕಾಶ ಮಾಡಿಕೊಡಲಿದೆ. ಸರ್ಕಾರ ಮತ್ತು ಬ್ಯಾಂಕ್‌ಗಳು ಒಟ್ಟಿಗೆ ಕಾರ್ಯ ನಿರ್ವಹಿಸಲು ಹಾಗೂ ಗ್ರಾಮೀಣ ಆರ್ಥಿಕತೆ, ಕೃಷಿಗೆ ಅಗತ್ಯವಾದ ಸಾಲದ ಹರಿವು ಲಭ್ಯವಾಗುವಂತೆ ವಿಸ್ತೃತವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಿದೆ.

ಕೃಷಿ ಕಾರ್ಯಗಳಿಗೆ ಹೆಚ್ಚಿನ ಬಂಡವಾಳ ಹೂಡಿಕೆ ಅಗತ್ಯವಾಗಿದ್ದು, ಸಕಾಲದಲ್ಲಿ ಸಾಲ ಸೌಲಭ್ಯ ಸಿಗದಿದ್ದರೆ ಉದ್ದೇಶ ಈಡೇರದು ಎಂದು ತಿಳಿಸಿದರು. ಪ್ರತಿ ಜಿಲ್ಲೆಯಲ್ಲೂ ಸಿದ್ಧಪಡಿಸಲಾಗುವ ಜಿಲ್ಲಾ ಸಾಲ ಸಾಮರ್ಥಯ ಆಧಾರಿತ ಯೋಜನೆಗಳ ಮೇಲೆ ರಾಜ್ಯ ಆದ್ಯತಾ ವರದಿ ಅವಲಂಬಿತವಾಗಿದೆ. ಈ ಪ್ರಕ್ರಿಯೆಯ ನ್ನು ಕೈಗೆತ್ತಿಕೊಳ್ಳುವ ಮೂಲಕ ಪ್ರಮುಖ ಸಮಸ್ಯೆಗಳತ್ತ ಹೆಚ್ಚಿನ ಗಮನ ಸೆಳೆಯುವ ಕೆಲಸಕ್ಕೆ ನಬಾರ್ಡ್‌ ಮುಂ ದಾಗಿರುವುದು ಶ್ಲಾಘನೀಯ ಎಂದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಡೇರಿ ವಲಯ ಅನುಷ್ಠಾನ: ನಬಾರ್ಡ್‌ನ ಮುಖ್ಯ ಮಹಾಪ್ರಬಂಧಕ ಪಿ.ವಿ.ಎಸ್‌. ಸೂರ್ಯ ಕುಮಾರ್‌ ಮಾತನಾಡಿ, 2020- 21ನೇ ವರ್ಷದಲ್ಲಿ ಆದ್ಯತಾ ವಲಯಕ್ಕೆ ಒಟ್ಟು 2.44 ಕೋಟಿ ರೂ. ಮೊತ್ತದ ಅಂದಾಜು ಸಾಲ ಸಾರ್ಮ ರ್ಥಯವನ್ನು ಗುರುತಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಡೇರಿ ವಲಯವನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಕುರಿ, ಮೇಕೆ ಸಾಕಣೆಯನ್ನು ಬಾಗಲಕೋಟೆ, ಬಳ್ಳಾರಿ, ಬೀದರ್‌, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಗದಗ, ಕಲಬುರಗಿ, ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ರಾಮನಗರ, ತುಮಕೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆ ಯಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿಯಲ್ಲಿ ಕೋಳಿ ಸಾಕಣೆ, ಧಾರವಾಡ, ಬೆಂಗಳೂರು ನಗರ ಜಿಲ್ಲೆ ಯಲ್ಲಿ ಸಮಗ್ರ ಕೃಷಿ ಪದ್ಧತಿ, ಬೆಳಗಾವಿಯಲ್ಲಿ ಬೃಹತ್‌ ಶೀತಲ ಕೇಂದ್ರ, ರೇಷ್ಮೆಯನ್ನು ಹಾಸನ, ಚಿಕ್ಕಬಳ್ಳಾಪುರ, ತರಕಾರಿ ಬೆಳೆಯನ್ನು ಕೊಡಗು, ಬೆಂಗಳೂರು ಗ್ರಾಮಾಂ ತರ, ಹಾಸನ ಹಾಗೂ ಶಿವಮೊಗ್ಗ, ಉಪಮೇಲ್ಮೆ„ಚರಂಡಿ ವ್ಯವಸ್ಥೆಯನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾಗೂ ಮಾವು ಬೆಳೆಯನ್ನು ಹಾವೇರಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸ ಲಾಗುತ್ತಿದೆ ಎಂದು ಹೇಳಿದರು.

ಕ್ರಿಯಾ ಯೋಜನೆಯನ್ನು ಏಪ್ರಿಲ್‌ ಮೊದಲ ವಾರ ದೊಳಗೆ ಒದಗಿಸಿದರೆ ರಾಜ್ಯ ಆದ್ಯತಾ ವರದಿ ಸಿದ್ಧಪಡಿಸಲು ಅನುಕೂಲವಾಗಲಿದೆ. ರಾಜ್ಯದಲ್ಲಿ ರೇಷ್ಮೆ ವಲಯದ ಅಭಿವೃದ್ಧಿಗೂ ಸಾಕಷ್ಟು ಅವಕಾಶವಿದ್ದು, ಇದಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು.

ಇದಕ್ಕೆ ಸ್ಪಂದಿಸಿದ ಯಡಿಯೂರಪ್ಪ, ಈ ಬಗ್ಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರು ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌, ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ, ಮುಖ್ಯ ಮಂತ್ರಿಗಳ ಸಲಹೆಗಾರ ಎಂ.ಲಕ್ಷ್ಮೀ ನಾರಾಯಣ ಉಪಸ್ಥಿತರಿದ್ದರು.

ಉಪವಲಯವಾರು ವಿವರ
-ಕೃಷಿ ಸಾಲ ಬೆಳೆ ಉತ್ಪಾದನೆ ನಿರ್ವಹಣೆ ಹಾಗೂ ಮಾರ್ಕೆಟಿಂಗ್‌- 85,211 ಕೋಟಿ ರೂ.

-ಕೃಷಿ ಮತ್ತು ಕೃಷಿಪೂರಕ ಚಟುವಟಿಕೆಗಳಿಗೆ ಒಟ್ಟು ಸಾಲ 31,005 ಕೋಟಿ ರೂ./ ಉಪ ಮೊತ್ತ 1,16,216 ಕೋಟಿ ರೂ.

-ಕೃಷಿ ಮೂಲ ಸೌಕರ್ಯಕ್ಕೆ 7,091 ಕೋಟಿ ರೂ.

-ಪೂರಕ ಚಟುವಟಿಕೆಗಳು -22,489 ಕೋಟಿ ರೂ.

-ಕೃಷಿಗಾಗಿ ಸಾಲ ಸಾಮರ್ಥಯ (1+2+3) 1,45,797 ಕೋಟಿ ರೂ.

-57,513 ಕೋಟಿ ರೂ. ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮ.

-4,597 ಕೋಟಿ ರೂ. ರಫ್ತು ಸಾಲ.

-5,574 ಕೋಟಿ ರೂ. ವಿದ್ಯಾಭ್ಯಾಸ.

-27,532 ಕೋಟಿ ರೂ. ಗೃಹ – ವಸತಿ.

-1,155 ಕೋಟಿ ರೂ. ನವೀಕರಿಸಬಹುದಾದ ಇಂಧನ ಶಕ್ತಿ.

-2,393 ಕೋಟಿ ರೂ. ಸಾಮಾಜಿಕ ಮೂಲ ಸೌಕರ್ಯ ಕ್ಕಾಗಿ ಬ್ಯಾಂಕ್‌ ಸಂಪರ್ಕ.

-2,44,564 ಕೋ.ರೂ. ಒಟ್ಟು ಆದ್ಯತಾ ಸಾಲ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.